Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Deepavali Health tips: ಪಟಾಕಿಗಳ ವಿಷಕಾರಿ ಹೊಗೆ ಉಸಿರಾಟದ ಸಮಸ್ಯೆಯ ಅಪಾಯ ಹೆಚ್ಚಿಸುತ್ತದೆ ಎಚ್ಚರ..!
ದೀಪಾವಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ವಿಶ್ವಾದ್ಯಂತ ಹಿಂದೂಗಳು ಆಚರಿಸುವ ಅತಿದೊಡ್ಡ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ಎಷ್ಟಿರುತ್ತದೆಯೋ ಅಷ್ಟೇ ಭಯ ಕೂಡ ಹಬ್ಬ ಆವರೊಸುತ್ತದೆ ಇದಕ್ಕೆ ಕಾರಣ ಪಟಾಕಿಯಿಂದಾಗುವ ಮಾಲಿನ್ಯ.

ಹೌದು ದೀಪಾವಳಿ ಹಬ್ಬದ ಸಮಯದಲ್ಲಿ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ದೀಪಗಳನ್ನು ಹಚ್ಚಿ ಪಟಾಕಿ ಹೊಡೆಯುವ ಸಂಭ್ರಮ. ಆದರೆ ಈ ಸಂಭ್ರಮ ಈಗಾಗಲೇ ಅನಾರೋಗ್ಯದಿಂದ ಬಲುತ್ತಿರುವವರು, ಉಸಿರಾಟದ ಸಮಸ್ಯೆ ಎದುರಿಸುತ್ತರುವವರಿಗೆ ಇನ್ನಷ್ಟು ಅನಾರೋಗ್ಯ ಕಾಡುವ ಸಮಯ.
ಪಟಾಕಿಗಳು ಬಹಳಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪಟಾಕಿಗಳು ಹೊರಸೂಸುವ ವಿಷಕಾರಿ ಹೊಗೆಯು ಕೋವಿಡ್ ಸೋಂಕಿತರಿಗೆ ಅಥವಾ ಅದಕ್ಕೆ ಗುರಿಯಾಗುವವರಿಗೆ ಸಂಕೀರ್ಣತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಆಸ್ತಮಾ, ದೀರ್ಘಕಾಲದ ಶ್ವಾಸಕೋಶದ ಅಸ್ವಸ್ಥತೆಗಳು, ಕೆಮ್ಮುವಿಕೆ, ಉಬ್ಬಸ, ಎದೆ ಬಿಗಿತ ಮತ್ತು ಇತರ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ತಜ್ಞರ ಪ್ರಕಾರ, ದೀಪಾವಳಿಯ ಸಮಯದಲ್ಲಿ ನಿಮ್ಮ ಶ್ವಾಸಕೋಶವನ್ನು ರಕ್ಷಿಸಲು ನೀವು ಏನು ಮಾಡಬೇಕು:

1. ಪರಿಸರ ಸ್ನೇಹಿ ಆಯ್ಕೆ ಮಾಡಿ
* ಮನೆಯೊಳಗೆ ಮೇಣದಬತ್ತಿಗಳನ್ನು ಬೆಳಗಿಸುವುದನ್ನು ಮತ್ತು ಪಟಾಕಿ ಹಚ್ಚುವುದನ್ನು ತಪ್ಪಿಸಿ, ಇದು ಒಳಾಂಗಣ ಮಾಲಿನ್ಯವನ್ನು ನಿಯಂತ್ರಣದಲ್ಲಿಡುತ್ತದೆ. ಇದಕ್ಕೆ ಬದಲಾಗಿ ನೀವು ಎಲ್ಇಡಿ ದೀಪಗಳನ್ನು ಅಥವಾ ಟೆರಾಕೋಟಾ ದೀಪಗಳನ್ನು ಬಳಸಿ, ಏಕೆಂದರೆ ಅವು ಪರಿಸರಕ್ಕೆ ಉತ್ತಮವಾದ ಪರಿಸರ ಸ್ನೇಹಿ ಆಯ್ಕೆಗಳಾಗಿವೆ. ಆದಾಗ್ಯೂ, ಅತಿಯಾದ ಬೆಳಕು ಪರಿಸರ ಮಾಲಿನ್ಯಕ್ಕೆ ಕಾರಣವಾಗಬಹು.
* ಉಸಿರಾಟದ ಸಮಸ್ಯೆ ಇರುವವರು ಪಟಾಕಿ ಸಿಡಿಸುವ ಸ್ಥಳಗಳನ್ನು ತಪ್ಪಿಸಿ, ಕಾರಣ ಇದುಹಾನಿಕಾರಕ ರಾಸಾಯನಿಕಗಳನ್ನು ಹೊರಸೂಸುತ್ತದೆ.
* ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸಿ. ಉಸಿರಾಟ ವ್ಯವಸ್ಥೆಗೆ ಹೊಗೆ ಬರದಂತೆ ತಡೆಯುವ ಮಾಲಿನ್ಯ-ವಿರೋಧಿ ಫೇಸ್ ಮಾಸ್ಕ್ ಅನ್ನು ಆರಿಸಿಕೊಳ್ಳಿ.
* ತುಂಬಾ ಉಸಿರುಗಟ್ಟಿಸುವುದನ್ನು ತಪ್ಪಿಸಲು ಸಾಧ್ಯವಾದರೆ, ಹವಾನಿಯಂತ್ರಣದೊಂದಿಗೆ ಮನೆಯೊಳಗೆ ಇರಲು ಪ್ರಯತ್ನಿಸಿ.

2. ಏರ್ ಪ್ಯೂರಿಫೈಯರ್ ಬಳಸಿ
* ಏರ್ ಪ್ಯೂರಿಫೈಯರ್‌ಗಳು ಇದ್ದರೆ ಈ ಸಮಯದಲ್ಲಿ ಕಡ್ಡಾಯವಾಗಿ ಬಳಸಿ. ಇದು ಪ್ರಸ್ತುತ ಸಂದರ್ಭಗಳಲ್ಲಿ ಬಹಳ ಉಪಯುಕ್ತವಾಗಿದೆ. ಏರ್ ಪ್ಯೂರಿಫೈಯರ್‌ಗಳು ಒಳಾಂಗಣ ಗಾಳಿಯಿಂದ ಮಾಲಿನ್ಯಕಾರಕಗಳು, ವಿಷಗಳು ಮತ್ತು ಅಲರ್ಜಿನ್ಗಳನ್ನು ಫಿಲ್ಟರ್ ಮಾಡುತ್ತವೆ.
* ಈಗಾಗಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ದೀಪಾವಳಿಯ ಸಮಯದಲ್ಲಿ ತಮ್ಮ ತುರ್ತು ಔಷಧಿಗಳು, ನೆಬ್ಯುಲೈಜರ್‌ಗಳು ಮತ್ತು ಇತರ ವೈದ್ಯಕೀಯ ಕಿಟ್‌ಗಳನ್ನು ಸದಾ ಜೊತೆಯಲ್ಲೇ ಇಟ್ಟುಕೊಳ್ಳಿ. ಯಾವುದೇ ರೀತಿಯ ಸಮಸ್ಯೆ ಎದುರಾದರೆ ಕೂಡಲೇ ಔಷಧಿಯನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.
* ನೀವು ಆಸ್ತಮಾ ಅಥವಾ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮೊಂದಿಗೆ ಇನ್ಹೇಲರ್ ಅನ್ನು ಇಟ್ಟುಕೊಳ್ಳಿ.

3. ಹಸಿರು ಪಟಾಕಿ
* ಹಸಿರು ಪಟಾಕಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ, ಅವುಗಳು ದೀಪಾವಳಿಗೆ ಸಂಬಂಧಿಸಿದ ಮಾಲಿನ್ಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿವೆ. ಈ ಕ್ರ್ಯಾಕರ್‌ಗಳು ಗಾಳಿಯಲ್ಲಿನ ಕಣಗಳನ್ನು ಮತ್ತು ಹಾನಿಕಾರಕ ಅನಿಲಗಳನ್ನು ಶೇಕಡಾ 30 ರಿಂದ 40 ರಷ್ಟು ಕಡಿಮೆ ಮಾಡುತ್ತದೆ.
* ದೀಪಾವಳಿಯ ಸಮಯದಲ್ಲಿ ವ್ಯಾಯಾಮವನ್ನು ತಪ್ಪಿಸಬೇಕು, ಏಕೆಂದರೆ ಈ ಸಮಯದಲ್ಲಿ ಆಳವಾಗಿ ಉಸಿರಾಡಿದರೆ ಧೂಳಿನ ಗಾಳಿಯಿಂದ ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು.

4. ಆಹಾರದ ಬಗ್ಗೆ ಕಾಳಜಿವಹಿಸಿ
* ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಪೌಷ್ಟಿಕ ಆಹಾರವನ್ನು ಸೇವಿಸಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು.
* ಹೈಪರ್ ಆಸಿಡಿಟಿಯನ್ನು ತಡೆಯಲು ಮತ್ತು ಹೈಡ್ರೇಟ್ ಆಗಿರಲು ಸಾಕಷ್ಟು ನೀರು ಕುಡಿಯಿರಿ.
* ನಿರಂತರ ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು.



Click it and Unblock the Notifications