Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಪ್ರತಿನಿತ್ಯದ ಆಹಾರದಲ್ಲಿ ಸೋಯಾ ಏಕಿರಬೇಕು?
ಸೋಯಾ ಪ್ರತಿನಿತ್ಯ ನಿಮ್ಮ ಆಹಾರದೊಟ್ಟಿಗಿದ್ದರೆ ಹಲವು ರೋಗಗಳಿಂದ ದೂರವುಳಿದಂತೆ. ಹೇರಳ ಪೋಷಕಾಂಶವಿರುವ ಸೋಯಾದಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಪ್ರೊಟೀನ್ ಇದೆ. ಮಕ್ಕಳಿಗೆ ದೊಡ್ಡವರಿಗಷ್ಟೇ ಅಲ್ಲ, ವಯೋವೃದ್ಧರಿಗೂ ಸೊಯಾ ಅತ್ಯವಶ್ಯಕ. ಸೋಯಾದಿಂದ ಆರೋಗ್ಯಕ್ಕೆ ಏನೇನು ಉಪಯೋಗವಿದೆ ಎಂದು ತಿಳಿದುಕೊಳ್ಳೋಣ.
ಸೋಯಾ ಉಪಯೋಗ ಮತ್ತು ಪೋಷಕಾಂಶದ ಮಾಹಿತಿ:
* ಹೃದಯದ ಸ್ವಾಸ್ಥ್ಯಕ್ಕೆ: ತೀವ್ರವಾದ ಹೃದಯದ ಸಮಸ್ಯೆ, ಕ್ಯಾನ್ಸರ್, ಮಧುಮೇಹ, ಕಿಡ್ನಿ, ಜಠರ ಮತ್ತು ಸಂಧಿವಾತ ಸಮಸ್ಯೆಯನ್ನು ನೀಗಿಸುವ ನೈಸರ್ಗಿಕ ಪದಾರ್ಥವೆಂದರೆ ಸೋಯಾ. ಆದ್ದರಿಂದ ಸೋಯಾವನ್ನು ಪ್ರತಿನಿತ್ಯ ನಮ್ಮ ಆಹಾರದೊಂದಿಗೆ ಅಳವಡಿಸಿಕೊಂಡರೆ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಸಮಸ್ಯೆಯಿಂದ ದೂರವುಳಿಯಬಹುದು.
* ಮೆನೊಪಾಸ್: ಸೋಯಾ ಮುಟ್ಟು ನಿಂತ ನಂತರದ ಸಮಸ್ಯೆಗಳನ್ನು ನಿವಾರಿಸುವ ನೈಸರ್ಗಿಕ ಈಸ್ಟ್ರೋಜೆನ್ ನಂತೆ ಕೆಲಸ ಮಾಡುತ್ತದೆ. ಸೋಯಾವನ್ನು ತಮ್ಮ ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸುವ ಮಹಿಳೆಯರಲ್ಲಿ ಹಾರ್ಮೋನುಗಳ ವೈಪರೀತ್ಯವನ್ನು ತಡೆಯಬಹುದು.
* ಸದೃಢ ದೇಹಕ್ಕೆ: ಸೋಯಾ ಪ್ರೊಟೀನ್ ನಲ್ಲಿ ಅಮಿನೊ ಆಸಿಡ್ ಹೇರಳವಾಗಿದೆ. ದೇಹದ ಸದೃಢತೆಗೆ ಸೋಯಾ ಅತ್ಯವಶ್ಯಕ. ಇದರಲ್ಲಿರುವ ಪ್ರೊಟೀನ್ ಕಿಡ್ನಿ ಮತ್ತು ಮೂಳೆ ಬೆಳವಣಿಗೆ, ನಿರ್ವಹಣೆಗೆ ಹೆಚ್ಚು ಸಹಕಾರಿ. ಸೋಯಾ ಮೂಳೆಗಳಿಗೆ ಹೆಚ್ಚು ಶಕ್ತಿ ಒದಗಿಸುವುದರಿಂದ ವಯಸ್ಸಾದವರಿಗೆ ಹೆಚ್ಚು ಅವಶ್ಯಕವಿದೆ.
* ರೋಗ ನಿರೋಧಕ ಶಕ್ತಿ: ಸೋಯಾದಲ್ಲಿರುವ ಪೆಪ್ಟೈಡ್ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡುವಂತೆ ಶಕ್ತಿ ನೀಡುತ್ತದೆ. ಇನ್ನಿತರ ಪದಾರ್ಥಗಳಲ್ಲಿ ಲಭ್ಯವಿರದ ವಿಟಮಿನ್ ಮತ್ತು ಖನಿಜಾಂಶಗಳನ್ನೂ ಸೋಯಾ ಸೇವನೆಯಿಂದ ಪಡೆಯಬಹುದು. ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಿಸಿ ಶುದ್ದೀಕರಣಗೊಳಿಸುತ್ತದೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದವರಿಗೂ ಸೋಯಾ ಹೆಚ್ಚು ಪರಿಣಾಮಕಾರಿ.
* ಕೊಲೆಸ್ಟ್ರಾಲ್: ಸೋಯಾದಲ್ಲಿ ವಿಶೇಷವಾದ ಐಸೊಫ್ಲೇವಾನ್ಸ್ ಆಂಟಿಯಾಕ್ಸಿಡಂಟ್ ಜೀವಕಣಗಳನ್ನು ಸಂರಕ್ಷಿಸುವುದಲ್ಲದೆ ವಯಸ್ಸಿಗೆ ಮುನ್ನವೇ ಸುಕ್ಕು ಮೂಡುವುದನ್ನು ತಡೆಯುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲನ್ನೂ ಕರಗಿಸುತ್ತದೆ.
* ಸಕಲ ಸೌಂದರ್ಯ: ಸೋಯಾದಿಂದ ಸೌಂದರ್ಯಕ್ಕೂ ಉಪಯೋಗವಿದೆ. ಇದು ಕೂದಲನ್ನು ಗಟ್ಟಿಗೊಳಿಸಿ ಕೂದಲುದುರುವಿಕೆಯನ್ನು ತಡೆಯುತ್ತದೆ. ಬೇಗನೆ ವಯಸ್ಸಾಗುವುದನ್ನೂ ನಿವಾರಿಸಿ ಚರ್ಮವನ್ನು ಬಿಗಿ ಗೊಳಿಸಿ ತಾರುಣ್ಯ ತುಂಬುತ್ತದೆ. ಸೋಯಾದಲ್ಲಿರುವ ಫೈಬರ್ ಅಂಶ ಹೊಟ್ಟೆ ತುಂಬುವಂತೆ ಮಾಡುವುದರಿಂದ ತಿನ್ನುವುದೂ ತಪ್ಪುತ್ತದೆ.
* ಜ್ಞಾಪಕ ಶಕ್ತಿ: ಸೋಯಾದಲ್ಲಿರುವ ಲೆಸಿತಿನ್ ಅಂಶ ಜ್ಞಾಪಕ ಶಕ್ತಿಯನ್ನು ಅಧಿಕಗೊಳಿಸಿ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ. ಸೋಯಾ ದೇಹಕ್ಕೆ, ಮೆದುಳಿಗೆ ಎಲ್ಲ ರೀತಿಯಿಂದಲೂ ಅನೇಕ ಪ್ರಯೋಜನವನ್ನು ನೀಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
