Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಶುಂಠಿ ಚಹಾದ 8 ಆರೋಗ್ಯ ಪ್ರಯೋಜನಗಳು
ಚಳಿಗಾಲದಲ್ಲಿ ಒಂದು ಲೋಟ ಬಿಸಿ ಬಿಸಿ ಶುಂಠಿ ಚಹಾ ನೀಡುವ ಆರಾಮವನ್ನು ಬೇರೆ ಯಾವುದೂ ಣೀಡಲು ಸಾಧ್ಯವಿಲ್ಲ. ವಿಟಮಿನ್ ಸಿ, ಮೆಗ್ನೀಶಿಯಂ ಮತ್ತು ಇತರ ಖನಿಜಗಳನ್ನು ಹೊಂದಿರುವ ಶುಂಠಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಲಗುವಾಗ ಬ್ರಾ ಧರಿಸದೇ ಇರಲು ಕಾರಣಗಳು
ಶುಂಠಿ ಟೀ ನಿಮ್ಮನ್ನು ಪೋಷಿಸುವುದು ಮಾತ್ರವಲ್ಲ, ಜೊತೆಗೆ ಅನೇಕ ಚಳಿಗಾಲಕ್ಕೆ ಸಂಬಂಧಿತ ಆರೋಗ್ಯ ಸಮಸ್ಯೆಗಳ ಪರಿಹಾರ ನೀಡುತ್ತದೆ. ಆದ್ದರಿಂದ ಶುಂಠಿ ಚಹಾ ಔಷಧಿ ಗುಣಗಳನ್ನು ಹೊಂದಿದ್ದು ಚಿಕಿತ್ಸೆ ರೂಪದಲ್ಲಿ ಬಳಸಲಾಗುತ್ತದೆ.
ಒಮ್ಮೆ ಶುಂಠಿ ಚಹಾ ತಯಾರಿಸಿ, ನೀವು ಶುಂಠಿ ರುಚಿ ಹೆಚ್ಚಿಸಲು, ಪುದೀನಾ, ಜೇನು ಅಥವಾ ನಿಂಬೆ ರಸವನ್ನು ಸೇರಿಸಬಹುದು. ನೀವು ಈ ಹಿತವಾದ ಪಾನೀಯ ಏಕೆ ಸೇವಿಸಬೇಕು ಎಂಬ ಕಾರಣಗಳು ಇಲ್ಲಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಒತ್ತಡ ನಿವಾರಣೆಗೆ ಕೆಲವೊಂದು ಸಲಹೆಗಳು

ವಾಕರಿಕೆ ನಿವಾರಿಸಲು
ಪ್ರಯಾಣಕ್ಕೆ ಮೊದಲು ಒಂದು ಲೋಟ ಶುಂಠಿ ಕುಡಿದರೆ ಚಲನೆಯ ಖಾಯಿಲೆ ( ಮೋಶನ್ ಸಿಕ್ನೆಸ್) ಅನಾರೋಗ್ಯಕ್ಕೆ ಸಂಬಂಧಿಸಿದ ವಾಕರಿಕೆ ಮತ್ತು ವಾಂತಿ ತಡೆಗಟ್ಟಲು ಸಹಾಯ ಮಾಡಬಹುದು. ನೀವು ವಾಕರಿಕೆಯ ಮೊದಲ ಲಕ್ಷಣ ನಿವಾರಿಸಲು ಇದನ್ನು ಕುಡಿಯಬಹುದು.

ಹೊಟ್ಟೆ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು
ಜೀರ್ಣಕ್ರಿಯೆ ಸುಧಾರಣೆ ಮತ್ತು ಆಹಾರ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಉಪಯುಕ್ತವಾಗಿರುವ, ಶುಂಠಿ ಚಹಾವನ್ನು ತುಂಬಾ ತಿಂದ ನಂತರ ಸೇವಿಸಬಹುದು.

ಉರಿಯೂತ ಕಡಿಮೆ ಮಾಡುತ್ತದೆ
ಶುಂಠಿ ಸ್ನಾಯು ಮತ್ತು ಜಂಟಿ ನೋವನ್ನು ನಿವಾರಿಸಬಲ್ಲ ಉತ್ತಮ ಮನೆಮದ್ದಾಗಿದ್ದು ಉರಿಯೂತದ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಶುಂಠಿ ಚಹಾ ಕುಡಿಯುವುದರ ಜೊತೆಗೆ, ನೀವು ಕೀಲುಗಳ ನೋವು ನಿವಾರಿಸಲು ಬಳಸಬಹುದು .

ಉಸಿರಾಟದ ಸಮಸ್ಯೆ ವಿರುದ್ಧ ಹೋರಾಟ
ಶುಂಠಿ ಚಹಾ ನೆಗಡಿಯನ್ನೂ ಸಹ ನಿವಾರಣೆ ಮಾಡಬಹುದು. ಪರಿಸರದ ಅಲರ್ಜಿ ಸಂಬಂಧಿಸಿದ ಉಸಿರಾಟದ ತೊಂದರೆಯ ಲಕ್ಷಣಗಳನ್ನು ಒಂದು ಕಪ್ ಶುಂಠಿ ಚಹಾ ಕುಡಿದು ನಿವಾರಿಸಿ!

ರಕ್ತ ಚಲಾವಣೆ ಸುಧಾರಿಸಲು
ಜೀವಸತ್ವಗಳು, ಖನಿಜಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುವ ಶುಂಠಿ ಚಹಾ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಈ ಮೂಲಕ, ಹೃದಯರಕ್ತನಾಳದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗಬಹುದು. ಶುಂಠಿ ಅಪಧಮನಿಗಳಲ್ಲಿ ಉಳಿಯುವ ಕೊಬ್ಬನ್ನು ತಡೆದು, ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯಲು ಸಹಾಯ ಮಾಡುತ್ತದೆ.

ಮುಟ್ಟಿನ ಅಸ್ವಸ್ಥತೆ ನಿವಾರಿಸಲು
ಇದು ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಎಲ್ಲಾ ಮಹಿಳೆಯರು ಬಳಸಬಹುದಾಗಿದೆ. ಬೆಚ್ಚಗಿನ ಶುಂಠಿ ಚಹಾದಲ್ಲಿ ಒಂದು ಟವೆಲ್ ನೆನೆಸಿ ಮತ್ತು ನಿಮ್ಮ ಕೆಳ ಹೊಟ್ಟೆಯ ಮೇಲೆ ಇದನ್ನು ಅನ್ವಯಿಸಲು ಪ್ರಯತ್ನಿಸಿ. ಇದು ಸ್ನಾಯುಗಳಿಗೆ ನೋವು ನಿವಾರಣೆ ನೀಡಿ ಮತ್ತು ವಿಶ್ರಾಂತಿಯನ್ನು ನೀಡಬಹುದು. ಜೊತೆಗೆ, ಜೇನುತುಪ್ಪವನ್ನು ಶುಂಠಿ ಚಹಾದೊಂದಿಗೆ ಬೆರೆಸಿ ಕುಡಿಯಿರಿ.

ರೋಗ ನಿರೋಧಕ ಶಕ್ತಿ ಬಲಪಡಿಸಲು
ಶುಂಠಿ ಚಹಾ, ತನ್ನಲ್ಲಿರುವ ಆಂಟಿ ಆಕ್ಸಿಡೆಂಟ್ ( ಉತ್ಕರ್ಷಣ ನಿರೋಧಕ) ನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿದ್ದು ನಿಮ್ಮ ಪ್ರತಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಒತ್ತಡದ ಉಪಶಮನಕ್ಕೆ
ಶುಂಠಿ ಚಹಾ, ನಿಮ್ಮ ಒತ್ತಡವನ್ನುಕಡಿಮೆ ಮಾಡಲು ಸಹಾಯ ಮಾಡಬಹುದಾದ ಶಾಂತಗೊಳಿಸುವ ಗುಣಗಳನ್ನು ಹೊಂದಿದೆ. ಬಲವಾದ ಸುವಾಸನೆ ಮತ್ತು ಚಿಕಿತ್ಸೆ ಗುಣಲಕ್ಷಣಗಳ ಸಂಯೋಜನೆಯೇ ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ.



Click it and Unblock the Notifications