ಋತುಚಕ್ರದ ಮೂಡ್ ಸ್ವಿಂಗ್ ನಿಂದ ಹೊರಬರುವುದು ಹೇಗೆ?

ದೈಹಿಕ ಬದಲಾವಣೆಗಳು ಮನಸ್ಸಿನ ಮೇಲೆಯೂ ಮನಸ್ಸಿನಲ್ಲಾಗುವ ಬದಲಾವಣೆಗಳು ದೇಹದ ಮೇಲೆಯೂ ಪ್ರಭಾವ ಬೀರುವುದು ಸಹಜ. ಮನಸ್ಸಿನ ತುಮುಲಗಳನ್ನು ನಿಯಂತ್ರಿಸಲು ಒಂದು ಮಾತ್ರೆ ಸೇವಿಸಿದರೆ ಸಾಕು ದೇಹ ಹ್ಗೂ ಮನಸ್ಸು ರಿಲಾಕ್ಸ್ ಆಗುತ್ತದೆ. ಅದೇ ರೀತಿ ಮನಸ್ಸನ್ನು ಶಾಂತಿಯಿಂದಿಡುವ ಧ್ಯಾನದಿಂದ ದೇಹವೂ ಹೆಚ್ಚು ಆಕ್ಟಿವ್ ಆಗಿರುತ್ತದೆ. ಹೀಗೆ ದೈಹಿಕವಾಗಿ ಆಗುವ ಬಹಳಷ್ಟು ಬದಲಾವಣೆಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.

ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲೂ ಇಂತಹ ಬದಲಾವಣೆಗಳು ಸಾಮಾನ್ಯ. ಋತುಚಕ್ರದ ಸಮಯಕ್ಕಿಂತ ನಾಲ್ಕಾರು ದಿನಗಳ ಹಿಂದೆ ಇಂತಹ ಬದಲಾವಣೆಗಳು ನಿಮ್ಮ ಮನಸ್ಸು ಹಾಗೂ ದೇಹವನ್ನು ಘಾಸಿಗೊಳಿಸಬಹುದು. ಒಮ್ಮೆ ಖುಷಿ ಇನ್ನೊಮ್ಮೆ ಬೇಜಾರು, ಒಮ್ಮೆ ಮನಸ್ಸಿಗೆ ಕಿರಿಕಿರಿ, ದೇಹಕ್ಕೂ ಸುಸ್ತು ಹೀಗೆ ಮೂಡ್ ಸ್ವಿಂಗ್ ಆಗುತ್ತದೆ ಇನ್ನೊಮ್ಮೆ ಎಲ್ಲರ ಮೇಲೂ ವಿನಾಕಾರಣ ಸಿಟ್ಟು ಬರುತ್ತದೆ. ಮಹಿಳೆಯರು ಪ್ರತೀ ತಿಂಗಳು ಇಂತಹ ಸಮಸ್ಯೆಯನ್ನು ತಿಂಗಳ ಆ ನಾಲ್ಕೈದು ದಿನ ಅನುಭವಿಲೇಬೇಕು.

PMS Or Pre Menstrual Syndrome And Remedies In Kannada

ಎಲ್ಲರಿಗೂ ಇದು ಕಿರಿಕಿರಿ ಮಾಡಬೇಕೆಂದೇನಿಲ್ಲ. ಕೆಲವರಿಗೆ ಇಂತಹ ದಿನಗಳು ಬಹಳ ಖುಷಿಯ ದಿನಗಳೂ ಆಗಿರಬಹುದು. ಬೇರೆ ದಿನಗಳಿಗಿಂತ ಋತುಚಕ್ರದ ಅವಧಿಯಲ್ಲಿ ಹೆಚ್ಚಿನ ಕೆಲಸವನ್ನು ಮಾಡಬಹುದು ಅಥವಾ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾ ದಿನವನ್ನು ಕಳೆಯಬಹುದು. ಇಂತಹ ಬದಲಾವಣೆಗಳು ಕೂಡ ಹಲವರಲ್ಲಿ ಕಾಣಿಸುತ್ತದೆ. ಆದರೆ ಈ ತರಹದ ಉತ್ತಮ ಮೂಡ್ ಇರುವುದು ಸ್ವಲ್ಪ ಕಡಿಮೆಯೆ!

ಈ ಮೂಡ್ ಸ್ವಿಂಗ್ ಗಳು ಸಾಮಾನ್ಯವಾಗಿ ಋತುಚಕ್ರದ ಕೆಲವು ದಿನಗಳ ಹಿಂದೆ ಕಂಡರೂ ಇನ್ನೂ ಕೆಲವರಲ್ಲಿ ಇದು ಅಂಡೋತ್ಪತ್ತಿಯಿಂದ ಹಿಡಿದು ಋತುಚಕ್ರದ ತನಕವೂ ಕಾಣುತ್ತದೆ. ಮೂಡ್ ಸ್ವಿಂಗ್ ನ ಜೊತೆಗೆ ಆಹಾರದ ಬಯಕೆಗಳು, ಸ್ತನಗಳ ಹಿಗ್ಗುವಿಕೆ, ಅನಿಯಂತ್ರಿತ ಕಿರಿಕಿರಿ ಮತ್ತು ಕಣ್ಣೀರು ಉಂಟಾಗಬಹುದು.

ಹಾಗಾದರೆ ಈ ಬದಲಾವಣೆಗಳನ್ನು ಅಥವಾ ಆಗುವ ಕಿರಿಕಿರಿಯನ್ನು ತಡೆಯಲು ಸಾಧ್ಯವೇ ಇಲ್ಲವೆ? ಖಂಡಿತವಾಗಿ ಸಾಧ್ಯವಿದೆ ಮೊದಲೇ ಹೇಳಿದಂತೆ ನಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆ ನಮ್ಮ ಮನಸ್ಸಿಗೆ ಪ್ರಭಾವ ಬೀರುವುದರಿಂದ ದೇಹದಲ್ಲಿ ಮಾಡಿಕೊಳ್ಳುವ ಕೆಲವು ಬದಲಾವಣೆಗಳಿಂದ ಇದನ್ನು ಸರಿ ಮಾಡಿಕೊಳ್ಳಬಹುದು.

1. ನಿಯಮಿತವಾದ ನಿದ್ದೆ:

ಋತುಚಕ್ರದ ಅವಧಿಯಲ್ಲಿ ಆಗುವ ದೈಹಿಕ ಬದಲಾವಣೆಗಳಿಂದ ಮುಖ್ಯವಾಗಿ ನಮ್ಮ ದೇಹವು ದಣಿದಿರುತ್ತದೆ. ಈ ಅವಧಿಯಲ್ಲಿ ಸರಿಯಾದ ವಿರಾಮ ಅಥವಾ ರಿಲಾಕ್ಸೇಷನ್ ಸಿಗದೇ ಇದ್ದಲ್ಲಿ ದೇಹ ಮತ್ತಷ್ಟು ದಣಿದು ಕಿರಿಕಿರಿ ಹೆಚ್ಚಾಗುತ್ತದೆ. ಇದಕ್ಕೆ ಸಮರ್ಪಕವಾದ ನಿದ್ದೆ ಬಹಳ ಮುಖ್ಯ. ನಿದ್ದೆಯ ಅವಧಿ ಮಾತ್ರವಲ್ಲ ಸಮಯವೂ ಮುಖ್ಯ. ಬಹಳ ತಡಮಾಡದೇ ಮಲಗುವುದು ಅಗತ್ಯ. ಈ ಅವಧಿಯಲ್ಲಿ ಕನಿಷ್ಟ ಎಂಟು ಗಂಟೆಗಳ ನಿದ್ದೆ ಅಗತ್ಯ ಇರುತ್ತದೆ. ಹೀಗೆ ನಿದ್ದೆ ಮಾಡಿದಲ್ಲಿ ದೇಹವು ಕಡಿಮೆ ದಣಿಯುತ್ತದೆ ಮತ್ತು ಮನಸ್ಸು ಹೆಚ್ಚು ಉಲ್ಲಸಿತವಾಗಿರುತ್ತದೆ.

2. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ:

ಋತುಚಕ್ರದ ಮೊದಲು ನಮ್ಮ ದೇಹದ ಪ್ರೊಜೆಸ್ಟ್ರಾನ್ ಮಟ್ಟವು ಬಹಳ ಹೆಚ್ಚಾಗಿರುತ್ತದೆ. ಇದರಿಂದ ನಮ್ಮ ಹಾರ್ಮೋನ್ ಗಳು ಬಹಳ ಏರುಪೇರಾಗುತ್ತವೆ. ಇದರಿಂದ ನಮ್ಮ ಮನಸ್ಸಿನ ಒತ್ತಡದಲ್ಲೂ ಭಾರೀ ಬದಲಾವಣೆ ಕಾಣಸಿಗುತ್ತದೆ. ಈ ಬದಲಾವಣೆಗಳನ್ನು ನಿಯಂತ್ರಿಸಲು ಮತ್ತು ಮನಸ್ಸನ್ನು ಶಾಂತಿಯಿಂದಿಡಲು ಧ್ಯಾನ ಪ್ರಾಣಾಯಾಮದಂತಹ ವಿಧಾನಗಳು ಬಹಳ ಸಹಕಾರಿ.

3. ಕೆಫೇನ್ ಮತ್ತು ಸಕ್ಕರೆಯ ಸೇವನೆ ಕಡಿಮೆ ಮಾಡಿ:

ಕೆಫೇನ್ ಮತ್ತು ಸಕ್ಕರೆಯ ಅಂಶಗಳು ದೇಹದ ಆರೋಗ್ಯಕ್ಕೆ ಯಾವತ್ತಿಗೂ ಒಳ್ಳೆಯದಲ್ಲ. ಅದರಲ್ಲೂ ನೀವು ಋತುಚಕ್ರದಲ್ಲಿದ್ದು, ಮೂಡ್ ಬದಲಾಗುತ್ತಿರುವಾಗಲೂ ಕೆಫೀನ್ ಸೇವನೆ ಖಂಡಿತವಾಗಿಯೂ ಒಳ್ಳೆಯದಲ್ಲ. ಋತುಚಕ್ರದ ಅವಧಿಯಲ್ಲಿ ದೇಹವು ಬಹಳ ದಣಿದಿರುತ್ತದೆ. ಈ ಸಮಯದಲ್ಲಿ ದೇಹಕ್ಕೆ ನೀರಿನ ಅಗತ್ಯವಿದೆ. ಈ ಕಾರಣಕ್ಕೆ ನೀವು ನೈಸರ್ಗಿಕ ಸಕ್ಕರೆ ಇರುವ ಹಣ್ಣುಗಳ ಜ್ಯೂಸ್ ಕುಡಿಯುವುದು ಒಳ್ಳೆಯದು. ಉದಾಹರಣೆಗೆ, ಗಿಡ ಮೂಲಿಕೆಗಳ ಚಹಾ ಕುಡಿಯಬಹುದು. ಅಂಜೂರ, ಖರ್ಜೂರ, ಒಣದ್ರಾಕ್ಷಿ, ಕಲ್ಲಂಗಡಿ ಹೀಗೆ ಬೇರೆ ಬೇರೆ ನ್ಯೂಸ್ ಗಳನ್ನು ಕುಡಿಯಬಹುದು. ಇದರಿಂದ ದೇಹವೂ ತಂಪಾಗಿರುತ್ತದೆ. ಜೊತೆಗೆ ಮನಸ್ಸೂ ಕೂಡ ಶಾಂತವಾಗುತ್ತದೆ.

4. ಮುಲೇತಿ ಅಜ್ವೈನ ಬಳಕೆ:

ಸಾಮಾನ್ಯವಾಗಿ ಆಯುರ್ವೇದದಲ್ಲಿ ಅಥವಾ ಹಳ್ಳಿ ಮನೆಮದ್ದುಗಳಲ್ಲಿ ಮುಲೇತಿ ಬೇರುಗಳನ್ನು ಬಳಸಲಾಗುತ್ತದೆ. ಇದರಿಂದ ಸಿಗುವ ಪ್ರಯೋಜನ ಆಷ್ಟಿಷ್ಟಲ್ಲ. ಋತುಚಕ್ರದ ಸಮಯದಲ್ಲಿ ಸ್ನಾಯು ಸೆಳೆತ, ಕೈ ಕಾಲುಗಳು ಸೋತುಹೋದಂತೆ ಆಗುವುದು, ಹೊಟ್ಟೆ ನೋವು ಸಹಜ. ಇಂಥ ಸಂದರ್ಭದಲ್ಲಿ ಮುಲೇತಿ ಬೇರಿನ ರಸವನ್ನ ಸೇವಿಸಿದರೆ ಈ ಎಲ್ಲಾ ಸಮಸ್ಯೆಗಳೂ ಉಪಶಮನವಾಗುತ್ತದೆ. ಮುಲೇತಿಯಲ್ಲಿರುವ ಆಂಟಿಸ್ಪಾಸ್ಮೊಡಿಕ್ ಗುಣ ರಕ್ತದ ಹರಿವಿಗೂ ಕಾರಣವಾಗುತ್ತದೆ. ಅದೇ ರೀತಿ ಅಜ್ವೈನದ ನೀರನ್ನು ಕೂಡ ಕುಡಿದರೆ ಋತುಚಕ್ರದ ಸಮಯದಲ್ಲಿ ಸ್ವಲ್ಪ ರಿಲಾಕ್ಸ್ ಎನಿಸುತ್ತದೆ.

5. ಜೀವಸತ್ವಗಳು, ಕ್ಯಾಲ್ಸಿಯಂ ಕೊರತೆ ಬಾರದಂತೆ ಗಮನವಹಿಸಿ:

ಋತುಚಕ್ರದ ಅವಧಿಯಲ್ಲಿ ಹಾರ್ಮೋನ್ ಬದಲಾವಣೆಗಳು ಆಗುತ್ತವೆ. ಈ ಸಮಯದಲ್ಲಿ ದೇಹದಲ್ಲಿ ವಿಟಮಿನ್ ಡಿ, ಜೀವಸತ್ವಗಳು, ಕ್ಯಾಲ್ಸಿಯಂ ಕೊರತೆ ಆಗದಂತೆ ನೋಡಿಕೊಳ್ಳಿ. ಅದಕ್ಕೆ ಪೂರಕವಾದ ಆಹಾರಗಳನ್ನು ಸೇವಿಸಿ.

ಮಹಿಳೆಯರು ಋತುಚಕ್ರದಂತಹ ಕಠಿಣ ಪರಿಸ್ಥಿತಿಯನ್ನು ಪ್ರತಿತಿಂಗಳೂ ಅನುಭವಿಸಲೇಬೇಕು. ಆದರೆ ಈ ಸಮಯದಲ್ಲಿ ಉಂಟಾಗುವ ನೋವು, ಮೂಡ್ ಬದಲಾವಣೆ, ಮಾನಸಿಕ ಅಸಮತೋಲನದ ಸ್ಥಿತಿಯಿಂದ ಹೊರಬರಲು ಈ ಲೇಖನದಲ್ಲಿ ಹೇಳಿರುವ ಟಿಪ್ಸ್ ಫಾಲೋ ಮಾಡಿ ಜೊತೆಗೆ ಉತ್ತಮವಾದ ಜೀವನ ಶೈಲಿ ಹಾಗೂ ಸರಿಯಾದ ಆಹಾರ ಪದ್ಧತಿ ರೂಢಿಸಿಕೂಳ್ಳಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

PMS Or Pre Menstrual Syndrome And Remedies In Kannada

PMS Or Pre Menstrual Syndrome And Remedies, Read on.
Story first published: Saturday, June 17, 2023, 17:00 [IST]
X
Desktop Bottom Promotion