ಸಸ್ಯಾಹಾರ ಮಾತ್ರ ಸೇವಿಸಿದರೆ ಮೂಳೆ ಮುರಿತದ ಸಾಧ್ಯತೆ ಹೆಚ್ಚು: ಅಧ್ಯಯನ ವರದಿ

ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರ ಹೆಚ್ಚಿನ ಜನಪ್ರಿಯತೆಯನ್ನ ಗಳಿಸಿಕೊಳ್ಳುತ್ತಿದೆ. ಮಾಂಸಾಹಾರಕ್ಕೆ ಹೋಲಿಸಿದಲ್ಲಿ ಸಸ್ಯಾಹಾರದಲ್ಲಿ ಕೊಬ್ಬು, ಕೊಲೆಸ್ಟೆರಾಲ್ ಮೊದಲಾದ ಎಲ್ಲ ಹಾನಿಕಾರಕ ಅಂಶಗಳೂ ಕಡಿಮೆ ಪ್ರಮಾಣದಲ್ಲಿರುತ್ತವೆ. ನಮ್ಮ ಜೀರ್ಣಾಂಗವ್ಯೂಹ ಅನ್ನೋದು ಸಸ್ಯಾಹಾರ ಸೇವನೆಗೆ ಹೊಂದಿಕೊಳ್ಳೋ ರೀತಿಯಲ್ಲಿ ವಿನ್ಯಾಸಗೊಳಿಸಲ್ಪಟ್ಟಿದೆಯಾದ್ದರಿಂದ ಸಸ್ಯಾಹಾರವು ಸುಲಭವಾಗಿ ಜೀರ್ಣಗೊಂಡು ರಕ್ತಗತವಾಗುತ್ತದೆ ಅನ್ನೋದು ಇತ್ತೀಚಿಗಿನ ಸಂಶೋಧನೆಗಳ ಅಭಿಪ್ರಾಯ.

ಇವೆಲ್ಲ ಸರಿ; ಆದರೆ ಸಸ್ಯಾಹಾರಿಗಳು ಗಮನದಲ್ಲಿಟ್ಟುಕೊಳ್ಳಬೇಕಾದ ಒಂದು ಪ್ರಮುಖ ಸಂಗತಿಯ ಬಗ್ಗೆ ನಾವಿಲ್ಲಿ ಹೇಳೋದಕ್ಕೆ ಇಷ್ಟಪಡ್ತೀವಿ. ಅದೇನಂದ್ರೆ, ಸಸ್ಯಾಹಾರಿಗಳು ತಾವು ಸೇವಿಸೋ ಆಹಾರದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಗಳು ಇರೋದನ್ನ ಮಾತ್ರ ಖಾತ್ರಿ ಮಾಡ್ಕೋಬೇಕು. ಇಲ್ಲವಾದರೆ, ಅವರ ಮೂಳೆಗಳು ಸುಲಭವಾಗಿ ಮುರಿದುಹೋಗೋ ಸಾಧ್ಯತೆಗಳು ಹೆಚ್ಚಾಗಿರುತ್ವೆ. ಹಾಗಂತ ಇತ್ತೀಚಿಗಿನ ಅಧ್ಯಯನವೊಂದು ಶ್ರುತಪಡಿಸಿದೆ.

ಅಧ್ಯಯನ ವರದಿ

ಅಧ್ಯಯನ ವರದಿ

ಸಂಶೋಧಕರು ಕಂಡುಕೊಂಡಿರೋ ಪ್ರಕಾರ, ಮೂಳೆಮುರಿತಕ್ಕೊಳಗಾಗುವ ಸಂಭವನೀಯತೆ ಸಸ್ಯಾಹಾರಿಗಳಲ್ಲಿ ಶೇ. 43% ರಷ್ಟು ಹೆಚ್ಚಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಸೊಂಟ, ಕಾಲುಗಳು, ಹಾಗೂ ಬೆನ್ನುಮೂಳೆಗಳ ಮುರಿತಕ್ಕೊಳಗಾಗೋ ಸಾಧ್ಯತೆ ಮಾಂಸ ಮತ್ತು ಹೈನು ಪದಾರ್ಥಗಳನ್ನ ಸೇವಿಸೋವವರಿಗಿಂತ ಈ ಸಸ್ಯಾಹಾರಿಗಳಲ್ಲೇ ಜಾಸ್ತಿ ಅನ್ನೋದು ಅವರ ಅಭಿಪ್ರಾಯ. ಒಂದು ವೇಳೆ ಇದೇ ಸಸ್ಯಾಹಾರಿಗಳು ತಮ್ಮ ಊಟದಲ್ಲಿ ಕ್ಯಾಲ್ಸಿಯಂನಿಂದ ಸಮೃದ್ಧವಾಗಿರೋ ಆಹಾರಪದಾರ್ಥಗಳನ್ನ ಸೇರಿಸಿಕೊಂಡಿದ್ದೇ ಆದ್ರೆ, ಈ ಅಪಾಯದಿಂದ ಮುಕ್ತರಾಗಬಹುದು ಅಂತಾನೂ ಹೇಳ್ತಾರೆ ಸಂಶೋಧಕರು.

ಬಿ.ಎಂ.ಸಿ. ಮೆಡಿಸಿನ್ ನಲ್ಲಿ ಇಂದು ಪ್ರಕಟಗೊಂಡಿರೋ ಅಧ್ಯಯನವೊಂದರ ಪ್ರಕಾರ, ಸಸ್ಯಾಹಾರಿಗಳಲ್ಲಿ ಹಾಗೂ ಸಸ್ಯಾಹಾರದೊಂದಿಗೆ ಮೀನನ್ನು ಮಾತ್ರ ಸೇವಿಸುವವರಲ್ಲಿ, ಮೂಳೆಮುರಿತದ ಅಪಾಯವು ಹೆಚ್ಚಾಗಿತ್ತು. ಆದರೆ ಅದೇ ವ್ಯಕ್ತಿಗಳು ತಮ್ಮ ಊಟದಲ್ಲಿ ಪ್ರೋಟೀನ್ ಹಾಗೂ ಕ್ಯಾಲ್ಸಿಯಂನಿಂದ ಸಮೃದ್ಧವಾಗಿರೋ ಆಹಾರವಸ್ತುಗಳನ್ನ ಸೇರಿಸಿಕೊಂಡಾಗ ಈ ಮೂಳೆಮುರಿತದ ಅಪಾಯ ಸಾಕಷ್ಟು ಕಡಿಮೆಯಾಗಿದ್ದುದು ಕಂಡುಬಂತು.

ಸಸ್ಯಾಹಾರಿಗಳ ಮೂಳೆ ಮಾಂಸಾಹಾರಿಗಳ ಮೂಳೆಯಷ್ಟು ಬಲವಾಗಿರಲ್ಲ

ಸಸ್ಯಾಹಾರಿಗಳ ಮೂಳೆ ಮಾಂಸಾಹಾರಿಗಳ ಮೂಳೆಯಷ್ಟು ಬಲವಾಗಿರಲ್ಲ

ಆದರೆ ಬರೀ ಇಷ್ಟಕ್ಕೆ ಎಲ್ಲವೂ ಸರಿಹೋಗಲಿಲ್ಲ!! ಆ ಸಸ್ಯಾಹಾರಿಗಳು ತಮ್ಮ ಊಟದಲ್ಲಿ ಪ್ರೋಟೀನ್ ಹಾಗೂ ಕ್ಯಾಲ್ಸಿಯಂನಿಂದ ಸಮೃದ್ಧವಾಗಿರೋ ಸಾಕಷ್ಟು ಆಹಾರವಸ್ತುಗಳನ್ನ ಸೇರಿಸಿಕೊಂಡ ಬಳಿಕವೂ, ಮೂಳೆಮುರಿತದ ವಿಚಾರದಲ್ಲಿ ಹೈನಪದಾರ್ಥಗಳನ್ನ/ಮಾಂಸಾಹಾರವನ್ನ ಸೇವಿಸುವವರಷ್ಟು ಅವರಿನ್ನೂ ಸುರಕ್ಷಿತವಾಗಿರಲಿಲ್ಲ. ಅರ್ಥಾತ್ ಅವರ ಊಟದಲ್ಲಿ ಇನ್ನೂ ಏನೋ ಕೊರತೆಯಿತ್ತು! ಆ ಕೊರತೆಯು ಯಾವುದರದ್ದಾಗಿತ್ತೆಂದರೆ ಅದು ಮುಖ್ಯವಾಗಿ ವಿಟಮಿನ್ ಬಿ12 ಹಾಗೂ ವಿಟಮಿನ್ ಡಿ ಗಳದ್ದು!!

ಸಂಶೋಧಕರು ಇಷ್ಟೆಲ್ಲವನ್ನೂ ಕಂಡುಹಿಡಿದರೂ ಕೂಡ, ಅವರು ಹೀಗೊಂದು ಕರೆಯನ್ನೂ ಕೊಡುತ್ತಾರೆ, ಅದೇನೆಂದರೆ, "ಜನರೇನೂ ಸಸ್ಯಾಹಾರದ ಸೇವನೆಯಿಂದ ದೂರವಾಗಬೇಕಾದ ಅಗತ್ಯವಿಲ್ಲ, ಆಗಲೂಕೂಡದು. ಏಕೆಂದರೆ, ಮಾಂಸಾಹಾರವನ್ನು ಸೇವಿಸದೆಯೇ ನಿಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನ ಪಡೆದುಕೊಳ್ಳೋಕೆ ಸಾಧ್ಯವಿದೆ. ಅದಕ್ಕೆ ಸ್ವಲ್ಪ ಪ್ಲಾನಿಂಗ್ ಇರಬೇಕಷ್ಟೇ" ಎನ್ನುತ್ತಾರೆ ಅವರು.

ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಗಳಷ್ಟೇ ಮೂಳೆಮುರಿತಕ್ಕೆ ಕಾರಣವಾಗೋದಲ್ಲ!

ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಗಳಷ್ಟೇ ಮೂಳೆಮುರಿತಕ್ಕೆ ಕಾರಣವಾಗೋದಲ್ಲ!

ಸರಾಸರಿ 18 ವರ್ಷಗಳಿಂದಲೂ ನಿಗಾದಲ್ಲಿರಿಸಲ್ಪಟ್ಟಿದ್ದ ಯು.ಕೆ. ಯ ಸುಮಾರು 54,898 ಪುರುಷರು ಹಾಗೂ ಮಹಿಳೆಯರ ಅಂಕಿ-ಅಂಶಗಳನ್ನ ಆಕ್ಸ್ಫ಼ರ್ಡ್ ಮತ್ತು ಬ್ರಿಸ್ಟಾಲ್ ವಿಶ್ವವಿದ್ಯಾಲಯಗಳ ಸಂಶೋಧಕರು ವಿಶ್ಲೇಷಿಸಿದರು.

ಅಪಘಾತಗಳಿಂದಾದ ಮೂಳೆಮುರಿತಗಳನ್ನೂ ಒಳಗೊಂಡಂತೆ ಇನ್ನಿತರ ಬೇರೆ ಬೇರೆ ಕಾರಣಗಳಿಂದಾದ ಮೂಳೆಮುರಿತಗಳನ್ನ ಅವರು ವಿಶ್ಲೇಷಿಸಿದಾಗ, ನಿರ್ಧಿಷ್ಟವಾದ ಯಾವುದಾದರೊಂದು ಆಹಾರಪದ್ಧತಿಯೇ ಮೂಳೆಮುರಿತಗಳಿಗೆ ನೇರವಾಗಿ ಕಾರಣವಾಗಿದೆಯೇ ಅನ್ನೋದನ್ನ ನಿರ್ಧರಿಸೋಕೆ ಅವರಿಂದ ಸಾಧ್ಯವಾಗಲಿಲ್ಲ. ಆದರೂ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಯುಕ್ತ ಆಹಾರ ಸೇವನೆಯು ಕೆಲವರಲ್ಲಿ ಕಡಿಮೆಪ್ರಮಾಣದ ಮೂಳೆಮುರಿತಕ್ಕೆ ಕಾರಣವಾಗಿತ್ತೆಂದು ಅವರು ನಂಬುತ್ತಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಕೆಂಪು ಮಾಂಸವನ್ನ ತಿನ್ನದೇ ಇದ್ದಂತಹ ಮಾಂಸಾಹಾರಿಗಳು, ಹಾಗೆ ತಿನ್ನುವ ಇತರ ಮಾಂಸಾಹಾರಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೊಂಟದ ಮೂಳೆಯಮುರಿತದ ಅಪಾಯಕ್ಕೆ ಒಳಗಾಗಿದ್ದರು. ಅವರ ಆದಾಯ, ಶಿಕ್ಷಣಗಳಂತಹ ಜೀವನಶೈಲಿಯ ಇನ್ನಿತರ ಅಂಶಗಳ ಹೊಂದಾಣಿಕೆಗಳ ಹೊರತಾಗಿಯೂ...

ಅಧ್ಯಯನವು ಒಳಗೊಂಡಿದ್ದ ಸಸ್ಯಾಹಾರಿಗಳು ತಮ್ಮ ಊಟಗಳಲ್ಲಿ ಎರಡೂ ಜೀವಸತ್ವಗಳನ್ನ ಕಡಿಮೆ ಮಟ್ಟಗಳಲ್ಲಿ ಹೊಂದಿದ್ದುದು ಕಂಡುಬಂತು. ಇದು ಸಹಜವೇ ಆಗಿತ್ತು. ಏಕೆಂದರೆ, ಅವರು ಬಳಸದೇ ಇದ್ದ ಮಾಂಸ, ಮೊಟ್ಟೆಗಳು, ಮತ್ತು ಮೀನುಗಳು ಪ್ರೋಟೀನ್ ನ ಸಮೃದ್ಧ ಆಗರಗಳು. ಮಾಂಸಾಹಾರಿಗಳ ಪಾಲಿಗೆ ಹೈನೋತ್ಪನ್ನಗಳು ಕ್ಯಾಲ್ಸಿಯಂನ ಪ್ರಮುಖ ಆಗರ.

ಸಸ್ಯಾಹಾರಿಗಳ ಬಾಡಿ ಮಾಸ್ ಇಂಡೆಕ್ಸ್ ಕಡಿಮೆ ಇರುವುದು ಕೂಡ ಮೂಳೆ ಮುರಿತಕ್ಕೆ ಕಾರಣ

ಸಸ್ಯಾಹಾರಿಗಳ ಬಾಡಿ ಮಾಸ್ ಇಂಡೆಕ್ಸ್ ಕಡಿಮೆ ಇರುವುದು ಕೂಡ ಮೂಳೆ ಮುರಿತಕ್ಕೆ ಕಾರಣ

ಸಸ್ಯಾಹಾರಿಗಳ ಬಾಡಿ ಮಾಸ್ ಇಂಡೆಕ್ಸ್ (ತೂಕಕ್ಕೂ ಎತ್ತರಕ್ಕೂ ನಡುವಿನ ಅನುಪಾತ) ಕೂಡ ಕಡಿಮೆಯಾಗಿದ್ದು, ಇದೂ ಕೂಡ ಅವರಲ್ಲಿ ಹೆಚ್ಚಿದ್ದ ಮೂಳೆಮುರಿತದ ಅಪಾಯಕ್ಕೆ ಒಂದು ಕಾರಣವಾಗಿತ್ತು.

"ಕಡಿಮೆ ಬಿ.ಎಮ್.ಐ., ಗೂ ಸೊಂಟದ ಮೂಳೆಮುರಿತದ ಅಪಾಯಕ್ಕೂ ಸಂಬಂಧವಿದೆ ಎಂದು ಹಿಂದಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಗಳೆರಡರ ಸೇವನೆಯೂ ಮೂಳೆಗಳ ದುರ್ಬಲ ಆರೋಗ್ಯದೊಂದಿಗೆ ನಂಟು ಹೊಂದಿವೆ" ಎನ್ನುತ್ತಾರೆ ಡಾ. ಟ್ಯಾಮೀ ಟಾಂಗ್ ಅವರು.

 ಸಸ್ಯಾಹಾರಿಗಳ ಆಹಾರ ಹೀಗಿರಲಿ

ಸಸ್ಯಾಹಾರಿಗಳ ಆಹಾರ ಹೀಗಿರಲಿ

ಒಂದು ಸಂತುಲಿತ ಸಸ್ಯಾಹಾರದ ಊಟವು, ಪ್ರೋಟೀನ್ ನ ಪೂರೈಕೆಗಾಗಿ ಹುರುಳಿ, ಓಟ್ಸ್, ನವಣೆ ಅಕ್ಕಿ, ಮತ್ತು ಸೋಯಾಗಳನ್ನ ಒಳಗೊಂಡಿರುತ್ತೆ. ಇನ್ನು ಕ್ಯಾಲ್ಸಿಯಂ ನ ಪೂರೈಕೆಗಾಗಿ ಕಡುಹಸುರು ಸೊಪ್ಪಿನ ಪದಾರ್ಥಗಳು, ಚಿಯಾ ಬೀಜಗಳನ್ನ ಒಳಗೊಂಡಿರುತ್ತೆ. ನೀವು ಸಸ್ಯಾಹಾರಿಗಳಾಗಿರಿ ಅಥವಾ ಮಾಂಸಾಹಾರಿಗಳಾಗಿರಿ, ವಿಟಮಿನ್ ಡಿ ಯಂತಹ ಇನ್ನಿತರ ಜೀವಸತ್ವಗಳನ್ನ ಬಿಸಿಲಿನಂತಹ ಮೂಲದಿಂದ ನಿಮ್ಮ ದೇಹಕ್ಕೆ ಪೂರೈಕೆ ಮಾಡ್ಕೊಳ್ಳೋದು ತುಂಬಾನೇ ಪ್ರಯೋಜನಕಾರಿ.

ಶುದ್ಧ ಸಸ್ಯಾಹಾರದಲ್ಲೂ ಯಥೇಚ್ಛವಾದ ಆರೋಗ್ಯ ಪ್ರಯೋಜನಗಳಿವೆ ಅನ್ನೋದನ್ನ ಸಾಬೀತು ಮಾಡೋದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಶುದ್ಧ ಶಾಕಾಹಾರದ ಸೇವನೆ ಅಧಿಕ ರಕ್ತದೊತ್ತಡವನ್ನ ಕಡಿಮೆ ಮಾಡುತ್ತೆ, ಹೃದ್ರೋಗಗಳ ಅಪಾಯವನ್ನ ತಗ್ಗಿಸುತ್ತೆ, ಹಾಗೂ ಮಧುಮೇಹ ಮತ್ತು/ಅಥವಾ ಸ್ಥೂಲಕಾಯದ ಅಪಾಯವನ್ನೂ ತಗ್ಗಿಸುತ್ತೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಯಾರಿಗೆ ಯಾವ ರೀತಿಯ ಆಹಾರಪದ್ಧತಿ ಅತ್ಯಂತ ಸೂಕ್ತ ಅನ್ನೋದು ಆಯಾ ವ್ಯಕ್ತಿಯ ಆರೋಗ್ಯ ಅವಶ್ಯಕತೆಗಳನ್ನ ಅವಲಂಬಿಸಿರುತ್ತೆ ಅಂತಾನೇ ತೀರ್ಮಾನಿಸಬಹುದು.

ವೈಯಕ್ತಿಕ ನೆಲೆಗಟ್ಟಿನಲ್ಲಿ ಜನರು ತಮ್ಮ ತಮ್ಮ ಆಹಾರಪದ್ಧತಿಯ ಪ್ರಯೋಜನಗಳು ಮತ್ತು ಅವುಗಳ ಕೊರತೆಗಳನ್ನ ಪರಿಗಣಿಸಬೇಕು ಹಾಗೂ ತಮ್ಮ ತಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣಗಳಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಗಳಿರೋದನ್ನ ಖಾತ್ರಿಪಡಿಸಿಕೊಳ್ಳಬೇಕು. ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದ ರೀತಿಯಲ್ಲಿ ಒಂದು ಆರೋಗ್ಯಕರವಾದ ಬಿ.ಎಮ್.ಐ. ಅನ್ನ ಕಾಪಿಟ್ಟುಕೊಳ್ಳಬೇಕು.

English summary

Vegans Have A Higher Risk Of Bone Fractures If They Scrimp On Calcium, Protein And B12: Study

Vegans Have A Higher Risk Of Bone Fractures If They Scrimp On Calcium, Protein And B12: Study, read on.
X
Desktop Bottom Promotion