Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!
ಈಗೆಲ್ಲಾ ಬೆನ್ನು ನೋವು ಚಿಕ್ಕ ಪ್ರಾಯದಲ್ಲಿಯೇ ಪ್ರಾರಭವಾಗುತ್ತದೆ. ಹೀಗೆ ಚಿಕ್ಕದಾಗಿ ಬೆನ್ನು ನೋವು ಕಾಣಿಸಿಕೊಂಡರೆ ಸ್ವಲ್ಪ ಮೂವ್ ಅಥವಾ ಅಮೃತಾಂಜನ ಹಚ್ಚಿ ಸುಮ್ಮನೆಯಾಗಿ ಬಿಡುತ್ತೇವೆ. ಸಹಿಸಲು ಅಸಾಧ್ಯವಾದ ಬೆನ್ನುನೋವು ಕಾಣಿಸಿಕೊಂಡಾಗ ವೈದ್ಯರನ್ನು ಕಾಣಲು ಹೋಗುತ್ತೇವೆ. ಆರೋಗ್ಯಕರವಲ್ಲದ ಜೀವನ ಶೈಲಿ, ತುಂಬಾ ಹೊತ್ತು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು, ವ್ಯಾಯಾಮ ಮಾಡದಿರುವುದು , ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿದ ಬೆನ್ನು ನೋವು ಅಧಿಕವಾಗುತ್ತದೆ. ಈ ರೀತಿ ಬೆನ್ನು ನೋವು ಕಾಣಿಸಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸಾಕು, ಬೆನ್ನು ನೋವು ನಿವಾರಣೆಯಾಗುವುದು.

1. ವಿಟಮಿನ್ ಡಿ ಅಧಿಕ ಸೇವಿಸಿ: ವಿಟಮಿನ್ ಡಿ ಕೊರತೆ ಉಂಟಾದರೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ವಿಟಮಿನ್ ಡಿ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು. ಅಣಬೆ, ಕಾಡ್ ಲಿವರ್, ಮೊಟ್ಟೆ, ಸೊಪ್ಪು ಮತ್ತು ಮೀನಿನಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ.
2. ಮ್ಯೂಸಿಕ್ ಥೆರಪಿ: ಒಳ್ಳೆಯ ಸಂಗಿತವನ್ನು ಕೇಳುತ್ತಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾದರೆ ಬೆನ್ನು ನೋವು ಕೂಡ ಕಡಿಮೆಯಾಗುವುದು. ಸಂಗೀತವನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಹೆಚ್ಚಿನ ಕಾಯಿಲೆಗಳು ಒತ್ತಡದಿಂದ ಬರುತ್ತದೆ. ಸಂಗೀತವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುವುದು.
3. ಪ್ರಾಣಾಯಾಮ: ಪ್ರಾಣಾಯಾಮ ಮಾಡುವುದರಿಂದ ಕೂಡ ಬೆನ್ನುನೋವಿಗೆ ಪರಿಹಾರವನ್ನು ಕಂಡು ಹಿಡಿಯಬಹುದು. ಪ್ರಾಣಾಯಾಮವನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ಕೇವಲ ಬೆನ್ನು ನೋವು ಮಾತ್ರ ಕಡಿಮೆ ಮಾಡುವುದಲ್ಲದೆ, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಇದನ್ನು ಮಾಡಿದ್ದೇ ಆದರೆ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು.
4. ಮಸಾಜ್: ಬೆನ್ನು ನೋವು ಕಾಣಿಸಿಕೊಂಡರೆ ಮಸಾಜ್ ಥೆರಪಿ ಮಾಡಿಸಿಕೊಂಡರೆ ಗುಣವಾಗುತ್ತದೆ. ಈ ರೀತಿಯ ಥೆರಪಿಯನ್ನು ಗರ್ಭಿಯಾಗಿರುವಾಗ ಬೆನ್ನು ನೋವು ಕಡಿಮೆ ಮಾಡಲು ಬಳಸುತ್ತಾರೆ.
* ಬೆಳ್ಳುಳ್ಳಿ ಎಣ್ಣೆಯನ್ನು ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.
5. ಕೂರುವ ಭಂಗಿ: * ಬೆನ್ನಿಗೆ ಹೊಂದಿಕೊಳ್ಳುವಂತೆ ಕುರ್ಚಿಗಳನ್ನು ಉಪಯೋಗಿಸಬೇಕು.
* ಗಟ್ಟಿಯಾದ ಜಮಖಾನ ಅಥವಾ ಚಾಪೆಯ ಮೇಲೆ ಮಲಗುವ ಅಭ್ಯಾಸ ಮಾಡಬೇಕು.
*ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
* ಕುಳಿತುಕೊಳ್ಳುವ ಮತ್ತು ನಿಲ್ಲುವ ಭಂಗಿಯನ್ನು ಕ್ರಮವಾಗಿ ಅಭ್ಯಾಸ ಮಾಡಬೇಕು.
* ಹೆಚ್ಚು ಕಾಲ ನಿಲ್ಲುವುದನ್ನು ತಪ್ಪಿಸಬೇಕು.
6.ಆಹಾರ: ಲಿಂಬೆಯಲ್ಲಿರುವ 'ಸಿ' ಸತ್ವ, ಬೆಳ್ಳುಳ್ಳಿ, ಆಲೂಗೆಡ್ಡೆ, ಟೊಮೆಟೋ, ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಹಣ್ಣುಗಳ ಸಲಾಡ್‌ಗಳನ್ನು ಹೆಚ್ಚಾಗಿ ಬಳಸಬೇಕು. ಹೂಕೋಸು, ಎಲೆ ಕೋಸು ಬಸಳೆ, ಸೇವಿಸಿದರೆ ಒಳ್ಳೆಯದು. ಬಾಳೆಹಣ್ಣನ್ನು ಒಂದು ತಿಂದರೆ ಒಳ್ಳೆಯದು. ಹೆಚ್ಚು ತಿನ್ನಲು ಹೋಗಬಾರದು. ದೇಹದ ತೂಕ ಅದರಲ್ಲೂ ಬೆನ್ನಿನ ಬೊಜ್ಜು ಕಡಿಮೆ ಮಾಡಲು ವ್ಯಾಯಾಮ ಮಾಡಬೇಕು. ಬೆನ್ನು ನೋವನ್ನು ಹೊಂದಿರುವ ವ್ಯಕ್ತಿಯು ಕೊಬ್ಬು ಇರುವ ಪದಾರ್ಥಗಳು, ಖಾರ ಪದಾರ್ಥಗಳು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು, ಮೊಸರು, ಸಿಹಿತಿಂಡಿಗಳು, ಸಕ್ಕರೆ, ಉಪ್ಪಿನಕಾಯಿ ಟೀ ಕಾಫಿ ಮೊದಲಾದವುಗಳನ್ನು ತಿನ್ನಬಾರದು.
7. ಮಧ್ಯ ವಯಸ್ಸು ದಾಟಿದ ಮಹಿಳೆಯರಿಗೆ ಬೆನ್ನು ನೋವು ಹೆಚ್ಚಾಗಿ ಕಂಡು ಬರುತ್ತದೆ. ಈ ರೀತಿ ಬೆನ್ನು ನೋವು ಬರದಂತೆ ತಡೆಯಲು ಈ ಕೆಳಗಿನ ಸಲಹೆ ಪಾಲಿಸ ಬಹುದು.
1. ಕ್ಯಾಲ್ಸಿಯಂ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
2. ಹೆರಿಗೆಯಾದಾಗ ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳನ್ನು ಸೇವಿಸಬೇಕು.
3. ತುಂಬಾ ಹೊತ್ತು ಕೂತು ಕೆಲಸ ಮಾಡುವಾಗ ಕೂರುವ ಭಂಗಿ ಸರಿಯಾಗಿದ್ದರೆ (ಬೆನ್ನಿಗೆ ಸಪೋರ್ಟ್ ಕೊಟ್ಟು ಕೂರಿ) ಬೆನ್ನುನೋವು ಬರುವುದಿಲ್ಲ.
4. ದೇಹದ ತೂಕ ಮಿತಿಮೀರಿ ಹೆಚ್ಚಾಗಲು ಬಿಡಬಾರದು. 1/2 ಗಂಟೆ ನಡೆಯುವ ವ್ಯಾಯಾಮ ಒಳ್ಳೆಯದು.
5. ಡ್ರೈವಿಂಗ್ ಮಾಡುವಾಗ ಕುರ್ಚಿಯಲ್ಲಿ ಕೂರುವಾಗ ಬೆನ್ನಿಗೆ ಸರಿಯಾದ ಸಪೋರ್ಟ್ ಇಟ್ಟುಕೊಳ್ಳುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
