Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಪಾಸ್ತಾ ತಿನ್ನುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ!

ಬೇರೆ-ಬೇರೆ ಶೇಪ್‌ನಲ್ಲಿ ಪಿಜ್ಜಾ ಮಾರ್ಕೆಟ್‌ನಲ್ಲಿ ಲಭ್ಯವಿದೆ. ಕೆಲ ಆರೋಗ್ಯ ಪರಿಣಿತರು ಇದರಲ್ಲಿ ಕ್ಯಾಲೋರಿ ಅಂಶ ಅಧಿಕವಿದ್ದು ದೇಹದ ತೂಕ ಹೆಚ್ಚಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಈಗ ನಿಮಗೆ ಈ ಪಾಸ್ತಾ ಆರೋಗ್ಯಕರವೇ? ಪಾಸ್ತಾ ತಿಂದರೆ ದೇಹದ ತೂಕ ಹೆಚ್ಚಾಗಬಹುದೇ? ಈ ರೀತಿಯ ಸಂಶಯ ನಿಮ್ಮಲ್ಲಿಯೂ ಇರಬಹುದಲ್ಲವೇ? ನಿಮ್ಮ ಈ ಸಂಶಯ ಎಷ್ಟರ ಮಟ್ಟಿಗೆ ಸರಿ ಎಂದು ತಿಳಿದುಕೊಳ್ಳೋಣ ಬನ್ನಿ.
ಮೊದಲಿನದಾಗಿ ಪಾಸ್ತಾ ಆರೋಗ್ಯಕರವೇ ಅಥವಾ ಅನಾರೋಗ್ಯಕರವೇ ಅನ್ನುವುದು ನಾವು ತಿನ್ನುವ ಆಹಾರದ ಮೇಲೆ ಅವಲಂಭಿತವಾಗಿರುತ್ತದೆ. ಒಂದು ವೇಳೆ ಮೈದಾದಿಂದ ತಯಾರಿಸಿದ ಪಾಸ್ತಾ ತಿಂದರೆ ದೇಹದ ತೂಕ ಹೆಚ್ಚಾಗುವುದು. ಏಕೆಂದರೆ ಈ ರೀತಿಯ ಪಾಸ್ತಾದಲ್ಲಿ ಕ್ಯಾಲೋರಿ ಅಂಶ ಅಧಿಕವಿರುತ್ತದೆ.
ಪಾಸ್ತಾವನ್ನು ಹಿತಮಿತವಾಗಿ ಸೇವಿಸಿದರೆ ಅದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಪಾಸ್ತಾವನ್ನು ಟೊಮೆಟೊ ಸಾಸ್ ಅಥವಾ ತುಂಬಾ ಕೊಬ್ಬಿನಂಶವಿರುವ ಚೀಸ್ ಜೊತೆ ತಿನ್ನಬೇಡಿ. ಇದನ್ನು ಕಡಿಮೆ ಕೊಬ್ಬಿನಂಶವಿರುವ ಚೀಸ್ ಜೊತೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.
ಬಿಳಿ ಪಾಸ್ತಾ ಬಿಳಿ ಬ್ರೆಡ್ ರೀತಿಯ ಗುಣವನ್ನು ಹೊಂದಿದೆ. ಈ ರೀತಿಯ ಪಾಸ್ತಾದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (GI ) ಅಧಿಕವಿರುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ಮಧುಮೇಹ ಇರುವವರು ಇದನ್ನು ತಿನ್ನದಿರುವುದು ಒಳ್ಳೆಯದು.
ಆದರೆ ದವಸ ಧ್ಯಾನ್ಯಗಳನ್ನು ಹಾಕಿ ತಯಾರಿಸಿದ ಪಾಸ್ತಾ ಮಧುಮೇಹ ಇರುವವರೆಗೆ ಮತ್ತು ಇಲ್ಲದವರಿಗೆ ಮತ್ತು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು.
ಪಾಸ್ತಾ ಈ ಕೆಳಗಿನ ವಿಧಾನದಲ್ಲಿ ಸಿಗುತ್ತದೆ:
ಸೆಮೋಲಿನಾ ಪಾಸ್ತಾ (Semolina pasta): ಈ ಪಾಸ್ತಾ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ antioxidants ಪ್ರಮಾಣ ಅಧಿಕವಿದೆ. ಇದು ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುತ್ತದೆ, ಇದರಲ್ಲಿ ಪ್ರೊಟೀನ್ ಅಂಶ ಅಧಿಕವಿದ್ದು ರೋಗನಿರೋಧಕ ಶಕ್ತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.
ವ್ಹೀಟ್ ಪಾಸ್ತಾ (Wheat pasta): ಇದನ್ನು ತಿಂದರೆ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಡಯಟ್ ನಲ್ಲಿರುವವರು ಈ ಪಾಸ್ತಾ ತಿನ್ನುವುದು ಒಳ್ಳೆಯದು.
ಕಾರ್ನ್, ರೈಸ್, ಹರ್ಬ್ಸ್ ಮತ್ತು ಸೋಯಾ ಪಾಸ್ತಾ: ಜೋಳ, ಅಕ್ಕಿ, ಸೋಯಾ , ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಪಾಸ್ತಾ ಆರೋಗ್ಯಕ್ಕೆ ಒಳ್ಳೆಯದು.
ಈಗ ಪಾಸ್ತಾವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ನೀವೇ ತೀರ್ಮಾನಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
