Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಡೆಂಗ್ಯೂ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ರಾಜ್ಯ ಸರ್ಕಾರ..! ಹೊಸ ಮಾರ್ಗಸೂಚಿ ಪ್ರಕಟ
ಮಹಾನಗರ ಬೆಂಗಳೂರಿನಲ್ಲಿ ಮಳೆಗಾಲ ಆರಂಭವಾದರೆ ಸಾಲು ಸಾಲು ಕಾಯಿಲೆಗಳು ಕಾಡಲು ಆರಂಭಿಸುತ್ತವೆ. ಈ ಬಾರಿಯ ಮಳೆಗಾಲದಲ್ಲೂ ಡೆಂಗ್ಯೂ ಅಬ್ಬರಿಸುತ್ತಿದೆ. ಹಲವು ಸಾಂಕ್ರಾಮಿಕ ರೋಗಗಳ ನಡುವೆ ಈ ಡೆಂಗ್ಯೂ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ. ದಿನ ನಿತ್ಯ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವುದು ಆತಂಕ ಹುಟ್ಟಿಸಿದೆ.
ಹೀಗಾಗಿ ಸರ್ಕಾರ ಈ ಡೆಂಗ್ಯೂ ತಡೆಗೆ ಕಠಿಣ ನಿಯಮ ಜಾರಿಗೆ ಮುಂದಾಗಿದೆ. ರಾಜ್ಯ ಸರ್ಕಾರ ಈಗ ಈ ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ ಕೆಲವು ನಿಯಮಗಳ ಪಾಲಿಸದಿದ್ದರೆ ದಂಡ ಖಚಿತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಡೆಂಗ್ಯೈ ಸೊಳ್ಳೆಗಳಿಂದ ಹರಡುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳನ್ನ ಹತೋಟಿಗೆ ತರುವ ನಿಟ್ಟಿನಲ್ಲಿ ಕಾನೂನಿನ ಅಸ್ತ್ರ ಬಳಸಬಹುದಾಗಿದೆ. ಸೊಳ್ಳೆ ಉತ್ಪತ್ತಿಯಾಗುವಂತೆ ಜಾಗದಲ್ಲಿ ನೀರು ನಿಂತಿರುವುದು, ಸ್ವಚ್ಛತೆ ಕಾಪಾಡದೆ ಇರುವುದು ಸೇರಿ ಹಲವು ನಿಯಮಗಳ ಉಲ್ಲಂಘಿಸಿದರೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ. ಹಾಗೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ದಂಡ ವಿಧಿಸುವ ನಿಯಮ ಜಾರಿಯಲ್ಲಿರಲಿದೆ ಎಂದಿದ್ದಾರೆ.
ಇನ್ನು ಮನೆ ಮುಂದೆ ನೀರು ನಿಂತಿರುವುದು, ಮನೆಯ ಸುತ್ತ ಮುತ್ತ ಸ್ವಚ್ಚತೆ ಕಾಪಾಡದೆ ಇದ್ದರೆ ದಂಡ ಬೀಳುವುದು ಖಚಿತವಾಗಿದೆ. ಗ್ರಾಮೀಣ ಪ್ರದೇಶದ ಮನೆಗಳಿಗೆ 200ರೂ ಹಾಗೂ ನಗರ ಪ್ರದೇಶಗಳಲ್ಲಿ 400 ರೂಪಾಯಿ ದಂಡ ವಿಧಿಸಲಾಗುವುದು. ಅಲ್ಲದೇ ಶಾಲಾ ಕಾಲೇಜು, ಹೋಟೆಲ್, ಲಾಡ್ಜ್, ರೆಸಾರ್ಟ್ಗಳು ಸೇರಿದಂತೆ ವಾಣಿಜ್ಯ ಸಂಘ, ಸಂಸ್ಥೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ 500 ಹಾಗೂ ನಗರ ಪ್ರದೇಶಗಳಲ್ಲಿ 1000 ರೂ. ದಂಡ ನಿಗದಿಪಡಿಸಲಾಗಿದೆ.
ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಅಧಿಕಾರಿಗಳು ಖಾಲಿ ಸ್ಥಳಗಳು, ಕಟ್ಟಡಗಳು, ನೀರಿನ ಟ್ಯಾಂಕ್‌ಗಳು, ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ನಿಯಮಿತವಾಗಿ ತಪಾಸಣೆಗಳನ್ನು ನಡೆಸುತ್ತಾರೆ. ಈಡಿಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಅನುಕೂಲವಾಗುವಂತೆ ನೀರು ಸಂಗ್ರಹಣೆಯಾಗಬಾರದು. ಸೊಳ್ಳೆಯ ನಿಯಂತ್ರಣಕ್ಕೆ ಆಯಾ ಸ್ಥಳೀಯ ಆಡಳಿವು ಕ್ರಮಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದ್ದಾರೆ.
ಸದ್ಯ ಬಿಬಿಎಂಪಿ ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ನಿವಾಸಿಗಳಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡುತ್ತಲೇ ಇದೆ. ಈಗ ಈ ಸೊಳ್ಳೆಗಳನ್ನು ಪರಿಸರ ಸ್ನೇಹಿ ಸೊಳ್ಳೆ ನಾಶಕಗಳ ಬಳಕೆಗೆ ಮುಂದಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಈ ಪರಿಸರ ಸ್ನೇಹಿ ಸೊಳ್ಳೆ ಬಲೆಯನ್ನು ಪ್ರತಿ 50 ಮೀಟರ್‌ಗೆ ಇರಿಸಲಾಗುತ್ತದೆ. ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವಲ್ಲಿ ಈ ಬಲೆಗಳು ಎಷ್ಟು ಪರಿಣಾಮಕಾರಿ ಎಂಬುದನ್ನು ಪರೀಕ್ಷಿಸಬೇಕಾಗಿದೆ.
ಡೆಂಗ್ಯೂ ಜ್ವರದ ಲಕ್ಷಣಗಳೇನು?
ತೀವ್ರ ಜ್ವರ: ಡೆಂಗ್ಯೂ ಜ್ವರದ ಲಕ್ಷಣಗಳಲ್ಲಿ ಪ್ರಮುಖವಾಗಿ ತೀವ್ರ ಜ್ವರ ಕಾಣಿಸಿಕೊಳ್ಳುವುದು ಅದರಲ್ಲೂ ಏಕಾಏಕಿ ಜ್ವರ ಕಾಣಿಸಕೊಳ್ಳುವುದು. 2 ರಿಂದ 7 ದಿನಗಳವರೆಗೆ ಜ್ವರ ಇರುತ್ತದೆ. ಜ್ವರವು ಆಗಾಗ್ಗೆ ತೀವ್ರವಾದ ಬೆವರುವಿಕೆಗೆ ಕಾರಣವಾಗುವುದು.
ತೀವ್ರ ತಲೆನೋವು: ಡೆಂಗ್ಯೂ ಜ್ವರವು ಸಾಮಾನ್ಯವಾಗಿ ತೀವ್ರವಾದ ತಲೆನೋವಿಗೆ ಕಾರಣವಾಗುತ್ತದೆ. ಇಡೀ ತಲೆ ಬಾರವಾದಂತಹ ಲಕ್ಷಣವು ಎದುರಾಗುತ್ತದೆ. ತಲೆಯ ಮುಂಭಾಗ ಕಣ್ಣಿನ ಒಳಗೆ ತೀವ್ರ ನೋವು ಕಾಣಿಸಿಕೊಳ್ಳುತ್ತದೆ.
ಸ್ನಾಯು ಮತ್ತು ಕೀಲು ನೋವು: ಡೆಂಗ್ಯೂ ಜ್ವರವು ಸಾಮಾನ್ಯವಾಗಿ ತೀವ್ರವಾದ ಸ್ನಾಯು ಮತ್ತು ಕೀಲು ನೋವನ್ನು ಉಂಟುಮಾಡುತ್ತದೆ, ಇದನ್ನು ಉಂಟುಮಾಡುವ ತೀವ್ರ ಅಸ್ವಸ್ಥತೆಯಿಂದಾಗಿ ಬ್ರೇಕ್ಬೋನ್ ಜ್ವರ ಎಂದು ಸಹ ಕರೆಯಲಾಗುತ್ತದೆ. ಈ ವೇಳೆ ಮೈ ಕೈ ನೋವಿನಿಂದ ಎದ್ದು ಓಡಾಡಲು ಆಗದ ಸ್ಥಿತಿ ಉಂಟಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications