ಕಡಿಮೆ ಸೋಡಿಯಂ ಪಥ್ಯವನ್ನು ಪಾಲಿಸುವುದು ಹೇಗೆ?

By ಲೇಖಕ

ಅಧ್ಯಯನಗಳು ಮತ್ತು ಸಂಶೋಧನೆಗಳ ಪ್ರಕಾರ ಒಬ್ಬ ಆರೋಗ್ಯವಂತ ವಯಸ್ಕ ದಿನವೊಂದಕ್ಕೆ 1500ಮಿಲಿಗ್ರಾಂ ಗಿಂತಲೂ ಕಡಿಮೆ ಸೋಡಿಯಂ ಅನ್ನು ಬಳಸಬೇಕು. ದುರಾದೃಷ್ಟವೆಂದರೆ ಪ್ರತಿಯೊಬ್ಬರೂ ಪ್ರತಿದಿನ 3000ಮಿಲಿಗ್ರಾಂಗಿಂತಲೂ ಹೆಚ್ಚು ಸೋಡಿಯಂ ಅನ್ನು ಬಳಸುತ್ತಾರೆ. ಇದರ ಪರಿಣಾಮವಾಗಿ ಹಾರ್ಟ್ ಅಟ್ಯಾಕ್, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ರಕ್ತನಾಳಗಳ ತೊಂದರೆ ಕಾಣಿಸಿಕೊಳ್ಳುತ್ತದೆ. ಕೇವಲ ಒಂದೇ ಒಂದು ಟೀ ಚಮಚೆಯಷ್ಟು ಉಪ್ಪಿನಲ್ಲಿ ಸರಿಸುಮಾರು 2000ಎಂಜಿಯಷ್ಟು ಸೋಡಿಯಂ ಇರುತ್ತದೆ ಮತ್ತು ಇದರಿಂದಾಗಿ ಫಾಸ್ಟ್ ಫುಡ್ ಸೆಂಟರ್ ನಲ್ಲಿ ಒಂದೇ ಒಮದು ತಿಂಡಿ ತೆಗೆದುಕೊಂಡರೂ ಇಷ್ಟು ಪ್ರಮಾಣದ ಸೋಡಿಯಂ ನಮ್ಮ ದೇಹ ಸೇರುತ್ತದೆ.

ಸೋಡಿಯಂ ಪ್ರಮಾಣದ ನಿರಂತರ ಹೆಚ್ಚಳ ಅತಿಒತ್ತಡ ಮತ್ತು ನಿಶ್ಯಕ್ತಿಯ ಸ್ಥಿತಿಗಳನ್ನು ಹೊಂದಿದ್ದು, ಸಾಧ್ಯವಿದ್ದಷ್ಟು ನಾವು ತೆಗೆದುಕೊಳ್ಳುವ ಸೋಡಿಯಂ ಪ್ರಮಾಣದಲ್ಲಿ ನಿಯಂತ್ರಣವಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ತೀಕ್ಷ್ಣವಾದ ಸೋಡಿಯಂನ ಅತಿಯಾದ ಪ್ರಮಾಣದಿಂದಾಗಿ ತಕ್ಷಣದ ಅನಾರೋಗ್ಯಕರ ಲಕ್ಷಣಗಳಾದ ಒಡಕು, ತುಟಿಗಳಲ್ಲಿ ರಕ್ತಸ್ರಾವ, ನಾಸಿಯಾ ಅತಿಯಾದರೆ ಸಾವೂ ಕೂಡ ಸಂಭವಿಸಬಹುದು. ನಿಮ್ಮ ಪಥ್ಯದಲ್ಲಿ ನೀವು ಸೋಡಿಯಂ ಪ್ರಮಾಣ ಕಡಿಮೆಗೊಳಿಸಬೇಕು ಇಲ್ಲವೇ ನಿಲ್ಲಿಸಬೇಕೆಂದಿದ್ದರೆ ಇಲ್ಲಿವೆ ಕೆಲವೊಂದಿಷ್ಟು ಸಲಹೆಗಳು:

ಅಡುಗೆಯಲ್ಲಿ ಉಪ್ಪಿನಂಶ ಕಡಿಮೆ ಮಾಡುವ ತಂತ್ರ

ಅಡುಗೆಯಲ್ಲಿ ಉಪ್ಪಿನಂಶ ಕಡಿಮೆ ಮಾಡುವ ತಂತ್ರ

ನಿಮ್ಮ ಆಹಾರವನ್ನು ಅದರ ನೈಸರ್ಗಿಕ ಅಥವಾ ಬೇಯಿಸಿದ ಸ್ಥಿತಿಯಲ್ಲಿಯೇ ರುಚಿ ನೋಡಲು ಕಲಿಯಿರಿ. ಯಾವಾಗಲೂ ಉಪ್ಪು ಸೇರಿಸುವ ಮುನ್ನ ನಿಮ್ಮ ಆಹಾರವನ್ನು ತಿನ್ನಿ. ಉಪ್ಪುಪ್ಪು ಪದಾರ್ಥಗಳನ್ನೇ ಹೆಚ್ಚು ಸೇವಿಸುವ ಹವ್ಯಾಸವಿದ್ದರೆ ಉಪ್ಪು ಸೇರಿಸುವ ಮುನ್ನವೇ ನಿಮ್ಮ ಚಮಚೆಗಳು ಆಹಾರಕ್ಕೆ ತಟ್ಟುವಂತಾಗಲಿ. ಉಪ್ಪು ರಹಿತ ಪದಾರ್ಥಗಳ ಸವಿಯನ್ನು ಹೊಗಳುವುದನ್ನು ರೂಢಿಸಿಕೊಳ್ಳಿ. ಮೊದಮೊದಲು ಉಪ್ಪು ರಹಿತ ಆಹಾರ ಅಚ್ಚರಿಯೆನಿಸಿದರೂ ನಂತರ ಹಿತಕರವಾಗಿರುತ್ತದೆ ಮತ್ತು ಇದೇ ರೂಢಿ ಮುಂದುವರೆಸಿದರೆ ಉಪ್ಪು ಆಹಾರದ ನೈಜ ರುಚಿ ಮತ್ತು ಸ್ವಾದವನ್ನೇ ಮುಚ್ಚಿ ಹಾಕಿಬಿಡುತ್ತದಲ್ಲಾ ಎಂಬ ಜ್ನಾನೋದಯವಾಗಬಹುದು. ಈ ಬದಲಾವಣೆಗಳಿಗೆ ಕೆಲವು ಸಮಯ ತೆಗೆದುಕೊಳ್ಳಿ- ಉಪ್ಪನ್ನು ಬಯಸುವುದನ್ನು ನಿಲ್ಲಿಸಲು ನಿಮಗೆ 2-3 ತಿಂಗಳು ತಗುಲಬಹುದು.

2. ಉಪ್ಪಿನಂಶದ ಆಹಾರಗಳನ್ನು ದೂರವಿಡಿ

2. ಉಪ್ಪಿನಂಶದ ಆಹಾರಗಳನ್ನು ದೂರವಿಡಿ

ಒಗ್ಗರಣೆ ಪದಾರ್ಥಗಳಲ್ಲಿರುವ ಸೋಡಿಯಂ ಅಂಶಗಳ ಲೆಕ್ಕಾಚಾರ ಹಾಕಿ. ಉಪ್ಪು ಹಾಕಿ ಒಣಗಿಸಿದ ಮಾಂಸ, ರೊಮ್ಯಾನೋ ಚೀಸ್ ಮತ್ತು ಸಾಂಬಾರು ಹಾಗೂ ಒಗ್ಗರಣೆ ಪದಾರ್ಥಗಳು ಹೆಚ್ಚಾಗಿ ಉಪ್ಪಿನಿಂದ ಕೂಡಿರುತ್ತವೆ. ಅಂಥವುಗಳನ್ನು ಸಾಧ್ಯವಾದಾಗಲೆಲ್ಲ ದೂರವಿಡಿ.(ಕೆಚಪ್, ಬೆಣ್ಣೆ, ಉಪ್ಪಿನಾಯಿಯ ಬದಲಿಗೆ ಈರುಳ್ಳಿ, ಮತ್ತು ಟೊಮ್ಯಾಟೋಗಳನ್ನು ಬರ್ಗರ್ ನಲ್ಲಿ ಬಳಸಿ) ಕೆಲವೊಂದು ಉತ್ಪನ್ನಗಳಲ್ಲಿ ಒಗ್ಗರಣೆ ಪದಾರ್ಥಗಳ ಪೊಟ್ಟಣಗಳನ್ನು ಪ್ರತ್ಯೇಕವಾಗಿ ಬಳಸಿದ್ದರೆ ಅಂಥವುಗಳನ್ನು ಕಡಿಮೆ ಮಾಡಬಹುದು ಅಥವಾ ಸಂಪೂರ್ಣವಾಗಿ ಹೊರಗಿಡಿ. ಹೇಗಿದ್ದರೂ, ಇಂಥ ಸುವಾಸನೆಭರಿತ ವಸ್ತುಗಳು ಮತ್ತು ಒಗ್ಗರಣೆ ಪದಾರ್ಥಗಳ ಉಪ್ಪಿನಂಶವನ್ನು ಬಳಸುವುದು ನೇರವಾಗಿ ಬಳಸುವ ಉಪ್ಪಿಗಿಂತ ಒಳ್ಳೆಯದು.

ಉಪ್ಪಿಗೆ ಪರ್ಯಾಯ ಉತ್ಪನ್ನಗಳು

ಉಪ್ಪಿಗೆ ಪರ್ಯಾಯ ಉತ್ಪನ್ನಗಳು

ಉಪ್ಪಿನ ಬದಲಿಗೆ ಉಪ್ಪು ರಹಿತ ಒಗ್ಗರಣೆ ಮತ್ತು ಸಾಂಬಾರು ಪದಾರ್ಥಗಳನ್ನು ಸೇರಿಸಿ. ಉಪ್ಪಿನಿಂದ ದೂರವುಳಿಯಲು ಹಲವು ಬಗೆಯ ಸ್ವಾದಭರಿತ ಪರ್ಯಾಯ ಉತ್ಪನ್ನಗಳನ್ನು ನಿಮ್ಮ ಪಥ್ಯದಲ್ಲಿ ಸೇರಿಸಬಹುದು.

ವನಸ್ಪತಿ, ಸಾಂಬಾರು ಪದಾರ್ಥ, ಲಿಂಬು, ಬೆಳ್ಳುಳ್ಳಿ, ತಾಜಾ ತರಕಾರಿ ಮತ್ತು ಮಾಂಸ, ತರಕಾರಿ ಲವಣ

4. ಸಂರಕ್ಷಿತ ಆಹಾರಗಳನ್ನು ದೂರವಿಡಿ

4. ಸಂರಕ್ಷಿತ ಆಹಾರಗಳನ್ನು ದೂರವಿಡಿ

ತಾಜಾ ತಾಜಾ ಮಾಂಸ, ಮತ್ತು ಈಗತಾನೇ ನೀರಿನಿಂದ ತೆಗೆದ ಮೀನು ಸಾಧಾರಣವಾಗಿ ಉಪ್ಪುರಹಿತವಾಗಿರುತ್ತವೆ. ಅದಕ್ಕೂ ಮಿಗಿಲಾಗಿ ಕಡಿಮೆ ಸೋಡಿಯಂ ಹೊಂದಿರುತ್ತವೆ. ಪ್ಯಾಕ್ ಮಾಡಿದ ಮತ್ತು ರೆಸ್ಟೋರೆಂಟ್ ತಿಂಡಿಗಳಾದ ಸೂಪ್ಸ್ ಮತ್ತು ಶೀತಲೀಕರಿಸಿದ ಊಟಗಳಲ್ಲಿ ಸೋಡಿಯಂ ಹೆಚ್ಚಾಗೇ ಇರುತ್ತದೆ. ತಾಜಾ ತರಿಕಾರಿಗಳು ದೊರೆಯದಿದ್ದರೆ ಸೋಡಿಯಂ ಇಲ್ಲದಿರುವ ಅಥವಾ ಸೋಡಿಯಂ ಕಡಿಮೆಯಿರುವ ಕ್ಯಾನ್ ನಲ್ಲಿ ದೊರೆಯುವ ತರಕಾರಿಗಳು ಉತ್ತಮ. ಸೋಡಿಯಂ ಅಂಶಗಳ ಲೇಬೆಲ್ ಓದುವ ಹವ್ಯಾಸ ರೂಢಿಸಿಕೊಳ್ಳಿ.

5. ಆಹಾರಗಳ ಮೇಲಿರುವ ಸೋಡಿಯಂ ಅನ್ನು ತೆಗೆಯಿರಿ

5. ಆಹಾರಗಳ ಮೇಲಿರುವ ಸೋಡಿಯಂ ಅನ್ನು ತೆಗೆಯಿರಿ

ಸಾಲ್ಟ್ ಆನ್ ಟಾಪ್ ಎಂದಿರುವ ಪದಾರ್ಥಗಳನ್ನೇ ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ, ಅನ್ ಸಾಲ್ಟೆಡ್ ಆನ್ ಟಾಪ್ಸ್ ಎಂಬ ಹಣೆಬರಹವಿರುವ ಪದಾರ್ಥಗಳನ್ನು ದೂರವಿಡಿ. ಇವುಗಳಲ್ಲಿ ಉಪ್ಪಿನಂಶ ಆಹಾರದ ಮೇಲಿರುವ ಬದಲು ಒಳಗಿದ್ದು ಅದನ್ನು ತೆಗೆಯುವುದು ಅಸಾಧ್ಯ. ಸಾಲ್ಟ್ ಆನ್ ಟಾಪ್ ಆಹಾರಗಳಲ್ಲಿ ಉಪ್ಪು ಹೆಚ್ಚಿರುವುದು ನಿಜವಾದರೂ ಇವು ಸ್ವಲ್ಪ ಮಟ್ಟಿಗೆ ಉತ್ತಮ.

6. ಉಪ್ಪು ತಿನ್ನುವ ಹವ್ಯಾಸವನ್ನು ಬದಲಾಯಿಸಿಕೊಳ್ಳಿ

6. ಉಪ್ಪು ತಿನ್ನುವ ಹವ್ಯಾಸವನ್ನು ಬದಲಾಯಿಸಿಕೊಳ್ಳಿ

ಬಹಳಷ್ಟು ಬಾರಿ ಸಾಲ್ಟ್ ಷೇಕರ್ ಗೆ ಕೈ ಹಾಕಬೇಡಿ. ಸೋಡಿಯಂ ಕಡಿಮೆಗೊಳಿಸಬೇಕೆಂದರೆ ಕೇವಲ ತಂಪಾದ ಟರ್ಕಿಯನ್ನು ತಿನ್ನಿವ ಬದಲು ಕೇವಲ ಒಂದೇ ಸಲ ಉಪ್ಪು ಬಳಸಿ. ಕಾಂಡಿಮೆಂಟ್ಸ್ ಗಳ ಬಗ್ಗೆ ಎಚ್ಚರವಿರಲಿ. ಕೆಲವು ಸಾಸ್ ಮತ್ತು ಹಲವಾರು ಪದಾರ್ಥಗಳಲ್ಲಿ ಉಪ್ಪಿನಂಶ ಅಧಿಕವಾಗಿರುತ್ತದೆ.

7. ಆಹಾರಗಳಲ್ಲಿ ಸೋಡಿಯಂ ಅಂಶವನ್ನು ದುರ್ಬಲಗೊಳಿಸಿ

7. ಆಹಾರಗಳಲ್ಲಿ ಸೋಡಿಯಂ ಅಂಶವನ್ನು ದುರ್ಬಲಗೊಳಿಸಿ

ಅಧಿಕ ಸೋಡಿಯಂ ಪದಾರ್ಥಗಳಾದ ಸೂಪ್ ನಂತಹವುಗಳನ್ನು ನೀವು ತೆಗೆದುಕೊಂಡರೆ ಸೋಡಿಯಂ ಕಡಿಮೆಗೊಳಿಸಲು ಒಂದೇ ಒಂದು ದಾರಿ ಎಂದರೆ ತೆಳ್ಳಗೆ ಮಾಡುವುದು. ಉದಾಹರಣೆಗೆ, ನೀವು ಲೇಬೆಲ್ ನೋಡಿಕೊಂಡು ಸೂಪ್ ತಯಾರಸಿದ್ದರೆ ಅದರಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಅದರ ಬದಲಿಗೆ , ಕ್ಯಾನ್ ನಲ್ಲಿರುವ ಸೂಪ್ ಗೆ ತರಕಾರಿಗಳನ್ನು ಬೆರೆಸುವುದರಿಂದ ಸೋಡಿಯಂ ಪ್ರಮಾಣ ಕಡಿಮೆಯಾಗುತ್ತದೆ. ನೇರವಾಗಿ ಬಡಿಸುವುದರಿಂದ ಪ್ರತಿಯೊಬ್ಬರಿಗೂ ಸೋಡಿಯಂ ಸ್ವೀಕಾರ ಹೆಚ್ಚಾಗುತ್ತದೆ.

ಮನೆಯಲ್ಲಿಯೇ ಊಟ ತಿಂಡಿ ತಿನ್ನಿ. ಬೇರೆಯವರ ಮನೆಯಲ್ಲಿ ಅಥವಾ ರೆಸ್ಟೋರೆಂಟ್ ಗಳಲ್ಲಿ ತಿಂದರೆ ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡಲು ಅಥವಾ ನಿಯಂತ್ರಿಸಲು ಕಷ್ಟ ಮತ್ತು ಅಸಾಧ್ಯವಾಗಬಹುದು. ಮನೆಯಲ್ಲಿಯೇ ತಿನ್ನುವುದರಿಂದ ನಿಮ್ಮ ಆಹಾರದಲ್ಲಿರುವ ಸೋಡಿಯಂ ಪ್ರಮಾಣದ ಬಗ್ಗೆ ನೀವು ಖಾತರಿಪಡಿಸಿಕೊಳ್ಳಬಹುದು.

X
Desktop Bottom Promotion