Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹೆಚ್ಚುತ್ತಿರುವ ಮೂಲವ್ಯಾಧಿಗೆ ಜೀವನಶೈಲಿ ಕಾರಣ!

ಮೂಲವ್ಯಾಧಿಯ ಆರಂಭದಲ್ಲಿ ಮಲವಿಸರ್ಜನೆಯ ಸಮಯದಲ್ಲಿ ಸ್ವಲ್ಪ ರಕ್ತಸ್ರಾವ ಗೋಚರಿಸುತ್ತದೆ. ಈ ತರಹದ ಸ್ಥಿತಿ ಬಹುಕಾಲ ಹಾಗೆಯೇ ಮುಂದುವರಿಯಬಹುದು. ಕೆಲಕಾಲದ ನಂತರ ಉಬ್ಬಿದ ರಕ್ತನಾಳಗಳು ಮಲವಿಸರ್ಜನೆಯ ಕಾಲದಲ್ಲಿ ಹೊರಚಾಚಲ್ಪಡುತ್ತವೆ. ಅನಂತರ ಒಳಸೇರಿಕೊಳ್ಳುತ್ತವೆ. ಕಾಯಿಲೆ ಮುಂದುವರೆದಂತೆ ರಕ್ತನಾಳಗಳು ಗುಂಪಿನ ಗಾತ್ರ ಕುಗ್ಗುವುದಿಲ್ಲ ಮತ್ತು ಅವು ತಂತಾನೇ ಒಳಸೇರಿಕೊಳ್ಳುವುದಿಲ್ಲ.
ಬಹುಕಾಲದಿಂದ ಮಲಬದ್ಧತೆಯಿಂದ ನರಳುವವರಲ್ಲಿ ಗಟ್ಟಿಯಾದ ಮಲ ಗುದದ್ವಾರದ ಮೂಲಕ ಹೊರಬರುವಾಗ ಅದು ಯಾವ ಸ್ನಾಯುವಿನ ಆಧಾರವನ್ನು ಪಡೆಯದೇ ಗುದನಾಳದ ಅಂತ್ಯ ಭಾಗವನ್ನು ಗೀಚುವಂತೆ ಅಂದರೆ ಸೀಳುವಂತೆ ಮಾಡುತ್ತದೆ. ಈ ರೀತಿ ಉಂಟಾದಾಗ ಆಗ ಅಲ್ಲಿನ ಚರ್ಮ ಬಿರುಕುಗೊಳ್ಳುವುದು. ಇದನ್ನು ಫಿಶ್ ಎಂದು ಕರೆಯಲಾಗುವುದು. ಈ ರೀತಿ ಉಂಟಾದಾಗ ತುಂಬಾ ನೋವು ಉಂಟಾಗುತ್ತದೆ. ನಂತರ ಮಲವಿಸರ್ಜನೆಗೆ ಹೋದಾಗಲೆಲ್ಲ ನೋವು ಬರುತ್ತಾ ಇರುತ್ತದೆ. ಈ ರೀತಿ ನೋವು ತಡೆಯಲು ಕೆಲವರು ಮಲವಿಸರ್ಜನೆಯನ್ನು ಹತ್ತಿಕ್ಕಲಾರಂಭಿಸುತ್ತಾರೆ. ಈ ರೀತಿ ಮಾಡಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುವುದು.
ಮೂಲವ್ಯಾಧಿ ಮತ್ತು ಫಿಶ್‌ಗೆ ಪ್ರಮುಖ ಕಾರಣ ಮಲಬದ್ಧತೆ. ಆದ್ದರಿಂದ ಮಲಬದ್ಧತೆ ಸಮಸ್ಯೆ ಉಂಟಾದರೆ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಂಡು ಸರಿಪಡಿಸಬೇಕು. ಈ ರೀತಿ ಮಾಡಿದರೆ ಮೂಲವ್ಯಾಧಿ ಸಮಸ್ಯೆ ಉಂಟಾಗದಂತೆ ತಡೆಯಬಹುದು. ಕರುಳಿನ ಚಲನೆ (bowel movements) ಸರಿಯಾಗಿದ್ದಲ್ಲಿ ಮಲವಿಸರ್ಜನೆ ಸರಿಯಾಗಿ ಆಗುತ್ತದೆ.
ನಮ್ಮ ಆಹಾರಕ್ರಮಯಂತೂ ಸಂಪೂರ್ಣವಾಗಿ ಬದಲಾಗುತ್ತಿದೆ. ಫಾಸ್ಟ್ ಫುಡ್ ಹೆಚ್ಚಾಗಿ ಸೇವಿಸುತ್ತೇವೆ. ಈ ಆಹಾರದಲ್ಲಿ ಹೆಚ್ಚು ನಾರಿನಂಶವಿರುವುದಿಲ್ಲ. ನಾರಿನಂಶ ಹೆಚ್ಚು ಇರುವುದಿಲ್ಲ. ಅಲ್ಲದೆ ನಮ್ಮಲ್ಲಿ ಈಗ ಕಂಪ್ಯೂಟರ್ ಬಳಕೆ ಹೆಚ್ಚಾಗಿರುವುದರಿಂದ ಓಡಾಡದೆ 8-10 ಗಂಟೆ 8 ಗಂಟೆ ಒಂದೇ ಕಡೆ ಕುಳಿತು ಕೆಲಸ ಮಾಡುತ್ತೇವೆ. ಕೆಲಸದಲ್ಲಿ ನಮಗೆ ದೈಹಿಕ ಶ್ರಮ ಅತ್ಯಂತ ಕಡಿಮೆ. ಮಾನಸಿಕವಾಗಿ ಒತ್ತಡ ಹೆಚ್ಚು. ನಮ್ಮ ದೈಹಿಕ ಶ್ರಮಕ್ಕೆ ನಾವು ತೆಗೆದುಕೊಳ್ಳುತ್ತಿರುವ ಆಹಾರವೇ ಹೆಚ್ಚು. ಎರಡು ಗಂಟೆಗೊಮ್ಮೆ 5-10 ನಿಮಿಷ ಓಡಾಡಿ ಕುಳಿತುಕೊಳ್ಳುವುದು ಒಳ್ಳೆಯದು. ಪ್ರತಿದಿನ ನಿಯಮಿತವಾಗಿ ಅರ್ಧಗಂಟೆ ವ್ಯಾಯಾಮ ಇಲ್ಲವೇ ಒಂದು ಗಂಟೆ ನಡಿಗೆ ರೂಢಿಸಿಕೊಳ್ಳಬೇಕು. ಇದರಿಂದ ಉದರದ ಮಾಂಸಖಂಡಗಳಿಗೆ ವ್ಯಾಯಾಮ ಆಗುತ್ತದೆ. ಕರುಳಿನ ಚಲನೆ ಹೆಚ್ಚುತ್ತದೆ.
ಮೂಲವ್ಯಾಧಿ ಇರುವವರಿಗೆ ಆಗಾಗ ತುರಿಕೆ ಉಟಾಗುತ್ತದೆ. ಆಗ ಕೆರೆದುಕೊಳ್ಳಬಾರದು ಏಕೆಂದರೆ ಉಗುರು ತಾಗಿದರೆ ಅಲ್ಲಿನ ಮೃದು ಚರ್ಮ ಬಿರುಕುಬಿಡಬಹುದು. ಗುದದ್ವಾರದ ಸ್ವಚ್ಛತೆ ಬಹಳ ಮುಖ್ಯ. ತುರಿಕೆಯಾದಾಗ ಬಿಸಿನೀರನ್ನು ಹಾಕಿಕೊಂಡರೆ ತುರಿಕೆ ಕಡಿಮೆಯಾಗುವುದು. ಇದು ಇರುವವರು ಒಂದು ಅಗಲವಾದ ಟಬ್‌ನಲ್ಲಿ ಬಿಸಿನೀರು ಹಾಕಿ ಕುಳಿತುಕೊಳ್ಳಬೇಕು. ಹೀಗೆ ಕುಳಿತುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ. ರಕ್ತನಾಳಗಳಲ್ಲಿ ರಕ್ತ ಹರಿಯುವಿಕೆ ಹೆಚ್ಚಾಗಿ ಸಲೀಸಾಗುತ್ತದೆ.
ಮಹಿಳೆಯರು ಗಮನಿಸಬೇಕಾದ ಅಂಶ – ಮಹಿಳೆಯರಲ್ಲಿ ಮೂತ್ರದ್ವಾರ, ಜನನಾಂಗ ಮತ್ತು ಗುದದ್ವಾರ ಮೂರು ಒಂದೇ ಕಡೆ ಇರುವುದರಿಂದ ಸ್ವಚ್ಛತೆ ಮತ್ತು ಎಚ್ಚರಿಕೆ ಬಹಳ ಮುಖ್ಯ. ಪ್ರತಿಬಾರಿ ಮೂತ್ರ ಮತ್ತು ಮಲವಿಸರ್ಜನೆ ಸಮಯದಲ್ಲಿ ಮೂತ್ರದ್ವಾರ, ಜನನಾಂಗ ಸ್ವಚ್ಛಗೊಳಿಸಿಕೊಂಡು ನಂತರ ಗುದದ್ವಾರ ಸ್ವಚ್ಛಗೊಳಿಸಿಕೊಳ್ಳಬೇಕು. ಚಿಕ್ಕಮಕ್ಕಳಿರುವಾಗಲೇ ತಾಯಂದಿರು ಈ ರೂಢಿ ಕಲಿಸಬೇಕು. ಅನೇಕರು ತಪ್ಪು ಮಾಡುತ್ತಾರೆ. ಗುದದ್ವಾರ ಸ್ವಚ್ಛಗೊಳಿಸಿಕೊಂಡ ನಂತರವೇ ಜನನಾಂಗ, ಮೂತ್ರದ್ವಾರ ಸ್ವಚ್ಛಗೊಳಿಸುತ್ತಾರೆ. ಒಳ ಉಡುಪುಗಳನ್ನು ಬಿಸಿ ನೀರಿನಲ್ಲಿ ತೊಳೆದು ಬಿಸಿಲಿಗೆ ಒಣಗಿಸಬೇಕು. ಬಿಸಿಲಿಲ್ಲದಿದ್ದಾಗ ಇಸ್ತ್ರಿ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications