Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೋಪದಿಂದಾಗಿ ದೇಹದಲ್ಲಿ ಆಗುವ ಬದಲಾವಣೆಗಳಿವು!
ನಿಮ್ಮ ಮನಸ್ಸಿನ ಸ್ಥಿತಿ ಹೇಗಿರುತ್ತದೆಯೋ ಹಾಗೇ ನಿಮ್ಮ ಆರೋಗ್ಯ ಇರುತ್ತದೆ ಎಂದು ಸಾಕಷ್ಟು ಬಾರಿ ಹೇಳಿದ್ದೇವೆ. ಕೆಲವೊಂದು ವಿಷಯಕ್ಕೆ ಕೋಪ ಬಂದೇ ಬರುತ್ತದೆ. ಕೋಪವೇ ನಮ್ಮ ಗುಣವಾದರೆ ನಮ್ಮ ವ್ಯಕ್ತಿತ್ವಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಅಪಾಯ.
ಕೋಪದಿಂದ ಕುಯ್ದ ಮೂಗು ಮತ್ತೆ ಬರಲ್ಲ ಎಂಬಂತೆ, ಕೋಪದಲ್ಲಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ತಪ್ಪಾಗಿರುತ್ತದೆ. ಕೋಪಗೊಳ್ಳುವ ವಿಷಯಕ್ಕೆ ಕೋಪಗೊಳ್ಳಲೇಬೇಕು. ಹಾಗಂತ ಚಿಕ್ಕ-ಪುಟ್ಟ ವಿಷಯಕ್ಕೆ ಕೋಪಗೊಳ್ಳುತ್ತಿದ್ದರೆ, ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಲು ಶ್ರಮಿಸುವುದು ಒಳ್ಳೆಯದು. ಧ್ಯಾನ, ಪ್ರಾಣಯಾಮ, ಯೋಗ, ದೀರ್ಘ ಉಸಿರಾಟ ಇವುಗಳಿಂದ ಕೋಪವನ್ನು ನಿಯಂತ್ರಿಸಿಕೊಳ್ಳಬಹುದು.
ತಕ್ಷಣ ಕೋಪಗೊಳ್ಳುವ ಗುಣವಿದ್ದರೆ ಈ ಕೆಳಗಿನ ಕಾಯಿಲೆಗಳು ನಿಮ್ಮಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ:

ಮಾನಸಿಕ ಒತ್ತಡ, ಖಿನ್ನತೆ
ಕೋಪಗೊಳ್ಳುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ಮಾನಸಿಕ ಒತ್ತಡ ಹೆಚ್ಚಾದರೆ ಖಿನ್ನತೆ ಕಾಣಿಸಿಕೊಳ್ಳುತ್ತದೆ.

ಹೃದಯಘಾತ
ವಿಪರೀತ ಕೋಪಗೊಂಡಾಗ ಹೃದಯಾಘಾತ ಉಂಟಾಗಿರುವ ಎಷ್ಟೋ ಕೇಸ್ ಗಳ ಬಗ್ಗೆ ಕೇಳಿರಬಹುದು. ನೀವು ಕೋಪಗೊಂಡಾಗ ರಕ್ತ ಸಂಚಾರದಲ್ಲಿ ಏರಳಿತ ಉಂಟಾಗುವುದು, ಅಧಿಕ ರಕ್ತದೊತ್ತಡ ಉಂಟಾಗಿ ಹೃದಯಾಘಾತ ಉಂಟಾಗುವುದು.

ನಿದ್ರಾಹೀನತೆ
ಯಾರ ಮೇಲಾದರೂ ಕೋಪಗೊಂಡು ಮಲಗಿದರೆ ತುಂಬಾ ಹೊತ್ತಿನವರೆಗೆ ನಿದ್ದೆ ಬರುವುದಿಲ್ಲ, ಮನಸ್ಸಿನಲ್ಲಿ ಬರೀ ಕೆಟ್ಟ ಚಿಂತನೆಗಳೇ ಬರುತ್ತದೆ. ನಿದ್ದೆ ಸರಿಯಾಗಿ ಬರದಿದ್ದರೆ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುವಿರಿ.

ಅಧಿಕ ರಕ್ತದೊತ್ತಡ
ಬೇಗನೆ ಕೋಪ ಮಾಡಿಕೊಳ್ಳುವವರನ್ನು ಅವರಿಗೆ ಬಿಪಿ ಜಾಸ್ತಿ ಇದೆ ಎಂದು ಹೇಳುತ್ತೇವೆ ಅಲ್ಲವೇ? ರಕ್ತದೊತ್ತಡ ಅಧಿಕವಿರುವುದರಿಂದ ಬೇಗ ಕೋಪ ಮಾಡಿಕೊಳ್ಳುತ್ತಾರೆ ಅನ್ನುವುದಕ್ಕಿಂತ ಕೋಪ ಮಾಡಿಕೊಳ್ಳುವುದರಿಂದ ರಕ್ತದೊತ್ತಡ ಅಧಿಕವಾಗುತ್ತದೆ ಎನ್ನುವುದು ಸರಿ. ರಕ್ತದೊತ್ತಡ ಅಧಿಕವಾದರೆ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆ ಬರಬಹುದು.

ತಲೆನೋವು
ನಿಮಗೆ ಕೋಪ ಬಂದಾಗ ಗಮನಿಸಿ, ಜೋರು ಕೋಪ ತಲೆನೋವು ಬರುವುದು. ದೇಹದ ಚೈತನ್ಯ ಕೂಡ ಕಡಿಮೆಯಾಗುವುದು.

ಪಾರ್ಶ್ವವಾಯು
ಅಧಿಕ ಕೋಪಗೊಂಡಾಗ ಕೆಲವರಿಗೆ ಮೆದುಳಿಗೆ ರಕ್ತ ಸಂಚಾರ ಮಾಡುವ ರಕ್ತನಾಳಗಳು ಒಡೆಯುತ್ತದೆ. ಇದರಿಂದ ಮೆದುಳಿಗೆ ಸರಿಯಾದ ರಕ್ತ ಹಾಗೂ ಆಮ್ಲಜನಕ ಪೂರೈಕೆಯಾಗದೆ ಪಾರ್ಶ್ವವಾಯು ಉಂಟಾಗುವುದು.
ನಮ್ಮಲ್ಲಿರುವ ಕೋಪ ಬೇರೆಯವರಗಿಂತ ನಮಗೇ ಹೆಚ್ಚು ಹಾನಿಯನ್ನು ತರುತ್ತದೆ. ಅಂದ ಮೇಲೆ ಈ ಹಾಳಾದ ಕೋಪ ಏಕಾದರೂ ಬರುತ್ತದೆಯೋ?



Click it and Unblock the Notifications
