Latest Updates
-
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್! -
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್!
ಈ ಸೀಸನ್ ನಲ್ಲಿ ತಿನ್ನಲು ಮಿಸ್ ಮಾಡಬಾರದ 7 ಫುಡ್ಸ್
ಇದು autumn ಕಾಲ. ತಣ್ಣನೆಯ ಹವಾ, ಬಣ್ಣ-ಬಣ್ಣದ ಆಹಾರಗಳು, ಹಸಿರಾದ ಪ್ರಕೃತ್ತಿ ಇವುಗಳಿಂದ autumn ತಿಂಗಳಿನಲ್ಲಿ ಪ್ರಕೃತ್ತಿಯ ಚೆಲುವು ಮತ್ತಷ್ಟು ಹೆಚ್ಚುವುದು. ಸೀಸನ್ ಫುಡ್ಸ್ ತಿನ್ನಲು ಮಿಸ್ ಮಾಡಬಾರದು ಎಂಬ ವಿಷಯ ಈಗಾಗಲೇ ನೀವು ತಿಳಿದಿರುವಿರಿ. ಈಗ ನಾವು Autumn ಸಮಯದಲ್ಲಿ ತಿನ್ನಬೇಕಾದ ಆಹಾರಗಳು ಯಾವುವು ಎಂದು ನೋಡೋಣವೇ?
ಸೆಪ್ಟೆಂಬರ್ 22ರಿಂದ ಡಿಸೆಂಬರ್ 20ರವರೆಗೆ ಶರತ್ಕಾಲ ಇಂಗ್ಲಿಷ್ ನಲ್ಲಿ Autumn ಎಂದು ಕರೆಯುತ್ತಾರೆ. ಈ ಕಾಲದಲ್ಲಿ ತಿನ್ನಬೇಕಾದ 7 ಸೂಪರ್ ಫುಡ್ ಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಆಪಲ್
ಆಪಲ್ ಎಲ್ಲಾ ಸಮಯದಲ್ಲಿ ದೊರೆಯುವುದಾದರೂ ಆಪಲ್ ಸಿಸನ್ ವೆಂದರೆ ಶರತ್ಕಾಲ. ಖನಿಜಾಂಶಗಳು ಅಧಿಕವಿರುವ ಈ ಹಣ್ಣು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಬೀಟ್ ರೂಟ್
ಬೀಟ್ ರೂಟ್ ಲಿವರ್ ಕ್ಲೆನ್ಸ್ ಮಾಡುವ ಕಾರ್ಯವನ್ನು ಮಾಡುತ್ತದೆ ಹಾಗೂ ದೇಹಕ್ಕೆ ಪೋಷಕಾಂಶವನ್ನು ಒದಗಿಸುತ್ತದೆ.

ಕ್ಯಾರೆಟ್
ದಿನದಲ್ಲಿ ಎರಡು ಕ್ಯಾರೆಟ್ ತಿಂದರೆ 20 ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಕ್ಯಾರೆಟ್ ಕ್ಯಾನ್ಸರ್, ಅಕಾಲಿಕ ನೆರಿಗೆ ಇವುಗಳನ್ನು ಬರದಂತೆ ತಡೆದು ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.

ಕ್ರಾನ್ ಬೆರಿ
ಮೂತ್ರ ಉರಿಯಂತಹ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಕ್ರಾನ್ ಬೆರಿ ಸಹಾಯ ಮಾಡುತ್ತದೆ. ಕ್ರಾನ್ ಬೆರಿ ಜ್ಯೂಸ್ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ, ದೇಹದಲ್ಲಿರುವ ಅಧಿಕ ಕೊಬ್ಬನ್ನು ಕೂಡ ಕಡಿಮೆ ಮಾಡುತ್ತದೆ.

ಕುಂಬಳಕಾಯಿ ಮತ್ತು ಅದರ ಬೀಜ
ಕುಂಬಳಕಾಯಿ ಬೀಜ ತಿಂದರೆ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದಂತೆ. ಇದರಲ್ಲಿರುವ ಸತುವಿನಂಶ ಪುರುಷರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಉದ್ದ ಗಾತ್ರದ ಕುಂಬಳಕಾಯಿ
ಕುಂಬಳ ಕಾಯಿಯಲ್ಲಿ ಎರಡು ಬಗೆ. ಒಂದು ರೌಂಡ್ ಆಗಿದ್ದರೆ ಮತ್ತೊಂದು ಗಾತ್ರದಲ್ಲಿ ಉದ್ದವಾಗಿರುತ್ತದೆ. ಈ ಸೀಸನ್ ಫುಡ್ ಅನ್ನು ಆಹಾರಕ್ರಮದಲ್ಲಿ ಸೇರಿಸಲು ಮರೆಯದಿರಿ.

ಸಿಹಿ ಗೆಣಸು
ಇದರಲ್ಲಿ ಅಧಿಕ ಬೀಟಾ ಕೆರೋಟಿನ್, ವಿಟಮಿನ್ ಸಿ , ಬಿ, ಪೊಟಾಷ್ಯಿಯಂ, ಮೆಗ್ನಿಷಿಯಂ ಇದ್ದು, ಈ ಆಹಾರವನ್ನು autumn ಕಾಲದಲ್ಲಿ ತಿನ್ನಲು ಮಿಸ್ ಮಾಡದಿರಿ.



Click it and Unblock the Notifications