Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಪಾದ ನೋಡಿ ಆರೋಗ್ಯದ ಸ್ಥಿತಿಗತಿ ತಿಳಿಯಬಹುದು!

ಬೆರಳುಗಲ್ಲಿ ರೋಮ ಇಲ್ಲದಿರುವುದು: ರಕ್ತ ಸಂಚಾರ ಕಮ್ಮಿಯಿದ್ದಾಗ, ಹೃದಯದ ತೊಂದರೆ ಇದ್ದಾಗ ಬೆರಳುಗಳಲ್ಲಿ ರೋಮ ಕಂಡು ಬರುವುದಿಲ್ಲ.
ಆಗಾಗ ಪಾದ ಒಡೆಯುವುದು: ಆಗಾಗ ಪಾದ ಒಡೆಯುತ್ತಿದ್ದರೆ ಕ್ಯಾಲ್ಸಿಯಂ, ಪೊಟಾಷ್ಯಿಯಂ, ಮ್ಯಾಗ್ನಿಷಿಯಂ ತೊಂದರೆಯಿಂದ ಬಳಲುತ್ತಿರಬಹುದು. ಆದ್ದರಿಂದ ಪಾದಗಳಲ್ಲಿ ಆಗಾಗ ಬಿರುಕು ಕಂಡು ಬಂದರೆ ಆರೋಗ್ಯದ ತಪಾಸಣೆ ನಡೆಸುವುದು ಒಳ್ಳೆಯದು. ಈ ರೀತಿ ಪಾದಗಳಲ್ಲಿ ಬಿರುಕು ಕಂಡು ಬಂದರೆ ಪಾದಕ್ಕೆ ಪ್ರತಿದಿನ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಪಾದಗಳಲ್ಲಿ ಬಿರುಕು ಕಂಡು ಬರುವುದಿಲ್ಲ.
ತಣ್ಣನೆಯ ಪಾದ: ಅಧಿಕ ರಕ್ತದೊತ್ತಡ, ರಕ್ತಹೀನತೆ, ಹೃದಯದ ತೊಂದರೆ, ಮಧುಮೇಹ ಈ ರೀತಿಯ ತೊಂದರೆಯಿದ್ದರೆ ಪಾದಗಳು ತುಂಬಾ ತಣ್ಣಗೆ ಇರುತ್ತವೆ. ಆದ್ದರಿಂದ ಪಾದಗಳು ತಣ್ಣಗಿರಲು ಕಾರಣವೇನು, ಏನಾದರೂ ಕಾಯಿಲೆ ಇದೆಯೇ ಎಂದು ವೈದ್ಯರನ್ನು ಕಂಡು ಖಚಿತ ಪಡಿಸಿಕೊಳ್ಳಿ.
ಕೆಂಪು, ಬಿಳಿ, ನೀಲಿ ಬಣ್ಣದ ಬೆರಳುಗಳು: ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಕಾಲು ಬೆರಳುಗಳು ಬಿಳುಚಿಕೊಂಡು ಬೆಳ್ಳಗೆ ಕಾಣುತ್ತದೆ, ತುಂಬಾ ತಣ್ಣನೆಯ ವಾತಾವರಣದಲ್ಲಿ ಬೆರಳುಗಳು ನೀಲಿ ಬಣ್ಣಕ್ಕೆ ತಿರುಗುವುದು ಸಹಜ, ಅದಲ್ಲದೆ ಹಾಗೇ ನೀಲಿ ಅಥವಾ ತುಂಬಾ ಕೆಂಪಾದ ಬಣ್ಣದಲ್ಲಿದ್ದರೆ ರಕ್ತ ಸಂಚಾರದಲ್ಲಿ ವ್ಯತ್ಯಾಸದಿಂದ ಆ ರೀತಿ ಆಗುತ್ತಿರಬಹುದು.
ಬೆರಳುಗಳಲ್ಲಿ ಊತ: ಗಾಯವಾದರೆ ಬೇಗನೆ ಒಣಗದಿರುವುದು, ಬೆರಳುಗಳಲಲ್ಲಿ ಊತ ಈ ಲಕ್ಷಣಗಳು ಕಂಡು ಬಂದರೆ ಮಧುಮೇಹವಿರಬಹುದು.
ಪಾದಗಳಲ್ಲಿ ತುರಿಕೆ: ಅಲರ್ಜಿ ಅಥವಾ ರಾಸಾಯನಿಕಗಳಿಂದ ಪಾದಗಳಲ್ಲಿ ತುರಿಕೆ ಕಂಡು ಬರುತ್ತದೆ.
ಕಪ್ಪು ಕಲೆ: ಬೆರಳಿನ ಅಡಿಯಲ್ಲಿ ಕಪ್ಪು ಬಣ್ಣ ಕಂಡು ಬಂದರೆ ನಿರ್ಲಕ್ಷಿಸಬೇಡಿ. ಏಕೆಂದರೆ ಇದು ಮೆಲನೊಮಾ (melanoma) ಎಂಬ ಕ್ಯಾನ್ಸರ್ ನ ಲಕ್ಷಣವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
