Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸುಟ್ಟ ಗಾಯವಾದರೆ ತಕ್ಷಣ ಈ ರೀತಿ ಮಾಡಿ

1.ಹರಿಯುವ ನೀರು: ಸುಟ್ಟುಕೊಂಡ ತಕ್ಷಣ ನಲ್ಲಿಯಲ್ಲಿ ನೀರನ್ನು ಹರೆಯ ಬಿಟ್ಟು ಅದರಲ್ಲಿ ಸುಟ್ಟುಕೊಂಡ ಭಾಗವನ್ನು ಹಿಡಿಯಬೇಕು. ಈ ರೀತಿ 10 ನಿಮಿಷ ಹಿಡಿದು ನಂತರ ಐಸ್ ನಿಂದ ಮೆಲ್ಲನೆ ಉಜ್ಜಬೇಕು. ಗಾಯ ಒಣಗುವವರೆಗೆ 8-10 ಗ್ಲಾಸ್ ನೀರನ್ನು ಕಡ್ಡಾಯವಾಗಿ ಸೇವಿಸಬೇಕು.
2. ಜೇನು: ತಣ್ಣೀರಿನಲ್ಲಿ ಗಾಯವನ್ನು ಹಿಡಿದ ನಂತರ ಆ ಭಾಗಕ್ಕೆ ಸ್ವಲ್ಪ ಜೇನು ಹಾಕಿ. ಜೇನು ಹಾಕಿದರೆ ಒಳ್ಳೆಯದು ಎಂದು ವೈದ್ಯಕೀಯದವರು ಕೂಡ ಹೇಳುತ್ತಾರೆ. ಇದರಿಂದ ಗಾಯಕ್ಕೆ ಸೋಂಕು ಆಗುವುದಿಲ್ಲ.
3. ಹಣ್ಣುಗಳು: ಟೊಮೆಟೊ, ಚೆರ್ರಿ, ದ್ರಾಕ್ಷಿ ಹೀಗೆ antioxidants ಜಾಸ್ತಿ ಇರುವ ಹಣ್ಣುಗಳನ್ನು ಸೇವಿಸಿದರೆ ಗಾಯ ಬೇಗನೆ ಗುಣಮುಖವಾಗುವುದು.
4. ಅರಿಶಿಣ: ರಾತ್ರಿ ಮಲಗುವಾಗ ಹಾಲನ್ನು ಬಿಸಿ ಮಡಿ ಅದರಲ್ಲಿ ಅರಿಶಿಣವನ್ನು ಕರಗಿಸಿ ಅದನ್ನು ಹಚ್ಚಿದರೆ ಗಾಯ ಗುಣವಾಗುತ್ತೆ.
5. ನೀರನ್ನು ಬಿಸಿ ಮಾಡಿ ಅದರಲ್ಲಿ ಹತ್ತಿ ಬಟ್ಟೆಯನ್ನು ಹಿಂಡಿ ಗಾಯದ ಮೇಲೆ ಮೆಲ್ಲನೆ ಒತ್ತಬೇಕು.
6. ಉಪ್ಪು: ಬಿಸಿಯಾದ ಆಹಾರವನ್ನು ಬಾಯಿಗೆ ಹಾಕಿದರೆ ಬಾಯಿ ನಾಲಗೆ ಸುಟ್ಟು ಹೋಗುತ್ತದೆ. ಆಗ ಉಪ್ಪನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು.
8. ಲ್ಯಾವೆಂಡರ್ ಎಣ್ಣೆ: ಸುಟ್ಟ ಗಾಯ ಒಣಗಿದ ಮೇಲೆ ಕಲೆಗಳು ಹೋಗಲು ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ.
9. ಆಲೂಗೆಡ್ಡೆ: ಗಾಯವಾದ ತಕ್ಷಣ ಬೇಯಿಸಿದ ಆಲೂಗೆಡ್ಡೆಯನ್ನು ಪೇಸ್ಟ್ ಮಾಡಿ ಸುಟ್ಟ ಭಾಗಕ್ಕೆ ಹಚ್ಚಿದರೆ ಸೋಂಕು ಆಗುವುದನ್ನು ತಡೆಯುತ್ತದೆ.
10. ಲೋಳೆಸರ:ಸುಟ್ಟ ಜಾಗದಲ್ಲಿ ದಿನಕ್ಕೆ 2-3 ಬಾರಿ ಲೋಳೆಸರ ಹಚ್ಚಿಕೊಂಡರೆ ಗಾಯ ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ಕಲೆ ಕೂಡ ಕಡಿಮೆಯಾಗುವುದು.
11. ವಿನಿಗರ್: ನೀರಿನಲ್ಲಿ ವಿನಿಗರ್ ಮಿಶ್ರ ಮಾಡಿ ಸುಟ್ಟಕೊಂಡ ಜಾಗಕ್ಕೆ ಹಚ್ಚಿದರೆ ಗಾಯ ಬೇಗನೆ ಗುಣಮುಖವಾಗುತ್ತದೆ.
12. ಟೀ: ಟೀ ಗಿಡದಿಂದ ದೊರೆಯುವ ಎಣ್ಣೆಯನ್ನು ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ಗಾಯ ಗುಣಮುಖವಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
