Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
World Heart Day 2022: ಹೃದಯದ ಆರೋಗ್ಯಕ್ಕಾಗಿ ಈ ಆಹಾರಗಳನ್ನು ತ್ಯಜಿಸಿ
ಯಾವಾಗಲೂ ಬಡಿಯುತ್ತಿರುವ ಹೃದಯ ನಿಮ್ಮಿಂದ ಏನು ಬಯಸುತ್ತದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಹೃದಯದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. ಯಾಕೆಂದರೆ ಹೃದಯವು ಒಮ್ಮೆ ರಕ್ತವನ್ನು ಹೊರಹಾಕುವುದನ್ನು ನಿಲ್ಲಿಸಿದರೆ ಆಗ ನಮ್ಮ ಜೀವನ ಅಂತ್ಯಗೊಂಡಂತೆ. ದೇಹವು ಆರೋಗ್ಯಕರವಾಗಿ ಇರಬೇಕೆಂದರೆ ಹೃದಯವು ಆರೋಗ್ಯವಾಗಿರಬೇಕು. ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!
ಹೃದಯದ ಆರೋಗ್ಯವನ್ನು ಕಾಪಾಡಲು ನಾವು ತಿನ್ನುವಂತಹ ಆಹಾರದ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ. ಆಧುನಿಕ ಹಾಗೂ 4ಜಿ ಯುಗದಲ್ಲಿ ಕೈಗೆ ಸಿಕ್ಕಿದ್ದನ್ನು ತಿನ್ನುತ್ತೇವೆ. ಆಹಾರ ಒಳ್ಳೆದಿದೆಯಾ ಅಥವಾ ಕೆಟ್ಟದಾಗಿದೆಯಾ ಎಂದು ಯೋಚಿಸುವುದೇ ಇಲ್ಲ. ಹೆಚ್ಚಿನವರು ಕೆಲಸದ ಒತ್ತಡದಿಂದ ಮನೆಯಲ್ಲಿ ಅಡುಗೆ ಮಾಡಲು ಸಮಯವಿಲ್ಲದೆ ಹೊರಗಡೆಯೇ ತಿನ್ನುತ್ತಾರೆ. ಇದರಿಂದಾಗಿ ಆರೋಗ್ಯವು ಕೆಡುವುದು. ಇದರಲ್ಲಿ ಹೃದಯದ ಆರೋಗ್ಯವು ಸೇರಿದೆ. ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ!
ನಮ್ಮ ಸಂಪೂರ್ಣ ದೇಹದಕ್ಕೆ ರಕ್ತ ಪರಿಚಲನೆಯಾಗಬೇಕಾದರೆ ಹೃದಯವು ಸರಿಯಾಗಿ ಕೆಲಸ ಮಾಡಬೇಕು. ಹೃದಯಕ್ಕೆ ಸ್ವಲ್ಪ ಸಮಸ್ಯೆಯಾದರೂ ಅದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ, ಈ ದಿನದ ವಿಶೇಷ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಕಡೆಗಣಿಸಬೇಕಾದ ಕೆಲವೊಂದು ಆಹಾರಗಳನ್ನು ಇಲ್ಲಿ ಸೂಚಿಸಲಾಗಿದೆ. ಇದನ್ನು ಓದಿಕೊಂಡು ಹೃದಯವನ್ನು ಜೋಪಾನವಾಗಿಡಿ.... ಹೃದಯವನ್ನು ಹೀಗೆ ಜೋಪಾನ ಮಾಡಿ

ಸಂಸ್ಕರಿತ ಮಾಂಸ
ಸಂಸ್ಕರಿತ ಮಾಂಸ ತಿನ್ನುವುದು ಹೃದಯಕ್ಕೆ ಒಳ್ಳೆಯದಲ್ಲ. ಮಾಂಸವನ್ನು ತಾಜಾವಾಗಿರಿಸಲು ಇದಕ್ಕೆ ಕೆಲವೊಂದು ಪದಾರ್ಥಗಳನ್ನು ಬಳಸಲಾಗುತ್ತದೆ. ಸಂಸ್ಕರಿತ ಮಾಂಸವನ್ನು ಮೊದಲು ಉಪ್ಪಿಗೆ ಹಾಕಿಇಡಲಾಗುತ್ತದೆ. ಬಳಿಕ ಹೊಗೆಯಲ್ಲಿ ಇಡಲಾಗುವುದು ಮತ್ತು ಒಣಗಿಸಲಾಗುವುದು. ಅಂತಿಮವಾಗಿ ಅದನ್ನು ಪ್ಯಾಕ್ ಮಾಡಲಾಗುತ್ತದೆ. ಈ ಎಲ್ಲಾ ವಿಧಾನಗಳಿಗೆ ಬಳಸುವಂತಹ ಪದಾರ್ಥಗಳು ಹೃದಯಕ್ಕೆ ಹಾನಿಕಾರಕ.

ತಂಪು ಪಾನೀಯಗಳು
ತಂಪು ಪಾನೀಯಗಳಲ್ಲಿ ಕೃತಕ ಸಕ್ಕರೆಯನ್ನು ಹಾಕಿರುತ್ತಾರೆ. ಇದರಿಂದ ಮಧುಮೇಹ ಬರುವುದು ಮಾತ್ರವಲ್ಲದೆ ಹೃದಯಕ್ಕೂ ಹಾನಿಯಾಗುವುದು.

ಬೆಣ್ಣೆ
ಬೆಣ್ಣೆಯು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಂತಹ ಪ್ರಮುಖ ಪದಾರ್ಥವಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಕ್ಕೆ ಒಳ್ಳೆಯದಲ್ಲ.

ಸಿದ್ಧ ಆಹಾರಗಳು
ಸಿದ್ಧ ಆಹಾರಗಳಲ್ಲಿ ಅದನ್ನು ಸಂಸ್ಕರಿಸಲು ರಾಸಾಯನಿಕಗಳನ್ನು ಹಾಕಿರುತ್ತಾರೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಆಹಾರಗಳಲ್ಲಿ ಯಾವುದೇ ಪೋಷಕಾಂಶಗಳು ಇರುವುದಿಲ್ಲ ಮತ್ತು ಹೃದಯಕ್ಕೆ ಹಾನಿಕರ.

ಟೊಮೆಟೊ ಸಾಸ್
ಟೊಮೆಟೊ ಸಾಸ್‌ನಲ್ಲಿ ಕೃತಕ ರುಚಿ ಹಾಗೂ ಸಂಸ್ಕರಣೆಯು ತಿನ್ನಲು ಒಳ್ಳೆಯದಾಗಬಹುದು. ಇದೇ ವೇಳೆ ಟೊಮೆಟೊ ಸಾಸ್ ನಿಂದ ಕ್ಯಾಲರಿ, ಕೊಲೆಸ್ಟ್ರಾಲ್ ಮತ್ತು ಕೊಬ್ಬು ಹೆಚ್ಚಾಗುತ್ತದೆ. ಇದರಿಂದ ಹೃದಯದ ರೋಗಗಳು ಕಾಣಿಸಿಕೊಳ್ಳಬಹುದು.

ಗಿಣ್ಣು
ಗಿಣ್ಣಿನಲ್ಲಿ ಅತಿಯಾದ ಪರಿಷ್ಕರಿತ ಕೊಬ್ಬು ಇರುತ್ತದೆ. ಇದು ಹೃದಯಕ್ಕೆ ತುಂಬಾ ಹಾನಿಕರ. ಆಹಾರದಲ್ಲಿ ಗಿಣ್ಣನ್ನು ಕಡೆಗಣಿಸಿ.



Click it and Unblock the Notifications











