For Quick Alerts
ALLOW NOTIFICATIONS  
For Daily Alerts

ನಿಮ್ಮ ಪೋಷಕರಿಗೆ ಆಗಾಗ ಕಾಡುವ ಗ್ಯಾಸ್ಟ್ರಿಕ್, ಅಜೀರ್ಣ ಹೋಗಲಾಡಿಸಲು ಟಿಪ್ಸ್

|

ಅಜೀರ್ಣ ಎಂಬುವುದು ಎಲ್ಲಾ ವಯಸ್ಸಿನವರನ್ನು ಕಾಡುವ ಸಮಸ್ಯೆಯಾಗಿದೆ. ಇನ್ನು ಅಜೀರ್ಣದಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಮುಜುಗರದ ಪರಿಸ್ಥಿತಿ. ಈ ಗ್ಯಾಸ್ಟ್ರಿಕ್‌ ಎಲ್ಲರನ್ನು ಒಮ್ಮೆ ಕಾಡಿಯೇ ಕಾಡುತ್ತದೆ.

ಇನ್ನು ವಯಸ್ಸಾದಂತೆ ಈ ಸಮಸ್ಯೆ ಹೆಚ್ಚಾಗಿಯೇ ಕಾಡುತ್ತದೆ. ವಯಸ್ಸಾದಂತೆ ಆಹಾರ ಜೀರ್ಣಿಸುವ ಶಕ್ತಿ ಕಡಿಮೆಯಾಗುವುದು, ಇದರಿಂದಾಗಿ ಅಜೀರ್ಣ ಉಂಟಾಗುವುದು. ಆದ್ದರಿಂದಲೇ ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ಅವರು ಅಜೀರ್ಣ ಉಂಟಾಗಿದೆ ಎಂದು ಹೇಳುತ್ತಿರುತ್ತಾರೆ. ಅಲ್ಲದೆ ಆಗಾಗ ದೊಡ್ಡ ಶಬ್ದದಲ್ಲಿ ಗ್ಯಾಸ್ ಪಾಸ್ ಮಾಡುತ್ತಾರೆ. ನಿಮ್ಮ ಮನೆ ಹಿರಿಯರಿಗೆ ಅಜೀರ್ಣ ಸಮಸ್ಯೆ ಉಂಟಾಗುತ್ತಿದ್ದರೆ ಅವರಲ್ಲಿ ಆ ಸಮಸ್ಯೆ ಕಡಿಮೆ ಮಾಡಲು ಈ ಟಿಪ್ಸ್ ಪಾಲಿಸಿ:

1. ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ತಿನ್ನಿ

1. ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ತಿನ್ನಿ

ವಯಸ್ಸಾದಾವರು ಲಘು ಆಹಾರ ಸೇವನೆ ಮಾಡಬೇಕು. ಅಧಿಕ ಆಹಾರ ತಿಂದರೆ ಜೀರ್ಣಿಇಸಕೊಳ್ಳಲು ಕಷ್ಟ. ಸ್ವಲ್ಪ-ಸ್ವಲ್ಪ ಆಹಾರವನ್ನು ಸೇವಿಸಿ. ಮೂರು ಹೊತ್ತು ಸೇವಿಸುವ ಬದಲು ಆರು ಹೊತ್ತು ಸೇವಿಸಿ. ಈ ರೀತಿಯ ಆಹಾರಕ್ರಮ ಪಾಲಿಸಿದರೆ ಜೀರ್ಣಕ್ರಿಯೆಗೆ ಸಹಕಾರಿ.

2. ಹೊರಗಡೆಯ ಆಹಾರ ತಿನ್ನಬೇಡಿ

2. ಹೊರಗಡೆಯ ಆಹಾರ ತಿನ್ನಬೇಡಿ

ನಾವು ಹೊರಗಡೆಯ ಆಹಾರ ಸೇವಿಸಿದಷ್ಟೂ ಆರೋಗ್ಯ ಸಮಸ್ಯೆ ಹೆಚ್ಚುವುದು. ಮನೆಯಲ್ಲಿಯೇ ಮಾಡಿದ ಆರೋಗ್ಯಕರ ಸೇವನೆ ಒಳ್ಳೆಯದು. ಇನ್ನು ತುಂಬಾ ಹುಳಿ ಅಥವಾ ಖಾರ ಪದಾರ್ಥಗಳನ್ನು ಸೇವಿಸಬೇಡಿ. ಇನ್ನು ತುಂಬಾ ಮಸಾಲೆ ಹಾಕಿದ ಆಹಾರ, ಪಿಜ್ಜಾ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಮರಗೆಣಸು ಅಥವಾ ಕುರಿಮಾಂಸ ಇದರಲ್ಲಿ ಕೊಲೆಸ್ಟ್ರಾಲ್ ಅಧಿಕವಿರುವುದರಿಂದ ತುಂಬಾ ಸೇವಿಸಬೇಡಿ.

3. ಉಪ್ಪಿನಂಶ ಕಡಿಮೆ ಸೇವಿಸಿ ನೀರು ಅಧಿಕ ಕುಡಿಯಿರಿ

3. ಉಪ್ಪಿನಂಶ ಕಡಿಮೆ ಸೇವಿಸಿ ನೀರು ಅಧಿಕ ಕುಡಿಯಿರಿ

ಆಹಾರಕ್ಕೆ ಹೆಚ್ಚು ಉಪ್ಪು ಹಾಕಬೇಡಿ, ವಯಸ್ಸಾದಂತೆ ಬಿಪಿ ಸಮಸ್ಯೆ ತಡೆಗಟ್ಟಲು ಉಪ್ಪು ಕಡಿಮೆ ಸೇವಿಸಬೇಕು. ಇನ್ನು ಕಡಿಮೆಯೆಂದರೂ 8 ಲೋಟ ನೀರು ಕುಡಿಯಿರಿ. ಬಿಸಿ ನೀರು ಕುಡಿಯುವುದು ಒಳ್ಳೆಯದು. ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವುದು ಅಥವಾ ಜೀರಿಗೆ ನೀರು ಮಾಡಿ ಕುಡಿಯುವುದು ಒಳ್ಳೆಯದು.

4. ನಾರಿನಂಶವಿರುವ ಆಹಾರ ಹೆಚ್ಚಾಗಿ ಸೇವಿಸಬೇಕು

4. ನಾರಿನಂಶವಿರುವ ಆಹಾರ ಹೆಚ್ಚಾಗಿ ಸೇವಿಸಬೇಕು

ಜೀರ್ಣಕ್ರಿಯೆ ಚೆನ್ನಾಗಿ ನಡೆಯಲು ನಾರಿನಂಶವಿರುವ ಆಹಾರ ಸೇವಿಸಬೇಕು. ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಬೆರ್ರಿ ಹಣ್ಣುಗಳು, ಆಲೂಗಡ್ಡೆ, ಸೊಪ್ಪು ಇವುಗಳ ಸೆವನೆ ಹೆಚ್ಚು ಮಾಡಿ.

5. ವ್ಯಾಯಾಮ ಮಾಡಬೇಕು

5. ವ್ಯಾಯಾಮ ಮಾಡಬೇಕು

ವಯಸ್ಸಾದಂತೆ ದೈಹಿಕ ವ್ಯಾಯಾಮದ ಕಡೆ ಹೆಚ್ಚು ಗಮನ ನೀಡಬೇಕು. ಕನಿಷ್ಟ ಅರ್ಧ ಗಂಟೆ ನಡೆಯುವುದು ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದಿಲ್ಲ.

6. ಔಷಧಿಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತಿದೆಯೇ?

6. ಔಷಧಿಯಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತಿದೆಯೇ?

ವಯಸ್ಸಾದ ಮೇಲೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕಾಡುವುದರಿಂದ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಈ ಔಷಧಿಗಳು ಕೂಡ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗೆ ಒಂದು ಕಾರಣವಾಗಿದೆ. ಔಷಧಿಯಿಂದಾಗಿ ಗ್ಯಾಸ್ಟ್ರಿಕ್ ಉಂಟಾಗುತ್ತಿದ್ದರೆ ವೈದ್ಯರ ಬಳಿ ಹೇಳಿ ಪರ್ಯಾಯವಾದ ಔಷಧ ತೆಗೆದುಕೊಳ್ಳಿ.

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದು

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದು

  • ಸ್ವಲ್ಪ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಆ ನೀರು ಕುಡಿಯುವುದರಿಂದ ಎದೆಯುರಿ, ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುವುದು.
  • ಆಹಾರ ತಿನ್ನುವುದಕ್ಕಿಂತ ಮೊದಲು ಶುಂಠಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಅದನ್ನು ಕುಡಿದು ನಂತರ ಆಹಾರ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವುದಿಲ್ಲ.( ಶುಂಠಿ ಹೆಚ್ಚು ಸೇವಿಸಿದರೆ ಉಷ್ಣವಾಗುವುದು, ಮಿತಿಯಲ್ಲಿ ಸೇವಿಸಿ).
  • ತಣ್ಣನೆಯ ಮಜ್ಜಿಗೆ ಸೇವನೆ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುತ್ತದೆ ಹಾಗೂ ದೇಹಕ್ಕೆ ಅಗ್ಯತವಾದ ಕ್ಯಾಲ್ಸಿಯಂ ಕೂಡ ದೊರೆಯುತ್ತದೆ
  • ಪುದೀನಾ ಚಟ್ನಿ, ಪುದೀನಾ ಟೀ ಇವು ಕೂಡ ಗ್ಯಾಸ್ಟ್ರಿಕ್ ಕಡಿಮೆ ಮಾಡಲು ಅತ್ಯುತ್ತಮವಾದ ಮನೆಮದ್ದಾಗಿದೆ.
  • ನಿಂಬೆ ನೀರು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಗೆ ತಕ್ಷಣದ ಪರಿಹಾರ ನೀಡುತ್ತದೆ. ಒಂದು ಲೋಟ ನೀರಿಗೆ ನಿಂಬೆರಸ ಹಾಕಿ ಅದಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ, ಚಿಟಕೆಯಷ್ಟು ಬ್ಲ್ಯಾಕ್ ಸಾಲ್ಟ್, ಹುರಿದು ಪುಡಿ ಮಾಡಿದ ಜೀರಿಗೆ ಪುಡಿ ಹಾಕಿ ಮಿಶ್ರ ಮಾಡಿ ಕುಡಿದರೆ ಗ್ಯಾಸ್ಟ್ರಿಕ್ ಹೊಟ್ಟೆನೋವು ತಕ್ಷಣವೇ ಕಡಿಮೆಯಾಗುವುದು.
English summary

Tips To Solve Your Parents Gas And Indigestion Problem

Here are tips to solve your parents often get gas and indigestion problem, read on,
X
Desktop Bottom Promotion