Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಉತ್ಸಾಹದಿಂದ ಇರಲು ಬೇಕು ಈ ಡಯಟ್

ಏಕೆಂದರೆ ಆಹಾರಕ್ಕೂಮತ್ತು ಮೂಡ್‌ಗೆ ತುಂಬಾ ನಿಕಟ ಸಂಬಂಧವಿದೆ. ಒಳ್ಳೆಯ ಮೂಡ್‌ಗೆ ವಿಟಮಿನ್ ಬಿ12, ಮ್ಯಾಗ್ನಿಷಿಯಂ ಅಂಶವಿರುವ ಆಹಾರಗಳನ್ನು ತಿನ್ನಬೇಕು. ಇವುಗಳ ಕೊರತೆ ಉಂಟಾದರೆ ನಿಮಗೆ ಚಟುವಟಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ, ಉತ್ಸಾಹ ಕಡಿಮೆಯಾಗುತ್ತೆ. ಆದ್ದರಿಂದ ಈ ಕೆಳಗಿನ ಡಯಟ್ ಪಾಲಿಸಿದರೆ ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಮತ್ತು ನಿಮ್ಮನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
ಚಟುವಟಿಕೆಯಿಂದ ಇರಲು ಡಯಟ್‌ನಲ್ಲಿ ಇರಲೇಬೇಕಾದ ಅಂಶಗಳು:
1. ಅಯೋಡಿನ್: ಆರೋಗ್ಯಕರ ಥೈರಾಯ್ಡ್‌ಗೆ ಅಯೋಡಿನ್ ಅವಶ್ಯಕ. ಥೈರಾಯ್ಡ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಶಕ್ತಿ, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಮೈಗ್ರೇನ್, ದೇಹದ ತೂಕ ಹೆಚ್ಚಾಗುವುದು ಮತ್ತು ಮಕ್ಕಳಾಗದಿರುವ ಸಮಸ್ಯೆ, ಸೋಂಕು, ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರುತ್ತದೆ.
ಅಯೋಡಿನ್ ಅಧಿಕವಿರುವ ಆಹಾರಗಳು: ಮೀನು, ಮೊಟ್ಟೆ, ಆಲೂಗೆಡ್ಡೆಯ ಸಿಪ್ಪೆ
2. ಕ್ಯಾಲ್ಸಿಯಂ: ಮನಸ್ಸು ಸಂತೋಷದಿಂದ ಇರಲು ಕ್ಯಾಲ್ಸಿಯಂ ಅವಶ್ಯಕ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಖಿನ್ನತೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಮಾನಸಿಕ ಒತ್ತಡ ಅಧಿಕವಾಗುವುದು, ನೆನಪಿನ ಶಕ್ತಿ ಕಡಿಮೆಯಾಗುವುದು, ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೆ ಮಹಿಳೆಯರು ಮೆನೊಪಸ್ ಕಾಯಿಲೆ ಉಂಟಾಗುವುದು.
ಕ್ಯಾಲ್ಸಿಯಂ ಇರುವ ಆಹಾರಗಳು: ಹಾಲು, ಮೊಸರು, ಎಲೆಕೋಸು, ಪಾಲಾಕ್ ಸೊಪ್ಪು, ಬಾದಾಮಿ
3. ಮ್ಯಾಗ್ನಿಷಿಯಂ:ಈ ಖನಿಜಾಂಶ ದೇಹಕ್ಕೆ ಅವಶ್ಯಕ. ಇದರ ಕೊರತೆ ಉಂಟಾದರೆ ಖಿನ್ನತೆ, ಇನ್ಸೋಮ್ನಿಯಾ, ತಲೆಸುತ್ತು ಕಂಡು ಬರುತ್ತದೆ.
ಮ್ಯಾಗ್ನಿಷಿಯಂ ಇರುವ ಆಹಾರಗಳು: ದವಸಧ್ಯಾನ್ಯಗಳು, ಸಾಲಾಮೋನ್, ಸೂರ್ಯಕಾಂತಿ ಬೀಜ, ಬೀನ್ಸ್, ಸೊಪ್ಪು
4. ವಿಟಮಿನ್ ಡಿ: ವಿಟಮಿನ್ ತ್ವಚೆ ಆರೋಗ್ಯ ಹೆಚ್ಚಿಸುವುದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ವಿಟಮಿನ್ ಡಿ ಕೊರತೆ ಉಂಟಾದರೆ ಅನಾರೋಗ್ಯ ಬೀಳುವುದು. ಖಿನ್ನತೆಯನ್ನು ಹೋಗಲಾಡಿಸಲು ವಿಟಮಿನ್ ಡಿ ಅವಶ್ಯಕ.
ವಿಟಮಿನ್ ಡಿ ಸಿಗುವ ಮೂಲಗಳು: ಸೂರ್ಯನ ಕಿರಣಗಳಲ್ಲಿ ಮತ್ತು ಮೀನುಗಳಲ್ಲಿ ಮಾತ್ರ ವಿಟಮಿನ್ ಡಿ ಅಂಶವಿರುತ್ತದೆ.
5. ನಾರಿನಂಶ: ದೇಹದ ಆರೋಗ್ಯಕ್ಕೆ ನಾರಿನಂಶವಿರುವ ಆಹಾರ ಸೇವನೆ ಅಗತ್ಯ. ಡಯಟ್‌ನಲ್ಲಿ ನಾರಿನಂಶವಿರುವ ಆಹಾರ ಹೆಚ್ಚಾಗಿ ಇದ್ದಷ್ಟು ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಆರೋಗ್ಯ ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
