Latest Updates
-
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ನಿಮ್ಮ ರಾಶಿಫಲದಲ್ಲಿ ಅಡಗಿದೆ ವ್ಯಾಯಾಮದ ಮಹಿಮೆ!
ಬಹಳಷ್ಟು ಭಾರತೀಯರು ತಮ್ಮ ಶರೀರದ ತೂಕವನ್ನು ಇಳಿಸಿಕೊಳ್ಳಲು ಡಯಟ್ ಮಾಡಲು ಬಯಸುತ್ತಾರೆ. ತೂಕ ಕಡಿಮೆ ಮಾಡುವ ಅವೈಜ್ಞಾನಿಕ ವಸ್ತುಗಳು ಸೇರಿ ಮಾರುಕಟ್ಟೆಯಲ್ಲಿ ಬಹಳಷ್ಟು ವಸ್ತುಗಳು ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯವಾಗಲು ದೊರಕುತ್ತವೆ. ಆದರೆ, ತ್ವರಿತವಾಗಿ ನಾವು ಸೇವಿಸುವ ಕ್ಯಾಲೋರಿಗಳನ್ನು ಕಡಿಮೆ ಮಾಡಿಕೊಳ್ಳಲು ಕಟ್ಟುನಿಟ್ಟದ ಆಹಾರ ಪದ್ಧತಿಯನ್ನು ಹಾಗೂ ವ್ಯಾಯಾಮ ಅನುಸರಿಸುವುದು ಉತ್ತಮವಾದುದು.
ಹಾಗಾದರೆ ನಿಮ್ಮ ದೇಹದ ತೂಕಕ್ಕೆ ಸರಿಯಾಗಿ ವ್ಯಾಯಾಮ ಮಾಡಬೇಕು ಎಂದಿದ್ದಲ್ಲಿ ಮತ್ತೊಮ್ಮೆ ಯೋಚಿಸಿ. ನಿಮ್ಮ ರಾಶಿ ಚಕ್ರದ ಆಧಾರದ ಮೇಲೂ ಕೂಡ ಇದು ಅವಲಂಬಿತವಾಗಿರುತ್ತದೆ ಎನ್ನಲಾಗುತ್ತದೆ. ನಿಮ್ಮ ರಾಶಿ ಯಾವುದು? ಮತ್ತು ಏನು ಮಾಡುವುದರಿಂದ ನೀವು ಆರೋಗ್ಯಯುತವಾಗಿ ಇರಬಲ್ಲಿರಿ? ಎಂಬುದನ್ನು ಇಲ್ಲಿ ಓದಿ ತಿಳಿದುಕೊಳ್ಳಿ. ನಿಜವಾಗಿಯೂ ಶುಂಠಿ ಚಹಾ ದೇಹಕ್ಕೆ ಮಾರಕವೇ?

ಮೇಷ(ಮಾರ್ಚ್ 21-ಏಪ್ರಿಲ್ 20)
ನೀವು ವ್ಯಾಯಾಮ ಮಾಡಲು ಮನಸ್ಥಿತಿಯನ್ನು ಮೊದಲು ತಯಾರು ಮಾಡಿಕೊಳ್ಳಬೇಕು. ನೀವು ಮಾಡುವ ವ್ಯಾಯಾಮದಲ್ಲಿ ಏಕಾಗ್ರತೆಯನ್ನು ವಹಿಸಿದರೆ ಪ್ರಮುಖ ಭಾಗಗಳಲ್ಲಿ ಅದು ಕೆಲಸ ಮಾಡುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ದೇಹಕ್ಕೆ ಬಲ ನೀಡಲು ಇದು ಸಹಕರಿಸುತ್ತದೆ. ಹೃದಯ ಸಂಬಂಧಿ ವ್ಯಾಯಾಮಗಳ ಜೊತೆಗೆ ಸೈಕ್ಲಿಂಗ್ ಮತ್ತು ವೈಟ್ ಲಿಫ್ಟಿಂಗ್ ವ್ಯಾಯಾಮಗಳು ನಿಮ್ಮ ರಾಶಿಗೆ ಸೂಕ್ತವಾದುದು.
ಮುಖ್ಯ ಸಮಸ್ಯೆಗಳಿರುವ ಭಾಗಗಳು :- ತಲೆ,ಸ್ನಾಯುಗಳು,ಕಣ್ಣುಗಳು ಮತ್ತು ಮುಖ

ವೃಷಭ ರಾಶಿ(ಏಪ್ರಿಲ್ 21 ರಿಂದ ಮೇ 21)
ವೃಷಭ ರಾಶಿಯವರು ಆಹಾರ ಪ್ರಿಯರು. ಆದ್ದರಿಂದ ನಿಮ್ಮ ದೇಹಕ್ಕೆ ಬೇಕಾದುದಕ್ಕಿಂತ ಹೆಚ್ಚು ತಿಂದು ನಿಮ್ಮ ದೇಹ ತೂಕ ಹೆಚ್ಚಿರಬಹುದು. ಸ್ಟ್ರೆಚಿಂಗ್ ಮತ್ತು ಶಕ್ತಿ ಬಳಕೆಯ ವ್ಯಾಯಾಮಗಳು ನಿಮಗೆ ಸಹಾಯಕ್ಕೆ ಬರಬಹುದು. ಕೆಲವು ತೀವ್ರ ವ್ಯಾಯಮಗಳು ಮತ್ತು ಡಾನ್ಸ್ ಮಾಡುವುದು ಕೂಡ ನಿಮ್ಮ ತೂಕ ಇಳಿಕೆಗೆ ಸಹಕರಿಸಬಹುದು.
ಸಮಸ್ಯೆಗಳು ಕಾಣಿಸಿಕೊಳ್ಳುವ ಭಾಗಗಳು :- ಕುತ್ತಿಗೆ ಮತ್ತು ಗಂಟಲು

ಮಿಥುನ(ಮೇ 22 ರಿಂದ ಜೂನ್ 21)
ಮಿಥುನ ರಾಶಿಯವರಿಗೆ ಯಾವಾಗಲು ಗ್ರೂಪ್ ವ್ಯಾಯಾಮ ಸೂಕ್ತ. ಏರೋಬಿಕ್ಸ್ ನಿಂದ ಆರೋಗ್ಯ ಸುಂದರವಾಗಿರುತ್ತದೆ.
ಮುಖ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ದೇಹದ ಭಾಗ :- ಕೈ,ಕಾಲು ಶ್ವಾಸಕೋಶ ಮತ್ತು ನರಮಂಡಲ

ಕರ್ಕಾಟಕ (ಜೂನ್ 22 ರಿಂದ ಜುಲೈ 22)
ವಾಟರ್ ಸ್ಪೋರ್ಟ್ಸ್ ಕರ್ಕಾಟಕ ರಾಶಿಯವರಿಗೆ ಸೂಕ್ತ. ಆದ್ದರಿಂದ ಸ್ವಿಮ್ಮಿಂಗ್, ವಾಟರ್ ಏರೋಬಿಕ್ಸ್ ಇಂತಹ ವ್ಯಾಯಾಮಗಳನ್ನು ಮಾಡಬಹುದು. ಸ್ನಾಯುಗಳು ಬಲಯುತವಾಗುವ ವ್ಯಾಯಾಮಗಳು ಹೆಚ್ಚು ಅನುಕೂಲ.
ಸಮಸ್ಯೆಗಳಿರುವ ಅಂಗಗಳು :- ಹೊಟ್ಟೆ, ಜೀರ್ಣಾಂಗ ಮತ್ತು ಎದೆ

ಸಿಂಹ ರಾಶಿ :(ಜುಲೈ 23 ರಿಂದ ಆಗಸ್ಟ್ 22)
ರಕ್ತ ಚಲನೆಗೆ ಪ್ರತಿದಿನದ ವ್ಯಾಯಾಮ ಬಹಳ ಮುಖ್ಯ. ಆದ್ದರಿಂದ ನೀವು ಪ್ರತಿದಿನ ವ್ಯಾಯಾಮ ಮಾಡಬೇಕು. ಆದಾಗ್ಯೂ ನಿಮಗೆ ಹೆಚ್ಚು ಸಮಸ್ಯೆ ಇರುವ ಭಾಗ ಬೆನ್ನಿನ ಮೇಲ್ಭಾಗ ಆಗಿರುವುದರಿಂದ ಬೆನ್ನಿನ ಸ್ನಾಯುಗಳನ್ನು ಬಲಯುತಪಡಿಸಿಕೊಳ್ಳಿ. ಡಾನ್ಸ್ ಮಾಡುವುದು ಒಳ್ಳೆಯ ಸೂಕ್ತ ವ್ಯಾಯಾಮ.
ಸಮಸ್ಯೆಗಳಿರುವ ಭಾಗಗಳು :- ಬೆನ್ನಿನ ಮೇಲ್ಭಾಗ,ಬೆನ್ನು ಮೂಳೆ ಮತ್ತು ಹೃದಯ

ಕನ್ಯಾ ರಾಶಿ (ಆಗಸ್ಟ್ 23 ರಿಂದ ಸೆಪ್ಟೆಂಬರ್ 20)
ಕನ್ಯಾ ರಾಶಿಯವರು ಫಿಟ್ ಆಗಿ ಇರುತ್ತಾರಾದರೂ ವ್ಯಾಯಾಮ ಮಾಡಲು ಕೆಲವೊಮ್ಮೆ ಸೋಮಾರಿಗಳಾಗಿರುತ್ತಾರೆ. ಇಡೀ ದೇಹದ ವರ್ಕ್ ಔಟ್ ಮಾಡುವುದು ಕನ್ಯಾ ರಾಶಿಯವರಿಗೆ ಸೂಕ್ತ.ರನ್ನಿಂಗ್, ಫುಟ್ ಬಾಲ್ ಆಟ,ಡಾನ್ಸಿಂಗ್ ಸೂಕ್ತ.
ಮುಖ್ಯ ಸಮಸ್ಯೆಗಳಿರುವ ಭಾಗ:- ನರಮಂಡಲ,ಜೀರ್ಣಾಂಗ ವ್ಯವಸ್ಥೆ

ತುಲಾ (ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 22)
ಕಡಿಮೆ ಪರಿಣಾಮ ಇರುವ ವ್ಯಾಯಾಮಗಳು ನಿಮಗೆ ಸೂಕ್ತ. ಸುಸ್ತು ಮಾಡದ ವ್ಯಾಯಾಮಗಳನ್ನು ನೀವು ಮಾಡಬೇಕು. ಗಾಲ್ಫ್ ಅಥವಾ ಟೇಬಲ್ ಟೆನ್ನಿಸ್ ಆಟವಾಡುವುದು ಸೂಕ್ತ. ಇತರ ತರಬೇತಿ ಎಂದರೆ ವಾಕಿಂಗ್, ಮತ್ತು ಜಾಗಿಂಗ್ ಗೆ ಹೋಗುವುದು ಸೂಕ್ತ.

ವೃಶ್ಚಿಕ ರಾಶಿ :(ಅಕ್ಟೋಬರ್ 23 ರಿಂದ ನವೆಂಬರ್ 21)
ತೀವ್ರತರದವರಾದ್ದರಿಂದ ಸ್ಪರ್ಧಾತ್ಮಕ ಮತ್ತು ಶ್ರಮದಾಯಕ ವ್ಯಾಯಾಮಗಳು ಸೂಕ್ತ. ಮ್ಯಾರಥಾನ್ ಓಟ ಸೂಕ್ತ. ಆದರೂ ನೀವು ಜಿಮ್ ಬಳಸಬೇಕೆಂದಿದ್ದರೆ ಕ್ರಿಯಾತ್ಮಕ ತರಬೇತಿಗಳು ಸೂಕ್ತ.
ಮುಖ್ಯ ಸಮಸ್ಯೆಗಳು ಬರುವ ಅಂಗಗಳು :- ಸಂತಾನೋತ್ಪತ್ತಿ ವ್ಯಯಸ್ಥೆ ಮತ್ತು ವಿಸರ್ಜನಾ ವ್ಯಯಸ್ಥೆ

ಧನು ರಾಶಿ(ಡಿಸೆಂಬರ್ 21 ನವೆಂಬರ್ 22)
ರಾಶಿಗಳಲ್ಲೇ ನಿಮ್ಮದು ಆರೋಗ್ಯಕರ ಸ್ಥಿತಿಯಾಗಿದ್ದರೂ ಕೂಡ ಸ್ಟ್ರೆಚಸ್ ಬಗ್ಗೆ ಗಮನವಿದ್ದಲ್ಲಿ ಆರೋಗ್ಯ ಇನ್ನಷ್ಟು ವೃಧ್ಧಿಯಾಗುತ್ತದೆ. ಹೈಕಿಂಗ್ ಮತ್ತು ರನ್ನಿಂಗ್ ಸೂಕ್ತವಾದ ವ್ಯಾಯಾಮ ಆದರೂ ನಿಮಗೆ ಇದು ಇಷ್ಟವಾಗದಿದ್ದಲ್ಲಿ ಟ್ರೆಡ್ ಮಿಲ್ ಬಳಸಬಹುದು.
ಸಮಸ್ಯೆಗಳಿರುವ ಭಾಗಗಳು :- ಸೊಂಟ,ತೊಡೆ ಮತ್ತು ಸೊಂಟದ ನರಮಂಡಲ

ಮಕರ (ಡಿಸೆಂಬರ್ 22 ರಿಂದ ಜನವರಿ 19)
ಮೂಳೆ ಮತ್ತು ಸಂಧಿಗಳು ಸಮಸ್ಯೆ ಇರುವ ಭಾಗಗಳಾದ್ದರಿಂದ ಇವುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಮಾಡಬೇಕು. ಬ್ರಿಸ್ಕ್ ವಾಕಿಂಗ್ ಮತ್ತು ಜಾಗಿಂಗ್ ಕೂಡ ಒಳ್ಳೆಯದು.ಸೈಕ್ಲಿಂಗ್ ಮತ್ತು ಸ್ಪಾಟ್ ಜಾಗಿಂಗ್ ಕೂಡ ತೂಕ ಇಳಿಸಿಕೊಳ್ಳಲು ಸಹಾಯಕವಾಗುತ್ತದೆ.
ಸಮಸ್ಯೆಗಳಿರುವ ಅಂಗಗಳು :- ಸಂಧಿ,ಮೊಣಕಾಲು ಗಂಟು,ಹಲ್ಲು

ಕುಂಭ :- (ಜನವರಿ 20 ರಿಂದ ಫೆಬ್ರವರಿ 18)
ತೀವ್ರ ಕ್ರೀಡೆಗಳು ನಿಮಗೆ ಒಳ್ಳೆಯದಾದರೂ ಕೂಡ ಡ್ಯಾನ್ಸಿಂಗ್ ಮತ್ತು ಡಾನ್ಸ್ ಸಂಬಂಧಿಸಿದ ಕೆಲವು ವ್ಯಾಯಾಮಗಳು ತೆಳ್ಳಗಾಗಲು ಸಹಕರಿಸುತ್ತವೆ.ಆದಾಗ್ಯೂ ನೀವು ದೂರದ ಓಟ,ವೈಟ್ ತರಭೇತಿ ವ್ಯಾಯಾಮಗಳನ್ನೂ ಮಾಡಬಹುದು.
ಸಮಸ್ಯೆಗಳಿರುವ ಭಾಗಗಳು:-ರಕ್ತಪರಿಚಲನಾ ವ್ಯಯಸ್ಥೆ,ಮೊಣಕಾಲು

ಮೀನಾ (ಫೆಬ್ರವರಿ 19 ರಿಂದ ಮಾರ್ಚ್ 20)
ಯೋಗ ಮತ್ತು ಬ್ಯಾಲೆನ್ಸ್ ಸಂಬಂಧಿಸಿದ ವ್ಯಾಯಾಮಗಳು ಸೂಕ್ತ. ವಾಟರ್ ಸ್ಪೋರ್ಟ್ಸ್ ಮತ್ತು ಸ್ವಿಮ್ಮಿಂಗ್ ಅನ್ನು ಕೂಡ ಪ್ರಯತ್ನಿಸಬಹುದು.ಧ್ಯಾನ ಕೂಡ ನಿಮ್ಮ ರಾಶಿಗೆ ಸೂಕ್ತ.
ಮುಖ್ಯ ಸಮಸ್ಯೆಗಳಿರುವ ಭಾಗ :-ಪಾದ ಮತ್ತು ಪ್ರತಿರಕ್ಷಣಾ ಕವಚ



Click it and Unblock the Notifications