Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಮಾರುಕಟ್ಟೆಗೆ ಬರುತ್ತಿದೆ ವಿಷಯುಕ್ತ ದ್ರಾಕ್ಷಿ! ವೈರಲ್ ವೀಡಿಯೋ: ದ್ರಾಕ್ಷಿಯಲ್ಲಿನ ಕೆಮಿಕಲ್ ತೆಗೆಯುವುದು ಹೇಗೆ?
ಯಾವುದೇ ಹಣ್ಣಾಗಾಲಿ, ತರಕಾರಿಯಾಗಲಿ ನಾವು ದೈರ್ಯವಾಗಿ ತಿನ್ನುವಂತಿಲ್ಲ, ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುವುದರಿಂದ ಅನಾರೋಗ್ಯ ಬರಬಹುದು, ಲಿವರ್‌ಗೆ ಒಳ್ಳೆಯದು ಎಂದು ತಿಂದ್ರೆ ಲಿವರ್ ಫೈಲ್ಯೂರ್ ಆಗಬಹುದು. ಹೌದು ಅಂಥದ್ದೊಂದು ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಈ ದ್ರಾಕ್ಷಿ ಶರೀರಕ್ಕೆ ತುಂಬಾ ಒಳ್ಳೆಯದು ಎಂದು ನಾವು ದುಬಾರಿಯಾದರೂ ಪರ್ವಾಗಿಲ್ಲ, ಕೆಜಿಗೆ 100 ರುಪಾಯಿ, 150 ರುಪಾಯಿ ಅಷ್ಟೇ ಏಕೆ ಕೆಲವೊಂದು ದ್ರಾಕ್ಷಿಗೆ ಕೆಜಿ 400 ರುಪಾಯಿ ಇದ್ದರೂ ಆರೋಗ್ಯಕ್ಕೆ ಒಳ್ಳೆಯದು ಎಂದು ಕೊಂಡು ತರುತ್ತೇವೆ.

ಇದನ್ನು ನಾವು ತಿಂದರೆ, ನಮ್ಮ ಮಕ್ಕಳು ತಿಂದರೆ ಒಳ್ಳೆಯದು ಎಂಬುವುದು ನಮ್ಮ ಆಲೋಚನೆ. ಆದರೆ ಈ ದ್ರಾಕ್ಷಿಗಳಿಗೆ ಬೇಗನೆ ನುಸಿಗಳು ಕೂರದಿರಲಿ, ಕೊಳೆಯದಿರಲಿ ಎಂದು ವಿಷವನ್ನೂ ಹಾಕಿ ಮಾರುಕಟ್ಟೆಗೆ ಬಿಡುತ್ತಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ದ್ರಾಕ್ಷಿ ತೋಟದಿಂದ ಕ್ವಿಂಟಲ್‌ಗಟ್ಟಲೆ ದ್ರಾಕ್ಷಿ ತಂದು ಅದನ್ನು ಒಂದು ಬುಟ್ಟಿಯಲ್ಲಿ ಕೆಮಿಕಲ್ ಕಲೆಸಿರುವ ನೀರಿನಲ್ಲಿ ಅದ್ದಿ ಅದ್ದಿ ಎತ್ತಿಡುತ್ತಾರೆ, ಈ ವೀಡಿಯೋ ನೋಡುವಾಗ ಖಂಡಿತ ಭಯವಾಗುತ್ತೆ, ಅಯ್ಯೋ ಇಂಥ ದ್ರಾಕ್ಷಿ ತಿನ್ನುವುದರಿಂದ ಪ್ರಯೋಜನವೇನು ಎಂದು ಅನಿಸದೆ ಇರಲ್ಲ. ಇದು ಬರೀ ದ್ರಾಕ್ಷಿಯ ಕತೆಯಲ್ಲ, ಬುತೇಕ ಹಣ್ಣುಗಳು ಮಾರುಕಟ್ಟೆಗೆ ಬರುವಾಗ ಅವುಗಳಲ್ಲಿ ಎಷ್ಟು ಗುಣಗಳಿರುತ್ತದೋ ಅಷ್ಟೇ ವಿಷವೂ ಸೇರಿರುತ್ತದೆ ಎಂಬುವುದಕ್ಕೆ ಇಂಥ ಹಲವಾರು ವೀಡಿಯೋಗಳು ಸಾಕ್ಷಿ.
Grape Farmers spray pesticides on crops, which is the cause for Sore Throat Cough and fever. pic.twitter.com/mD1Tgmuysz
— Deepak Meena (@DeepakM92378610) March 21, 2024
ಇಂಥ ಕೃತ್ಯಕ್ಕೆ ಯಾರು ಹೊಣೆ?
ರೈತರು ಇಂಥ ಕೃತ್ಯ ಮಾಡುವುದಕ್ಕೆ ಕಾರಣ ಅವರ ಬೆಳೆ ಫ್ರೆಷ್ ಆಗಿರಲಿ, ಒಳ್ಳೆ ಬೆಲೆ ಸಿಗಲಿ ಬೆಟ್ಟ ದುರುದ್ದೇಶ, ವ್ಯಾಪಾರಿಗಳು, ಮಧ್ಯವರ್ತಿಗಳು ಈ ರೀತಿ ಮಾಡಲು ಕಾರಣ ನಾವು ಕೊಂಡ ಈ ಹಣ್ಣುಗಳು ಬೇಗನೆ ಮಾರಾಟವಾಗದಿದ್ದರೂ ತುಂಬಾ ದಿನ ಫ್ರೆಷ್ ಆಗಿರಬೇಕು ಎಂಬ ಆಲೋಚನೆ. ಹೀಗಾಗಿ ಹಣ್ಣು ಕೊಟ್ಟು ಖರೀದಿಸುವ ಗ್ರಾಹಕನಿಗೆ ಸಿಗುತ್ತಿರುವುದು ವಿಷ.
ಇಂಥ ವಿಷಕಾರಿ ದ್ರಾಕ್ಷಿ ತಿಂದರೆ ಗಂಟಲು ಕೆರೆತ ಉಂಟಾಗುವುದು
ಕೆಲವೊಮ್ಮೆ ದ್ರಾಕ್ಷಿ ತಿಂದಾಗ ಗಂಟಲು ಕೆರೆತ ಉಂಟಾಗುವುದು, ಈ ರೀತಿ ಗಂಟಲು ಕೆರೆತ ಉಂಟಾದಾಗುವುದು ಎಂದು ಕಮೆಂಟ್ ಮಾಡುವುದು.
Grape Farmers spray pesticides on crops, which is the cause for Sore Throat Cough and fever. pic.twitter.com/DP7ta1wdJy
— Mahaveer Jain (Modi Ji Ka Parivar) (@Mahaveer_VJ) March 21, 2024
ದ್ರಾಕ್ಷಿಯನ್ನು ಮನೆಗೆ ತಂದಾಗ ಏನು ಮಾಡಬೇಕು?
ಹರಿಯುವ ನೀರಿನಲ್ಲಿ ದ್ರಾಕ್ಷಿಯನ್ನು ತೊಳೆಯಿರಿ. ಈ ರೀತಿ ತೊಳೆಯುವುದರಿಂದ ಶೇ. 85ರಷ್ಟು ಬ್ಯಾಕ್ಟಿರಿಯಾ, ವಿಷಾಂಶ ದೂರಾಗುವುದು.
ದ್ರಾಕ್ಷಿಯನ್ನು ತುಂಬಾ ಹೊತ್ತು ನೀರಿನಲ್ಲಿ ಹಾಕಿಡಿ
ನೀವು ದ್ರಾಕ್ಷಿಯನ್ನು ಹರಿಯುವ ನೀರಿನಲ್ಲಿ ತೊಳೆದ ಬಳಿಕ 20 ನಿಮಿಷ ನೀರಿನಲ್ಲಿ ಹಾಕಿಡಿ. ನಂತರ ಮತ್ತೊಮ್ಮೆ ನೀರಿನಲ್ಲಿ ತೊಳೆದ ಬಳಿಕವಷ್ಟೆ ಬಳಸಿ.
ಅದರ ಸಿಪ್ಪೆ ಸುಲಿದು ತಿನ್ನುವುದು ಒಳ್ಳೆಯದು.
ದ್ರಾಕ್ಷಿ ಬೇಗನೆ ಹಾಳಾಗದಿರಲು ಏನು ಮಾಡಬೇಕು?
ದ್ರಾಕ್ಷಿಯನ್ನು ತೊಳೆದ ಬಳಿಕ ಟವಲ್‌ನಿಂದ ಮೆಲ್ಲನೆ ಒರೆಸಿ ಇಡಿ, ಈ ರೀತಿ ಮಾಡುವುದರಿಂದ ದ್ರಾಕ್ಷಿ ಬೇಗನೆ ಹಾಳಾಗುವುದಿಲ್ಲ.
ನೀವು ದ್ರಾಕ್ಷಿ ತೊಳೆಯುವಾಗ ವಿನೆಗರ್ ಹಾಕಿ
ನೀವು ದ್ರಾಕ್ಷಿ ತೊಳೆದ ಬಳಿಕ ಒಂದು ಪಾತ್ರೆಯಲ್ಲಿ ನೀರು, ವಿನೆಗರ್ ಹಾಕಿ ಅದರಲ್ಲಿ ದ್ರಾಕ್ಷಿ ತೊಳೆದರೆ ವಿಷಾಂಶ ತೆಗೆಯಲು ಸಹಕಾರಿ.
ಬೇಕಿಂಗ್ ಸೋಡಾ, ಕಲ್ಲುಪ್ಪು ಹಾಕಿ ತೊಳೆದರೂ ಒಳ್ಳೆಯದು. ದ್ರಾಕ್ಷಿ ಅಂತ ಯಾವುದೇ ವಸ್ತುಗಳನ್ನು ನಾವು ಮಾರುಕಟ್ಟೆಯಿಂದ ತಂದರೆ ಅದನ್ನು ಚೆನ್ನಾಗಿ ತೊಳೆದು ತಿನ್ನಬೇಕು, ಈಗ ಇಂಥದ್ದೇ ಆಹಾರ ಅಂತಲ್ಲ ಬಹುತೇಕ ಆಹಾರಗಳು ಕಲಬೆರಿಕೆಯಾಗಿ, ವಿಷಬೆರೆಸಿ ಬರುತ್ತಿದೆ, ನಮ್ಮ ಆರೋಗ್ಯದ ಬಗ್ಗೆ ನಾವೇ ಜಾಗ್ರತೆ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications