Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಈ 3 ಯೋಗಾಸನ ಮಾಡಿದರೆ ಕೀಲು ನೋವಿನ ಸಮಸ್ಯೆಯೇ ಕಾಡಲ್ಲ
ದೇಹ, ಮನಸ್ಸು, ಮತ್ತು ಆತ್ಮ - ಈ ಮೂರನ್ನೂ ಬೆಸೆದು ಆರೋಗ್ಯವನ್ನ ವರ್ಧಿಸುವ, ಆಧ್ಯಾತ್ಮಿಕ ಹಾಗೂ ದೈಹಿಕ ಆಚರಣೆಗಳೆರಡನ್ನೂ ಒಳಗೊಂಡಿರುವ, ಯಾವುದಾದರೊಂದು ಮಾರ್ಗೋಪಾಯವಿದ್ದರೆ, ನಿಸ್ಸಂದೇಹವಾಗಿ ಅದು ಭಾರತೀಯ ಯೋಗ ಮಾರ್ಗವೇ ಸರಿ! ಯೋಗದಿಂದಾಗುವ ಆರೋಗ್ಯ ಲಾಭಗಳು ಹಲವಾರು!! ಕೀಲುಗಳ ಆರೋಗ್ಯವನ್ನ ಸುಧಾರಿಸಿಕೊಂಡು ಅದನ್ನ ಹಾಗೆಯೇ ಕಾಪಿಟ್ಟುಕೊಳ್ಳಬೇಕೂಂತ ಬಯಸುವವರಿಗೆ ಯೋಗವು ಒಂದು ಅತ್ಯುತ್ತಮ ಪರಿಹಾರ. ಹಾಗಾಗಿ, ನೀವೂ ಒಂದೊಮ್ಮೆ ಕೀಲುನೋವಿನಿಂದ ಬಳಲುತ್ತಿದ್ದರೆ, ನಿಮ್ಮ ಚಾಪೆಯನ್ನ ನೀಟಾಗಿ ಬಿಡಿಸಿಕೊಳ್ಳಿ ಹಾಗೂ ನಾವು ಈ ಕೆಳಗೆ ಪ್ರಸ್ತಾಪಿಸಿರುವ ಯೋಗವನ್ನ ಮಾಡೋದಕ್ಕೆ ಮುಂದಾಗಿ!!

ಆರಂಭದ ಹಂತದಲ್ಲಿ, ನೀವು ವಾರಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಕೈಗೊಳ್ಳುವುದಕ್ಕಾಗಿ, ನಾವಿಲ್ಲಿ ನಿಮಗಾಗಿ ಮೂರು ಸರಳ ಭಂಗಿಗಳನ್ನ (ಆಸನಗಳನ್ನ) ಪರಿಚಯಿಸುತ್ತಿದ್ದೇವೆ:

1. ಸೇತು ಭಂಗಿ(Bridge Pose)
ನಿಮ್ಮ ಕಾಲಗಂಟುಗಳನ್ನು ಶಕ್ತಿಯುತವಾಗಿಸಬಲ್ಲ ಒಂದು ಸರ್ವೋದ್ದೇಶದ ಆಸನವು ಇದಾಗಿದೆ.

ಆಸನವನ್ನು ಆಚರಿಸಲು/ಕೈಗೊಳ್ಳಲು ಸೂಚನೆಗಳು:
ಬೆನ್ನ ಮೇಲೆ ಅಂಗಾತ ಮಲಗಿಕೊಳ್ಳಿ
ನಿಮ್ಮ ಮೊಣಕಾಲುಗಳನ್ನು ಮಡಚಿ ಹಾಗೂ ನಿಮ್ಮ ಪಾದಗಳನ್ನ ನೆಲದ ಮೇಲೆ ಊರಿ.
ಶ್ವಾಸವನ್ನ ಹೊರಗೆ ಬಿಡಿ ಹಾಗೂ ನಿಮ್ಮ ಒಳಕಾಲುಗಳನ್ನ ಮತ್ತು ತೋಳುಗಳನ್ನ ನೆಲಕ್ಕೆ ಬಿಗಿಯಾಗಿ ಒತ್ತಿ ಹಿಡಿಯುತ್ತಾ, ನಿಮ್ಮ ಪೃಷ್ಟಭಾಗವನ್ನು ಸಾವಧಾನವಾಗಿ ನೆಲದಿಂದ ಮೇಲಕ್ಕೆತ್ತಿರಿ.
ನಿಮ್ಮ ತೊಡೆಗಳು ಹಾಗೂ ಒಳಪಾದಗಳು ಸಮಾನಾಂತರವಾಗಿರಲಿ. ಹಸ್ತಗಳು ಪೃಷ್ಟಭಾಗದ ಕೆಳಗಡೆ ನೆಲವನ್ನು ಹಿಡಿದುಕೊಂಡಿರಲಿ. ಹಸ್ತಗಳಿಂದಾರಂಭಿಸಿ ತೋಳುಗಳವರೆಗೂ ಕೈಗಳು ನೆಲವನ್ನು ಹಿಡಿದುಕೊಂಡಿರಲಿ, ಆ ಮೂಲಕ ದೇಹದ ಭಾರ ಭುಜಗಳ ಮೇಲೆ ಬೀಳುವಂತಿರಲಿ.
ತೊಡೆಗಳು ನೆಲಕ್ಕೆ ಹೆಚ್ಚುಕಡಿಮೆ ಸಮಾನಾಂತರವಾಗುವವರೆಗೂ ನಿಮ್ಮ ಪೃಷ್ಟಗಳನ್ನ ಮೇಲಕ್ಕೆತ್ತಿರಿ.
ಇದೇ ಭಂಗಿಯಲ್ಲಿ ಸುಮಾರು 20 ರಿಂದ 40 ಸೆಕೆಂಡುಗಳವರೆಗೆ ಹಾಗೆಯೇ ಇರಿ (ಈ ಅವಧಿಯನ್ನು ಕ್ರಮೇಣವಾಗಿ ಹೆಚ್ಚು ಮಾಡುತ್ತಾ ಬನ್ನಿ). ಉಸಿರನ್ನು ಹೊರಬಿಡುತ್ತಾ, ಬೆನ್ನುಹುರಿಯನ್ನು ನಿಧಾನವಾಗಿ ನೆಲದತ್ತ ತರುತ್ತಾ ಸಹಜ ಸ್ಥಿತಿಗೆ ಬನ್ನಿ.

ಫಲಕಾಸನ ಭಂಗಿ(Plank Pose)
ಈ ಆಸನವು ಕಿಬ್ಬೊಟ್ಟೆಯನ್ನು ಒಳಗೊಂಡಿದ್ದು, ಕಿಬ್ಬೊಟ್ಟೆಯನ್ನ ಬಲಯುತವಾಗಿಸುತ್ತದೆ ಮತ್ತು ತೋಳುಗಳನ್ನು ಹಾಗೂ ಬೆನ್ನೆಲುಬನ್ನೂ ಗಟ್ಟಿಗೊಳಿಸುತ್ತದೆ

ಆಸನವನ್ನು ಆಚರಿಸಲು/ಕೈಗೊಳ್ಳಲು ಸೂಚನೆಗಳು:
ಟೇಬಲ್ ಟಾಪ್ ಭಂಗಿಯೊಂದಿಗೆ ಆರಂಭಿಸಿರಿ. ಕಾಲಗಂಟುಗಳನ್ನು ನಿಮ್ಮ ಪೃಷ್ಟಗಳ ಕೆಳಗೆ ಬರುವಂತೆ ಹೊಂದಿಸಿಕೊಳ್ಳಿರಿ ಹಾಗೂ ನಿಮ್ಮ ಭುಜಗಳ ಭಾರವು ನಿಮ್ಮ ಮೊಣಕೈಗಳ ಮೇಲೆ ಬೀಳುವಂತಿರಲಿ
ಹಸ್ತಗಳನ್ನ ನೆಲಕ್ಕೆ ಒತ್ತಿ ಹಿಡಿದುಕೊಳ್ಳಿರಿ. ಒಂದು ಬಾರಿಗೆ ಒಂದು ಪಾದವನ್ನು ಹೊರಕ್ಕೆ ಚಾಚಿರಿ ಹಾಗೂ ಆ ಮೂಲಕ ನಿಮ್ಮ ಎದೆ ಮತ್ತು ಹೊಟ್ಟೆಯ ಭಾಗಗಳನ್ನು ಭೂಮಿಗೆ ಸಮಾನಾಂತರವಾಗಿ ಇರಿಸಿಕೊಳ್ಳಿರಿ.
ತೋಳುಗಳು ನೆಲಕ್ಕೆ ಲಂಬವಾಗಿರಲಿ ಹಾಗೂ ಭುಜಗಳು ನಿಮ್ಮ ಮೊಣಕೈಗಳ ಮೇಲೆ ಸರಳರೇಖೆಯಲ್ಲಿರಲಿ.
ನಿಮ್ಮ ತೋಳಿನ ಹೊರಭಾಗಗಳನ್ನು ಒಳಮುಖವಾಗಿ ಒತ್ತಿಕೊಳ್ಳಿ ಹಾಗೂ ನಿಮ್ಮ ಬೆನ್ನ ಹಿಂಭಾಗದ ಮೂಳೆಗಳನ್ನ ವಿಶಾಲವಾಗಿ ಹರವಿಕೊಳ್ಳಿ.
ಎದೆಯನ್ನ ಹರವಿಟ್ಟುಕೊಳ್ಳಿ, ಪೃಷ್ಟಭಾಗವನ್ನು ಕೆಳಮುಖವಾಗಿ ಎಳೆದುಕೊಳ್ಳಿ, ತೊಡೆಗಳನ್ನೆತ್ತಿ, ಕಾಲುಗಳ ಮೂಲಕ ಬೆನ್ನನ್ನು ತಲುಪಲು ಯತ್ನಿಸಿರಿ.
ತಲೆಯ ಭಾಗವನ್ನು ಮುಂದಕ್ಕೆ ಚಾಚಿ ನಯವಾಗಿ ನೆಲದತ್ತ ದಿಟ್ಟಿಸಿರಿ.
5 ರಿಂದ 10 ಉಸಿರಾಟ ಚಕ್ರಗಳವರೆಗೆ ಇದೇ ಸ್ಥಿತಿಯಲ್ಲಿರಿ.

ತಾಡಾಸನ ಭಂಗಿ (standing bow pose)
ಆರೋಗ್ಯಕರವಾದ ದೇಹ ಸಮತೋಲನವನ್ನ ಹೊಂದುವ ದಿಶೆಯಲ್ಲಿ ಇದು ಒಂದು ಅತ್ಯುತ್ತಮ ಆಸನ. ಇಷ್ಟು ಮಾತ್ರವೇ ಅಲ್ಲ, ಈ ಆಸನವು ನಿಮ್ಮ ಪೃಷ್ಟಭಾಗದ ಚಲನೆಯ ತೊಡಕನ್ನ ನಿವಾರಿಸುತ್ತದೆ, ಎದೆಭಾಗದ, ಹೊಟ್ಟೆಯ ಹಾಗೂ ಭುಜದ ಸ್ನಾಯುಗಳನ್ನ ಹಿಗ್ಗಿಸುತ್ತದೆ. ಬೆನ್ನುಮೂಳೆಯನ್ನ ಗಟ್ಟಿಗೊಳಿಸುತ್ತದೆ.

ಆಸನವನ್ನು ಆಚರಿಸಲು/ಕೈಗೊಳ್ಳಲು ಸೂಚನೆಗಳು:
ನೇರವಾಗಿ ನಿಂತುಕೊಳ್ಳಿ. ನಿಮ್ಮ ಕಾಲ ಹೆಬ್ಬೆರಳುಗಳು ನೆಲವನ್ನು ಸ್ಪರ್ಶಿಸುತ್ತಿರಲಿ, ಹಾಗೂ ಹಿಮ್ಮಡಿಗಳು ಸುಮಾರು ಒಂದು ಇಂಚಿನಷ್ಟು ದೂರದಲ್ಲಿರಲಿ.
ನಿಮ್ಮ ಅಂಗೈಗಳನ್ನು ಮುಮ್ಮುಖವಾಗಿರಿಸಿರಿ/ಎದುರು ಮುಖವಾಗಿರಿಸಿರಿ ಹಾಗೂ ಆ ಮೂಲಕ ಹೊಟ್ಟೆಯ ಮತ್ತು ಎದೆಯ ಭಾಗವನ್ನು ತೆರೆಯಿರಿ/ಮುಂಚಾಚಿರಿ.
ನಿಮ್ಮ ಎಡ ಪಾದವನ್ನು ಎತ್ತಿರಿ, ನಿಮ್ಮ ಎಡಗಾಲನ್ನು ಹಿಂದಕ್ಕೆ ಮಡಿಚಿರಿ, ನಿಮ್ಮ ಎಡಗಾಲ ಹಿಮ್ಮಡಿಯು ನಿಮ್ಮ ಪೃಷ್ಟಗಳ ಮೂಳೆಗಳಿಗೆ ಅಭಿಮುಖವಾಗಿ ಬರುವಂತೆ ಕಾಲನ್ನು ಒತ್ತಿಹಿಡಿಯಿರಿ.
ಎಡಗೈಯಿಂದ ನಿಮ್ಮ ಬೆನ್ನಭಾಗವನ್ನು ತಲುಪಿರಿ ಹಾಗೂ ನಿಮ್ಮ ಎಡಪಾದದ ಒಳಭಾಗವನ್ನು ಹಿಡಿದುಕೊಳ್ಳಿರಿ.
ನಿಮ್ಮ ಬಲ ತೋಳನ್ನು ನೇರವಾಗಿ ಮೇಲಕ್ಕೆತ್ತಿರಿ.
ಬಲಪಾದವನ್ನು ನೆಲಕ್ಕೆ ಒತ್ತಿ ನಿಂತುಕೊಳ್ಳಿ.
ನಿಮ್ಮ ದೇಹವನ್ನ ನೀಳವಾಗಿ ಚಾಚಿದಂತೆಲ್ಲ ಉಸಿರನ್ನ ಒಳಗೆಳೆದುಕೊಳ್ಳಿರಿ ಹಾಗೂ ನಿಮ್ಮ ಬೆರಳ ತುದಿಗಳನ್ನ ತಲುಪಿರಿ.
ನಿಮ್ಮ ಎಡ ಹಸ್ತದಲ್ಲಿ ನಿಮ್ಮ ಎಡಪಾದವನ್ನ ಒತ್ತಿ ಹಿಡಿದಿರುವಂತೆಯೇ ಉಸಿರನ್ನು ಹೊರಹಾಕಿರಿ, ಈ ಬಲದಿಂದಲೇ ಎಡಪೃಷ್ಟದ ಮಾಂಸಖಂಡವನ್ನ ಹಗುರವಾಗಿ ಚಾಚಲು ಯತ್ನಿಸಿರಿ.
ಇದೇ ಭಂಗಿಯಲ್ಲಿದ್ದುಕೊಂಡು ನಿಮ್ಮ ಹೊಟ್ಟೆ ಮತ್ತು ಎದೆಯ ಭಾಗಗಳನ್ನು ಚಾಚುವಾಗ ಉಸಿರನ್ನ ಒಳಗೆ ತೆಗೆದುಕೊಳ್ಳಿ ಹಾಗೂ ಬಲವಾಗಿ ಒತ್ತಿ ನಿಲ್ಲುವಾಗ ಉಸಿರನ್ನ ಹೊರಹಾಕಿ.
30 ರಿಂದ 60 ಸೆಕೆಂಡುಗಳವರೆಗೆ, ಒಂದು ಅಥವಾ ಎರಡು ಆವೃತ್ತಿಗಳವರೆಗೆ ಇದೇ ಭಂಗಿಯಲ್ಲಿರಿ.
ಮತ್ತೊಂದು ಪಾರ್ಶ್ವದಲ್ಲೂ ಮೇಲೆ ಹೇಳಿದ ಸೂಚನೆಗಳನ್ನ ಕೈಗೊಳ್ಳಿರಿ.



Click it and Unblock the Notifications











