Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಆಫೀಸ್ ನಲ್ಲಿ ಆಲಸ್ಯ ಓಡಿಸುವುದು ಹೇಗೆ?

ಆದ್ದರಿಂದ ಆಫೀಸಿನಲ್ಲಿ ನಿರುತ್ಸಾಹದಿಂದ ಹೊರಬರುವ ಕೆಲವು ಸಲಹೆಯನ್ನು ಇಲ್ಲಿ ನೀಡಲಾಗಿದೆ. ಇದನ್ನು ಪಾಲಿಸಿ ಚಟುವಟಿಕೆಯಿಂದ ಕೆಲಸ ಮಾಡುವುದು ಸಾಧ್ಯವಿದೆ.
ಆಫೀಸ್ ಆಲಸ್ಯದಿಂದ ಹೊರಬರಲು ಹೀಗೆ ಮಾಡಿ:
* ಒಂದು ಕಪ್ ಕಾಫಿ ಅಥವಾ ಟೀ: ಒಂದು ಕಪ್ ಕಾಫಿ ಅಥವಾ ಟೀ ಸೇವನೆಯಿಂದ ನಿಮ್ಮ ನಿದ್ದೆ ಹೊರಟು ಹೋಗುವುದಲ್ಲದೆ ಕೆಲಸ ಮಾಡಲು ಚೈತನ್ಯವನ್ನೂ ನೀಡುತ್ತದೆ. ಒಂದು ಕಪ್ ಕಾಫಿ 7-8 ಗಂಟೆಗಳವರೆಗೆ ನಿದ್ದೆ ನಿಮ್ಮ ಬಳಿ ಸುಳಿಯದಂತೆ ಮಾಡುತ್ತದೆ. ಆದರೆ ಕಾಫಿಯನ್ನು ಹೆಚ್ಚಾಗಿಯೂ ಸೇವಿಸಬಾರದು. ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಕೆಲಸದ ಮಧ್ಯೆ ಆಗಾಗ್ಗೆ ನೀರು ಕುಡಿಯುತ್ತಿರಬಹುದು.
* ಬ್ರೇಕ್ ಫಾಸ್ಟ್ ಮರೆಯಬೇಡಿ: ಬೆಳಗಿನ ತಿಂಡಿ ಹಸಿವನ್ನು ಹೋಗಲಾಡಿಸಲು ಮಾತ್ರವಲ್ಲ, ಕೆಲಸ ಮಾಡಲು ಅವಶ್ಯಕವಾದ ಶಕ್ತಿಯನ್ನು ನೀಡುತ್ತದೆ. ಇಡೀ ದಿನ ಚೈತನ್ಯದಿಂದಿರಲು ಬೆಳಗಿನ ತಿಂಡಿ ಅತ್ಯವಶ್ಯಕ. ಆದರೆ ಕೆಲಸಕ್ಕೆ ಹೋಗುವ ಮಂದಿ ಬೆಳಗಿನ ತಿಂಡಿಯನ್ನು ನಿರ್ಲಕ್ಷಿಸುತ್ತಾರೆ. ಇದು ಅನಾರೋಗ್ಯಕರ ಜೀವನ ಕ್ರಮ. ಇದರಿಂದ ಇನ್ನಷ್ಟು ಸೋಮಾರಿತನ ಮೈಗೂಡಬಹುದು. ಆದರೆ ಬೆಳಗಿನ ತಿಂಡಿ ಲಘುವಾಗಿರಬೇಕಲು. ಹೆಚ್ಚು ಆಹಾರ ಸೇವಿಸಿದರೆ ಜೀರ್ಣಕ್ರಿಯೆಗೆ ಹೆಚ್ಚು ಶಕ್ತಿ ಉಪಯೋಗಗೊಂಡು ನಿಮ್ಮನ್ನು ಇಡೀ ದಿನ ಸೋಮಾರಿಗಳನ್ನಾಗಿ ಮಾಡಬಹುದು.
* ಬ್ರೇಕ್ ತೆಗೆದುಕೊಳ್ಳಿ: ಆಫೀಸ್ ನಲ್ಲಿ ನಿದ್ದೆ ಅಥವಾ ಜೋಂಪು ಹಿಡಿದಂತಾದರೆ ಆಗಾಗೆ ಕೆಲವು ನಿಮಿಷ ವಿರಾಮ ತೆಗೆದುಕೊಳ್ಳಿ. ಹಾಗೆಯೇ ಕುಳಿತುಕೊಂಡು ಕೆಲವು ಲಘು ವ್ಯಾಯಾಮ ಮಾಡಿ , ಆಗಾಗ್ಗೆ ನೀರನ್ನು ಕುಡಿಯುತ್ತಿರಿ. ಇದು ಕೆಲಸದಲ್ಲಿ ಏಕಾಗ್ರತೆ ಹೆಚ್ಚಿಸಲೂ ಸಹಾಯ ಮಾಡುತ್ತದೆ. ನಿಮ್ಮ ನಿದ್ದೆ ಮೂಡ್ ನಿಂದ ಹೊರಬರಲು ಪ್ರೀತಿ ಪಾತ್ರರೊಂದಿಗೆ ಕೆಲವು ಸಮಯ ಮಾತನಾಡಿದರೂ ಸರಿ.
* ರಾತ್ರಿ ಬೇಗ ನಿದ್ದೆ ಮಾಡಿ: ರಾತ್ರಿ ಹೊತ್ತು ಬೇಗ ನಿದ್ದೆ ಮಾಡಿದರೆ ಬೆಳಗ್ಗೆ ಆರಾಮವಾಗಿ ಎದ್ದು, ಯಾವುದೇ ಅಡ್ಡಿ ಆತಂಕವಿಲ್ಲದೆ ಕೆಲಸಕ್ಕೆ ಹೋಗಬಹುದು. ಮತ್ತು ಅವಶ್ಯಕ ನಿದ್ದೆ ಇರುವುದರಿಂದ ಆಫೀಸ್ ನಲ್ಲಿ ತೂಕಡಿಕೆ ಬರುವುದೂ ಕಡಿಮೆಯಾಗುತ್ತದೆ. ನಿದ್ದೆ ,ಮಾಡುವ 2-3 ಗಂಟೆಗೆ ಮುನ್ನ ಊಟ ಮಾಡಿರಬೇಕು. ಅನವಶ್ಯಕ ಕೆಲಸಗಳಲ್ಲಿ ಕಾಲ ಕಳೆಯುವುದಕ್ಕಿಂತ ಬೇಗನೆ ನಿದ್ದೆ ಮಾಡಿದರೆ ಕಣ್ಣಿಗೂ ವಿಶ್ರಾಂತಿ ನೀಡಿದಂತಾಗುತ್ತದೆ.
* ಬಿಳಿ ಬಣ್ಣದ ಆಹಾರ ತ್ಯಜಿಸಿ: ರಾತ್ರಿ ಸಮಯ ಬಿಳಿ ಬಣ್ಣದ ಆಹಾರಗಳನ್ನು, ಉದಾಹರಣೆಗೆ ಪಾಸ್ತಾ, ಅನ್ನ ಮುಂತಾದುವನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ಬೆಳಗ್ಗೆ ಹೊತ್ತು ಹೆಚ್ಚು ಸೋಮಾರಿಯಾಗುವಂತೆ ಪ್ರಚೋದನೆ ನೀಡುತ್ತದೆ. ಆದ್ದರಿಂದ ರಾತ್ರಿ ಹೊತ್ತು ಬಿಳಿಯ ಬಣ್ಣದ ಈ ಆಹಾರ ಪದಾರ್ಥಗಳಿಂದ ದೂರವಿರುವುದು ಒಳಿತು.
ಇವಿಷ್ಟು ಸಲಹೆಗಳನ್ನು ಪಾಲಿಸಿದರೆ ಖಂಡಿತ ಆಫೀಸ್ ನಲ್ಲಿ ಆಲಸ್ಯದಿಂದ ಕಾಲ ಕಳೆಯುವುದನ್ನು ಮರೆತು ಚಟುವಟಿಕೆಯಿಂದ ಇರುವುದು ಸಾಧ್ಯವಿದೆ ಮತ್ತು ಈ ಮೂಲಕ ವೃತ್ತಿ ಜೀವನದಲ್ಲಿ ಮುನ್ನಡೆ ಸಾಧಿಸಲು ಸಹಕಾರಿಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications