Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಗಂಜಿ ಹೀಗೆ ತಿಂದರೆ ತುಂಬಾ ಕಾಯಿಲೆ ತಡೆಗಟ್ಟಬಹುದು ಅಂತಾರೆ ಡಾ. ಖಾದರ್
ಗಂಜಿ ಸೇವಿಸಿದ್ದೀರಾ? ದಕ್ಷಿಣ ಕನ್ನಡ ಕಡೆ ಗಂಜಿ ಸಾಮಾನ್ಯವಾಗಿ ಬಳಸಲಾಗುವುದು. ಉತ್ತರ ಕರ್ನಾಟಕ, ಬೆಂಗಳೂರು ಕಡೆ ಕಡೆ ತುಂಬಾ ಜನರಿಗೆ ಗಂಜಿ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಈ ಗಂಜಿ ಆರೋಗ್ಯ ತುಂಬಾ ಒಳ್ಳೆಯದು.
ಗಂಜಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಡಾ. ಖಾದರ್ ಅವರು ಹೇಳುವ ಪ್ರಕಾರ ಗಂಜಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗಂಜಿ ತಿನ್ನುವುದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಗಂಜಿ ಹೇಗೆ ಬಳಸಬೇಕು, ಯಾವ ಹೊತ್ತಿಗೆ ತಿನ್ನಬೇಕು ಎಂದು ನೋಡೋಣ ಬನ್ನಿ:
ಮೊದಲಿಗೆ ಗಂಜಿ ಹೇಗೆ ಬಳಸಬೇಕು ಎಂದು ನೋಡೋಣ:

ದೇಹಕ್ಕೆ ಶಕ್ತಿ ದೊರೆಯುತ್ತದೆ:
ಗಂಜಿಯಲ್ಲಿ ಕಾರ್ಬ್ಸ್ ಅಧಿಕವಿರುವುದರಿಂದ ದೇಹಕ್ಕೆ ಶಕ್ತಿ ತುಂಬುವ ಆಹಾರವಾಗಿದೆ. ದೇಹವು ಸುಲಭವಾಗಿ ಕಾರ್ಬ್ಸ್ ಹೀರಿಕೊಂಡು ಅದನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಬೆಳಗ್ಗೆ ನೀವು ಕೆಲಸಕ್ಕೆ ಹೊರಡುವ ಮುನ್ನ ಒಂದು ಲೋಟ ಗಂಜಿ ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ದೇಹದಲ್ಲಿ ನೀರಿನಂಶ ಕಾಪಾಡುತ್ತದೆ: ದೇಹದಲ್ಲಿ ನೀರಿನಂಶ ಕಾಪಾಡಲು ಗಂಜಿ ತುಂಬಾ ಸಹಕಾರಿ. ಅದರಲ್ಲೂ ಗಂಜಿ ಅನ್ನದ ಜೊತೆಗೆ ಗಂಜಿ ಕುಡಿಯುವುದು ಕೂಡ ಒಳ್ಳೆಯದು. ಇದನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಲ್ಲ, ದಿನವಿಡೀ ದೇಹಕ್ಕೆ ಚೈತನ್ಯ ತುಂಬಿರುತ್ತದೆ.
ಮಕ್ಕಳಿಗೆ ಪೋಷಕಾಂಶದ ಆಹಾರ
ಮಗು 8 ತಿಂಗಳು ತುಂಬುತ್ತಿದ್ದಂತೆ ಗಂಜಿ ಮಾಡಿ ಅದನ್ನು ನುಣ್ಣನೆ ಮಾಡಿ ಅಥವಾ ಮಿಕ್ಸಿಯಲ್ಲಿ ರುಬ್ಬಿ, ಅದಕ್ಕೆ ತುಪ್ಪ ಸೇರಿಸಿ ಕೊಟ್ಟರೆ ಮಗುವಿನ ಆರೋಗ್ಯಕ್ಕೆ, ಬೆಳವಣಿಗೆಗೆ ತುಂಬಾ ಒಳ್ಳೆಯದು.

ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ
ಇನ್ನು ಮಲಬದ್ಧತೆ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿ. ನಿಮಗೆ ಮಲಬದ್ಧತೆ ಸಮಸ್ಯೆಯಿದ್ದರೆ ನಿಮ್ಮ ಆಹಾರಕ್ರಮದಲ್ಲಿ ಗಂಜಿ ಸೇರಿಸಿ ನೋಡಿ, ಮಲಬದ್ಧತೆ ಸಮಸ್ಯೆ ತಡೆಗಟ್ಟುವುದು. ಗಂಜಿಗೆ ಸ್ವಲ್ಪ ತುಪ್ಪ ಅಥವಾ ತೆಂಗಿನೆಣ್ಣೆ ಹಾಕಿ ತಿಂದರೆ ಮಲಬದ್ಧತೆ ತಡೆಗಟ್ಟುವುದು.
ಬೇಧಿ ತಡೆಗಟ್ಟುತ್ತದೆ
ಬೇಧಿ ಉಂಟಾದರೆ ಅತ್ಯುತ್ತಮಬವಾದ ಮನೆಮದ್ದಾಗಿದೆ. ಇದನ್ನು ಮಕ್ಕಳಿಗೂ ಕೊಡಬಹುದು. ಮಕ್ಕಳಿಗೆ ಆಗಾಗ ಬೇಧಿ ಸಮಸ್ಯೆ ಉಂಟಾಗುತ್ತಿರುತ್ತದೆ, ಅದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಮಕ್ಕಳಿಗೆ ಬೇಧಿ ಉಂಟಾದಾಗ ಗಂಜಿಗೆ ಸ್ವಲ್ಪ ಉಪ್ಪು ಹಾಕಿ ಕುಡಿಸಿ, ಇದರಿಂದ ಬೇಧಿ ನಿಲ್ಲುತ್ತದೆ, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.
ಬೇಸಿಗೆಯಲ್ಲಿ ಅತ್ಯುತ್ತಮವಾದ ಆಹಾರ
ಬಿರು ಬೇಸಿಗೆಯಲ್ಲಿ ಗಂಜಿ ತಿನ್ನುವುದರಿಂದ, ಗಂಜಿ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.

ಥೈರಾಯ್ಡ್ ಸಮಸ್ಯೆ ಇರುವವರು ಗಂಜಿ ಸೇವಿಸಿದರೆ ಒಳ್ಳೆಯದು
ಥೈರಾಯ್ಡ್ ಸಮಸ್ಯೆ ಇರುವವರು ಪ್ರೊಬಯೋಟಿಕ್ ಆಹಾರ ತೆಗೆದುಕೊಳ್ಖಬೇಕು. ಪ್ರೊಬಯೋಟಿಕ್ ಆಹಾರಗಳು ರೋಗ ನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ. ಗಂಜಿಯನ್ನು ಪ್ರೊಬಯೋಟಿಕ್ ಆಗಿ ಬಳಸಿದರೆ ತುಂಬಾ ಆರೋಗ್ಯಕರ ಎಂದು ಹೇಳಲಾಗುವುದು.

ಡಾ. ಖಾದರ್ ಅವರ ಪ್ರಕಾರ ಗಂಜಿ ಹೇಗೆ ಬಳಸಬೇಕು?
* ನೀವು ಬೆಳಗ್ಗೆ ಗಂಜಿ ತಿನ್ನುವುದಾದರೆ ರಾತ್ರಿ ಗಂಜಿ ಮಾಡಿ, ಆ ಗಂಜಿ ಅನ್ನವನ್ನು ಬೆಳಗ್ಗೆ ತಿನ್ನಬೇಕು.
* ನೀವು ರಾತ್ರಿ ಗಂಜಿ ಸೇವಿಸುವುದಾದರೆ ಬೆಳಗ್ಗೆ ಮಾಡಿಟ್ಟು ರಾತ್ರಿ ಸೇವಿಸಬೇಕು.
ಗಂಜಿ ಮಾಡಿ 8 ಗಂಟೆಗಳವರೆಗೆ ಇಟ್ಟರೆ ಆ ಆಹಾರ ಪ್ರೊಬಯೋಟಿಕ್ ಆಹಾರವಾಗುತ್ತೆ. ಈ ಪ್ರೊಬಯೋಟಿಕ್ ಆಹಾರ ನಮ್ಮ ಹೊಟ್ಟೆಯ ಆರೋಗ್ಯ ವೃದ್ಧಿಸುತ್ತದೆ ಹಾಗೂ ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಸಲಹೆ: ಗಂಜಿ ಮಾಡಿ 8 ಗಂಟೆಯ ಮೇಲೆ ಇಡಬೇಡಿ, ಅದರೊಳಗೆ ಸೇವಿಸಿ.
ಗಂಜಿ ಮಾಡುವುದು ಹೇಗೆ
*ಕೆಂಪಕ್ಕಿ ತಂದು ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಹಾಕಿ, ನಂತರ ಸ್ವಲ್ಪ ನೀರು ಅಧಿಕ ಸೇರಿಸಿ ಬೇಯಿಸಿ, ರುಚಿಗೆ ಬೇಕಿದ್ದರೆ ಒಂದು ಚಿಟಿಕಿ ಉಪ್ಪು ಸೇರಿಸಬಹುದು.
ಅಕ್ಕಿ ನೆನೆ ಹಾಕಿದ್ದರೆ ಬೇಗನೆ ಬೇಯುತ್ತದೆ, ಇಲ್ಲದಿದ್ದರೆ ಸ್ವಲ್ಪ ಸಮಸಯ ತೆಗೆದುಕೊಳ್ಳುತ್ತದೆ.
ಪಾಲಿಷ್ ಮಾಡಿದ ಅಕ್ಕಿ ಬದಲಿಗೆ ಪಾಲಿಷ್ ಮಾಡದಿರುವ ಅಕ್ಕಿಯನ್ನೇ ಬಳಸಿ.



Click it and Unblock the Notifications
