For Quick Alerts
ALLOW NOTIFICATIONS  
For Daily Alerts

ರಮ್‌ ಗುಲಾಬ್‌ ಜಾಮೂನು ವೀಡಿಯೋ ವೈರಲ್‌: ರಮ್‌ನಲ್ಲಿದೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳು!

|

ಗುಲಾಬ್ ಜಾಮೂನು ಯಾರಿಗೆ ತಾನೆ ಗೊತ್ತಿಲ್ಲ, ಅದು ಉತ್ತರ ಭಾರತ ಆಗಿರಲಿ ದಕ್ಷಿಣ ಭಾರತ ಆಗಿರಲಿ ಸ್ವೀಟ್ಸ್‌ ಸಾಲಿನಲ್ಲಿ ಜಾಮೂನು ಇದ್ದೇ ಇರುತ್ತದೆ. ಇನ್ನು ಮನೆಯಲ್ಲಿ ಒಂದು ಚಿಕ್ಕ ಸಮಾರಂಭ ಇದ್ದರೂ ಸ್ಪೆಷಲ್‌ ಊಟದ ಮೆನುವಿನಲ್ಲಿ ಜಾಮೂನು ಇರುತ್ತದೆ.

ಒಂದು ಬೌಲ್‌ನಲ್ಲಿ ಜಾಮೂನು, ಒಂದು ಬೌಲ್‌ನಲ್ಲಿ ಐಸ್‌ಕ್ರೀಂ ಹಾಕಿಕೊಂಡು ಬಂದು ಸವಿಯುದೆಂದರೆ ನನಗಂತೂ ತುಂಬಾನೇ ಇಷ್ಟ, ನಿಮ್ಮಲ್ಲೂ ಕೆಲವರಿಗೆ ಈ ಕಾಂಬಿನೇಷನ್ ಇಷ್ಟವಾಗಿರಬಹುದು ಅಲ್ವಾ? ಇದೇನಪ್ಪಾ ಜಾಮೂನು ಬಗ್ಗೆ ಇಷ್ಟೊಂದು ಹೇಳ್ತಾ ಇದ್ದಾರೆ ನಮಗೆ ಗೊತ್ತಿಲ್ಲದಿರುವುದು ಏನಾದರೂ ಹೇಳಿದರೆ ರಮ್‌ ಜಾಮೂನು ಟೇಸ್ಟ್‌ ಮಾಡಿದ್ದೀರಾ?

ಏನದು ರಮ್‌ ಜಾಮೂನು? ರಮ್‌ಗೂ ಜಾಮೂನಿಗೂ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಕೇಳುವುದಾದರೆ ಹೌದು ಈ ಎರಡಕ್ಕೂ ಸಂಬಂಧವಿರುವ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ರಮ್‌ ಕಿಕ್‌ ಜೊತೆ ಗುಲಾಬ್ ಜಾಮುನು ಟೇಸ್ಟ್‌

ರಮ್‌ ಕಿಕ್‌ ಜೊತೆ ಗುಲಾಬ್ ಜಾಮುನು ಟೇಸ್ಟ್‌

ಸೋಷಿಯಲ್ ಮೀಡಿಯಾದಲ್ಲಿ ನ್ಯೂಟ್ರಿಷಿಯನಿಷ್ಟ್‌ ಗೌರವಿ ಈ ವೀಡಿಯೋ ಹಂಚಿಕೊಂಡಿದ್ದು ಈ ವೀಡಿಯೋ ತುಂಬಾನೇ ಗಮನ ಸೆಳೆದಿದೆ, ಈ ಫ್ಲೇವರ್ ತುಂಬಾ ಜನ ಟ್ರೈ ಮಾಡಲು ಬಯಸುವುದಂತು ಸತ್ಯ.

ಗೌರವಿಯವರು ಒಂದು ದೊಡ್ಡ ಚಮಚ ಅಥವಾ ಸೌಟ್‌ನಲ್ಲಿ 2 ಗುಲಾಬ್‌ ಜಾಮೂನು ಹಾಕಿ, ಅದಕ್ಕೆ ಸ್ವಲ್ಪ ಸಕ್ಕರೆ ಪಾಕ ಹಾಕಿ ಓಲ್ಡ್‌ ಮಾಂಕ್‌ ರಮ್ ಸ್ವಲ್ಪ ಸುರಿದು ಅದನ್ನು ಸ್ಟೌವ್‌ನಲ್ಲಿ ಸ್ವಲ್ಪ ಬಿಸಿ ಮಾಡುತ್ತಾರೆ.

ಆಗ ಆ ಗುಲಾಬ್‌ ಜಾಮೂನ್‌ನಲ್ಲಿ ಒಂಥರಾ ನೀಲಿ ಜ್ವಾಲೆ ಗೋಚರವಾಗುತ್ತೆ, ನಂತರ ಅದನ್ನು ಉರಿಯಿಂದ ತೆಗೆದು ಡ್ರಿಂಕ್‌ನಲ್ಲಿ ಸುರಿದರೆ ರಮ್‌ ಜಾಮೂನು ರೆಡಿ.

ಆಹಾರದ ಸ್ವಾದ ಹೆಚ್ಚಿಸುವ ರಮ್‌

ಆಹಾರದ ಸ್ವಾದ ಹೆಚ್ಚಿಸುವ ರಮ್‌

ರಮ್‌ ಅನ್ನು ಆಹಾರದಲ್ಲಿ ಅದರಲ್ಲೂ ಸ್ವೀಟ್‌ ತಯಾರಿಸಲು ಕೂಡ ಬಳಸಲಾಗುವುದು. ಕ್ರಿಸ್ಮಸ್‌ ಸಮಯದಲ್ಲಿ ರಮ್ ಕೇಕ್‌ ತುಂಬಾನೇ ವಿಶೇಷವಾಗಿರುತ್ತದೆ.

ರಮ್ ಬಳಸಿ ಚಿಕನ್‌ ಗ್ರಿಲ್ಡ್ ಕೂಡ ಮಾಡಲಾಗುವುದು. ಆಹಾರದ ಸ್ವಾದ ಹೆಚ್ಚಿಸುವ ಗುಣ ರಮ್‌ಗಿದೆ.

ರಮ್ ಅನ್ನು ಮಿತಿಯಲ್ಲಿ ಸೇವಿಸಿದರೆ ಈ ಪ್ರಯೋಜನಗಳಿವೆ.

ರಮ್ ಪ್ರಯೋಜನಗಳು

ರಮ್ ಪ್ರಯೋಜನಗಳು

1. ಹೃದಯದ ಆರೋಗ್ಯಕ್ಕೆ ಒಳ್ಳೆಯದು: ದಿನಾ ರಮ್‌ ಅನ್ನು ಮಿತಿಯಲ್ಲಿ ಕುಡಿದರೆ ಹೃದಯದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.

2. ಸಾಮಾನ್ಯ ಶೀತಕ್ಕೆ ಮನೆಮದ್ದು: ಸ್ವಲ್ಪ ರಮ್‌ಗೆ ಕರಿಮೆಣಸಿನ ಪುಡಿ ಸೇರಿಸಿ ಕುಡಿದರೆ ಶೀತ, ಕೆಮ್ಮು ಮಾಯ.

3. ಮೈ ಕೈ ನೋವು ಕಡಿಮೆ ಮಾಡುತ್ತದೆ: ಮೈ ಕೈ ನೋವು ಕಡಿಮೆ ಮಾಡಲು ರಮ್ ಸಹಕಾರಿ. ಇದನ್ನು ಕುಡಿಯುವುದರಿಂದ ಮೂಳೆಗಳು ಖನಿಜಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.

ರಮ್ ಆರೋಗ್ಯಕರ ಗುಣಗಳು

ರಮ್ ಆರೋಗ್ಯಕರ ಗುಣಗಳು

4. ರೋಗ ನಿರೋಧಕ ಶಕ್ತಿ ಹೆಚ್ಚುವುದು

ಚಳಿಗಾಳಿಯಿಂದ ರಕ್ಷಣೆ ಸಿಗಲು ಸೈನಿಕರಿಗೆ ರಮ್‌ ನೀಡಲಾಗುವುದು, ಯಾರಿಗೆ ಕಡಿಮೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅವರು ಅಳತೆಯಲ್ಲಿ ರಮ್ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಚಳಿ ತುಂಬಾ ಇರುವಾಗ ರಮ್‌ ಮೈಯನ್ನು ಬೆಚ್ಚಗೆ ಇಡಲು ಸಹಾಯ ಮಾಡುತ್ತದೆ.

ಇದು ಗಾಯ ಒಣಗಿಸುವ ಗುಣ ಹೊಂದಿದೆ

ಗಾಯವಾಗಿದ್ದರೆ ಅದನ್ನು ರಮ್‌ ಬಳಸಿ ಸ್ವಚ್ಛ ಮಾಡಿದರೆ ಬ್ಯಾಕ್ಟಿರಿಯಾ ಉಂಟಾಗುವುದನ್ನು ತಡೆಗಟ್ಟಬಹುದು. ಅಲ್ಲದೆ ಗಾಯದ ನೋವು ಕೂಡ ಕಡಿಮೆಯಾಗುವುದು.

6. ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ

6. ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುತ್ತದೆ

ಯಾರು ನಿಯಮಿತವಾಗಿ ರಮ್ ಕುಡಿಯುತ್ತಾರೋ ಅಂಥ ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚುವುದು ಎಂದು ಅಧ್ಯಯನ ವರದಿ ಹೇಳಿದೆ.

7. ಗಾಲ್‌ಸ್ಟೋನ್ ಅಪಾಯ ತಡೆಗಟ್ಟುತ್ತದೆ

ಯಾರು ರಮ್‌ ಅನ್ನು ಮಿತವಾಗಿ ತೆಗೆದುಕೊಳ್ಳುತ್ತಾರೋ ಅವರಲ್ಲಿ ಗಾಲ್‌ಸ್ಟೋನ್ ಅಪಾಯ ಕಡಿಮೆ ಎಂದು ಅಧ್ಯಯನ ವರದಿ ಹೇಳಿದೆ. ದಿನಾ ಎರಡು ಔನ್ಸ್ ರಮ್ ಕುಡಿದರೆ ಆರೋಗ್ಯ ಹೆಚ್ಚುವುದು.

8. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ

ರಮ್ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು ಎಂದು ಅಧ್ಯಯನಗಳು ಹೇಳಿವೆ. ಇದು ಖಿನ್ನತೆ ಕೂಡ ಕಡಿಮೆ ಮಾಡುತ್ತದೆ. ತುಂಬಾ ಮಾನಸಿಕ ಒತ್ತಡವಿರುವಾಗ ರಮ್‌ ಕುಡಿದರೆ ತುಂಬಾ ರಿಲ್ಯಾಕ್ಸ್ ಅನಿಸುವುದು, ಆದರೆ ಮಿತಿ ಮೀರಬೇಡಿ. ಇದನ್ನು ನೀವು ಔಷಧಿ ರೀತಿ ಸೇವಿಸಿದರೆ ಮಾತ್ರ ಪ್ರಯೋಜನ.

ನೆನಪಿರಲಿ: ರಮ್‌ ಆರೋಗ್ಯಕ್ಕೆ ಒಳ್ಳೆಯದು ಆದರೆ ಯಾರು ಮಿತಿಯಲ್ಲಿ ಕುಡಿಯುತ್ತಾರೋ ಅವರಿಗೆ ಮಾತ್ರ, ಅತಿಯಾದರೆ ಆರೋಗ್ಯ ಹಾಳು, ದುಡ್ಡು ಹಾಳು ,ಮನೆ ನೆಮ್ಮದಿ ಹಾಳು.

English summary

Rum Jamun Or Gulab JaMonk? This Gulab Jamun Video Goes Viral

Rum Jamun Or Gulab JaMonk? : This unique taste video goes viral,
Story first published: Tuesday, December 27, 2022, 19:11 [IST]
X
Desktop Bottom Promotion