Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕೋವಿಡ್ 19 ಬಗ್ಗೆ ಮೂಡುವ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ
ಕೊರೊನಾ ವೈರಸ್‌ನಿಂದ ಬರುವ ಕೋವಿಡ್ 19 ಭೀತಿ ಜನರನ್ನು ಕಾಡುತ್ತಿದೆ. ಇದರ ಬಗ್ಗೆ ಆತಂಕ ಬೇಡ, ಎಚ್ಚರವಿರಲಿ ಎಂದು ಪ್ರತಿಯೊಂದು ದೇಶವೂ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಕೊರೊನಾ ವೈರಸ್ ಎಂದರೇನು? ಇದನ್ನು ತಡೆಗಟ್ಟುವುದು ಹೇಗೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ನೀಡಿದೆ.

ಕೊರೊನಾವೈರಸ್ ಎಂಬ ವೈರಸ್ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಕೊರೊನಾವೈರಸ್‌ನಲ್ಲಿ ಹಲವು ಬಗೆಗಳಿವೆ. ಎಲ್ಲಾ ವೈರಸ್ ಹಾನಿಕಾರಕವಲ್ಲ. ಆದರೆ ಈಗ ಕಾಣಿಸಿಕೊಂಡಿರುವ ನೋವೆಲ್ ಕೊರೊನಾ ವೈರಸ್ ತುಂಬಾ ಅಪಾಯಕಾರಿಯಾದ ವೈರಸ್ ಆಗಿದ್ದು ಇದು ಸೋಂಕು ತಗುಲಿದ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಉಸಿರಾಟ, ಸ್ಪರ್ಶ, ಅವರು ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದ ಹರಡುವುದು.
ಕೊರೊನಾ ವೈರಸ್ ಲಕ್ಷಣವೆಂದರೆ ಶೀತ, ಜ್ವರ, ತಲೆ ನೋವು, ತೀವ್ರ ಉಸಿರಾಟದ ತೊಂದರೆ. ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹಲವಾರು ಪ್ರಶ್ನೆಗಳಿವೆ, ಇಲ್ಲಿ ನಾವು ಕೋವಿಡ್ 19 ಬಗ್ಗೆ ಜನರಲ್ಲಿ ಮೂಡುವ ಪ್ರಶ್ನೆಗಳಿಗೆ ಹೆಚ್ಚಿನ ಮಾಹಿತಿ ನೀಡಿದ್ದೇವೆ ನೋಡಿ.

ನೋವೆಲ್ ಕೊರೊನಾ ವೈರಸ್ ಎಂದರೇನು?
ನೋವೆಲ್ ಕೊರೊನಾ ವೈರಸ್ ಎಂಬುವುದು ಕೊರೊನಾ ವೈರಸ್‌ನ ಒಂದು ಬಗೆಯಾಗಿದ್ದು ಈ ವೈರಸ್ ಇತ್ತೀಚೆಗಷ್ಟೇ ಚೀನಾದ ವುಹಾನ್‌ನಲ್ಲಿ ಮೊದಲಿಗೆ ಪತ್ತೆಯಾಯಿತು. ಈ ವೈರಸ್ ಹೇಗೆ ತಡೆಗಟ್ಟಬಹುದು ಎಂಬುವುದನ್ನು ಇದುವರೆಗೆ ಕಂಡು ಹಿಡಿದಿಲ್ಲ. ಈ ವೈರಸ್ ತಡೆಗಟ್ಟಲು ವಿಜ್ಞಾನಿಗಳು ಹಾಗೂ ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಈ ವೈರಸ್ ಅನ್ನು 2019-nCoV ಎಂದು ಗುರುತಿಸಲಾಗಿದೆ.

2. SARS-CoV (ಸಾರ್ಸ್-Cov)
SARS-CoV ಅಂದರೆ ತೀವ್ರ ಉಸಿರಾಟ ತೊಂದರೆಯ ಕೊರೊನಾವೈರಸ್ (Severe Acute respiratory Syndrome Coronavirus). ಸಾರ್ಸ್ ಎಂಬ ಮಾರಾಣಾಂತಿಕ ವೈರಸ್ 2002ರಲ್ಲಿ ಚೀನಾ ಹಾಗೂ ಪ್ರಪಂಚದ ಇತರ ಕಡೆ ಹಲವಾರು ಜನರನ್ನು ಬಲಿ ತೆಗೆದಿದೆ. ಈ ವೈರಸ್ ಬಾವಲಿಗಳ ಮುಖಾಂತರ ಹರಡುತ್ತಿದ್ದೆವು.

3. ಕೊರೊನಾ ವೈರಸ್ ಸಾರ್ಸ್ ರೀತಿಯ ರೋಗವೇ?
2019 ಡಿಸೆಂಬರ್‌ನಲ್ಲಿ ಕಾಣಿಸಿಕೊಂಡ 2019-nCoVಗೂ 2002ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್-CoV ವೈರಸ್‌ಗೂ ಸಂಬಂಧವಿಲ್ಲ. ಆದರೆ ಈ ಎರಡೂ ವೈರಸ್ ಸಾರ್ಸ್ ಕುಟುಂಬಕ್ಕೆ ಸೇರಿದ ವೈರಸ್‌ಗಳಾಗಿವೆ.

4.ಕೊರೊನಾ ವೈರಸ್ ಎಷ್ಟು ಅಪಾಯಕಾರಿ?
ಕೊರೊನಾ ವೈರಸ್ ಎಲ್ಲವೂ ಅಪಾಯಕಾರಿಯಲ್ಲ. ಆಲ್ಭಾ ಕೊರೊನಾವೈರಸ್ (ಇದರಲ್ಲಿ NL63 ಮತ್ತು 229E ಎಂಬ ಎರಡು ವಿಧವಿದೆ) ಮತ್ತು ಬೀಟಾ ಕೊರೊನಾವೈರಸ್ (ಇದರಲ್ಲಿ HKU1ಮತ್ತು OC43 ಎಂಬ ಎರಡು ವಿಧಗಳಿವೆ) ಕಾಣಿಸಿದರೆ ಸ್ವಲ್ಪ ಮಟ್ಟಿಗೆ ಆರೋಗ್ಯ ಸಮಸ್ಯೆ ಕಂಡು ಬರುವುದು ಅಷ್ಟೇ. ಆದರೆ SARS-CoV ಮತ್ತು MERS-CoV ಬಗೆಯ ಕೊರೊನಾ ವೈರಸ್ ಬಂದರೆ ಸಾವು ಕೂಡ ಸಂಭವಿಸಬಹುದು. ಈಗ ಕಾಣಿಸಿರುವ ಮಾರಕ ಕೊರೊನಾ ವೈರಸ್ SARS ಕುಟುಂಬಕ್ಕೆ ಸೇರಿರುವುದರಿಂದ ಅಪಯ ತೀವ್ರತೆ ಹೆಚ್ಚಾಗಿದೆ.

5. ಯಾರಿಗೆ ಕೊರೊನಾ ವೈರಸ್ ಅಪಾಯ ಹೆಚ್ಚು?
ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ, ಇನ್ನು ಮಧುಮೇಹ, ಉಸಿರಾಟದ ತೊಂದರೆ ಇರುವವರು ಕೊರೊನಾ ವೈರಸ್ ದಾಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ವೈರಸ್ ಬೇಗನೆ ಸೋಂಕುವುದು.

6. ನೋವೆಲ್ ಕೊರೊನಾ ವೈರಸ್ ಪ್ರಾಣಿಗಳ ಮೂಲದಿಂದ ಹರಡುತ್ತದೆಯೇ?
ಈ ಬಗೆಯ ಸೋಂಕಿನ ಇತಿಹಾಸ ನೋಡಿದಾಗ ಸಾರ್ಸ್-CoV ಮತ್ತು MER-CoV ಸೋಂಕಾಣುಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ. 2002ರಲ್ಲಿ ಕಂಡು ಬಂದ ಸಾರ್ಸ್ ರೋಗ ಬಾವಲಿಗಳಿಂದ ಹಾಗೂ ಬೆಕ್ಕಿನಿಂದ ಹರಡಿತು. MER-CoV ಸೋಂಕಾಣು ಅರಬ್ಬಿಯ ಒಂಟೆಗಳ ಮೂಲಕ ಮನುಷ್ಯನಿಗೆ ಹರಡಿತು.
ಈಗ ಕಂಡು ಬಂದಿರುವ ನೋವೆಲ್ ಕೊರೊನಾ ವೈರಸ್ ಸಮುದ್ರಾಹಾರಗಳಿಂದ ಹರಡಿರಬಹುದು ಎಂದು ಹೇಳಲಾಗುತ್ತಿದೆ. ಚೀನಾದ ವುಹಾನ್‌ನ ಮೀನು ಮಾರುಕಟ್ಟೆಯಿಂದ ಈ ರೋಗ ಹರಡಲಾರಂಭಿಸಿತು. ನಂತರ ಈಗ ಈ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡಲಾರಂಭಿಸಿದೆ. ಚೀನಾದಲ್ಲಿ ಮಾಂಸದ ಮಾರುಕಟ್ಟೆಗೆ ಹೋದರೆ ಕೈಯಿಂದ ಮಾಂಸ ಮುಟ್ಟುವುದು ಅಥವಾ ಪ್ರಾಣಿಗಳನ್ನು ಮುಟ್ಟುವುದು ಮಾಡಬೇಡಿ ಎಂಬ ಎಚ್ಚರಿಕೆ ನೀಡಲಾಗಿದೆ.
ಬೇಯಿಸದ ಮೊಟ್ಟೆ ಹಾಗೂ ಮಾಂಸಗಳನ್ನು ತಿನ್ನದಂತೆ ಎಚ್ಚರಿಕೆ ನೀಡಲಾಗಿದೆ. ಮಾಂಸ, ಮೀನು, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಬಳಸಬೇಕು.

7. ನೋವೆಲ್ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆಯೇ?
ಹೌದು, ಈ ಕೊರನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದು ಉಸಿರಾಟದ ಮುಖಾಂತರ ಹರಡುತ್ತದೆ, ಸೋಂಕಿರುವ ವ್ಯಕ್ತಿಯನ್ನು ಮುಟ್ಟುವುದರಿಂದ ಹರಡುತ್ತದೆ. ಸೋಂಕಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಸೋಂಕಾಣುಗಳಲ್ಲಿ ಗಾಳಿಯ ಮುಖಾಂತರ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ. ಇದರಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲುವುದು. ಸೋಂಕು ಇರುವ ವ್ಯಕ್ತಿ ಮಾಸ್ಕ್ ಧರಿಸಬೇಕು ಹಾಗೂ ಕೊರೊನಾ ವೈರಸ್ ಸೋಕಿದ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಚಿಕಿತ್ಸೆ ನೀಡುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತಿದೆ.

8. ಕೊರೊನಾವೈರಸ್ ಸೋಂಕು ಇರುವ ವ್ಯಕ್ತಿ ಮಾಸ್ಕ್ ಧರಿಸದೆ ಕೆಮ್ಮಿದಾಗ, ಸೀನಿದಾಗ ಏನಾಗುತ್ತದೆ?
ಕೊರೊನಾವೈರಸ್ ಸೋಂಕಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ರೋಗಾಣುಗಳು ಆ ವ್ಯಕ್ತಿಯಿದ್ದ ಪ್ರದೇಶದ ವಸ್ತುಗಳ ಮೇಲೆ ಕೂರುತ್ತದೆ. ಆ ವಸ್ತುವನ್ನು ಇತರರು ಮುಟ್ಟುವುದರಿಂದ ಅವರಿಗೆ ರೋಗ ಹರಡುತ್ತದೆ. ಈ ರೀತಿ ರೋಗ ಹರಡುತ್ತದೆ.

9. ವಸ್ತುವಿನ ಮೇಲೆ ರೋಗಾಣು ಎಷ್ಟು ಸಮಯ ಜೀವಿಸಿರುತ್ತದೆ?
ಕೊರೊನಾ ವೈರಸ್ ಒಂದು ವಸ್ತುವಿನ ಮೇಲೆ ಎಷ್ಟು ಸಮಯ ಜೀವಿಸಿರುತ್ತದೆ ಎಂಬುವುದು ಇನ್ನ ಪತ್ತೆಯಾಗಿಲ್ಲ. ಕೆಲವೊಂದು ಮಾಹಿತಿ ಪ್ರಕಾರ ಕೊರೊನಾ ವೈರಸ್ ಕೆಲವು ಗಂಟೆಗಳವರೆಗೆ ಜೀವಿಸಿರುತ್ತದೆ. ಆ ಸ್ಥಳವನ್ನು ಸ್ವಚ್ಛ ಮಾಡುವುದರಿಂದ ಸಾಯಬಹುದು ಎನ್ನಲಾಗುತ್ತದೆ.

10. ಜ್ವರ ಹಾಗೂ ಕೊರೊನಾ ವೈರಸ್ ಲಕ್ಷಣ ಹೇಗೆ ಭಿನ್ನವಾಗಿರುತ್ತದೆ?
ಜ್ವರ ಬಂದಾಗ ಅಥವಾ ಕೊರೊನಾ ವೈರಸ್ ಬಂದಾಗ ಲಕ್ಷಣಗಳು ಒಂದೇ ರೀತಿ ಇರುತ್ತದೆ. ಆದ್ದರಿಂದ ರಕ್ತ ಪರೀಕ್ಷೆ ಮಾಡದೆ ಹೊರತು ಪತ್ತೆ ಹಚ್ಚಲು ಸಾಧ್ಯವಿಲ್ಲ. ಕೊರೊನಾ ವೈರಸ್ ಬಂದಾಗಲೂ ಶೀತ, ಜ್ವರ, ಕೆಮ್ಮು, ಸೀನು, ಉಸಿರಾಟದ ಲಕ್ಷಣಗಳು ಕಂಡು ಬರುವುದು.

11. ಕೊರೊನಾ ವೈರಸ್ ಸೋಂಕು ದೇಹದಲ್ಲಿ ಉಲ್ಬಣವಾಗಲು ತೆಗೆದುಕೊಳ್ಳುವ ಸಮಯ?
ವೈದ್ಯಕೀಯ ತಜ್ಞರ ಪ್ರಕಾರ ಕೊರೊನಾ ವೈರಸ್ ದೇಹವನ್ನು ಸೇರಿದರೆ ಆ ರೋಗದ ಸಂಪೂರ್ಣ ಲಕ್ಷಣಗಳು ಗೋಚರಿಸಲು 14 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದಲೇ ಯಾರಿಗಾದರೂ ಕೊರೊನಾ ವೈರಸ್ ತಗುಲಿದೆ ಎಂದು ಸಂಶಯ ಬಂದರೆ 14 ದಿನಗಳ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಿ, ಅವರ ದೇಹ ಸ್ಥಿತಿಯನ್ನು ಪರೀಕ್ಷಿಸಲಾಗುವುದು.

12. ಚೀನಾದಿಂದ ವಸ್ತು ತರಿಸಿದರೆ ರೋಗ ಬರಬಹುದಾ?
ಇಲ್ಲಾ, ಈ ವೈರಸ್ ವಸ್ತುವಿನ ಮೇಲೆ ತುಂಬಾ ಸಮಯ ಬದುಕಿರುವುದಿಲ್ಲ, ಆದ್ದರಿಂದ ಪ್ಯಾಕೇಜ್ ವಸ್ತುವಿನ ಮೂಲಕ ರೋಗ ಹರಡಲು ಸಾಧ್ಯವಿಲ್ಲ.

13. ಆ್ಯಂಟಿ ಬಯೋಟಿಕ್ ಏಕೆ ಪ್ರಯೋಜವಾಗಲ್ಲ?
ಬ್ಯಾಕ್ಟಿರಿಯಾದಿಂದ ಹರಡುವ ರೋಗವಾದರೆ ಆ್ಯಂಟಿ ಬಯೋಟಿಕ್ ಕೆಲಸ ಮಾಡುತ್ತದೆ, ಆದರೆ ವೈರಸ್ ಚಿಕಿತ್ಸೆಗೆ ಆ್ಯಂಟಿ ಬಯೋಟಿಕ್ ಪ್ರಭಾವ ಬೀರುವುದಿಲ್ಲ. ಕೊರೊನಾ ವೈರಸ್ ರೋಗವನ್ನು ಆ್ಯಂಟಿ ಬಯೋಟಿಕ್ ಬಳಸಿ ಗುಣಪಡಿಸಲು ಸಾಧ್ಯವಿಲ್ಲ.

14, ಕೊರೊನಾ ವೈರಸ್‌ಗೆ ಯಾವ ಚಿಕಿತ್ಸೆ ಒಳ್ಳೆಯದು?
ಇದುವರೆಗೆ ಈ ಭಯಾನಕ ವೈರಸ್ ತಡೆಗಟ್ಟಲು ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಸದ್ಯಕ್ಕಿರುವ ಆಯ್ಕೆಯೆಂದರೆ ಈ ರೋಗ ಹರಡದಂತೆ ತಡೆಗಟ್ಟುವುದು. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸಿ, ಇದನ್ನು ತಡೆಗಟ್ಟಬೇಕಾಗಿದೆ. ಥಾಯ್ಲೆಂಡ್‌ನಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ ವ್ಯಕ್ತಿಗೆ ಹೆಚ್‌ಐವಿ ಹಾಗೂ ಜ್ವರಕ್ಕೆ ನೀಡುವ ಔಷಧಿ ಮಿಶ್ರ ಮಾಡಿ ನೀಡಿದಾಗ 48 ಗಂಟೆಗಳಲ್ಲಿ ವ್ಯಕ್ತಿ ಗುಣಮುಖವಾಗಿರುವ ವರದಿಗಳು ಬಂದಿದ್ದೆವು. ಆದರೆ ಕೊರೊನಾ ವೈರಸ್‌ಗೆ ಚಿಕಿತ್ಸೆ ಏನು ಕೊಡಬೇಕೆಂದು ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ.



Click it and Unblock the Notifications