Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವಿಶ್ವ ಹೃದಯದ ದಿನದಂದು, ಹೃದಯದ ಆರೋಗ್ಯಕ್ಕಾಗಿ ಸಲಹೆಗಳು
ಇವತ್ತು ವಿಶ್ವ ಹೃದಯ ದಿನ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ವಿಶ್ವದೆಲ್ಲಡೆ ಕಂಡು ಬರುತ್ತಿದೆ. ಪ್ರತಿ ವರ್ಷವೂ 17.1 ಮಿಲಿಯನ್ ಜನರು ಹೃದಯದ ಸಮಸ್ಯೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೊಂದಿದಂತಹ ರಾಷ್ಟ್ರಗಳಲ್ಲಿಯೂ ಈ ಹೃದಯದ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ.
ಆದ್ದರಿಂದ ಹೃದಯದ ಸ್ವಾಸ್ಥ್ಯದ ಬಗ್ಗೆ ಜಾಗೃತಿ ಮೂಡಿಸಿದರೆ ಪ್ರಪಂಚದಲ್ಲಿ ಹೃದಯದ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗಬಹುದೆಂಬ ನಂಬಿಕೆಯಿಂದ ಹೃದಯ ವಿಶ್ವ ದಿನ ಆಚರಿಸಲಾಗುತ್ತದೆ. ನಮ್ಮ ಹೃದಯದ ಸ್ವಾಸ್ಥ್ಯಕ್ಕಾಗಿ ಏನು ಮಾಡಬೇಕೆಂದು ನೋಡೋಣ ಬನ್ನಿ.

1.ಹೃದಯ ಪಕ್ಕಕ್ಕಿಟ್ಟು ಮಿದುಳಿಗೆ ಕೆಲಸ ಕೊಡಿ
ಎಣ್ಣೆ, ಕೊಲೆಸ್ಟ್ರಾಲು, ಬೊಜ್ಜು, ಸಿಗರೇಟು, ಜಂಕ್ ಫುಡ್ಡು, ಡಯಾಬಿಟಿಸ್ಸು, ಹೈಬಿಪಿ, ಅನಾರೋಗ್ಯಕರ ಜೀವನಶೈಲಿಯಿಂದ ಮುಷ್ಟಿಯಷ್ಟಿರುವ ಹೃದಯ ಹದಗೆಡುವುದು ಒತ್ತಟ್ಟಿಗಿರಲಿ, ಮೊದಲು ನಿಮ್ಮ ಹೃದಯ ಹೆಣ್ಣಿಗೆ ಅಥವಾ ಗಂಡಿಗೆ ನೀಡುವ ಮುನ್ನ ಇನ್ನೊಮ್ಮೆ ಯೋಚಿಸಿ. ಲವ್ವಲ್ಲಿ ಬಿದ್ದು, ಬಿದ್ದ ಮರುಕ್ಷಣವೇ ಕಳೆದುಕೊಂಡು ಒದ್ದಾಡುವ ಸಂಗತಿಯಿದೆಯಲ್ಲ ಅದು ಲವ್ ಬರ್ಡ್‌ಗಳಿಗೆ ತಿಳಿಯುವುದೇ ಇಲ್ಲ. ಲವ್ ಬಗ್ಗೆ ಮತ್ತೆ ಮಾತನಾಡೋಣ. ಈಗ ಹೃದಯದ ರಕ್ತ ಸರಬರಾಜು ಮಾಡುವ ಕೆಲಸಕ್ಕೆ ಅಡಚಣೆ ಬರದಿರಲು ಏನು ಮಾಡಬೇಕೆಂದು ನೋಡೋಣ. ಏನಂತೀರಿ?

1.ಕಡಿಮೆ ಪ್ರಮಾಣದ ಉಪ್ಪು:
ಅಧಿಕ ಉಪ್ಪು ತಿಂದರೆ ರಕ್ತದೊತ್ತಡ ಹೆಚ್ಚಾಗುತ್ತದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ.

2. ಧೂಮಪಾನ ನಿಷೇಧಿಸಿ
15-20 ವರ್ಷ ಧೂಮಪಾನ ಮಾಡಿದರೆ ಹೃದಯಾಘಾತ, ಹೃದಯದಲ್ಲಿ ತೂತು, ಉಸಿರಾಟದ ತೊಂದರೆ, ಬಿಡದ ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಂಡು ಜೀವನವೇ ನರಕವಾಗಿ ಬಿಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಧೂಮಪಾನ ಚಟದಿಂದ ಹೊರಬನ್ನಿ.

3. ಒತ್ತಡ ಕಡಿಮೆ ಮಾಡುವುದು
ವ್ಯಾಯಾಮ, ಯೋಗ, ಸಂಗೀತ ಕೇಳುವುದು ಇವುಗಳಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.

4. ಸಂತೋಷ:
ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಕಳೆಯಬೇಕು. ಅಂದರೆ ಚಿಕ್ಕ ಪುಟ್ಟ ವಿಷಯಗಳಿಗೆ ಚಿಂತೆ ಮಾಡದೆ ಜೀವನವನ್ನು ನಡೆಸಬೇಕು. ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸುತ್ತಿರಬೇಕು. ಕಾಯಿಲೆಯ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿದರೆ ಅನಾರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.

5. ಮೀನು:
ಮೀನಿನಲ್ಲಿರುವ ಒಮೆಗಾ 3 ಆಸಿಡ್ ಹೃದಯಕ್ಕೆ ತುಂಬಾ ಅವಶ್ಯಕ. ರಕ್ತನಾಳದಲ್ಲಿರುವ ಟ್ರಗ್ಲಿಸೆರಾಯಿಡ್ಸ್ ಎಂಬ ಕೊಬ್ಬನ್ನು ಕರಗಿಸಲು ಇದು ಸಹಕಾರಿ. ಮೀನನ್ನು ತಿನ್ನುವುದರಿಂದ ಎದೆ ಉರಿ ಮತ್ತು ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು. ಸಾಲ್ಮನ್, ಶ್ರಂಪ್, ಟ್ಯೂನ, ಟ್ರಾಟ್, ಹೆರ್ರಿಂಗ್ಮ ಮ್ಯಾಜೆರಲ್, ಸಾರ್ಡೈನ್ಸ್ ಮುಂತಾದ ಜಾತಿಯ ಮೀನುಗಳ ಸೇವನೆ ಹೃದಯಕ್ಕೆ ಉತ್ತಮ. ಎಣ್ಣೆಯಲ್ಲಿ ಕರಿದ ಮೀನುಗಳನ್ನು ಹೆಚ್ಚು ತಿನ್ನಬಾರದು.

6. ಕೆಂಪು ವೈನ್:
ದಿನಕ್ಕೆ 5-8 ಔನ್ಸ್ ಕೆಂಪು ವೈನ್ ಸೇವನೆಯಿಂದ ಹೃದಯದ ಖಾಯಿಲೆಯನ್ನು ತಡೆಯಬಹುದು. ಕೆಂಪು ವೈನನ್ನು ದ್ರಾಕ್ಷಿಯಿಂದ ತಯಾರಿಸುವುದರಿಂದ ಅದರಲ್ಲಿರುವ HDL ಎಂಬ ಅಂಶ ಹೃದಯಕ್ಕೆ ಉಪಯೋಗ. ಇದು ರಕ್ತನಾಳ ಸರಾಗ ಮಾಡುವುದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತೆ. ವೈನ್ ಕುಡಿಯುವುದು ಬೇಡವೆಂದರೆ ಕಪ್ಪು ದ್ರಾಕ್ಷಿಯ ಜ್ಯೂಸನ್ನು ಕುಡಿಯಬಹುದು.

7. ಟೊಮೊಟೊ ಮತ್ತು ತರಕಾರಿ:
ಹಸಿರು ತರಕಾರಿಗಳಲ್ಲಿ ಹೃದಯಕ್ಕೆ ಉಪಯೋಗವಾಗುವ ಫೊಲೇಟ್ ಅಂಶವಿದೆ. ಪಾಲಾಕ್, ಹೂಕೋಸು, ಈರುಳ್ಳಿ ಎಲೆ ಮುಂತಾದವು ಆಹಾರದಲ್ಲಿರಲಿ. ಟೊಮೆಟೊದಲ್ಲಿ ಕೂಡ ಲೈಕೊಪೀನ್ ಎಂಬ ಅಂಶವಿದ್ದು, ಇದೂ ಕೂಡ ಹೃದಯಾಘಾತದ ಸಾಧ್ಯತೆ ಕಡಿಮೆಗೊಳಿಸುತ್ತೆ.

8. ಹೆಚ್ಚು ಫೈಬರ್ ಇರಲಿ:
ಎಲ್ಲಾ ದವಸ ಧಾನ್ಯಗಳಲ್ಲಿಯೂ ಹೆಚ್ಚಿನ ನಾರಿನಂಶವಿದ್ದು, ಕಡಿಮೆ ಕೊಬ್ಬಿನಂಶವಿರುತ್ತದೆ. ಧಾನ್ಯಗಳಲ್ಲಿರುವ ಮಿನರಲ್, ಪ್ರೊಟೀನ್ ಮತ್ತು ವಿಟಮಿನ್ ಗಳು ಹೃದಯವನ್ನು ಆರೋಗ್ಯವಾಗಿಡುತ್ತದೆ. ಓಟ್, ಬಾರ್ಲೆ, ಕೆಂಪಕ್ಕಿ, ಗೋಧಿ ಮತ್ತು ಕಾಳುಗಳಾದ ಬಟಾಣಿ, ಬೀನ್ಸ್ ನ ಸೇವನೆ ಇದ್ದರೆ ಉತ್ತಮ.

9. ಕೋಕೋ ಅಥವಾ ಚಾಕಲೇಟ್:
ಕೋಕೋ ಅಥವಾ ಡಾರ್ಕ್ ಚಾಕಲೇಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಫ್ಲೇವನಾಲ್ ಅಂಶ ರಕ್ತನಾಳವನ್ನು ಸರಾಗಗೊಳಿಸುತ್ತದೆ. ಇದು ಎದೆ ಉರಿಯನ್ನೂ ತಗ್ಗಿಸುತ್ತದೆ.



Click it and Unblock the Notifications