Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಯೂರಿಕ್ ಆಮ್ಲ ಸಮಸ್ಯೆಯೇ? ಈ ಆಹಾರಗಳನ್ನು ಪ್ರತಿದಿನ ಸೇವಿಸಿ
ಯೂರಿಕ್ ಆಮ್ಲ ಸಮಸ್ಯೆ ಇದ್ದಾಗ ಆಹಾರಕ್ರಮದ ಕಡೆ ತುಂಬಾನೇ ಗಮನ ನೀಡಬೇಕು, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗುವುದು. ಅತ್ಯಧಿಕ ಪೂರೈನ್(purine)ಇರುವ ಆಹಾರ ಸೇವಿಸುವುದರಿಂದ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾಗುವುದು.
ಸಾಮಾನ್ಯವಾಗಿ ಯೂರಿಕ್ ಆಮ್ಲ ನಮ್ಮ ರಕ್ತದಲ್ಲಿ ಕರಗುತ್ತದೆ. ಯೂರಿಕ್ ಆಮ್ಲವನ್ನು ನಮ್ಮ ಕಿಡ್ನಿ ಶುದ್ಧೀಕರಿಸಿ ಅದನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ಆದರೆ ಯೂರಿಕ್ ಆಮ್ಲ ತುಂಬಾ ಹೆಚ್ಚಾದರೆ ದೇಹದಲ್ಲಿ ಸಂಗ್ರಹವಾಗುತ್ತದೆ.
ಇದರ ಪ್ರಮಾಣ ಶರೀರದಲ್ಲಿ ಹೆಚ್ಚಾದಾಗ ಸಂಧಿ ನೋವು ಉಂಟಾಗುವುದು. ಶರೀರದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಆಹಾರಕ್ರಮದ ಬಳಿಕ ಕೂಡ ನಿಯಂತ್ರಿಸಬಹುದು. ಯಾವ ಆಹಾರಗಳು ದೇಹದಲ್ಲಿ ಯೂರಿಕ್ ಆಮ್ಲ ಕಡಿಮೆ ಮಾಡುತ್ತದೆ ಎಂದು ನೋಡೋಣ ಬನ್ನಿ:

ಸಿಟ್ರಸ್ ಹಣ್ಣು
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಹಣ್ಣು ತುಂಬಾನೇ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿರುವ ಅತ್ಯಧಿಕ ವಿಟಮಿನ್ ಸಿ ಹೊರಹಾಕಲು ಸಹಕಾರಿಯಾಗಿದೆ.
ಗ್ರೀನ್ ಟೀ
ಯೂರಿಕ್ ಆಮ್ಲ ಸಮಸ್ಯೆ ಇರುವವರು ದಿನದಲ್ಲಿ ಎರಡು ಲೋಟ ಗ್ರೀನ್ ಟೀ ಕುಡಿಯಿರಿ.
ಬಾಳೆಹಣ್ಣು
ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಪ್ರಮಾಣ ಕಡಿಮೆಯಾಗುವುದು.
ಕಾಫಿ
American Journal of Clinical Nutrition ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಕಾಫಿ ಕುಡಿಯುವುದರಿಂದ ಯೂರಿಕ್ ಆಮ್ಲ ಕಡಿಮೆಯಾಗುವುದು. ಇತರ ಆರೋಗ್ಯ ಸಮಸ್ಯೆಯಿದ್ದರೆ ಕಾಫಿಯನ್ನು ಕುಡಿಯಬಹುದೇ ಎಂಬುವುದನ್ನು ನಿಮ್ಮ ವೈದ್ಯರಿಂದ ಕೇಳಿ ತಿಳಿದುಕೊಳ್ಳಿ.
ಸೇಬು
ಸೇಬಿನಲ್ಲಿ ನಾರಿನಂಶ ಅಧಿಕವಿರುವುದರಿಂದ ದಿನಾ ಸೇಬು ತಿನ್ನುವುದರಿಂದ ಯೂರಿಕ್ ಆಮ್ಲ ಕಡಿಮೆಯಾಗುವುದು.
ಆ್ಯಪಲ್ ಸಿಡರ್ ವಿನೆಗರ್
ಬೆಳಗ್ಗೆ ಎದ್ದಾಗ ಒಂದು ಲೋಟ ಬಿಸಿ ನೀರಿಗೆ 2 ಚಮಚ ಆ್ಯಪಲ್ ಸಿಡರ್ ವಿನೆಗರ್ ಹಾಕಿದರೆ ಇದು ಕೂಡ ದೇಹದಲ್ಲಿರುವ ಅತ್ಯಧಿಕ ಯೂರಿಕ್ ಆಮ್ಲ ಹೊರ ಹಾಕಲು ಸಹಾಯ ಮಾಡುತ್ತದೆ.
ತರಕಾರಿ, ಬೀನ್ಸ್ ಸೇವಿಸಿ
ನೀವು ಯೂರಿಕ್ ಆಮ್ಲದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರಕ್ರಮದಲ್ಲಿ ಸಾಕಷ್ಟು ತರಕಾರಿ ಸೇವಿಸಿ. ಬೀನ್ಸ್, ಧಾನ್ಯಗಳು, ಫಾಲಿಕ್ ಆಮ್ಲ ಅಧಿಕವಿರುವ ಆಹಾರ ಸೇವಿಸಿ. ಹೀಗೆ ಮಾಡುವುದರಿಂದ ದೇಹದಲ್ಲಿ ಯೂರಿಕ್ ಆಮ್ಲ ಕಡಿಮೆಯಾಗುವುದು.
ಫ್ರೆಂಚ್ ಬೀನ್ಸ್: ಯೂರಿಕ್ ಆಮ್ಲ ಕಡಿಮೆ ಮಾಡುವಲ್ಲಿ ಫ್ರೆಂಚ್ ಬೀನ್ಸ್ ಅಂತೂ ತುಂಬಾನೇ ಪ್ರಯೋಜನಕಾರಿ. ಫ್ರೆಂಚ್ ಬೀನ್‌ನ ಜ್ಯೂಸ್ ಕುಡಿಯುವುದು ಕಷ್ಟ, ಆದರೆ ಯೂರಿಕ್ ಆಮ್ಲ ಸಮಸ್ಯೆ ಕಡಿಮೆ ಮಾಡುವಲ್ಲಿ ತುಂಬಾನೇ ಪರಿಣಾಮಕಾರಿ.
ಈ ಬಗೆಯ ಆಹಾರಗಳು ಒಳ್ಳೆಯದು
* ಓಟ್ಸ್
* ಸೇಬು
* ಪಿಯರ್ಸ್
* ಸೌತೆಕಾಯಿ
* ಕ್ಯಾರೆಟ್
* ಬಾರ್ಲಿ
* ಸ್ಟ್ರಾಬೆರ್ರಿ
ಯಾವ ಬಗೆಯ ಆಹಾರ ಸೇವಿಸಬಾರದು?
* ಮಾಂಸಾಹಾರ
* ಅಣಬೆ
* ಬಟಾಣಿ
* ಟರ್ಕಿ
* ಹಂದಿ ಮಾಂಸ
* ಮಟನ್
* ಹೂಕೋಸು
* ಮೊಟ್ಟೆ
ಯೂರಿಕ್ ಆಮ್ಲದ ಅಪಾಯ ತಡೆಗಟ್ಟುವುದು ಹೇಗೆ?
ಸಮತೋಲನದ ಮೈ ತೂಕ ಹೊಂದಿ
ಆರೋಗ್ಯಕರ ಮೈ ತೂಕ ಹೊಂದಿದ್ದರೆ ಸಂಧಿವಾತದ ಸಮಸ್ಯೆ ಕಡಿಮೆ ಮಾಡಬಹುದು. ಯಾರು ಅತ್ಯಧಿಕ ತೂಕ ಹೊಂದಿರುತ್ತಾರೋ ಅವರಿಗೆ ಈ ಸಮಸ್ಯೆ ಅಧಿಕ, ಆದ್ದರಿಂದ ಸಮತೂಕ ಮೈ ತೂಕದ ಮೈ ತೂಕ ಹೊಂದುವ ಮೂಲಕ ಯೂರಿಕ್ ಆಮ್ಲದ ಸಮಸ್ಯೆ ತಡೆಗಟ್ಟಬಹುದು.
ಹಾಗಂತ ನೀವು ಡಯಟ್ ಮಾಡಿ ಮೈ ತೂಕ ಕಡಿಮೆ ಮಾಡಲು ಬಯಸಿದರೂ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾಗುವುದು. ಮೈ ತೂಕ ಕಡಿಮೆ ಮಾಡಲು ನೀವು ಆಹಾರ ತಿನ್ನುವುದು ಕಡಿಮೆ ಮಾಡಿದರೆ ನಿಮ್ಮ ಯೂರಿಕ್ ಆಮ್ಲ ಸಮಸ್ಯೆ ಮತ್ತಷ್ಟು ಅಧಿಕವಾಗಬಹುದು, ಆದ್ದರಿಂದ ಈ ಬಗ್ಗೆ ಎಚ್ಚರ.
ಪ್ರತಿನಿತ್ಯ ಕಾಫಿ ಕುಡಿಯಿರಿ
ಒಂದು ಅಧ್ಯಯನದ ಪ್ರಕಾರ ದಿನದಲ್ಲಿ ನಾಲ್ಕು ಲೋಟ ಕಾಫಿ ಕುಡಿಯುವವರೆಗೆ ಯೂರಿಕ್ ಆಸಿಡ್ ಸಮಸ್ಯೆ ಇರಲ್ಲ ಎಂದು ಹೇಳಿದೆ. ನೀವು ಬೆಲ್ಲ ಹಾಕಿದ ಕಾಫಿ ಅದರಲ್ಲೂ ಬ್ಲ್ಯಾಕ್ ಕಾಫಿ ಕುಡಿಯಿರಿ. ಕೆಫೀನ್‌ನಿಂದ ನಿನಗೆ ಸಮಸ್ಯೆ ಉಂಟಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












