Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಗುವಿನ ಮಂತ್ರಕ್ಕೆ ಅಂಜುವ ಸೋಲು!
ಜುಲೈ 1 ವಿಶ್ವ ನಗುವಿನ ದಿನವನ್ನಾಗಿ ಆಚರಿಸಲಾಗುತ್ತದೆ. ನಗುವಿಗೆ ಇರುವ ಮಂತ್ರ ಶಕ್ತಿ ಅದ್ಭುತವಾದದು.
ನಗು ಮುಖದ ವ್ಯಕ್ತಿಗಳು ಬೇಗನೆ ಇಷ್ಟವಾಗಿ ಬಿಡುತ್ತಾರೆ. ಕಷ್ಟವಿರಲಿ-ಸುಖವಿರಲಿ ಕೆಲವರಂತೂ ನಗು-ನಗುತ್ತಾ ಇರುತ್ತಾರೆ. ಅಂತಹವರನ್ನು ನೋಡುವಾಗ ಇತರರಿಗೂ ಜೀವನದಲ್ಲಿ ಉತ್ಸಾಹ ಬರುತ್ತದೆ. ಈ ರೀತಿ ನಗುವುದರಿಂದ ವ್ಯಕ್ತಿಯ ಆರೋಗ್ಯ ಕೂಡ ಹೆಚ್ಚಾಗುತ್ತದೆ. ನಗುವಿನ ಮಂತ್ರ ಶಕ್ತಿ ನಿಮ್ಮಲ್ಲಿದ್ದರೆ ನೋವು, ದುಃಖ ಅದರ ಮುಂದೆ ನಿಲ್ಲಲು ಅಂಜುವುದು.

ಈ ಒತ್ತಡದ ಜೀವನದಲ್ಲಿ ನಗು ಅನ್ನುವ ಅಂಶವನ್ನೇ ಮರೆತು ಬಿಡುತ್ತಿದ್ದೇವೆ. ಅದರ ಪರಿಣಾಮ ಒತ್ತಡ ಹೆಚ್ಚಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ದೇಹದ ಆರೋಗ್ಯಕ್ಕೆ ವ್ಯಾಯಾಮ ಮಾಡಬೇಕು. ನಗರ ಪ್ರದೇಶದ ಪಾರ್ಕ್ ಗಳಲ್ಲಿ ಬೆಳಗ್ಗೆ ಒಂದಿಷ್ಟು ಗುಂಪು ಸೇರಿ ನಗುವುದನ್ನು ಕಾಣಬಹುದು. ನಕ್ಕರೆ ಆರೋಗ್ಯಕ್ಕೆ ಉಂಟಾಗುವ ಪ್ರಯೋಜವೇನು ಅನ್ನುವುದನ್ನು ವೈಜ್ಞಾನಿಕ ವಿಧಾನದಲ್ಲಿ ತಿಳಿಯೋಣ ಬನ್ನಿ.
ರೋಗ ನಿರೋಧಕ ಸಾಮರ್ಥ್ಯ:
ಆರೋಗ್ಯ ತಜ್ಞರ ಪ್ರಕಾರ ನಕ್ಕರೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ. ದೇಹದಲ್ಲಿ ಒತ್ತಡವನ್ನು ಉಂಟು ಮಾಡುವ ಹಾರ್ಮೋನ್ ಗಳನ್ನು ಬಿಡುಗಡೆಯಾಗುವುದು ಕಡಿಮೆಯಾಗುವುದು. ಮನಸ್ಸಿಗೆ ನಿರಾಳ ಅನಿಸುತ್ತದೆ. ಇದರಿಂದಾಗಿ ದಿನಪೂರ್ತಿ ಚಟುವಟಿಕೆಯಿಂದ ಕೆಲಸ ಮಾಡಲು ಸಹಕಾರಿಯಾಗುವುದು.
ರಕ್ತ ನಾಳಗಳ ಕಾರ್ಯ ಚಟುವಟಿಕೆ ಹೆಚ್ಚುತ್ತದೆ:
ನಕ್ಕರೆ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ರಕ್ತನಾಳದಲ್ಲಿ ರಕ್ತ ಸಂಚಾರಕ್ಕೆ ತುಂಬಾ ಸಹಕಾರಿಯಾಗುತ್ತದೆ. ದಿನದಲ್ಲಿ 10 ನಿಮಿಷ ನಗುವ ವ್ಯಾಯಾಮ ಮಾಡಿದರೆ ಹೃದಯಾಘಾತ ಆಗುವ ಸಾಧ್ಯತೆ ಕಡಿಮೆಯಾಗುವುದು.
ದೇಹಕ್ಕೆ ಆಮ್ಲಜನಕದ ಪೂರೈಕೆ:
ನಕ್ಕಾಗ ತುಂಬಾ ಆಮ್ಲಜನಕವನ್ನು ತೆಗೆದುಕೊಳ್ಳುತ್ತೇವೆ. ಆಮ್ಲಜನಕವನ್ನು ತೆಗೆದುಕೊಂಡಾಗ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಅಲ್ಲದೆ ದೇಹದ ಆರೋಗ್ಯವನ್ನು ಹೆಚ್ಚು ಮಾಡುತ್ತೆ.
ದೇಹದಲ್ಲಿ ಆರೋಗ್ಯಕರ ರಾಸಾಯನಿಕವನ್ನು ಉತ್ಪತ್ತಿಮಾಡುತ್ತದೆ:
ನಕ್ಕಾಗ ಸಿರೋಟೊನಿನ್ (serotonin)ಎಂಬ ರಾಸಾಯನಿಕ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ. ಈ ರಾಸಾಯನಿಕವೂ ಅನೇಕ ಮಾರಕ ರೋಗಗಳನ್ನು ಬರದಂತೆ ತಯಡೆಯುವ ಸಾಮರ್ಥ್ಯ ಹೊಂದಿದೆ. ಇದನ್ನು ಕಾಯಿಲೆಗಳನ್ನು ಗುಣಪಡಿಸಲು ಮೆಡಿಕಲ್ ಶಾಪ್ ಗಳಿಂದ ಕೊಳ್ಳುವುದಾದರೆ ಸಾವಿರಗಟ್ಟಲೆ ದುಡ್ಡು ನೀಡಬೇಕಾಗುತ್ತದೆ. ಹೀಗಿರುವಾಗ ನಗುವುದಕ್ಕೆ ಅಂಜಿಕೆ ಏಕೆ?
ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ:
ನಕ್ಕಾಗ ಒತ್ತಡಗಳು ಕಡಿಮೆಯಾಗುವುದರಿಂದ ಮಾನಸಿಕವಾಗಿ ಆರೋಗ್ಯವಾಗಿರುತ್ತೇವೆ. ದೈಹಿಕ ಆರೋಗ್ಯಕ್ಕೆ ಮಾನಸಿಕ ಆರೋಗ್ಯ ಮುಖ್ಯ. ಈ ದಿಸೆಯಲ್ಲಿ ಟಿವಿಯಲ್ಲಿ ಬರುವ ಮನರಂಜನೆ ಕಾರ್ಯಕ್ರಮಗಳು ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದಲೇ ಮನಷ್ಯನ ಜೀವನದಲ್ಲಿ ಮನರಂಜನೆ ಅವಶ್ಯಕ. ಉತ್ತಮವಾದ ಯೋಚನೆ ಮಾಡಬೇಕು.
ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಹೀಗೆ ಕಷ್ಟ ಬಂದಾಗ ಚಿಂತೆವ ಮಾಡಿ ಕೂತರೆ ಕಷ್ಟಗಳು ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಅಲ್ಲದೆ ಮತ್ತೊಬ್ಬರ ಜೊತೆ ಬೆರೆಯುವಾಗಲೂ ಅಷ್ಟೆ ನಗುಮುಖದಿಂದ ಇದ್ದರೆ ಅವರಿಗೂ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಬರುತ್ತದೆ. ಅಲ್ಲದೆ ನಕ್ಕಾಗ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಇದರಿಂದ ಸೌಂದರ್ಯ ಕೂಡ ಹೆಚ್ಚಾಗುವುದು.
ನಗುವಾಗ ಮನಸಾರೆ, ಪರಿಶುದ್ಧವಾಗಿ ನಗಬೇಕು. ನಗುವಿಲ್ಲಿ ಅನೇಕ ಬಗೆಗಳಿವೆ. ಮತ್ತೊಬ್ಬರನ್ನು ಮೋಸ ಮಾಡಲು ಅಥವಾ ನೋಯಿಸಲು ನಗಬಾರದು. ನಕ್ಕರೆ ನಿಮಗೂ, ನಿಮ್ಮ ಸುತ್ತ ಮುತ್ತಲಿವನರಿಗೂ ಸಂತೋಷ ಕೊಡುವಂತೆ ಇರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications