Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ರಾಸಾಯನಿಕ ಹಾಕಿದ ಮಾವಿನಹಣ್ಣು ಕಂಡು ಹಿಡಿಯುವುದು ಹೇಗೆ?
ಈಗೆಲ್ಲಾ ಮಾರುಕಟ್ಟೆಗೆ ಹೋಗಿ ಏನೇ ತರಲಿ ನಾವು ಒಂದು ಕ್ಷಣ ಯೋಚಿಸಬೇಕಾಗಿದೆ, ಏಕೆಂದರೆ ಈಗ ಹಣ್ಣುಗಳು ಹಾಗೂ ತರಕಾರಿಗಳಿಗೆ ರಾಸಾಯನಿಕಗಳನ್ನು ಸಿಂಪಡಿಸದೆ ಮಾರುಕಟ್ಟೆಗೆ ಬರುತ್ತದೆ ಎಂದರೆ ಅದನ್ನು ನಂಬುವುದು ಸ್ವಲ್ಪ ಕಷ್ಟವೇ...

ಏಕೆಂದರೆ ಒಂದು ಆ ಹಣ್ಣು ಅಥವಾ ತರಕಾರಿಗಳು ಹೆಚ್ಚು ಕಾಲ ತಾಜಾತನದಿಂದ ಕೂಡಿರಲಿ ಎಂಬ ಉದ್ದೇಶದಿಂದ, ಇಲ್ಲಾ ಹಣ್ಣುಗಳಾದರೆ ಅವುಗಳು ಬೇಗ ಹಣ್ಣಾಗಲಿ ಎಂದು ರಾಸಾಯನಿಕಗಳನ್ನು ಬಳಸುತ್ತಿದ್ದಾರೆ.
ಇಲ್ಲಿ ಮಾವಿನಹಣ್ಣಿಗೆ ರಾಸಾಯನಿಕ ಸಿಂಪಡಿಸಿದಾರೆಯೇ ಅಥವಾ ಇಲ್ಲವೇ ಎಂಬುವುದು ಕಂಡು ಹಿಡಿಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಸೀಸನಲ್ ಫ್ರೂಟ್ ಮಾವಿನಹಣ್ಣು ಇಷ್ಟ ಪಡದವರು ಯಾರು, ಭಿನ್ನ-ಭಿನ್ನ ರುಚಿಯಲ್ಲಿ ದೊರೆಯುವ ವಿವಿಧ ತಳಿಯ ಮಾವಿನಹಣ್ಣುಗಳನ್ನು ನೋಡಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಆದರೆ ಹೀಗೆ ಸಿಗುವ ಮಾವಿನಹಣ್ಣುಗಳಲ್ಲಿ ಕೆಲವೊಂದು ಮಾವಿನಹಣ್ಣುಗಳಲ್ಲಿ ವಿಷಕಾರಕ ರಾಸಾಯನಿಕಗಳಿರುತ್ತವೆ. ಹಣ್ಣುಗಳ ಸಿಪ್ಪೆ ಕಲರ್‌ಫುಲ್ ಆಗಿ ಕಾಣಲಿ ಅಥವಾ ಬೇಗನೆ ಹಣ್ಣಾಗಲಿ ಎಂದು ಕೆಲ ವ್ಯಾಪಾರಸ್ಥರು ಈ ರೀತಿಯ ರಾಸಾಯನಿಕಗಳನ್ನು ಬಳಸುತ್ತಾರೆ.

ಮಾವಿನ ಹಣ್ಣಿನಲ್ಲಿರುವ ರಾಸಾಯನಿಕಗಳಿಂದ ಆಗುವ ತೊಂದರೆಗಳು
ಮಾವುಗಳಿಗೆ ಕ್ಯಾಲ್ಸಿಯಂ ಕಾರ್ಬೈಡ್, ಪಾಸ್ಪರ್ಸ ಹೈಡ್ರೈಡ್ ಈ ರೀತಿಯ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ, ಇಂಥ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಒಳಿತಾಗುವ ಬದಲು ಹಾನಿಯಾಗುವುದೇ ಹೆಚ್ಚು. ಇವುಗಳನ್ನು ತಿನ್ನುವುದರಿಂದ ತಲೆಸುತ್ತು, ಹೊಟ್ಟೆ ಹಾಳಾಗುವುದು, ಕ್ಯಾನ್ಸರ್‌ನಂಥ ಮಾರಕ ರೋಗಗಳೂ ಬರುತ್ತವೆ.
ನೀವು ತಂದ ಮಾವಿನ ಹಣ್ಣುಗಳಲ್ಲಿ ರಾಸಾಯನಿಕ ಸಿಂಪಡಿಸಿದೆಯೇ ಎಂದು ಪತ್ತೆ ಹಚ್ಚುವುದು ಹೇಗೆ? ಇದು ತುಂಬಾ ಸುಲಭ ಈ ವಿಧಾನಗಳನ್ನು ಅನುಸರಿಸಿ.

ಸರಳವಾದ ವಿಧಾನ:
ಒಂದು ಬಕೆಟ್‌ನಲ್ಲಿ ನೀರು ಹಾಕಿ ಅದರಲ್ಲಿ ಮಾವಿನಹಣ್ಣುಗಳನ್ನು ಹಾಕಿ, ಮಾವಿನಹಣ್ಣುಗಳು ತೇಲುತ್ತಿದ್ದರೆ ಅವುಗಳಿಗೆ ರಾಸಾಯನಿಕ ಸಿಂಪಡಿಸಿದ್ದಾರೆ ಎಂದು ಹೇಳಬಹುದು.
ಇನ್ನು ಈ ರೀತಿಯೂ ಪರೀಕ್ಷಿಸಿ...

ಬಣ್ಗ
ರಾಸಾಯನಿಕ ಹಾಕಿ ಹಣ್ಣು ಮಾಡಿದ್ದರೆ ಅವುಗಳ ತೊಟ್ಟು ನೋಡಿದರೆ ಗೊತ್ತಾಗುತ್ತದೆ, ತೊಟ್ಟಿನ ಭಾಗ ಹಸಿರು ಇರುತ್ತದೆ, ಉಳಿದ ಭಾಗ ತುಂಬಾ ಆಕರ್ಷಕ ಬಣ್ಣದಿಂದ ಕೂಡಿರುತ್ತದೆ. ಇನ್ನು ನಿಮ್ಮ ಮನೆಯಲ್ಲಿ ಮಾವಿನ ಗಿಡವಿದ್ದರೆ ಗಮನಿಸಿರಬಹುದು ಮಾರುಕಟ್ಟೆಯಲ್ಲಿ ದೊರೆಯುವಷ್ಟು ಆಕರ್ಷಕ ಬಣ್ಣ ತೋಟದ ಮಾವಿನ ಗಿಡದಲ್ಲಿಯೇ ಹಣ್ಣಾದ ಮಾವಿಗೆ ಇರಲ್ಲ.

ರುಚಿ
ಕೃತಕವಾಗಿ ಹಣ್ಣು ಮಾಡಿದ್ದರೆ ಆ ಹಣ್ಣುಗಳ ರುಚಿಯಲ್ಲಿ ವ್ಯತ್ಯಾಸವಿರುತ್ತದೆ. ನೈಸರ್ಗಿಕವಾಗಿ ಹಣ್ಣಾಗಿದ್ದರೆ ಹಣ್ಣಿನ ರುಚಿಯೇ ಬೇರೆ, ಕೃತಕವಾಗಿ ಹಣ್ಣಾಗಿದ್ದರೆ ಕತ್ತರಿಸಿ ತಿನ್ನುವಾಗ ಸ್ವಲ್ಪ ಹುಳಿ-ಹುಳಿ ಅಧಿಕವೇ ಇರುತ್ತದೆ. ಇನ್ನು ಕೆಲವೊಮ್ಮೆ ನಿಮಗೆ ಬಾಯಿ ಉರಿ ಕೂಡ ಉಂಟಾಗುವುದು.

ರಸ ಕಡಿಮೆ
ಕೃತಕವಾಗಿ ಹಣ್ಣು ಮಾಡಿದ್ದರೆ ಅವುಗಳಲ್ಲಿ ಅಧಿಕ ರಸ ಇರುವುದಿಲ್ಲ. ಇನ್ನು ಇಂಥ ಮಾವಿನಹಣ್ಣಿಗಳಿಂದ ಜ್ಯೂಸ್ ಮಾಡಿದರೂ ಅದು ರುಚಿಕರವಾಗಿರುವುದಿಲ್ಲ. ಬಣ್ಣ ಮಾತ್ರ ಆಕರ್ಷಕವಾಗಿರುತ್ತದೆ.
ಆದ್ದರಿಂದ ಮಾರುಕಟ್ಟೆಯಲ್ಲಿರುವ ಹಣ್ಣುಗಳನ್ನು ಕೊಳ್ಳುವಾಗ ಈ ಅಂಶಗಳನ್ನು ಗಮನಿಸಿ.



Click it and Unblock the Notifications
