Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರಯಾಣದ ಮುಂಚೆ ತಿನ್ನಬಾರದ 7 ಆಹಾರಗಳು
ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿದರೆ ಬರೀ ಪ್ಯಾಕಿಂಗ್ ಮಾತ್ರ ಸಾಲದು ತಿನ್ನುವ ಆಹಾರ ಬಗೆಯೂ ಗಮನಹಿಸಿಬೇಕು. ದೂರ ಪ್ರಯಾಣ ಮಾಡಿದಾಗ ಸುಸ್ತು, ಹೊಟ್ಟೆಯಲ್ಲಿ ಏನೋ ತಳಮಳ, ಒಂಥರಾ ಒತ್ತಡ ಮುಂತಾದ ಸಮಸ್ಯೆ ಕಂಡು ಬರುತ್ತದೆ.
ಪ್ರಯಾಣ ಮಾಡುವ ಮುಂಚೆ ಹೊಟ್ಟೆ ತುಂಬಾ ತಿನ್ನಬೇಡಿ. ಅಲ್ಲದೆ ಕೆಲವೊಂದು ಆಹಾರಗಳನ್ನು ಮುಟ್ಟಲೂ ಹೋಗಬಾರದು. ಎಣ್ಣೆ ಪದಾರ್ಥಗಳನ್ನು ಮುಟ್ಟಲೂ ಬೇಡಿ. ಅದರಲ್ಲೂ ವಿಮಾನದಲ್ಲಿ ಹೋಗುವಾಗ ಆಹಾರದ ಬಗ್ಗೆ ಗಮನಕೊಡುವುದು ಒಳ್ಳೆಯದು.
ದೂರ ಪ್ರಯಾಣ ಮಾಡುವಾಗ ಈ ಕೆಳಗಿನ ಆಹಾರಗಳನ್ನು ಮುಟ್ಟಬೇಡಿ. ಈ ಆಹಾರಗಳನ್ನು ತಿಂದು ಪ್ರಯಾಣ ಮಾಡಿದರೆ ವಾಕರಿಕೆ, ಗ್ಯಾಸ್ಟ್ರಿಕ್ ಸಮಸ್ಯೆ ಮುಂತಾದ ತೊಂದರೆಗಳು ಕಂಡು ಬರುವುದು. ಆದ್ದರಿಂದ ಪ್ರಯಾಣ ಮಾಡುವಾಗ ಈ ಆಹಾರಗಳನ್ನು ತಿನ್ನುವುದು ಸೂಕ್ತವಲ್ಲ.

ಚೀಸ್ ಆಹಾರ
ಚೀಸ್ ಹಾಕಿ ಮಾಡಿದ ತಿಂಡಿ ರುಚಿಕರವಾಗಿದೆಯೆಂದು ಅದನ್ನು ಪ್ರಯಾಣ ಮಾಡುವ ಮುನ್ನ ತಿನ್ನುವ ಸಾಹಸ ಮಾಡಬೇಡಿ. ಏಕೆಂದರೆ ಚೀಸ್ ಹಾಕಿ ತಯಾರಿಸಿದ ತಿಂಡಿ, ಆಹಾರಗಳನ್ನು ತಿಂದರೆ ಹೊಟ್ಟೆ ಭಾರವಾಗಿ ಸುಸ್ತು ಅನಿಸಲಾರಂಭಿಸುತ್ತದೆ.

2. ಬರ್ಗರ್
ಬರ್ಗರ್ ಹಾಗೂ ಇತರ ಕರಿದ ಪದಾರ್ಥಗಳನ್ನು ಪ್ರಯಾಣ ಮಾಡುವಾಗ ತಿನ್ನಬೇಡಿ. ಏಕೆಂದರೆ ಫಾಸ್ಟ್ ಫುಡ್ ಗಳು ಬೇಗನೆ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ.

3. ತಂಪು ಪಾನೀಯ
ಸಾಮಾನ್ಯವಾಗಿ ಪ್ರಯಾಣ ಮಾಡುವಾಗ ತಂಪು ಪಾನೀಯಗಳನ್ನು ಕೊಂಡು ಜೊತೆಯಲ್ಲಿಟ್ಟುಕೊಂಡು ಬೇಕೆನಿಸುವಾಗ ಕುಡಿಯುತ್ತೇವೆ. ಆದರೆ ತಂಪು ಪಾನೀಯಗಳಲ್ಲಿ ಕಾರ್ಬೋರೇಟ್ ಅಂಶ ಅಧಿಕವಿರುವುದರಿಂದ ಬಾಯಿ ವಾಸನೆ ಬೀರಲಾರಂಭಿಸುತ್ತದೆ.

4. ಕೃತಕ ಸಿಹಿ ಇರುವ ಆಹಾರಗಳು
ಪ್ರಯಾಣ ಸಮಯದಲ್ಲಿ ಕೃತಕ ಸಿಹಿ ಇರುವ ಆಹರಗಳನ್ನು ತಿನ್ನಬಾರದು . ಚ್ಯೂಯಿಂಗ್ ಗಮ್ ಅಗೆಯುತ್ತಾ ಇದ್ದರೆ ಗಾಳಿ ಬಾಯಿಯ ಮುಖಾಂತರ ಹೊಟ್ಟೆ ಸೇರಿ ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರಬಹುದು.

5. ಖಾರ ಪದಾರ್ಥ
ಪ್ರಯಾಣ ಮಾಡುವಾಗ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ತಿನ್ನಿ. ಹೆಚ್ಚು ಖಾರವಿರುವ ಪದಾರ್ಥಗಳನ್ನು ತಿನ್ನಬೇಡಿ. ಖಾರದ ಅಡುಗೆ ತಿಂದರೆ ಪ್ರಯಾಣ ಮಾಡುವಾಗ ಹೊಟ್ಟೆ ಉರಿ ಕಾಣಿಸಿಕೊಳ್ಳಬಹುದು.

6. ನೂಡಲ್ಸ್
ಪ್ರಯಾಣಕ್ಕೆ ಮುನ್ನ ನೂಡಲ್ಸ್ ತಿಂದರೆ ಇದು ಸುಲಭವಾಗಿ ಜೀರ್ಣವಾಗದ ಕಾರಣ ಹೊಟ್ಟೆ ಉಬ್ಬಿಕೊಳ್ಳುವುದು.

7. ಮದ್ಯಪಾನ
ಬೀರ್, ಸೋಡಾ, ಶಾಂಪೇನ್, ವೈನ್ , ಹಾಟ್ ಇವುಗಳನ್ನು ಕುಡಿಯಬಾರದು. ಇವುಗಳನ್ನು ಕುಡಿದರೆ ಹೊಟ್ಟೆ ಉಬ್ಬಿದಂತಾಗಿ ಪ್ರಯಾಣ ಮಾಡುವಾಗ ತೊಂದರೆ ಉಂಟಾಗುವುದು.



Click it and Unblock the Notifications
