Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ನೂಡಲ್ಸ್ ಮಾತ್ರವಲ್ಲ, ರೆಡಿ ಟು ಕುಕ್ ಕೂಡ ವಿಷಮಯ

ಈ ಲೇಖನದಲ್ಲಿ ಅವರ ಪ್ರಶ್ನೆಗೆ ಉತ್ತರ ದೊರಕಬಹುದು ಎನ್ನುವುದು ನಮ್ಮ ನಿರೀಕ್ಷೆ. ರೆಡಿ ಟು ಕುಕ್ (ಬೇಯಿಸಿ ಪ್ಯಾಕ್ ಮಾಡಿದ) ಆಹಾರ ಆರೋಗ್ಯಕ್ಕೆ ಯಾಕೆ ಒಳ್ಳೆಯದಲ್ಲ ಎಂದು ನೋಡೋಣ ಬನ್ನಿ.
ರೆಡಿ ಟು ಕುಕ್ ಅಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಂಶೋಧನೆಯಿಂದ ದೃಢ ಪಟ್ಟಿದೆ. ಬೇಯಿಸಿ ಪ್ಯಾಕ್ ಮಾಡಿದ ಆಹಾರದಲ್ಲಿ ಉಪ್ಪು, ಕೊಬ್ಬು ಮತ್ತು ಸಕ್ಕರೆ ಅಂಶ ಅಧಿಕವಿರುತ್ತದೆ. ಈ ಆಹಾರವನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಎದೆ ಉರಿಮುಂತಾದ ಸಮಸ್ಯೆಗಳು ಉಂಟಾಗುವುದು. ಈ ರೀತಿಯ ಸಮಸ್ಯೆಗಳನ್ನು ಹೊಂದಿರುವವರು ಇದನ್ನು ಸೇವಿಸದಿರುವುದು ಆರೋಗ್ಯಕ್ಕೆ ಒಳ್ಳೆಯದು.
ಪರಿಣತರು ಹೇಳುವ ಪ್ರಕಾರ ಇಂತಹ ಪ್ಯಾಕೆಟ್ ಆಹಾರಗಳು ಹಾಳಾಗದಂತೆ ತಡೆಯಲು ಹಾಕುವ ಕೆಮಿಕಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಹೆಚ್ಚಾಗಿ ಸೇವಿಸಿದರೆ ಹೊಟ್ಟೆ ನೀವು, ಅಜೀರ್ಣ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಬಳಸಿರುವ ಕೆಮಿಕಲ್ ನಿಂದ ಆಹಾರ ವಿಷಮಯವಾಗಿ (ಫುಡ್ ಪಾಯಿಸನ್) ವಾಂತಿ ಕಾಣಿಸಿಕೊಳ್ಳಬಹುದು. ಕೇವಲ ನೂಡಲ್ಸ್ ಅಷ್ಟೆ ಅಲ್ಲ ರೆಡಿ ಟು ಕುಕ್ ಆಹಾರಗಳು ದೇಹದ ಆರೋಗ್ಯವನ್ನು ತಪ್ಪಿಸುವ ಸಾಧ್ಯತೆ ಹೆಚ್ಚು.
ಆಹಾರ ವಿಷಮಯವಾಗಿ ಆರೋಗ್ಯ ಕೆಡದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು:
1. ಅಡುಗೆ ಮತ್ತು ಊಟ ಮಾಡುವ ಮೊದಲು ಕೈ ಮತ್ತು ಪಾತ್ರೆಗಳನ್ನು ಶುಚಿಗೊಳಿಸಬೇಕು.
2.ಮಾಂಸ, ಸಮುದ್ರ ಆಹಾರ ಮತ್ತು ಇತರ ರೆಡಿ ಟು ಕುಕ್ ಆಹಾರಗಳನ್ನು ಸೇವಿಸದಿರುವುದು ಒಳ್ಳೆಯದು.
3.ಆಹಾರವನ್ನು ಸರಿಯಾದ ರೀತಿಯಲ್ಲಿ ಬೇಯಿಸಿ ತಿನ್ನಬೇಕು.
4. ಮಕ್ಕಳ ಕೈಗಳನ್ನು ಆಹಾರ ಸೇವಿಸಲು ಕೊಡುವ ಮೊದಲು ಶುಚಿಗೊಳಿಸಬೇಕು.
5. ಮನೆಯಲ್ಲಿ ತಯಾರಿಸಿದ ಆಹಾರಗಳನ್ನು ಸರಿಯಾದ ಪಾತ್ರೆ, ಬಾಟಲ್ ಬಳಸಿ ಉತ್ತಮ ರೀತಿಯಲ್ಲಿ ಸಂರಕ್ಷಿಸಬೇಕು.
6. ಒಂದು ವರ್ಷದ ಕೆಳಗಿನ ಮಕ್ಕಳಿಗೆ ಜೇನು ಕೊಡಬಾರದು.
7. ಪ್ರಯಾಣ ಮಾಡುವಾಗ ಹಸಿ ತರಕಾರಿ ಮತ್ತು ಕತ್ತರಿಸಿಟ್ಟ ಹಣ್ಣುಗಳನ್ನು ಸೇವಿಸಬಾರದು. ಬೇಯಿಸಿದ, ಬಿಸಿಯಾದ ಆಹಾರ, ಬಿಸಿ ನೀರು (ಮಿನರಲ್ ವಾಟರ್),ತಾಜಾ ಹಣ್ಣುಗಳನ್ನಷ್ಟೆ ಸೇವಿಸಿ.
8.ಮೀನಿನ ಆಹಾರವನ್ನು ರಸ್ತೆ ಬದಿಯಲ್ಲಿ ಸಿಗುವ ಹೋಟೆಲ್ ನಲ್ಲಿ ಸೇವಿಸದಿರುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications