Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಫುಡ್ ಇಲ್ಲಿದೆ ನೋಡಿ!
ನಿಮ್ಮನ್ನು ಈ ಬೇಸಿಗೆಯಲ್ಲಿ ಫಿಟ್ ಮತ್ತು ಆರೋಗ್ಯವಂತರನ್ನಾಗಿಸಲು ಹೆಚ್ಚು ಪ್ರೊಟೀನ್ ನ್ಯೂಟ್ರೀನ್ ಆಹಾರಗಳನ್ನು ಸೇವಿಸಿ. ನೀವು ಏನನ್ನು ತಿನ್ನುತ್ತೀರಿ ಎಂಬ ಅಂಶ ಇಲ್ಲಿ ಪ್ರಮುಖವಾದುದು. ಹೆಚ್ಚು ನೀರು ಕುಡಿಯುವುದೂ ಕೂಡ ಬೇಸಿಗೆಯಲ್ಲಿ ಹೆಲ್ದಿಯಾಗಿರಲು ಒಂದು ಪ್ಲಸ್ ಪಾಯಿಂಟ್.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸುವ ಹಣ್ಣುಗಳು
ತಜ್ಞರ ಪ್ರಕಾರ ಪ್ರತೀ ನಿತ್ಯ ರಸವುಳ್ಳ ಆಹಾರವನ್ನು ಸೇವಿಸುವುದು ನಿಮ್ಮನ್ನು ನಿರ್ಜಲೀಕಣ ಸಮಸ್ಯೆಯಿಂದ ದೂರಮಾಡುತ್ತದೆ ಎಂದಾಗಿದೆ. ತೂಕ ಇಳಿಸುವ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡವರು ನಿಮ್ಮ ಸೇವಿಸುವ ಆಹಾರದ ಮೇಲೆ ಸಮತೋಲವನ್ನು ವಹಿಸಬೇಕು. ಮತ್ತು ಸೇವಿಸುವ ಆಹಾರದಲ್ಲಿ ಅತ್ಯಧಿಕ ಪ್ರೊಟೀನ್ ನ್ಯೂಟ್ರೀನ್ ಇದೆಯೇ ಎಂಬುದನ್ನು ಖಾತ್ರಿಗೊಳಿಸಬೇಕು. ನಿಮ್ಮ ದೇಹವನ್ನು ಬಿರು ಬೇಸಿಗೆಯಲ್ಲಿ ತಂಪಾಗಿಸಲು ಕೆಲವೊಂದು ಆರೋಗ್ಯವಂತ ಡಯೆಟ್ ಅತ್ಯವಶ್ಯಕ. ಅದೇ ರೀತಿ ಶಾಖವನ್ನು ಉತ್ತೇಜಿಸುವ ಆಹಾರವನ್ನು ತೆಗೆದುಕೊಳ್ಳದಿರುವುದು ಈ ಬೇಸಿಗೆಯಲ್ಲಿ ಅತೀ ಉತ್ತಮ.
ಶಾಖ ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳು ಮೊಡವೆ, ಚರ್ಮ ಬಿರುಕು ಮುಂತಾದ ಸಮಸ್ಯೆಗಳನ್ನು ತಂದೊಡ್ಡಬಹುದು ಆದ್ದರಿಂದ ತಂಪು ಆಹಾರವನ್ನು ಸೇವಿಸಿ. ಹೇಗೆಂದು ಚಿಂತಿತರಾಗಿದ್ದೀರಾ, ನಿಮ್ಮನ್ನು ಫಿಟ್ ಹಾಗೂ ಕ್ರಿಯಾಶೀಲರನ್ನಾಗಿಸುವ ಆರೋಗ್ಯವಂತ ಡಯೆಟ್ ಪ್ಲ್ಯಾನ್ ಇಲ್ಲಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಿಸಿಲಿನ ಧಗೆ ಹೆಚ್ಚಿರುವಾಗ ಇವುಗಳನ್ನು ತಿನ್ನಬೇಡಿ

ಹೈಡ್ರೇಟ್ ಮಾಡಿಕೊಳ್ಳಿ:
ಬೇಸಿಗೆ ಸಮಯದಲ್ಲಿ, ಬೆವರು ಮತ್ತು ಶಾಕ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ನೀರಿನ ಕೊರತೆ ನಿಮ್ಮ ದೇಹಕ್ಕೆ ಹಾನಿಕಾರಕ. ನಿಮ್ಮನ್ನು ಇನ್ನಷ್ಟು ಹಸಿವೆಗೆ ಇದು ದೂಡಬಹುದು. ತೂಕ ಇಳಿಸುವ ಮನಸ್ಸತ್ವವನ್ನು ಹೊಂದಿರುವವರು ಅತೀ ಹೆಚ್ಚು ನೀರನ್ನು ಕುಡಿಯಲೇಬೇಕು.

ಹಣ್ಣುಗಳು:
ನಿಮ್ಮನ್ನು ಬೇಸಿಗೆಯಲ್ಲಿ ಆರೋಗ್ಯಕಾರಿಯಾಗಿಸಲು ಹಣ್ಣುಗಳು ಉತ್ತಮ ವಿಧಾನವಾಗಿದೆ. ನೀರಿನಂಶ ಅಧಿಕವಿರುವ ಮತ್ತು ಕ್ಯಾಲೋರಿಗಳಲ್ಲಿ ಕಡಿಮೆ ಇರುವ ಹಣ್ಣುಗಳಾದ ಕಲ್ಲಂಗಡಿ, ದ್ರಾಕ್ಷಿ, ಮತ್ತು ಆರೆಂಜ್ ಹೆಚ್ಚು ಸೇವಿಸಿ.

ಊಟವನ್ನು ತ್ಯಜಿಸದಿರಿ:
ನೀವು ಬೇಸಿಗೆಯಲ್ಲಿ ಅನುಸರಿಸಬೇಕಾದ ಆರೋಗ್ಯಪೂರ್ಣ ಡಯೆಟ್ ಊಟವನ್ನು ತ್ಯಜಿಸದಿರುವುದಾಗಿದೆ. ಊಟವನ್ನು ಸೇವಿಸದಿರುವುದು ಅಧಿಕ ತೂಕಕ್ಕೆ ಕಾರಣವಾಗುತ್ತದೆ.

ತಾಜಾ ಆಹಾರ ಸೇವಿಸಿ:
ಬೇಸಿಗೆಯಲ್ಲಿ ತಾಜಾ ಆಹಾರ ಸೇವಿಸುವುದು ಅತೀ ಉತ್ತಮ. ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಆಹಾರ ಬೇಗ ಹಾಳಾಗುತ್ತದೆ. ನೀವು ಕಾಯಿಲೆ ಬೀಳುವುದನ್ನು ತಪ್ಪಿಸಲು, ತಾಜಾ ಆಹಾರ ಸೇವಿಸಿ.

ತಂಪು ಸಲಾಡ್‌ಗಳು:
ತಾಜಾ ತಂಪು ಸಲಾಡ್‌ಗಳು ನಿಮ್ಮನ್ನು ಬೇಸಿಗೆಯಲ್ಲಿ ಆರೋಗ್ಯವಂತರನ್ನಾಗಿಸುತ್ತದೆ. ಎಲೆಗಳುಳ್ಳ ಹಸಿರು ತರಕಾರಿಗಳಾದ ಸ್ಪಿನಾಚ್, ಸೌತೆಕಾಯಿ ಮತ್ತು ಟೊಮೇಟೋಗಳಿಂದ ಹೊಟ್ಟೆಯನ್ನು ಭರ್ತಿ ಮಾಡಿ.

ತಾಜಾಗೊಳಿಸುವ ಆಹಾರಗಳು:
ಯೋಗರ್ಟ್ ಮತ್ತು ಮೊಸರು ನಿಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುವ ಎರಡು ಆಹಾರ ಪದಾರ್ಥಗಳು. ನಿಮ್ಮ ಡಯೆಟ್ ಇವುಗಳಲ್ಲಿ ಒಂದನ್ನು ಒಳಗೊಂಡಿರಲಿ. ಮಜ್ಜಿಗೆ ಕೂಡ ಈ ಬೇಸಿಗೆಯಲ್ಲಿ ತುಂಬಾ ಉತ್ತಮ.

ತಂಪು ತರಕಾರಿಗಳು:
ಈ ಸೀಸನ್‌ಗಾಗಿ ನಿಮ್ಮನ್ನು ತಂಪುಗೊಳಿಸುವ ತಂಪು ತಂಪು ತರಕಾರಿಗಳು ಸಾಕಷ್ಟಿವೆ. ಸೌತೆಕಾಯಿ, ಮಿಂಟ್ ಹಾಗೂ ಮೂಲಂಗಿಯನ್ನು ಅಧಿಕ ಸೇವಿಸಿ.

ಸೋಡಾಗಳನ್ನು ಸೇವಿಸದಿರಿ:
ತಂಪಾದ ಪಾನೀಯಗಳನ್ನು ಬೇಸಿಗೆಯಲ್ಲಿ ಸೇವಿಸುವುದು ದೇಹಕ್ಕೆ ಹಿತಕಾರಿಯೇ. ಆದರೆ ಸೋಡಾದಿಂದ ಆದಷ್ಟು ದೂರವಿರುವುದು ಉತ್ತಮ. ನಿಮ್ಮ ದೇಹಕ್ಕೆ ಹಾನಿಕರವಾದ ತಂಪು ಪಾನೀಯ ಇದಾಗಿದೆ.

ಡ್ರೈ ಫ್ರುಟ್ಸ್ ಸೇವನೆ ಬೇಡ:
ಡ್ರೈ ಫ್ರುಟ್ಸ್‌ಗಳನ್ನು ಅತಿಯಾಗಿ ಸೇವಿಸದಿರಿ. ನಿಮ್ಮ ಹೃದಯಕ್ಕೆ ಇದು ಉತ್ತಮವಾದರೂ ದೇಹದ ಶಾಕವನ್ನು ಇವುಗಳು ಏರಿಸುತ್ತವೆ.

ಸಕ್ಕರೆಯಿಂದ ದೂರವಿರಿ:
ತರಕಾರಿಗಳು ಮತ್ತು ಹಣ್ಣುಗಳಲ್ಲಿರುವ ನೈಸರ್ಗಿಕ ಸಕ್ಕರೆಯನ್ನು ಸೇವಿಸಿ. ನಿಮ್ಮ ಡಯೆಟ್ ಆರೋಗ್ಯಕಾರಿಯಾಗಲು ಸಕ್ಕರೆ ಅಂಶಗಳನ್ನು ತ್ಯಜಿಸುವುದು ಒಳಿತು.

ಕೊಬ್ಬಿನ ಆಹಾರಗಳು:
ನಿಮಗೆ ತಿಳಿದಿದೆಯೇ ಕೊಬ್ಬುಳ್ಳ ಆಹಾರಗಳು ನಿಮ್ಮ ದೇಹದಲ್ಲಿ ಥರ್ಮಲ್ ಪರಿಣಾಮವನ್ನು ಉಂಟುಮಾಡುತ್ತವೆ. ಆದ್ದರಿಂದ ಸಮೋಸಾ ಚಿಪ್ಸ್ ಮೊದಲಾದ ಕೊಬ್ಬಿನ ಆಹಾರಗಳನ್ನು ಅತಿಯಾಗಿ ಸೇವಿಸದಿರಿ.

ಬೇಸಿಗೆ ಹವ್ಯಾಸವನ್ನು ಬೆಳೆಸಿಕೊಳ್ಳಿ:
ಬೇಸಿಗೆಯ ಸೆಕೆಯನ್ನು ನಿಯಂತ್ರಿಸಲು, ನಿಮ್ಮನ್ನು ಹೆಲ್ದಿಯನ್ನಾಗಿ ಇರಿಸುವ ಹವ್ಯಾಸವನ್ನು ಮೈಗೂಢಿಸಿಕೊಳ್ಳಿ. ಈಜುವುದು ಮತ್ತು ತೋಟಗಾರಿಕೆ ನಿಮ್ಮ ಉತ್ತಮ ಬೇಸಿಗೆ ಹವ್ಯಾಸಗಳಾಗಿವೆ. ನಿಮ್ಮ ದೇಹ ಹಾಗೂ ಮನಸ್ಸಿಗೆ ಇವೆರಡೂ ಒಳ್ಳೆಯದೇ!



Click it and Unblock the Notifications
