Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯಕರ ಈ 8 ಆಹಾರಗಳನ್ನು ಚೆನ್ನಾಗಿ ಬೇಯಸದಿದ್ದರೆ ಪ್ರಾಣಕ್ಕೆ ಅಪಾಯಕಾರಿ
ಕೆಲವೊಂದು ಆಹಾರಗಳು ಎಷ್ಟು ಆರೋಗ್ಯಕರವೋ ಅಷ್ಟೊಂದು ಅಪಾಯಕರವೂ ಹೌದು ಎಂಬುವುದು ನಿಮಗೆ ಗೊತ್ತೇ? ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಅಣಬೆ, ಕಣಲೆ ಮುಂತಾದ ಆಹಾರಗಳನ್ನು ಸರಿಯಾದ ರೀತಿಯಲ್ಲಿ ಬೇಯಿಸಿ ತಿನ್ನದಿದ್ದರೆ ಸಾವು ಕೂಡ ಸಂಭವಿಸಬಹುದು.

ಆಲೂಗಡ್ಡೆ, ಕಿಡ್ನಿ ಬೀನ್, ಮರ ಗೆಣಸು ಇಂಥ ಆಹಾರಗಳನ್ನು ತಿಂದು ಸಾವನ್ನಪ್ಪಿರುವ ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ ಇಂಥ ಆಹಾರಗಳನ್ನು ತಿನ್ನುವಾಗ ಅವುಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಇಲ್ಲಿ ನಾವು ಯಾವ ಆಹಾರಗಳನ್ನು ಚೆನ್ನಾಗಿ ಬೇಯಿಸಿ ತಿನ್ನದಿದ್ದರೆ ಅಪಾಯಕಾರಿ ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಕಣಲೆ
ಮಲೆನಾಡು ಪ್ರದೇಶಗಳಲ್ಲಿ ಕಣಲೆ ತುಂಬಾ ಪ್ರಸಿದ್ಧಿ. ಮಳೆಗಾಲದ ಸಮಯದಲ್ಲಿ ಬಿದಿರು ಮೊಳಕೆ ಬರುವಾಗ ಅದನ್ನು ಕತ್ತರಿಸಿ ತಂದು 3 ದಿನಗಳ ಕಾಲ ನೀರಿನಲ್ಲಿ ಹಾಕಿ ಆಹಾರ ತಯಾರಿಸಲಾಗುವುದು. ಇದರಿಂದ ಉಪ್ಪಿನಕಾಯಿ ಹಾಗೂ ಸಾರು ಮಾಡಿ ಸವಿಯಲಾಗುವುದು. ಕಣಲೆ ತಿನ್ನಲು ತುಂಬಾ ರುಚಿಕರ ಆದರೆ ಸಾರು ಮಾಡುವಾಗ ಚೆನ್ನಾಗಿ ಬೇಯಿಸಬೇಕು, ಅಲ್ಲದೆ ಕತ್ತರಿಸಿ ತಂದ ದಿನ ಮಾಡಬಾರದು, ಏಕೆಂದರೆ ಇದು ತುಂಬಾ ವಿಷಕಾರಿಯೂ ಹೌದು.

ಮರಗೆಣಸು
ಮರಗೆಣಸು ಹಸಿ ತಿನ್ನಬೇಡಿ, ಏಕೆಂದರೆ ಮರಗೆಣಸಿನಲ್ಲಿ ಸೈನೋಜೆನಿಕ್ ಗ್ಲೂಕೋಸೈಡ್ಸ್ ಅಂಶವಿದ್ದು ಅದು ಹೈಡ್ರೋಜಿನ್ ಸೈನೈಡ್ ಬಿಡುಗಡೆ ಮಾಡುತ್ತದೆ. ಇದು ವಿಷಕಾರಿ. ಇದು ಆರೋಗ್ಯಕರ ಹೌದಾದರೂ ಬೇಯಿಸಿ ತಿನ್ನಿ.

ಚಿಕನ್
ಚಿಕನ್ ಚೆನ್ನಾಗಿ ಬೇಯಿಸಿ ತಿನ್ನಬೇಕು. ಮಾಂಸ ಸರಿಯಾಗಿ ಬೇಯದಿದ್ದರೆ ಸಾಲಮೋನಿಲ್ಲಾ ಎಂಬ ಅಂಶವಿರುತ್ತದೆ. ಆಗ ಮಾಂಸ ತಿಂದಾಗ ಬೇಧಿ, ಕಿಬ್ಬೊಟ್ಟೆ ನೋವು, ವಾಂತಿ ಮುಂತಾದ ಸಮಸ್ಯೆ ಕಾಡಬಹುದು. ಅದರಲ್ಲೂ ಮಕ್ಕಳು ಹಾಗೂ ಗರ್ಭಿಣಿಯರು ಯಾವುದೇ ಮಾಂಸವಾದರೂ ಸರಿ ಚೆನ್ನಾಗಿ ಬೇಯಿಸಿ ತಿನ್ನಬೇಕು.

ಲಿಮಾ ಬೀನ್ಸ್
ನೀವು ಲಿಮಾ ಬೀನ್ಸ್ ಅನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು, ಈ ಬೀನ್ಸ್ ಬೇಯಿಸುವಾಗ ಪಾತ್ರೆಯ ಬಾಯಿ ಮುಚ್ಚಿರಬಾರದು, ಅದರಲ್ಲಿರುವ ಸೈನೈಡ್ ಗ್ಯಾಸ್ ಹೊರ ಹೋಗಬೇಕು.

ಫುಗು ಮೀನು
ಈ ಮೀನು ಎಷ್ಟು ರುಚಿಕರವೋ ಅಷ್ಟು ಅಪಾಯಾರಿಯೂ ಹೌದು, ಆದ್ದರಿಂದ ಇದನ್ನು ಕ್ಲೀನ್ ಮಾಡುವಾಗ ಇದರ ಬಗ್ಗೆ ಚೆನ್ನಾಗಿ ಗೊತ್ತರುವವರೇ ಕ್ಲೀನ್ ಮಾಡಬೇಕು ಹಾಗೂ ಸರಿಯಾಗಿ ಬೇಯಿಸಿ ತಿನ್ನಬೇಕು.

ಕಿಡ್ನಿ ಬೀನ್ಸ್
ಕಿಡ್ನಿ ಬೀನ್ಸ್ ಸರಿಯಾಗಿ ಬೇಯಿಸದಿದ್ದರೆ ತುಂಬಾ ಅಪಾಯಕಾರಿ. ಕಿಡ್ನಿ ಬೀನ್ಸ್ ಅನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅಧಿಕ ಉಷ್ಣತೆಯಲ್ಲಿ ಈ ಬೀನ್ಸ್ ಬೆಂದಾಗ ಯಾವುದೇ ಅಪಾಯ ಉಂಟಾಗುವುದಿಲ್ಲ.

ಅಣಬೆ
ಅಣಬೆ ತುಂಬಾ ಆರೋಗ್ಯಕರ ಹೌದಾದರೂ ಎಲ್ಲಾ ಬಗೆಯ ಅಣಬೆಗು ತಿನ್ನಲು ಯೋಗ್ಯವಲ್ಲ. ಕೆಲವೊಂದು ಅಣಬೆಗಳು ತುಂಬಾ ವಿಷಕಾರಿಯಾಗಿದ್ದು ಅವುಗಳನ್ನು ತಿಂದರೆ ಸಾವು ಸಂಭವಿಸಬಹುದು. ಅಲ್ಲದೆ ತಿನ್ನುವ ಅಣಬೆಯಾದರೂ ಅವುಗಳನ್ನು ಚೆನ್ನಾಗಿ ಬೇಯಿಸಿ ತಿನ್ನದಿದ್ದರೆ ವಾಂತಿ-ಬೇಧಿ ಉಂಟಾಗುವುದು.

ಆಲೂಗಡ್ಡೆ
ಆಲೂಗಡ್ಡೆ ಹಸಿರು ಬಣ್ಣದಲ್ಲಿ ಇದೆಯೇ ಅವುಗಳನ್ನು ಬಳಸಲೇಬೇಡಿ. ಏಕೆಂದರೆ ಅಂಥ ಆಲೂಗಡ್ಡೆ ತುಂಬಾ ವಿಷಕಾರಿಯಾಗಿದ್ದು ತಿಂದರೆ ಸಾವು ಸಂಭವಿಸಬಹುದು, ಆದ್ದರಿಂದ ಆಲೂಗಡ್ಡೆಯನ್ನು ಹಸಿ ತಿನ್ನಬಾರದು ಹಾಗೂ ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆ ತಿನ್ನಬಾರದು.



Click it and Unblock the Notifications
