Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮ್ಯಾಜಿಕ್ ಟ್ರಿಕ್ಸ್! ಹೀಗೂ ದೇಹದ ತೂಕ ಇಳಿಸಿಕೊಳ್ಳಬಹುದು!
ತೂಕ ಇಳಿಸಲು ಅಕ್ಯೂಪ್ರೆಷರ್ ಅತ್ಯುತ್ತಮ ವಿಧಾನವಾಗಿದೆ. ಇದಕ್ಕಾಗಿ ನೀವು ಜಿಮ್‌ಗೆ ಹೋಗಬೇಕೆಂದಿಲ್ಲ ಮತ್ತು ಯಾವುದೇ ಔಷಧಿಯನ್ನು ಸೇವಿಸಬೇಕೆಂದಿಲ್ಲ.... ಅಚ್ಚರಿಯಾಯಿತೇ? ಹಾಗಾದರೆ ಮುಂದೆ ಓದಿ...
ತೂಕ ಹೆಚ್ಚಿಸುವುದಕ್ಕಿಂತ ತೂಕ ಕಳೆದುಕೊಳ್ಳುವುದು ತುಂಬಾ ಕಠಿಣ ಕೆಲಸವೆಂದು ಪ್ರತಿಯೊಬ್ಬರು ಹೇಳುತ್ತಾರೆ. ಯಾಕೆಂದರೆ ತೂಕ ಹೆಚ್ಚಿಸಿಕೊಂಡಿರುವವರು ತೂಕ ಕಡಿಮೆ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ತೂಕ ಕಡಿಮೆ ಮಾಡಲು ಕೆಲವರು ಆಹಾರ ಪಥ್ಯ, ವ್ಯಾಯಾಮ ಮಾಡುತ್ತಾರೆ. ಕೆಲವರು ಜಿಮ್‌ಗೆ ಹೋಗುತ್ತಾರೆ. ಇನ್ನು ಕೆಲವರು ಅತಿಯಾದ ಉಪವಾಸ ಮಾಡಿ ತೂಕ ಇಳಿಸಲು ಪ್ರಯತ್ನಿಸುತ್ತಾರೆ. ಆದರೆ ಇದರಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ
ಇಂತಹ ಸಂದರ್ಭಗಳಲ್ಲಿ ನೀವು ನೈಸರ್ಗಿಕ ಚಿಕಿತ್ಸೆ ಅನುಸರಿಸಿಕೊಂಡು ಹೋಗಬೇಕು. ತೂಕ ಇಳಿಸಲು ಆಕ್ಯುಪ್ರೆಷರ್ ಅತ್ಯುತ್ತಮ ವಿಧಾನವಾಗಿದೆ. ಇದಕ್ಕಾಗಿ ನೀವು ಜಿಮ್ ಗೆ ಹೋಗಬೇಕೆಂದಿಲ್ಲ ಮತ್ತು ಯಾವುದೇ ಔಷಧಿಯನ್ನು ಸೇವಿಸಬೇಕೆಂದಿಲ್ಲ. ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ
ಬೆನ್ನು ನೋವು, ವಾಕರಿಕೆ, ತಲೆನೋವು ಮತ್ತು ಕುತ್ತಿಗೆ ನೋವಿಗೆ ಆಕ್ಯುಪ್ರೆಷರ್ ದಿವ್ಯೌಷಧಿ ಎಂದು ನೀವು ತಿಳಿದುಕೊಂಡಿರಬಹುದು. ಆದರೆ ತೂಕ ಕಳೆದುಕೊಳ್ಳಲು ಆಕ್ಯುಪ್ರೆಷರ್ ಅನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ಈ ಲೇಖನದಿಂದ ತಿಳಿಯಿರಿ....

ತೂಕ ಇಳಿಕೆಗೆ ಆಕ್ಯುಪ್ರೆಷರ್
ದೇಹದಲ್ಲಿ ಒಂದು ಬಿಂದುವನ್ನು ಕೇಂದ್ರವಾಗಿರಿಸಿಕೊಂಡು ಬೆರಳು ಅಥವಾ ಸೂಜಿಯಂತಹ ಯಾವುದೇ ವಸ್ತುವಿನಿಂದ ಒತ್ತಡ ಹಾಕಿದರೆ ಆ ಜಾಗವು ಉತ್ತೇಜನಗೊಳ್ಳುತ್ತದೆ. ಈ ಬಿಂದುವು ಉತ್ತೇಜಗೊಂಡಾಗ ದೇಹದಲ್ಲಿ ರಾಸಾಯನಿಕ ಉತ್ಪತ್ತಿಯಾಗಿ ಹಲವಾರು ರೋಗಗಳನ್ನು ಶಮನಗೊಳಿಸಲು ಇದು ನೆರವಾಗುವುದು. ಆಕ್ಯುಪ್ರೆಷರ್‌ನ ಮತ್ತೊಂದು ಉಪಯೋಗವೆಂದರೆ ಇದರಿಂದ ಯಾವುದೇ ಅಡ್ಡಪರಿಣಾಮಗಳು ಕಾಣಿಸುವುದಿಲ್ಲ. ಇದು ತೂಕ ಕಳೆದುಕೊಳ್ಳಲು ಅತ್ಯುತ್ತಮ ವಿಧಾನವಾಗಿದೆ.

ತೂಕ ಕಳೆದುಕೊಳ್ಳಲು ಆಕ್ಯುಪ್ರೆಷರ್ ಹೇಗೆ ನೆರವಾಗುತ್ತದೆ?
ತೂಕ ಕಳೆದುಕೊಳ್ಳಬೇಕೆಂದು ಬಯಸುತ್ತಾ ಇರುವವರು ನಮ್ಮ ಕಿವಿಯ ಬದಿಯಲ್ಲಿ ಇರುವಂತಹ ಬಿಂದುಗಳ ಮೇಲೆ ಒತ್ತಡ ಹೇರಬೇಕು. ಕಿವಿಯ ಬದಿಯಲ್ಲಿ ಇರುವಂತಹ ಮೂರು ಬಿಂದುಗಳು ಆಗಾಗ ಹಸಿವಾಗುವುದನ್ನು ತಡೆಯುತ್ತದೆ.

ಸ್ಟೆಪ್ #1
ತೂಕ ಕಳೆದುಕೊಳ್ಳಲು ಮಾಡಬೇಕಾದ ಮೊದಲ ವಿಧಾನವೆಂದರೆ ಕಿವಿ ತೆರೆದುಕೊಳ್ಳುವ ಜಾಗದಲ್ಲಿ ನಿಮ್ಮ ಹೆಬ್ಬೆರಳನ್ನು ಇಟ್ಟುಕೊಳ್ಳಿ.

ಸ್ಟೆಪ್ #2
ನಿಮ್ಮ ದವಡೆಗಳನ್ನು ಮೇಲೆ ಕೆಳಗೆ ಮಾಡುವುದರಿಂದ ಸರಿಯಾದ ಬಿಂದುವಿನಲ್ಲಿ ಹೆಬ್ಬೆರಳು ಕೂರಲು ಸಹಕಾರಿಯಾಗುತ್ತದೆ.

ಸ್ಟೆಪ್ #3
ಬಿಂದು ಹೆಬ್ಬೆರಳಿಗೆ ಸಿಕ್ಕಿದ ಕೂಡಲೇ ಆ ಬಿಂದುವನ್ನು ಒತ್ತಿ ಮತ್ತು ಒಂದು ನಿಮಿಷ ಕಾಲ ಹಾಗೆ ಇಟ್ಟುಕೊಳ್ಳಿ.

ಸ್ಟೆಪ್ #4
ಈ ಬಿಂದುವನ್ನು ನೀವು ಒತ್ತಿ ಹಿಡಿದಾಗ ಅದು ಮೆದುಳಿಗೆ ಸಂದೇಶವನ್ನು ಕಳುಹಿಸಿಕೊಡುತ್ತದೆ. ಇದರಿಂದ ಹಸಿವನ್ನು ನಿಗ್ರಹಿಸಬಹುದು.

ಸ್ಟೆಪ್ #5
ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಆಕ್ಯುಪ್ರೆಷರ್‌ನ ಬಿಂದುವನ್ನು ಒತ್ತಿ ಹಿಡಿಯುದರೊಂದಿಗೆ ಆಹಾರ ಕ್ರಮದ ಬಗ್ಗೆ ಗಮನವನ್ನಿಡುವುದು ತುಂಬಾ ಮುಖ್ಯವಾಗಿದೆ. ತೂಕ ಕಳೆದುಕೊಳ್ಳಬೇಕೆಂದರೆ ಆಗ ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ಅತ್ಯಗತ್ಯ.



Click it and Unblock the Notifications
