Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಬೆಣ್ಣೆ ಅಥವಾ ಮಾರ್ಗ್ರೈನ್ ಇವೆರಡರಲ್ಲಿ ಯಾವುದು ಬೆಸ್ಟ್?
ಬೆಣ್ಣೆ ತಿಂದರೆ ದಪ್ಪಗಾಗುತ್ತೇವೆ ಎಂದು ಹೆಚ್ಚಿನವರು ಮಾರ್ಗ್ರೈನ್ (margarine) ಬಳಸುತ್ತಾರೆ. ಮಾರ್ಗ್ರೈನ್ ನಲ್ಲಿ ಕಡಿಮೆ ಕೊಬ್ಬಿನಂಶವಿರುವುದರಿಂದ ದೇಹದ ತೂಕವನ್ನು ಹೆಚ್ಚಿಸುವುದಿಲ್ಲ ಅಲ್ಲದೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಬೆಣ್ಣೆ ತಿನ್ನುವುದರಿಂದಲೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ ಅಂಗಡಿಗೆ ಹೋದಾಗ ಬೆಣ್ಣೆ ತಗೋಬೇಕಾ ಅಥವಾ ಕಡಿಮೆ ಕೊಬ್ಬಿನಂಶವರುವ ಮಾರ್ಗ್ರೈನ್ ಕೊಳ್ಳುವುದಾ ಎಂದು ಗೊತ್ತಾಗುವುದಿಲ್ಲ. ಆದ್ದರಿಂದ ಈ ಎರಡು ವಸ್ತುಗಳ ಪ್ರಯೋಜನವನ್ನು ತಿಳಿದುಕೊಂಡರೆ ಯಾವುದನ್ನು ಕೊಂಡುಕೊಳ್ಳಬೇಕು ಎಂದು ನೀವೇ ತೀರ್ಮಾನಿಸಬಹುದು:
* ಬೆಣ್ಣೆಯನ್ನು ಹಾಲಿನ ಉತ್ಪನ್ನದಿಂದ ತಯಾರಿಸಲಾಗುವುದು. ಆದ್ದರಿಂದ ಇದರಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ. ಆದರೆ ಮಾರ್ಗ್ರೈನ್ ತರಕಾರಿಗಳ ತುಪ್ಪದಿಂದ ತಯಾರಿಸಿದ ಉತ್ಪನ್ನವಾಗಿದ್ದು ಇದರಲ್ಲಿ ಕೃತಕ ಸಿಹಿ ಇರುತ್ತದೆ.

* ಅಲ್ಲದೆ ಬೆಣ್ಣೆ ಹಾಗೂ ಮಾರ್ಗ್ರೈನ್ ರುಚಿಯಲ್ಲಿ ಮತ್ತು ವಾಸನೆಯಲ್ಲಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಬೆಣ್ಣೆಯ ವಾಸನೆ ಹೊಟ್ಟೆ ಹಸಿವನ್ನು ಹೆಚ್ಚು ಮಾಡುತ್ತದೆ ಹಾಗೂ ತಿನ್ನಲು ರುಚಿಕರವಾಗಿರುತ್ತದೆ. ಆದರೆ ಮಾರ್ಗ್ರೈನ್ ರುಚಿಯಾಗಲಿ, ಸುವಾಸನೆಯನ್ನು ಆಗಲಿ ಹೊಂದಿರುವುದಿಲ್ಲ.
* ಮಾರ್ಗ್ರೈನ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದರೂ ಇದರಲ್ಲಿ ಟ್ರಾನ್ಸ್ ಫ್ಯಾಟ್ (ಕೊಬ್ಬಿನಂಶ) ಇರುತ್ತದೆ. ಟ್ರಾನ್ಸ್ ಫ್ಯಾಟ್ ತಿನ್ನುವುದಕ್ಕಿಂತ ಬೆಣ್ಣೆಯನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
* ಬೆಣ್ಣೆಯಲ್ಲಿ ಅಧಿಕ ಕ್ಯಾಲೋರಿ ಇದ್ದರೂ ನೈಸರ್ಗಿಕವಾಗಿ ತಯಾರಿಸಬಹುದಾದ ಉತ್ಪನ್ನವಾಗಿರುವುದರಿಂದ ಕೃತಕ ವಸ್ತುಗಳನ್ನು ಹಾಕಿ ತಯಾರಿಸಿರುವ ವಸ್ತುಗಳಿಗಿಂತ ಆರೋಗ್ಯಕ್ಕೆ ಒಳ್ಳೆಯದು.
* ಮಾರ್ಗ್ರೈನ್ ತಯಾರಿಸುವ ಕೆಲವೊಂದು ಬ್ರ್ಯಾಂಡ್ ಗಳು ನಮ್ಮ ಉತ್ಪನ್ನದಲ್ಲಿ ಒಮೆಗಾ 3 ಅಂಶವಿದೆ ಎಂದು ಹೇಳುತ್ತಾರೆ. ಆದರೆ ಈ ಒಮೆಗಾ 3 ಅಂಶವನ್ನು ಸಸ್ಯಗಳಿಂದ ತೆಗೆಯಲಾಗಿರುತ್ತದೆ. ವೈಜ್ಞಾನಿಕವಾಗಿ ಮೀನಿನಲ್ಲಿರುವ ಒಮೆಗಾ 3 ಅಂಶ ಹೆಚ್ಚು ಆರೋಗ್ಯಕರವಾಗಿದೆ ಎಂದು ಸಾಬೀತಾಗಿದೆ.
ಇನ್ನು ಮುಂದೆ ಬ್ರೆಡ್ ಗೆ ಸವರಲು ಬೆಣ್ಣೆ ಬಳಸುತ್ತೀರೋ ಅಥವಾ ಮಾರ್ಗ್ರೈನ್ ಬಳಸುತ್ತೀರೋ ಆಯ್ಕೆ ನಿಮಗೆ ಬಿಟ್ಟದ್ದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
