Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಹೃದಯದ ರಕ್ಷಣೆಗೆ ಐದು ಸಲಹೆ ಪಾಲಿಸಿ

ಹೃದಯದ ಸ್ವಾಸ್ಥ್ಯವನ್ನು ನೀಡುವ ಐದು ಮಾರ್ಗಗಳು:
1. ಅಂಕೆಗಳ ಬಗ್ಗೆ ಗಮನವಿಡಿ: ನಿಮ್ಮ ಬಿಪಿ, ಕೊಲೆಸ್ಟ್ರಾಲ್, ಮಧುಮೇಹದ ಮಟ್ಟವನ್ನು ತಿಳಿದುಕೊಂಡಿರಬೇಕು. ಅಗತ್ಯವಿದ್ದರೆ ಕಡಿಮೆಮಾಡಿಕೊಳ್ಳುವಲ್ಲಿ ಪ್ರಯತ್ನಿಸಬೇಕು. ಇದು ಹೃದಯದ ಸ್ವಾಸ್ಥ್ಯಕಾಪಾಡಿಕೊಳ್ಳುವಲ್ಲಿ ಮೊದಲ ಹೆಜ್ಜೆಯಾಗಲಿದೆ.
2. ವಾಕಿಂಗ್ ಇರಲಿ: ಸದಾ ಚೈತನ್ಯದಿಂದಿರಬೇಕೆಂದರೆ ನಡಿಗೆಯನ್ನು ಪ್ರಾರಂಭಿಸಬೇಕು. ದಿನಕ್ಕೆ 20-30 ನಿಮಿಷದ ನಡಿಗೆ ಹೃದಯಕ್ಕೆ ಆರೋಗ್ಯ ನೀಡಿ, ಅಕಾಲ ಸಾವು ಬರುವುದನ್ನು ಶೇಕಡಾ 50 ರಷ್ಟು ತಡೆಯುತ್ತದೆ.
3. ನಗುತ್ತಾ ಇರಿ: ನಗುವುದು ಎಲ್ಲದಕ್ಕೂ ಔಷಧಿಯಿದ್ದಂತೆ. 15 ನಿಮಿಷ ನಕ್ಕರೆ ಅದು 30 ನಿಮಿಷ ಏರೋಬಿಕ್ಸ್ ಮಾಡುವುದಕ್ಕೆ ಸಮ. ರಕ್ತ ಕಣಗಳ ಚಟುವಟಿಕೆ, ಮೆದುಳಿನ ಹಾರ್ಮೋನುಗಳ ಕ್ರಿಯಾಶೀಲತೆಯನ್ನೂ ಹೆಚ್ಚಿಸಿ ಚೈತನ್ಯ ತುಂಬುತ್ತದೆ. ಅನಗತ್ಯ ಆತಂಕವನ್ನೂ ನಿವಾರಣೆ ಮಾಡಿ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ.
4. ಸೊಂಟದ ಸುತ್ತಳತೆ ತಿಳಿದಿರಲಿ: ತೂಕ ಹೆಚ್ಚಳವನ್ನು ತಿಳಿಯುವುದಕ್ಕಿಂತ ನಿಮ್ಮ ಸೊಂಟದ ಸುತ್ತಳತೆಯನ್ನು ಆಗಾಗ್ಗೆ ಪರೀಕ್ಷಿಸುತ್ತಿರಿ. ನಿಮ್ಮ ಸೊಂಟದ ಸುತ್ತ ಇರುವ ಬೊಜ್ಜಿಗೂ ಮತ್ತು ಅತಿಯಾದ ರಕ್ತದೊತ್ತಡಕ್ಕೂ ನೇರವಾಗಿ ಸಂಬಂಧವಿದೆ. ಇದು ಮಧುಮೇಹವನ್ನೂ ತಂದೊಡ್ಡುವ ಸಾಧ್ಯತೆ ಇದೆ.
5. ರಾತ್ರಿ ಕಣ್ತುಂಬ ನಿದ್ದೆಯಿರಲಿ: ಒಳ್ಳೆಯ ನಿದ್ದೆ ಉತ್ತಮ ಆರೋಗ್ಯದ ಗುಟ್ಟು. ನಿದ್ದೆಯಲ್ಲಿ ಅಭಾವವಾದರೆ ರಕ್ತದೊತ್ತಡ ಹೆಚ್ಚಿಸಿ, ಒತ್ತಡ ಉಂಟುಮಾಡುತ್ತದೆ. ಇದರಿಂದ ನಿಮ್ಮ ಚೈತನ್ಯ ಕುಂದುಹೋಗಿ ಆತಂಕ ಮನೆಮಾಡುತ್ತದೆ. ಆದ್ದರಿಂದ ಕಣ್ಣ ತುಂಬ ನಿದ್ದೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
