Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಮಾಂಸಾಹಾರಿಗಳೇ, ಮಾರುಕಟ್ಟೆಗೆ ಬರುತ್ತಿದೆ ಸುನಾಮಿ ಮಾಂಸ, ಎಚ್ಚರ!
ನೀವು ಹೊರಗಡೆ ಹೋಗಿ ಮಾಂಸಾಹಾರ ಸೇವನೆ ಮಾಡುತ್ತಿದ್ದರೆ ನಂಬಿಕೆಗೆ ಅರ್ಹವಾದ ಸ್ಥಳಗಳಲ್ಲಿಯೇ ಮಾಂಸಾಹಾರ ಸೇವನೆ ಮಾಡಿ, ಇನ್ನೂ ಮಾಂಸಾಹಾರ ಖರೀದಿಸುವಾಗ ಕೂಡ ಅಷ್ಟೇ ನಂಬಿಕೆಗೆ ಅರ್ಹವಾದ ಕಡೆಯಿಂದಲೇ ಖರೀದಿಸಬೇಕು. ಕೇರಳದಲ್ಲಿ ಸುನಾಮಿ ಮೀಟ್ ಎಂಬುವುದು ತುಂಬಾನೇ ಸದ್ದು ಮಾಡುತ್ತಿದೆ. ಸುನಾಮಿ ಮೀಟ್ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿರುವ ದೊಡ್ಡ ಮೋಸದ ಜಾಲವೇ ಇದೆ. ಸುನಾಮಿ ಮೀಟ್ ಎಂದರೇನು, ಇದರಿಂದ ಆರೋಗ್ಯಕ್ಕೆ ಆಗುವ ಅಪಾಯಗಳೇನು ಎಂದರೇನು ನೋಡೋಣ ಬನ್ನಿ:

ಸುನಾಮಿ ಮೀಟ್ ಎಂದರೇನು?
ಏನಾದರೂ ಕಾಯಿಲೆಯಿಂದ ಸತ್ತ ಪ್ರಾಣಿಗಳ ಮಾಂಸವನ್ನು ಸುನಾಮಿ ಮೀಟ್ ಎಂದು ಕರೆಯಲಾಗುವುದು. ಇಂಥ ಮಾಂಸ ಫ್ರೀಗೆ ಸಿಗುತ್ತದೆ ಅದನ್ನು ತಂದು ಇತರ ಮಾಂಸದ ಜೊತೆ ಮಿಶ್ರ ಮಾಡಿ ಮಾರಾಟ ಮಾಡಲಾಗುತ್ತಿದೆ. ಕೇರಳದ ವಿವಿಧ ಕಡೆ ಇಂಥ ಮಾಂಸ ಮಾರಾಟ ಮಾಡಲಾಗುತ್ತಿದೆ.
ಸ್ವಲ್ಪ ಕಡಿಮೆ ಬೆಲೆಗೆ ಮಾಂಸ ಸಿಕ್ಕಿತು ಎಂದು ಖರೀದಿಸುವ ಮುನ್ನ ಎಚ್ಚರ!
ಕೆಲವು ಕಡೆ ಹಳೆಯ , ಮಾಂಸವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ. ಅದರಲ್ಲೂ ಇಂಥ ಮಾಂಸಗಳ ಒಳ ಅಂಗಾಂಗಗಳು ಲಿವರ್, ಬೋಟಿ ಇವುಗಳ ಸೇವನೆ ಆರೋಗ್ಯಕ್ಕೆ ಮತ್ತಷ್ಟು ಅಪಾಯಕಾರಿ.
ರೋಗ ಬಂದು ಸತ್ತ ಪ್ರಾಣಿಗಳನ್ನು ಮಣ್ಣು ಮಾಡಬೇಕು ಅಥವಾ ಸೂಕ್ತ ರೀತಿಯಲ್ಲಿ ಅದನ್ನು ಸುಡಬೇಕು ಆದರೆ ಹಣದ ಆಸೆಗೆ ಅಂಥ ಪ್ರಾಣಿಯಗಳ ಮಾಂಸ ತಂದು ಇತರ ಮಾಂಸದ ಜೊತೆಗೆ ಮಿಶ್ರ ಮಾಡಿ ಮಾರಾಟ ಮಾಡಲಾಗುತ್ತಿದೆ. ಕೇರಳದಲ್ಲಿ ಹಲವು ಕಡೆ ಇಂಥ ಮಾಂಸ ಮಾರಾಟ ಜಾಲವನ್ನು ಪತ್ತೆ ಹಚ್ಚಲಾಗಿದೆ. ಇದು ಬರೀ ಕೇರಳದಲ್ಲಿ ಮಾತ್ರವಲ್ಲ ಇತರ ಕಡೆಯೂ ಆಗುತ್ತಿದೆ, ಆದರೆ ಕೇರಳದಲ್ಲಿ ತುಂಬಾನೇ ಆಗುತ್ತಿದೆ. ಆದ್ದರಿಂದ ನೀವು ಮಾಂಸವನ್ನು ಖರೀದಿ ಮಾಡುವಾಗ 5, 10 ರುಪಾಯಿ ಕಮ್ಮಿಗೆ ಸಿಕ್ಕಿತು ಎಂದು ಖರೀದಿಸಬೇಡಿ.
ಹಳೆಯ ಮಾಂಸ ಸಿಕ್ಕರೆ ಇದರ ಕುರಿತು ಪೊಲೀಸರಿಗೆ ಮಾಹಿತಿ ನೀಡಿ, ಅವರು ಆರೋಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮಾಹಿತಿ ಸಂಗ್ರಹಿಸುತ್ತಾರೆ.
ಸುನಾಮಿ ಮಾಂಸ ತಿನ್ನುವುದರಿಂದ ಉಂಟಾಗುವ ಅಪಾಯಗಳೇನು?
* ಇಂಥ ಮಾಂಸಾಹಾರ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಸಮಸ್ಯೆ ಉಂಟಾಗುವುದು.
* ಪ್ರಾಣಿಗಳಿಂದ ವೈರಸ್, ಬ್ಯಾಕ್ಟಿರಿಯಾ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ.
* ಕಾಯಿಲೆ ಬಂದು ಸತ್ತ ಪ್ರಾಣಿಗಳ ಮಾಂಸವನ್ನು ಕತ್ತರಿಸುವಾಗ, ಮುಟ್ಟಿದಾಗ, ಅದನ್ನು ತಂದು ಅಡುಗೆಗೆ ಬಳಸುವುದರಿಂದ ವೈರಸ್ ಬ್ಯಾಕ್ಟಿರಿಯಾಗಳು ಮನುಷ್ಯನ ದೇಹಕ್ಕೆ ಹಡುವುದು.
* ಫುಡ್ ಪಾಯಿಸನ್ ಉಂಟಾಗಿ ಸಾವು ಕೂಡ ಸಂಭವಿಸಬಹುದು.
* ಹೊಟ್ಟೆ ಆರೋಗ್ಯ ಹಾಳಾಗುವುದು. ಇನ್ನು ಈ ಬಗೆಯ ಮಾಂಸಾಹಾರ ಸಂರಕ್ಷಣೆಗೆ ಕೆಮಿಕಲ್ ಬಳಸಬಹುದು, ಇದರಿಂದ ಕೂಡ ಆರೋಗ್ಯಕ್ಕೆ ಅಪಾಯ ಹೆಚ್ಚುವುದು.
ಮಾಂಸವನ್ನು ಖರೀದಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
* ತಾಜಾ ಮಾಂಸ ಸಿಗುವ ಕಡೆ ಅಷ್ಟೇ ಮಾಂಸವನ್ನು ಖರೀದಿಸಿ. ಮಾರಾಟ ಮಾಡುವ ವ್ಯಕ್ತಿ ನಂಬಿಕೆ ಅರ್ಹನಾಗಿರಬೇಕು.
* ಮಾಂಸವನ್ನು ತಂದು ಚೆನ್ನಾಗಿ ಬೇಯಿಸಬೇಕು.
* ಬೇಯಿಸುವಾಗ ಮುಚ್ಚಳವನ್ನು ತೆಗೆದು ಬೇಯಿಸಿದರೆ ಒಳ್ಳೆಯದು.
* ಹೊರಗಡೆ ಮಾಂಸಾಹಾರ ಸೇವನೆ ಮಾಡದಿದ್ದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
