Latest Updates
-
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ!
ತಿನ್ನೋ ತುತ್ತಿನ ಮೇಲೂ ಬರೆದೈತಿ ನಿಮ್ಮ ಗ್ರಹಗತಿ

ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಆತನ ಅನುವಂಶತೆ ನಿರ್ಧರಿಸಿದಂತೆಯೇ ಉತ್ತಮ ಆಹಾರಾಭ್ಯಾಸ ವ್ಯಕ್ತಿಯ ಚೈತನ್ಯವನ್ನು ಪ್ರತಿನಿಧಿಸುತ್ತದೆ. ಕೇವಲ ಅನುವಂಶತೆ ಮತ್ತು ಆಹಾರಾಭ್ಯಾಸ ಮಾತ್ರವಲ್ಲ, ಗ್ರಹಗಳೂ ಕೂಡ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಮನುಷ್ಯನ ದೈಹಿಕ, ಮಾನಸಿಕ, ನಡವಳಿಕೆ ಮತ್ತು ಭಾವನೆಗಳಿಗೆ ಕಾರಣವಾಗಿರುತ್ತೆ.
ಮಗು ಹುಟ್ಟಿದ ಸಂದರ್ಭ ಜಾತಕದಲ್ಲಿ ನಮೂದಿಸಲಾದ ಗ್ರಹಗಳ ಚಲನವಲನವನ್ನು ಆಧರಿಸಿ ಜ್ಯೋತಿಷಿಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿ ಕುರಿತು ಸುಳಿವನ್ನು ನೀಡುತ್ತಾರೆ. ಜಾತಕದಲ್ಲಿರುವ ಪ್ರಭಾವ ಶಾಲಿ ಗ್ರಹಗಳಿಗೆ ತಕ್ಕಂತೆ ಆರೋಗ್ಯಕ್ಕೆ ಅನುಗುಣವಾಗುವ ಸೂಕ್ತ ಆಹಾರವನ್ನೂ ಇದರಿಂದ ತಿಳಿಯಬಹುದು.
ಭವಿಷ್ಯದ ಹೊರತಾಗಿಯೂ ವೇದಿಕ ಜ್ಯೋತಿಷ್ಯ ರೋಗ ನಿವಾರಣೆಗೆ ಪರಿಣಾಮಕಾರಿ ಮಾರ್ಗ ಮತ್ತು ರಕ್ಷಿಸಿಕೊಳ್ಳುವ ವಿಧಾನವನ್ನು ತಿಳಿಸುತ್ತದೆ. ಎಲ್ಲಾ ಆಯುರ್ವೇದದ ಚಿಕಿತ್ಸೆಯಲ್ಲೂ ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸಲು ಪರೋಕ್ಷವಾಗಿ ಗ್ರಹಗಳ ಪರಿಹಾರವನ್ನು ಒಳಗೊಂಡಿರುತ್ತದೆ.
ತನಗೆ ಉತ್ತಮ ಆಹಾರ ಯಾವುದೆಂದು ಗುರುತಿಸುವುದು ಹೇಗೆ?
ನಿಮ್ಮ ಆರೋಗ್ಯಕ್ಕೆ ಹೊಂದುವಂತಹ ಆಹಾರ ಯಾವುದೆಂದು ತಿಳಿಯುವ ಮೊದಲ ಹಂತವೆಂದರೆ, ಜಾತಕದಲ್ಲಿನ ಗ್ರಹಾಧಿಪತಿಯನ್ನು ಕಂಡುಹಿಡಿಯುವುದು. ಸಾಮಾನ್ಯವಾಗಿ ಇದನ್ನು ಲಗ್ನ ಅಥವಾ ಲಗ್ನಾಧಿಪತಿ ಎನ್ನುತ್ತಾರೆ. ಇದು ದೇಹ ಮತ್ತು ವ್ಯಕ್ತಿತ್ವಕ್ಕೆ ಸಂಬಂಧಿಸಿರುತ್ತದೆ.
ಮನುಷ್ಯನ ಮೇಲೆ ಗ್ರಹಗಳ ಪ್ರಭುತ್ವ ಹೇಗೆ?
* ಸೂರ್ಯ, ಮಂಗಳ, ಕೇತು: (ಪಿತ್ತ)ಜಾತಕದಲ್ಲಿ ಈ ಗ್ರಹಗಳು ಪ್ರಭಾವಿಯಾಗಿದ್ದರೆ ಅಂತಹವರು ಬೇಗನೆ ಸಿಟ್ಟಿಗೆ ಒಳಗಾಗುತ್ತಾರೆ.
* ಗುರು, ಚಂದ್ರ, ಶುಕ್ರ (ಕಫ)ಗ್ರಹ ಪ್ರಭಾವದವರು ಅನಿಶ್ಚಿತರಾಗಿರುತ್ತಾರೆ.
* ಶನಿ, ಬುಧ, ರಾಹು (ವಾತ) ಗ್ರಹಾಧಿಪತಿಯಾಗಿದ್ದರೆ ಚಂಚಲ ಸ್ವಭಾವದವರಾಗಿರುತ್ತಾರೆ.
ರಾಶಿ ಪ್ರಕಾರ ನಡವಳಿಕೆ ಹೇಗೆ?
ಮೇಷ, ಸಿಂಹ, ವೃಶ್ಚಿಕ ರಾಶಿಯವರು ಗುಣದಲ್ಲಿ ತುಂಬಾ ಸಿಟ್ಟಿನವರಾಗಿರುತ್ತಾರೆ.
ವೃಷಭ, ಕರ್ಕಾಟಕ, ತುಲಾ, ಧನಸ್ಸು ಮತ್ತು ಮೀನ ರಾಶಿಯವರು ನೀರಿನಂತೆ ಅನಿಶ್ಚಯ ಸ್ವಭಾವ ಹೊಂದಿರುತ್ತಾರೆ.
ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಗಾಳಿಯಂತೆ ಚಂಚಲ ಸ್ವಭಾವದವರಾಗಿರುತ್ತಾರೆ.
ಯಾವ ಆಹಾರವನ್ನು ಸೇವಿಸಬಹುದು?
ನಿಮ್ಮ ಜಾತಕದಲ್ಲಿ ವಾತಕ್ಕೆ ಸಂಬಂಧಪಟ್ಟ ಗ್ರಹಗಳು ಹೆಚ್ಚು ಪ್ರಭಾವಶಾಲಿಯಾಗಿದ್ದರೆ, ಸಕ್ಕರೆ, ಹುಳಿ, ಉಪ್ಪು ಮತ್ತು ಘಾಟು ಪದಾರ್ಥಗಳನ್ನು ತಿನ್ನಬಹುದು, ಧಾನ್ಯಗಳು, ಬೀನ್ಸ್, ಬೇರಿರುವ ತರಕಾರಿಗಳು, ಬೀಜಗಳು, ನಟ್ಸ್ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು. ಶುಂಠಿ, ಏಲಕ್ಕಿ, ಚೆಕ್ಕೆ ಮತ್ತು ಆಯುರ್ವೇದದ ಚವಣ್ ಪ್ರಾಶವನ್ನು ಕೂಡ ಸೇವಿಸಬಹುದು.
ರಾಶಿಯಲ್ಲಿ ಕಫದ ಪ್ರಭಾವ ಹೆಚ್ಚಾಗಿದ್ದರೆ ಘಾಟು, ಒಗರು ಮತ್ತು ಕಹಿ ಪದಾರ್ಥಗಳ ಸೇವನೆ ಒಳ್ಳೆಯದು. ಸಿಹಿ ಉಪ್ಪು, ಹುಳಿ ಮತ್ತು ಎಣ್ಣೆ ರಹಿತ ಆಹಾರ ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು. ಇಂತಹವರಿಗೆ ಶುಂಠಿ, ಮೆಣಸು, ಕಹಿ ರುಚಿಗಳು ತೂಕವನ್ನೂ ಇಳಿಸಲು ಸಹಕಾರಿಯಾಗಿದೆ.
ಪಿತ್ತ ಪ್ರಭಾವವಿದ್ದವರಿಗೆ ಕಹಿ, ಒಗರು ಮತ್ತು ಸಿಹಿಯಾದ ಗಿಡಮೂಲಿಕೆ ಮತ್ತು ಆಹಾರವನ್ನು ಸೇವಿಸಬಹುದು. ಉಪ್ಪು, ಸಾಂಬಾರು ಪದಾರ್ಥ, ಹುಳಿ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು. ಇಂತಹವರು ಹಸಿಯಾಗಿ ಆಹಾರ ಸೇವಿಸದರೆ ಒಳ್ಳೆಯದು. ಸ್ವಲ್ಪ ಕಹಿಯಿರುವ ಮತ್ತು ತಂಪು ನೀಡುವ ಅರಿಶಿಣ ಕೊತ್ತಂಬರಿಯನ್ನು ಹೆಚ್ಚು ತಿಂದರೆ ಒಳ್ಳೆಯದು.
ನಿಮ್ಮ ಗ್ರಹಗಳನ್ನು ತಿಳಿದುಕೊಳ್ಳಿ
ನಿಮ್ಮ ಜೀವನದ ಮೇಲೆ ಗ್ರಹಗಳು ಯಾವ ರೀತಿ ಪರಿಣಾಮ ಬೀರುತ್ತವೆ ಎನ್ನುವುದನ್ನು ತಿಳಿಯುವುದು ತುಂಬಾ ಮುಖ್ಯ. ಇದು ನಿಮ್ಮ ಗುರಿಯನ್ನು ಮುಟ್ಟಿ ಯಶಸ್ಸನ್ನು ಸಾಧಿಸಲು ಅನುವಾಗುತ್ತದೆ. ಇನ್ನೇಕೆ ತಡ? ನಿಮ್ಮ ಜಾತಕದಲ್ಲಿನ ಗ್ರಹಗಳ ಚಲನವಲನವನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications