Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಆರೋಗ್ಯ ಸುಧಾರಣೆಗೆ ಬೇವು ಸಹಕಾರಿ ಹೇಗೆ?
ಹಲವಾರು ವೈದ್ಯಕೀಯ ಸಮಸ್ಯೆಗಳ ಪರಿಹಾರಕ್ಕಾಗಿ ಬೇವಿನೆಲೆಗಳನ್ನು ನಾವು ಬಳಸುತ್ತೇವೆ. ಇದರ ಸೌಂದರ್ಯ ಪ್ರಯೋಜನಗಳನ್ನು ಮಾತ್ರ ನಮ್ಮಲ್ಲಿ ಕೆಲವರು ಅರಿತಿದ್ದಾರೆ. ಅದಾಗ್ಯೂ ಬೇವಿನೆಲೆಗಳು ಆರೋಗ್ಯಕಾರಿಯಾಗಿದ್ದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದಿಯ ರೀತಿಯಲ್ಲಿ ಉಪಶಮನವನ್ನು ನೀಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ
ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಅತಿ ಭಯಾನಕವಾಗಿ ಕಾಡುವ ಒಂದು ರೋಗವೇ ಚಿಕನ್ ಫಾಕ್ಸ್. ಮನೆಯನ್ನು ಸ್ವಚ್ಛವಾಗಿಟ್ಟು ಚಿಕನ್‌ಫಾಕ್ಸ್ ಅನ್ನು ನಿವಾರಿಸಲು ಬೇವಿನೆಲೆಗಳು ಸಹಕಾರಿ. ಚಿಕನ್‌ಫಾಕ್ಸ್‌ನ ತುರಿಕೆ, ಉರಿ ಮತ್ತು ನವೆಯನ್ನು ಹೋಗಲಾಡಿಲಸು ಬೇವಿನೆಲೆಯನ್ನು ದೇಹಕ್ಕೆ ಹಚ್ಚುವುದು ಒಂದು ಉತ್ತಮ ಪರಿಹಾರವಾಗಿದೆ.
ಆಯುರ್ವೇದೀಯ ಔಷಧಿಗಳಲ್ಲಿ ಬೇವನ್ನು ಹಲವಾರು ರೋಗಗಳ ಉಪಶಮನಕ್ಕಾಗಿ ಬಳಸಲಾಗುತ್ತದೆ. ನಿಂಬಿನ್, ನಿಂಬಿನೆನ್, ನಿಂಬೋಲೈಡ್, ನಿಮಾಂಡಿಯಲ್ ಮತ್ತು ಇತರ ಪ್ರಯೋಜನಕಾರಿ ಅಂಶಗಳನ್ನು ಬೇವು ಒಳಗೊಂಡಿದೆ. ಇದು ಬೇವಿನ ಎಲೆಗಳನ್ನು ಶಿಲೀಂಧ್ರ ನಾಶಕ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ವಿರೋಧಿಯನ್ನಾಗಿಸುತ್ತದೆ.
ಕ್ರೀಡಾಪಟುಗಳ ಕಾಲು, ರಿಂಗ್‌ವರ್ಮ್ ಮತ್ತು ಉಗುರುಗಳಲ್ಲಿ ಶಿಲೀಂಧ್ರ ಸೋಂಕುಗಳನ್ನು ನಿವಾರಿಸುತ್ತದೆ. ಬೇವಿನೆಲೆಗಳ ಪೇಸ್ಟ್ ಅನ್ನು ಸಂಧಿವಾತ ರೋಗಿಗಳ ಕೀಲುಗಳಿಗೆ ಹಚ್ಚಲಾಗುತ್ತದೆ. ವಿಷ ಮತ್ತು ಕೀಟಗಳ ಕಡಿತಕ್ಕೆ ಮದ್ದಿನಂತೆ ಬೇವಿನೆಲೆಗಳನ್ನು ಬಳಸುತ್ತಾರೆ. ಇವುಗಳು ಸೌಂದರ್ಯ ಪ್ರಯೋಜನಗಳನ್ನು ಹೊಂದಿದ್ದು ಮೊಡವೆ, ಕಪ್ಪು ವರ್ತುಲಗಳು, ಬೆವರು ಗುಳ್ಳೆಗಳನ್ನು ಹೋಗಲಾಡಿಸುತ್ತವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿದ್ರಾಹೀನತೆ ಆರೋಗ್ಯ ಸಮಸ್ಯೆಗೆ ಕಾರಣ ಹೇಗೆ?
ನಾವಿಲ್ಲಿ ನೀಡುತ್ತಿರುವ ಬೇವಿನೆಲೆಗಳ ಕೆಲವೊಂದು ಪ್ರಯೋಜನಗಳು ನಿಜಕ್ಕೂ ನಿಮ್ಮಲ್ಲಿ ಅಚ್ಚರಿ ಮೂಡಿಸಬಹುದು. ಅವು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

1.ಚಿಕನ್ ಫಾಕ್ಸ್
ಚಿಕನ್ ಫಾಕ್ಸ್ ಬಿದ್ದ ನಂತರ, ರೋಗಿಗೆ ಬೇವಿನ ಎಲೆಗಳಿಂದ ಸ್ನಾನ ಮಾಡಲು ಸೂಚಿಸಲಾಗುತ್ತದೆ. ಇದು ತ್ವಚೆಯನ್ನು ಸ್ವಚ್ಛಗೊಳಿಸಿ ಚರ್ಮದ ಇತರ ಭಾಗಕ್ಕೆ ಸೋಂಕು ಹರಡುವುದನ್ನು ತಡೆಯುತ್ತದೆ.

2.ನೋಯುತ್ತಿರುವ ಗಂಟಲಿಗೆ
ಬೇವಿನೆಲೆಗಳ ಆರೋಗ್ಯ ಪ್ರಯೋಜನಗಳಲ್ಲಿ ಇದೂ ಒಂದು. ನೋಯುತ್ತಿರುವ ಗಂಟಲನ್ನು ಶಮನ ಮಾಡುವ ಶಕ್ತಿ ಬೇವಿನೆಲೆಗಿದೆ.

3.ಕಣ್ಣಿನ ಕಾಳಜಿ
ಕಣ್ಣಿನ ಸೋಂಕುಗಳಿಗೆ ಒಳಗಾದವರು ಕುದಿಸಿ ತಣಿಸಿದ ಬೇವಿನೆಲೆಗಳ ನೀರಿನಿಂದ ಕಣ್ಣನ್ನು ಸ್ವಚ್ಛಗೊಳಿಸಿದರೆ ಸೋಂಕುಗಳ ನಿವಾರಣೆಯಾಗುತ್ತವೆ. ಬೇವಿನೆಲೆಗಳನ್ನು 10 ನಿಮಿಷಗಳ ಕಾಲ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ನಿಮ್ಮ ಉರಿಯುತ್ತಿರುವ ಕಿರಿಕಿರಿ ಉಂಟು ಮಾಡುತ್ತಿರುವ ಕಣ್ಣುಗಳಿಗೂ ಇದು ತಕ್ಷಣ ಉಪಶಮನಕಾರಿಯಾಗಿದೆ.

4.ಕೀಟಗಳ ಕಡಿತ
ರಕ್ತಹೆಪ್ಪುಗಟ್ಟುವಿಕೆ ವಿರೋಧಿ ಮತ್ತು ಉರಿಯೂತ ವಿರೋಧಿಯಾಗಿರುವ ಬೇವು ಕೀಟಗಳ ಕಡಿತವನ್ನು ನೈಸರ್ಗಿಕವಾಗಿ ನಿವಾರಿಸುತ್ತದೆ. ಉರಿಯೂತ ಮತ್ತು ಹುಣ್ಣುಗಳ ನಿವಾರಣೆಗೂ ಸಹ ಬೇವಿನೆಲೆಗಳ ಪೇಸ್ಟ್ ಅನ್ನು ದೇಹಕ್ಕೆ ಹಚ್ಚಲಾಗುತ್ತದೆ.

5.ಸಂಧಿವಾತ
ಸಂಧಿವಾತದ ನೋವನ್ನು ಉಪಚರಿಸಲು ಬೇವಿನೆಲೆಗಳ ಪೇಸ್ಟ್ ಅನ್ನು ನೋವಿರುವ ಜಾಗಕ್ಕೆ ಹಚ್ಚುವುದು ಒಳಿತು. ಕೀಲುಗಳಲ್ಲಿ ಊತ ಉಂಟಾಗುವುದಕ್ಕೂ ಬೇವು ಪರಿಣಾಮಕಾರಿ. ಇದನ್ನು ಪೇಸ್ಟ್‌ನಂತೆ ದೇಹಕ್ಕೆ ಹಚ್ಚುವುದು ಬೆನ್ನುನೋವಿನಂತಹ ಸಮಸ್ಯೆಯನ್ನು ಪರಿಹರಿಸುತ್ತದೆ.

6.ಮಲೇರಿಯಾ
ಬೇವಿನಲ್ಲಿರುವ ಅತಿ ಮುಖ್ಯವಾದ ಅಂಶವಾಗಿರುವ ಗೆಡುನಿನ್ ಮಲೇರಿಯಾ ಜ್ವರವನ್ನು ಶಮನ ಮಾಡುತ್ತದೆ. ಕುದಿಸಿದ ಬೇವಿನೆಲೆಯ ನೀರನ್ನು ಸೇವಿಸುವುದು ಕೂಡ ಮಲೇರಿಯಾಕ್ಕೆ ಪರಿಣಾಮಕಾರಿ ಔಷಧವಾಗಿದೆ.

7.ತ್ವಚೆಯ ರಕ್ಷಣೆ
ಬೇವಿನೆಲೆಯನ್ನು ಅರೆದು ಪೇಸ್ಟ್‌ನಂತೆ ಮುಖಕ್ಕೆ ಹಚ್ಚಿಕೊಳ್ಳುವುದು ಮೊಡವೆ, ಕಪ್ಪು ಕಲೆಗಳು, ಪಿಂಪಲ್‌ಗಳನ್ನು ನಿವಾರಿಸುತ್ತದೆ.

8.ಕೂದಲಿನ ಆರೈಕೆ
ಕೂದಲಿನ ಸಮಸ್ಯೆಗಳಾದ ಕೂದಲುದುರಿವಿಕೆ, ಹೊಟ್ಟು, ಒಣ ತಲೆಬುರುಡೆ ಸಮಸ್ಯೆಗಳನ್ನು ಬೇವಿನೆಲೆಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ನಿವಾರಿಸುತ್ತವೆ.



Click it and Unblock the Notifications
