Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಈ ರೀತಿ ರಕ್ತಸ್ರಾವ ಕಂಡು ಬಂದರೆ ಅದು ಗರ್ಭಿಣಿ ಎನ್ನುವುದರ ಸೂಚನೆ!
ಮುಟ್ಟಾಗದಿದ್ದಾಗ ಗರ್ಭಿಣಿಯಾಗಿರಬಹುದೇ ಎಂಬ ಡೌಟ್ ಬಂದು ಪರೀಕ್ಷೆ ಮಾಡುತ್ತಾರೆ, ಆದರೆ ಕೆಲವರಿಗೆ ಗರ್ಭಿಣಿಯಾದಾಗ ಗೊತ್ತಾಗುವುದಿಲ್ಲ. ಏಕೆಂದರೆ ರಕ್ತದ ತೆಳು ಕಲೆ ಕಂಡು ಬಂದಾಗ ಮುಟ್ಟಾಗಿದ್ದೇನೆ ಎಂದೇ ಭಾವಿಸುತ್ತಾರೆ, ಆದರೆ ರಕ್ತಸ್ರಾವವಿರುವುದಿಲ್ಲ, ಆವಾಗ ಈ ತಿಂಗಳಿನಲ್ಲಿ ಬ್ಲೀಡಿಂಗ್ ಆಗ್ತಾ ಇಲ್ಲ ಎಂದು ಯೋಚಿಸುತ್ತಾರೆ ವಿನಃ ತಾನು ಗರ್ಭಿಣಿ ಇರಬಹುದು ಎಂದು ಯೋಚಿಸುವುದಿಲ್ಲ. ಆದರೆ ಇದನ್ನು ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ಎಂದು ಕರೆಯಲಾಗುವುದು.
ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ಎಂದರೇನು?
ಯಾವಾಗ ಫಲವತ್ತತೆಯಾದ ಅಂಡಾಣು ಗರ್ಭಕೋಶವನ್ನು ಸೇರುವುದೋ ಆವಾಗ ಕೆಲವರಿಗೆ ಸ್ವಲ್ಪ ರಕ್ತಸ್ರಾವ ಕಂಡು ಬರುವುದು. ತೆಳುವಾದ ರಕ್ತನಾಳಗಳ ಮೇಲೆ ಒತ್ತಡ ಹಾಕುವುದರಿಂದ ಈ ರೀತಿಯ ರಕ್ತಸ್ರಾವ ಕಂಡು ಬರುವುದು. ಗರ್ಭಧಾರಣೆಯಾದ 7-14 ದಿನಗಳಲ್ಲಿ ಈ ರೀತಿ ಕಂಡು ಬರುವುದು.

ಅಂಡಾಣು ವೀರ್ಯಾಣು ಜೊತೆ ಸೇರಿ ಫಲವತ್ತತೆಯಾದ ಮೇಲೆ ಫಾಳೋಪಿಯನ್ ಟ್ಯೂಬ್ ಮೂಲಕ ಗರ್ಭಕೋಶಕ್ಕೆ ಜಾರುತ್ತದೆ. ಅಲ್ಲದೆ ಫಲವತ್ತತೆಯಾದ ಅಂಡಾಣು ಭ್ರೂಣವಾಗಿ ರೂಪುಗೊಳ್ಳುತ್ತದೆ ಅದಕ್ಕೆ ತಾಯಿಯ ದೇಹದಿಂದ ಪೋಷಕಾಂಶಗಳು, ಆಮ್ಲಜನಕ ಸಿಗುವುದರಿಂದ ಬೆಳೆಯಲಾರಂಭಿಸುತ್ತದೆ. ಈ ಹಂತದಲ್ಲಿ ತೆಳು ಬಣ್ಣದ ರಕ್ತಸ್ರಾವ ಕಂಡು ಬರುವುದು.
ಈ ರೀತಿ ಯಾವಾಗ ಕಂಡು ಬರುವುದು?
ಈ ಬಗೆಯ ರಕ್ತಸ್ರಾವ ನಿಮ್ಮ ಮುಟ್ಟಿನ ದಿನಾಂಕಕ್ಕಿಂತ ಮೊದಲೇ ಕಂಡು ಬರುವುದು, ಮುಟ್ಟಾಗುವ ಸಮಯಕ್ಕಿಂತ 7-10 ದಿನಗಳ ಮೊದಲೇ ಈ ರೀತಿ ಕಂಡು ಬರುವುದು. ಅಂಡಾಣು ವೀರ್ಯಾಣು ಜೊತೆ ಸೇರಿ ಫಲವತ್ತತೆಯಾಗಿ 7-10 ದಿನಗಳಲ್ಲಿ ಈ ರೀತಿ ಕಂಡು ಬರುವುದು.
ಗರ್ಭಧಾರಣೆಯ ಆರಂಭಿಕ ಲಕ್ಷಣಗಳು
- ತೆಳು ರಕ್ತಸ್ರಾವ
- ಕಿಬ್ಬೊಟ್ಟೆ ನೋವು(ಮುಟ್ಟಿನ ಸಮಯದಲ್ಲಿ ಕಂಡು ಬರುವಂತೆಯೇ ಸೆಳೆತ ಕಂಡು ಬರುವುದು)
- ಸುಸ್ತು
- ಸ್ತನಗಳು ಬಿಗಿಯಾದ ಅನುಭವ
- ತಲೆನೋವು
ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ಎಷ್ಟು ದಿನ ಇರುತ್ತದೆ?
ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ಒಂದು ಅಥವಾ ಎರಡು ದಿನ ಕಂಡು ಬರುವುದು.
ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ vs. ಮುಟ್ಟಿನ ರಕ್ತಸ್ರಾವದ ನಡುವಿನ ವ್ಯತ್ಯಾಸವೇನು?
ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ನೀವು ಗರ್ಭಧಾರಣೆಯ ಪರೀಕ್ಷೆ ಮಾಡಿಸುವ ಮುನ್ನವೇ ಉಂಟಾಗುವುದು. ಸಾಮಾನ್ಯವಾಗಿ ತಿಂಗಳ ಮುಟ್ಟು ಮಿಸ್ ಆದಾಗ ಗರ್ಭಧಾರಣೆಯ ಪರೀಕ್ಷೆ ಮಾಡಿಸುತ್ತೇವೆ, ಅದಕ್ಕೆ 28 ದಿನಗಳು ಅಥವಾ 30 ದಿನಗಳು ಬೇಕಾಗುವುದು. ಆದರೆ ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ಮುಟ್ಟಾಗುವ ಸಮಯಕ್ಕಿಂತ ಮೊದಲೇ ಕಂಡು ಬರುವುದು. ಇದರಲ್ಲಿ ರಕ್ತಕಲೆಗಳು ಕಂಡು ಬರುವುದು, ಆದರೆ ರಕ್ತಸ್ರಾವ ಇರುವುದಿಲ್ಲ. ಅದೇ ಮುಟ್ಟಿನ ಸಮಯದಲ್ಲಾದರೆ ಅಧಿಕ ರಕ್ತಸ್ರಾವವಿರುತ್ತದೆ.
ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ಕಂಡು ಬಂದ ತಕ್ಷಣ ಗರ್ಭಿಣಿ ಎಂಬುವುದು ದೃಢವಾಗುವುದೇ?
ಇಷ್ಟು ಬೇಗ ಗರ್ಭಿಣಿ ಎಂದು ಖಚಿತ ಪಡಿಸಲು ಸಾಧ್ಯವಾಗುವುದಿಲ್ಲ, ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಕೆಲವರಿಗೆ ಈ ರೀತಿ ಉಂಟಾದರೂ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ, ಇನ್ನು ಕೆಲವರಿಗೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವುದು, ಆದ್ದರಿಂದ ಈ ಲಕ್ಷಣಗಳು ಕಂಡು ಬಂದ ತಕ್ಷಣ ಗರ್ಭಿಣಿ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಇನ್ನೂ ಎರಡು ವಾರ ಕಾಯಬೇಕಾಗುತ್ತದೆ. ಗರ್ಭಿಣಿಯಾಗಿ 4 ವಾರಗಳಾದರೂ ಆಗಿದ್ದರೆ ಮಾತ್ರ ಗರ್ಭಧಾರಣೆಯಾಗಿದೆಯೇ ಎಂಬುವುದರ ಬಗ್ಗೆ ಖಚಿತವಾಗಿ ಹೇಳಲಾಗುವುದು.
ಇಂಪ್ಲ್ಯಾಂಟೇಷನ್ ಬ್ಲೀಡಿಂಗ್ ಕಂಡು ಬಂದರೆ ಜಾಗ್ರತೆವಹಿಸಬೇಕೆ?
ನೀವು ಗರ್ಭಿಣಿಯಾಗಲು ಪ್ಲ್ಯಾನ್ ಮಾಡುತ್ತಿದ್ದರೆ ನಿಮ್ಮ ಮುಟ್ಟಿನ ಸಮಯಕ್ಕೆ ಮೊದಲೇ ತೆಳು ರಕ್ತಸ್ರಾವ ಕಂಡು ಬಂದರೆ ನೀವು ಅಧಿಕ ಭಾರ ಎತ್ತುವುದು ಅಥವಾ ಗರ್ಭಪಾತವಾಗುವಂಥ ಕೆಲಸಗಳನ್ನು ಮಾಡದೇ ಇರುವುದು ಒಳ್ಳೆಯದು, ಏಕೆಂದರೆ ಮೊದಲ 3 ತಿಂಗಳು ತುಂಬಾನೇ ಮುಖ್ಯ, ಈ ಸಮಯದಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚು, ಆದ್ದರಿಂದ ಈ ಸೂಚನೆ ಸಿಕ್ಕರೆ ಸ್ವಲ್ಪ ಜಾಗ್ರತೆವಹಿಸಿ, ಹಾಗಂತ ನೀವು ಗರ್ಭಿಣಿ ಎಂದು ಖಚಿತವಾಗಲು ಒಂದು ತಿಂಗಳು ಕಾಯಿರಿ. ನಂತರ ಪರೀಕ್ಷೆ ಮಾಡಿಸಿ ಖಚಿತ ಮಾಡಿಸಿಕೊಳ್ಳಿ.
ಮೊದಲ ತಿಂಗಳಿನಲ್ಲಿ ಸ್ಲ್ಯಾನಿಂಗ್ ಮಾಡಿಸಿ
ತುಂಬಾ ಜನ ಪ್ರಾರಂಭದಲ್ಲಿ ಸ್ಕ್ಯಾನಿಂಗ್ ಮಾಡಿಸುವುದಿಲ್ಲ, ಆದರೆ ಗರ್ಭಧಾರಣೆಯ ಮೊದಲ ತಿಂಗಳಿನಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿ. ಇದರಿಂದ ಎಕ್ಟೋಪಿಕ್ ಪ್ರೆಗ್ನಿನ್ಸಿ ಆಗಿದ್ದರೆ ಪ್ರಾರಂಭದಲ್ಲಿಯೇ ತಿಳಿಯುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
