Latest Updates
-
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ
ನಿಮಗೆ ತಿಳಿದಿರಲೇಬೇಕಾದ ಚಿಕನ್ ಫಾಕ್ಸ್‌ನ ಲಕ್ಷಣಗಳು!
ಚಿಕನ್ ಫಾಕ್ಸ್ ರೋಗಕ್ಕೆ varicella zoster virus ಎಂಬ ವೈರಾಣುವೇ ಕಾರಣವಾಗಿದೆ. ಇದೊಂದು ಅತ್ಯಂತ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ ಸೊಂಕು ಇರುವ ವ್ಯಕ್ತಿಯೊಂದಿಗಿನ ನೇರ ಸಂಪರ್ಕದಿಂದ ಹರಡುತ್ತದೆ. ಚಿಕನ್ ಫಾಕ್ಸ್‌ಗೆ ತುತ್ತಾದ ವ್ಯಕ್ತಿಯ ಸೀನಿನ ಹನಿಗಳು ಅಥವಾ ಆ ವ್ಯಕ್ತಿಯು ಕೆಮ್ಮಿದಾಗ ಹೊರಹೊಮ್ಮುವ ಸಣ್ಣ ಸಣ್ಣ ಹನಿಗಳಲ್ಲಿ ಈ ವೈರಾಣು ಇರುತ್ತದೆ.
ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ರೋಗಲಕ್ಷಣವು ವೈರಾಣು ಸಂಪರ್ಕಕ್ಕೆ ಬಂದ 15 ರಿಂದ 16 ದಿನಗಳ ನಂತರ ಗೋಚರಿಸುತ್ತದೆ. ಚಿಕನ್ ಫಾಕ್ಸ್‌ಗೆ ಆರಂಭಿಕ ರೋಗ ಲಕ್ಷಣಗಳು ಫ್ಲೂ ಜ್ವರದoತೆಯೇ ಇದ್ದು ಇದು ಗೊoದಲಕ್ಕೀಡು ಮಾಡುತ್ತದೆ ಮತ್ತು ಇದು ತಪ್ಪು ರೋಗ ನಿಧಾನಕ್ಕೆ (diagnosis) ಅಥವಾ ತಡವಾದ ರೋಗ ನಿಧಾನಕ್ಕೆ ಕಾರಣವಾಗುತ್ತದೆ. ನಿಮ್ಮ ಮಗುವಿಗೆ ಈ ಕೆಳಕಂಡ ರೋಗ ಲಕ್ಷಣಗಳ ಪೈಕಿ ಯಾವುದಾದರೊಂದಿದ್ದರೆ, ಅದರರ್ಥ ನಿಮ್ಮ ಮಗುವು ಚಿಕನ್ ಫಾಕ್ಸ್‌ಗೆ ತುತ್ತಾಗಿದೆ ಎಂದೇ ಬಹುತೇಕ ಖಚಿತವಾಗುತ್ತದೆ.
ಚಿಕನ್ ಫಾಕ್ಸ್ ಆದಾಗ ನೀವು ನಿರ್ಲಕ್ಷಿಸಲೇಬೇಕಾದ ಆಹಾರಗಳು

ಅತಿಯಾದ ಜ್ವರ.
ವೈರಾಣುವನ್ನು ಒಂದು ಅಪಾಯಕಾರೀ ಜೀವಿ ಎಂದು ನಿಮ್ಮ ಶರೀರದ ರೋಗನಿರೋದಕ ವ್ಯವಸ್ಥೆಯು ಗುರುತಿಸಿದ ಕೂಡಲೇ ಅದು ನಿಮ್ಮ ಶರೀರದ ಉಷ್ಣತೆಯ ಕಡೆಗೆ ಗಮನವಿಟ್ಟು ಅದನ್ನು ನಿಯಮಿತವಾಗಿರಿಸುವುದರ ಮೂಲಕ ನಿಮ್ಮ ಶರೀರದಿಂದ ವೈರಾಣುವನ್ನು ಹೊಡೆದೋಡಿಸಲು ಉದ್ಯುಕ್ತವಾಗುತ್ತದೆ. ಉಷ್ಣತೆಯು 100.4 Fahrenheit ನ ವರೆಗೂ ತಲುಪಬಹುದು. ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಾಗಬಹುದು. ಜ್ವರದೊಂದಿಗೆ ಫ್ಲೂ ನಂತಹ ಮತ್ತಿತರ ರೋಗ ಲಕ್ಷಣಗಳು, ತೌಲನಿಕವಾಗಿ ಮಕ್ಕಳಿಗಿಂತಲೂ ಹೆಚ್ಚಾಗಿ ವಯಸ್ಕರನ್ನೇ ಹೆಚ್ಚು ಪೀಡಿಸುತ್ತವೆ.

ತಲೆಸುತ್ತು ಬರುವುದು: .
ಸಿಡುಬು ರೋಗದ ಕಲೆಗಳು ದೇಹದ ಮೇಲೆ ಕಾಣಿಸಿಕೊಳ್ಳುವುದಕ್ಕಿoತ 1 ಅಥವಾ 2 ದಿನಗಳ ಮೊದಲೇ ಸಾಮಾನ್ಯವಾಗಿ ಮಂದವಾದ ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ಇತರ ಫ್ಲೂ ನಂತಹ ಲಕ್ಷಣಗಳಾದ ಗಂಟಲು ಕೆರೆತ, ಕೆಮ್ಮು, ಮತ್ತು ಸೀನುವಿಕೆಯನ್ನೂ ಸಹ ಜೊತೆಗೂಡಿಸಿಕೊಂಡೇ ಕಾಣಿಸುತ್ತದೆ. ಈ ರೋಗ ಲಕ್ಷಣಗಳು ನಂತರದ ದಿನಗಳಲ್ಲಿ ಕ್ರಮೇಣವಾಗಿ ಮತ್ತಷ್ಟು ಉಗ್ರಸ್ವರೂಪವನ್ನು ತಾಳುತ್ತದೆ ಹಾಗೂ ಈ ತೀವ್ರತೆಯು, ಕಲೆಗಳು ದೇಹದ ಸಂಪೂರ್ಣ ಭಾಗಗಳಲ್ಲಿ ಕಾಣಿಸಿಕೊಳ್ಳುವವರೆಗೂ ಮುಂದುವರೆಯುತ್ತದೆ.

ತುರಿಸುವ, ಕೆಂಪು ಬೊಕ್ಕೆಗಳು.
ಸಿಡುಬಿನ ಆರಂಭಿಕ ಲಕ್ಷಣಗಳು; ವಿಶೇಷವಾಗಿ ತಲೆಶೂಲೆ, ಕೆಮ್ಮು, ಮತ್ತು ಗಂಟಲು ಕೆರೆತವು ಸಾಮಾನ್ಯ ಫ್ಲೂ ನಂತೆಯೇ ಇದ್ದು ದಾರಿ ತಪ್ಪಿಸಿ ಗೊoದಲಕ್ಕೀಡು ಮಾಡುತ್ತವೆ. ಆದರೆ ಕೆಂಬಣ್ಣದ ಬೊಕ್ಕೆಗಳು ದೇಹದ ತುಂಬೆಲ್ಲಾ ಕಾಣಿಸಿಕೊಳ್ಳುವುದು ಸಿಡುಬು ರೋಗದ ನಿದಾನಕ್ಕೆ ಖಚಿತವಾದ ರೋಗ ಲಕ್ಷಣವಾಗಿದೆ. ತುರಿಕೆಯು ಸಾಮಾನ್ಯವಾದ ಸಹಿಸಬಹುದಾದ ಮಟ್ಟದಿಂದ ಆರಂಭಿಸಿ ಅತಿಯಾದ ಸಹಿಸಲಸ್ಸಾದ್ಯವಾದ ತುರಿಕೆಯವರೆಗೂ ವ್ಯತ್ಯಯಗೊಳ್ಳಬಹುದು. ಒಂದು ವೇಳೆ ಮಕ್ಕಳಲ್ಲಿ ಇತರೆ ಚರ್ಮದ ಸಮಸ್ಯೆಗಳೂ ಮೊದಲೇ ಇದ್ದರಂತೂ, ತುರಿಕೆಯು ಮತ್ತಷ್ಟು ತ್ರಾಸದಾಯಕವಾಗುತ್ತದೆ.

ಚಿಕನ್ ಫಾಕ್ಸ್‌ನ ಕಲೆಗಳು ಅಥವಾ ಗುರುತುಗಳು.
ತುರಿಕೆಯು ಆರಂಭಗೊಂಡು ಸುಮಾರು 12 ರಿಂದ 14 ಘoಟೆಗಳೊಳಗೆ ಕೆಂಪು ಬೊಕ್ಕೆಗಳು ಇರುವ ಜಾಗಗಳಲ್ಲಿ ಕೆಂಪಾದ, ದುಂಡುದುoಡಾದ ಗುಳ್ಳೆಗಳು ಅಥವಾ ಕಲೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮೊದಲು ಹೊಟ್ಟೆ, ಮುಖ, ಬೆನ್ನು, ಮತ್ತು ಎದೆಯ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಇವು ಕ್ರಮೇಣ ತೋಳುಗಳು, ಕಾಲುಗಳು, ತಲೆಯ ಮೇಲ್ಭಾಗ, ನಾಲಗೆ, ಮತ್ತು ಬಾಯಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ವೃಣಗಳ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ, ಸರಾಸರಿಯಾಗಿ, ಸುಮಾರು 200 ರಿಂದ 500 ರವರೆಗೆ ದೇಹದ ಎಲ್ಲಾ ಭಾಗಗಳ ಮೇಲೂ ಈ ಕಲೆಗಳು ಕಾಣಿಸಿಕೊಳ್ಳಬಹುದು.

ಹಸಿವಿಲ್ಲದಿರುವುದು.
ಹೆಚ್ಚಿನ ಮಕ್ಕಳು ಜ್ವರದೊಂದಿಗೆ ಹೊಟ್ಟೆ ನೋವು ಇರುವುದರ ಬಗ್ಗೆಯೂ ದೂರುತ್ತಾರೆ. ಶಕ್ತಿಹೀನತೆ ಮತ್ತು ವಾಕರಿಕೆಯಂತಹ ಅನುಭವದಿಂದಾಗಿ ರೋಗಿಗಳಿಗೆ ಸಾಮಾನ್ಯವಾಗಿ ಹಸಿವು ಇರುವುದಿಲ್ಲ. ಇದರಿಂದಾಗಿ ರೋಗಿಯ ತೂಕ ನಷ್ಟವಾಗಬಹುದು.

ಒಟ್ಟಾರೆಯಾಗಿ ತಲೆಸುತ್ತು ಬಂದಂತಹ ಅನುಭವ.
ದುರ್ಬಲಗೊಂಡ ರೋಗನಿರೋಧಕ ಶಕ್ತಿ, ವಾಕರಿಕೆಯ ಅನುಭವ, ಮತ್ತು ಹಸಿವಿಲ್ಲದ ಕಾರಣ, ಆಗಾಗ್ಗೆ ತಲೆಸುತ್ತು ಬಂದಂತಹ ಅನುಭವವೂ ಸಹ ಸಾಮಾನ್ಯವಾಗಿರುತ್ತದೆ.



Click it and Unblock the Notifications











