Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಗೊತ್ತ? ಬಿಯರ್ ಕುಡಿದವರ ಎಲುಬು ಬಲಿಷ್ಠ!

ಮಿತಿಮೀರಿ ಬೀರ್ ಕುಡಿದರೆ ದೇಹದ ಮೇಲೆ ನಮ್ಮ ನಿಯಂತ್ರಣ ತಪ್ಪಿ ತೂರಾಡುವುದು, ವಾಂತಿ ಮಾಡುವುದು ಸಹಜ. ಅದೇ ಬೀರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ ಮೂಳೆ ಬಲವಾಗುತ್ತದೆ! ಬೀರ್ ನಲ್ಲಿ ಸಿಲಿಕಾನ್ ಪೋಷಕಾಂಶವಿದೆ. ಮೂಳೆಗಳನ್ನು ಬಲಪಡಿಸುವಲ್ಲಿ ಸಿಲಿಕಾನ್ ಅವಶ್ಯಕವಾದ ಪೋಷಕಾಂಶವಾಗಿದೆ. ಆದ್ದರಿಂದ ಬೀರ್ ಕುಡಿದರೆ ಮೂಳೆಗಳು ಬಲವಾಗುತ್ತದೆ.
ಆದರೆ ಎಷ್ಟು ಪ್ರಮಾಣದ ಸಿಲಿಕಾನ್ ಅಂಶ ದೇಹಕ್ಕೆ ಒಳ್ಳೆಯದು ಎಂಬ ಅಂಶದ ಬಗ್ಗೆ ನಿಖರ ಮಾಹಿತಿ ಇಲ್ಲವಾಗಿದ್ದು , ಇದರ ಬಗ್ಗೆ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಬೀರ್‌ನಲ್ಲಿ ಎಷ್ಟರ ಮಟ್ಟಿಗೆ ಸಿಲಿಕಾನ್ ಇದೆ ಎಂಬ ಅಂಶ ಅದನ್ನು ತಯಾರಿಸಲು ಬಳಸುವ ವಸ್ತುಗಳನ್ನು ಆಧರಿಸಿದೆ. ಬೀರ್‌ಗಳ ತಯಾರಿಯಲ್ಲಿ ದವಸ ಧನ್ಯಗಳನ್ನು ಉಪಯೋಗಿಸಲಾಗುವುದು. ಈ ದವಸ ಧಾನ್ಯಗಳಲ್ಲಿ ಸಿಲಿಕಾನ್ ಅಂಶವಿರುವುದರಿಂದ ಇದರಿಂದ ತಯಾರಿಸುವ ಬೀರ್ ಆರೋಗ್ಯಕರವಾಗಿದೆ. ಅಲ್ಲದೆ ಬೀರ್ ಕುಡಿಯುವುದರಿಂದ ಶೇ.31%ರಷ್ಟು ಹೃದಾಯಘಾತವಾಗುವುದನ್ನು ತಪ್ಪಿಸಬಹುದು ಎಂಬ ಅಂಶ ಕೂಡ ದೃಢಪಟ್ಟಿದೆ.
ಬೀರ್ ಕುಡಿದರೆ ಮೂಳೆ ಬಲವಾಗುತ್ತದೆ, ಆದ್ದರಿಂದ ಒಂದು ಪೆಗ್ ಜಾಸ್ತಿಯೇ ಹಾಕುತ್ತೇನೆ ಎಂದು ಯೋಚಿಸುವ ಮುನ್ನ ಒಂದು ವಿಷಯ ತಿಳಿದುಕೊಳ್ಳಿ, ಬೀರ್ ಅನ್ನು ಮಿತಿಯಲ್ಲಿ ಕುಡಿದರೆ ಮಾತ್ರ ಆರೋಗ್ಯವಾಗಿರಬಹುದು. ಅದೇ ಬಾಟಲಿಗಟ್ಟಲೆ ಬೀರ್ ಕುಡಿದರೆ, ಇದೇ ಬೀರ್ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.
ಒಂದು ವೇಳೆ ನಿಮಗೆ ಬೀರ್ ಕುಡಿಯುವ ಅಭ್ಯಾಸವಿದ್ದರೆ ಈ ವೀಕೆಂಡ್ ಪಾರ್ಟಿಯಲ್ಲಿ ಬೀರ್ ಕೈಯಲ್ಲಿ ಹಿಡಿದಾಗ ಇದರಿಂದ ಉಪಯೋಗ ಪಡೆಯಬೇಕೊ, ಬೇಡ್ವಾ? ಅನ್ನುವುದನ್ನು ನೀವೆ ತೀರ್ಮಾನಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
