Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಿಕನ್ ಪಾಕ್ಸ್ ತುರಿಕೆ ತಡೆಗಟ್ಟುವ ವಿಧಾನ

ಆದ್ದರಿಂದ ಚಿಕನ್ ಪಾಕ್ಸ್ ತುರಿಕೆಯನ್ನು ಈ ಕೆಳಗಿನ ವಿಧಾನಗಳಿಂದ ತಡೆಗಟ್ಟಬಹುದು.
1. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದರೆ ತುರಿಕೆ ಸ್ವಲ್ಪ ಕಡಿಮೆಯಾಗವುದು.
2. ಹತ್ತಿ ಬಟ್ಟೆಯನ್ನು ತಣ್ಣನೆಯ ನೀರಿನಲ್ಲಿ ಅದ್ದಿ ಅದನ್ನು ಮೈಗೆ ಒತ್ತಿದರೆ ತುರಿಕೆ ಸ್ವಲ್ಪ ಕಡಿಮೆಯಾಗುವುದು.
3. ಸ್ನಾನಕ್ಕೆ ಬಳಸುವ ಓಟ್ ಮೀಲ್ಸ್ ಕೊಂಡು ಅದರಲ್ಲಿ ಬರೆದಿರುವ ಸೂಚನೆಗಳನ್ನು ಅನುಸರಿಸಿ ಸ್ನಾನ ಮಾಡಬೇಕು.
4. ಸ್ನಾನದ ನಂತರ ಮೈಯನ್ನು ಟವಲ್‌ನಿಂದ ಉಜ್ಜದೆ ಮೆಲ್ಲನೆ ಅದುಮಿ ತೆಗೆಯಬೇಕು.
5. ನಂತರ ಕಲಾಮೈನ್ ಲೋಷನ್ ಅನ್ನು ಮೈಗೆ ಹಚ್ಚಬೇಕು.
ಇತರ ಸಲಹೆಗಳು:
* ಯಾವುದೇ ಕಾರಣಕ್ಕೂ ಮೈಯನ್ನು ಕೆರೆಯಬಾದರು. ಕೆರೆದರೆ ಕಲೆ ಬೀಳುವುದು.
* ಚಿಕನ್ ಪಾಕ್ಸ್ ಕುರಿತು ಯೋಚಿಸದೆ, ಬೇರೆ ಏನಾದರೂ ಯೋಚಿಸಬೇಕು. ಏಕೆಂದರೆ ಚಿಕನ್ ಪಾಕ್ಸ್ ಕುರಿತು ಯೋಚಿಸಿದರೆ ತುರಿಕೆ ಬರುತ್ತದೆ.
ಎಚ್ಚರಿಕೆಗಳು:
1. ಚಿಕನ್ ಪಾಕ್ಸ್ ಗುಳ್ಳೆಗಳನ್ನು ಮುಟ್ಟಿದರೆ ಅದರಲ್ಲಿರುವ ಸೋಂಕಾಣು ಹರಡಿ ಕಾಯಿಲೆ ಜಾಸ್ತಿಯಾಗುವುದು. ಆದ್ದರಿಂದ ಮುಟ್ಟಲು ಹೋಗಬಾರದು.
2. ಚಿಕನ್ ಪಾಕ್ಸ್ ಬಂದು 3 ವಾರಗಳಾದರೂ ಗುಣಮುಖವಾಗದಿದ್ದರೆ ವೈದ್ಯರನ್ನು ಕಾಣಬೇಕು.
3. ಅಧಿಕ ಜ್ವರ ಬಂದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ, ತುಂಬಾ ಕೆಮ್ಮಿದ್ದರೆ ವೈದ್ಯರನ್ನು ಕಾಣಬೇಕು.
4. ಚಿಕನ್ ಪಾಕ್ಸ್ ಬಂದಾಗ ಇತರರಿಗೆ ಹರಡದಿರಲು ಎಚ್ಚರಿಕೆವಹಿಸಿ. ಮಕ್ಕಳಿಗೆ ಉಂಟಾದರೆ ಒಂದು ವಾರದವರೆಗೆ ಶಾಲೆಗೆ ಕಳುಹಿಸಬೇಡಿ.
5. ಗರ್ಭೀಣಿಯರು ಚಿಕನ್ ಪಾಕ್ಸ್ ಬಂದವರ ಹತ್ತಿರ ಹೋಗಬಾರದು.
6. ಮಕ್ಕಳಿಗೆ ಚಿಕನ್ ಪಾಕ್ಸ್ ಬಂದರೆ ಆಸ್ಪಿರಿನ್ ಮಾತ್ರೆ ಕೊಡಬಾರದು.
7. ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳನ್ನು ತಿನ್ನದೆ ಬಾಳೆ ಹಣ್ಣು, ಎಳನೀರು ಕುಡಿಯುವದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
