Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಸ್ಥೂಲಕಾಯದಿಂದ ಮುಕ್ತಿ ಹೊಂದಲು ಸುಲಭೋಪಾಯ
ಇಷ್ಟದ ತಿಂಡಿ ತಿನಿಸನ್ನು ತ್ಯಾಗ ಮಾಡಿ, ದಿನ ನಿತ್ಯ ನಡಿಗೆ, ವ್ಯಾಯಾಮ ಮಾಡಿದರೂ ಸ್ಥೂಲಕಾಯವೇ ಅಟ್ಟಹಾಸ ಬೀರುತ್ತಿದೆಯೇ? ಹಾಗಾದರೆ ಇದಕ್ಕೆ ನಿಮ್ಮ ಕೆಲವು ಮುಂಜಾನೆಯ ಅಭ್ಯಾಸಗಳು ನಿಮ್ಮ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿದ್ದಿರಬಹುದು...!
ಸ್ಥೂಲಕಾಯ ಕಳೆದುಕೊಳ್ಳಲು ನೀವು ನಡೆಸುತ್ತಿರುವ ಪ್ರಯತ್ನಗಳು ಫಲಕಾರಿಯಾಗುತ್ತಿಲ್ಲವೇ? ನಿಮ್ಮ ನೆಚ್ಚಿನ ಸಿದ್ಧ ಆಹಾರಗಳನ್ನು ತ್ಯಾಗ ಮಾಡಿ ನಡಿಗೆ, ವ್ಯಾಯಾಮ ಮೊದಲಾದವುಗಳನ್ನು ಆಚರಿಸಿದರೂ ನಿಮ್ಮ ತ್ಯಾಗದ ಬದಲಾಗಿ ಸ್ಥೂಲಕಾಯವೇ ಅಟ್ಟಹಾಸ ಬೀರುತ್ತಿದೆಯೇ?

ಹಾಗಾದರೆ ಇದಕ್ಕೆ ನಿಮ್ಮ ಕೆಲವು ಮುಂಜಾನೆಯ ಅಭ್ಯಾಸಗಳು ನಿಮ್ಮ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿದ್ದಿರಬಹುದು. ಈ ಅಭ್ಯಾಸಗಳು ಯಾವುವು ಎಂಬ ಕುತೂಹಲ ಮೂಡಿತೇ, ಬನ್ನಿ, ಈ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ:
ಮುಂಜಾನೆಯ ಸವಿನಿದ್ದೆಯನ್ನು ಹೆಚ್ಚು ಕಾಲ ಅನುಭವಿಸುವುದು
ನಿದ್ದೆಯ ಸಮಯದಲ್ಲಿ ದೇಹದಲ್ಲಿ ಬಹಳಷ್ಟು ಅನೈಚ್ಛಿಕ ಕೆಲಸಗಳು ನಡೆಯುತ್ತವೆ. ಬೆಳಿಗ್ಗೆದ್ದ ಬಳಿಕ ಇತರ ಕೆಲಸಗಳು ಮುಂದುವರೆಯಬೇಕು. ಈ ಕೆಲಸಗಳನ್ನು ನಿರ್ವಹಿಸಲು ದೇಹ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಈ ಸಮಯದಲ್ಲಿ ನಿದ್ದೆ ಮಾಡುವುದನ್ನು ಮುಂದುವರೆಸಿದರೆ ಈ ಕೊಬ್ಬು ಬಳಸಲ್ಪಡದೇ ಹಾಗೇ ಉಳಿದುಬಿಡುತ್ತದೆ.
PLoS ONE ಎಂಬ ಆರೊಗ್ಯ ನಿಯತಕಾಲಿಕೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ ದಿನಕ್ಕೆ ಹತ್ತು ಗಂಟೆಗೂ ಹೆಚ್ಚು ಹೊತ್ತು ನಿದ್ರಿಸಿದರೆ ಸ್ಥೂಲಕಾಯ ಹೆಚ್ಚುವ ಸಾಧ್ಯತೆ ದಿನಕ್ಕೆ ಏಳರಿಂದ ಒಂಬತ್ತು ಗಂಟೆಗಳ ಕಾಲ ನಿದ್ರಿಸಿರುವವರಿಗಿಂತಲೂ ಹೆಚ್ಚು.
ಗಾಢನಿದ್ರೆ ಆವರಿಸದೇ ಇರುವುದು
ಬಿಎಂಐ ಅಥವಾ ದೇಹದ ಎತ್ತರಕ್ಕೆ ತಕ್ಕ ತೂಕ ಸರಿಯಾದ ಮಟ್ಟದಲ್ಲಿರುವುದು ಆರೋಗ್ಯಕ್ಕೆ ಮೂಲ. National Sleep Foundation ಎಂಬ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ನಿತ್ಯವೂ ಬೇಗನೇ ಮಲಗಿ ಬೇಗನೇ ಏಳದೇ ಇರುವ ಅಭ್ಯಾಸವಿರುವವರಿಗೆ ಗಾಢ ನಿದ್ದೆ ಆವರಿಸದೇ ತೂಕ ಇಳಿಸುವ ಪ್ರಯತ್ನಗಳು ಹೆಚ್ಚು ಫಲಕಾರಿಯಾಗುವುದಿಲ್ಲ. ಬರೀ ಎರಡೇ ವಾರಗಳಲ್ಲಿ ಬರೋಬ್ಬರಿ 5 ಕೆ.ಜಿ ತೂಕ ಇಳಿಸಿಕೊಳ್ಳಿ!
ತೂಕ ನೋಡಿಕೊಳ್ಳದೇ ಇರುವುದು
ವೈದ್ಯಕೀಯ ಪತ್ರಿಕೆಯೊಂದು ನೀಡಿರುವ ವಿವರದ ಪ್ರಕಾರ ನಿಯಮಿತವಾಗಿ, ಸಾಧ್ಯವಾದರೆ ನಿತ್ಯವೂ ತೂಕ ನೋಡಿಕೊಳ್ಳುತ್ತಾ ಇರಬೇಕು. ಆಗಲೇ ಮಾನಸಿಕವಾಗಿ ತೂಕ ಇಳಿಸುವ ಪ್ರಕ್ರಿಯೆಗೆ ಫಲ ಸಿಗುತ್ತದೆ ಎಂದು ತಿಳಿದುಬಂದಿದೆ. ತೂಕ ನೋಡಿಕೊಳ್ಳಲು ಅತ್ಯುತ್ತಮ ಸಮಯವೆಂದರೆ ಬೆಳಿಗ್ಗೆದ್ದ ಬಳಿಕ ಪ್ರಾತಃವಿಧಿಗಳನ್ನು ಮುಗಿಸಿದ ಬಳಿಕ ಖಾಲಿಹೊಟ್ಟೆಯಲ್ಲಿ ನೋಡಿಕೊಳ್ಳುವುದು. ಏಕೆಂದರೆ ಈ ಸಮಯದಲ್ಲಿ ದೇಹ ನೀರು ಮತ್ತು ಕಲ್ಮಶಗಳನ್ನು ಕಳೆದುಕೊಂಡಿದ್ದು ಸರಿಯಾದ ತೂಕ ಲಭಿಸುತ್ತದೆ.
ಬೆಳಗ್ಗಿನ ಸೂರ್ಯನ ಕಿರಣಗಳನ್ನು ಪಡೆಯದೇ ಇರುವುದು
ವರದಿಯ ಪ್ರಕಾರ ಬೆಳಗ್ಗಿನ ಸೂರ್ಯನ ಕಿರಣಗಳಿಗೆ ಮೈಯನ್ನು ಒಡ್ಡಿಕೊಳ್ಳುವ ಮೂಲಕ ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ವಿಟಮಿನ್ ಡಿ ಲಭಿಸುತ್ತದೆ. ಇದು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲವನ್ನೂ ನೀಡುತ್ತದೆ.
ಮುಂಜಾನೆಯ ಉಪಾಹಾರ ತ್ಯಜಿಸುವುದು
ದಿನದ ಮೂರೂ ಹೊತ್ತಿನ ಆಹಾರಗಳಲ್ಲಿ ಕಡೆಗಣಿಸಲೇಬಾರದ ಆಹಾರ ಅಂದರೆ ಮುಂಜಾನೆಯ ಉಪಾಹಾರ. ಮುಂಜಾನೆಯ ಹೊತ್ತಿನಲ್ಲಿ ಮೆದುಳಿಗೆ ಹೆಚ್ಚಿನ ರಕ್ತದ ಸಂಚಾರ ಅಗತ್ಯವಿದ್ದು ಉಪಾಹಾರವನ್ನು ತ್ಯಜಿಸುವ ಮೂಲಕ ಮೆದುಳಿಗೆ ರಕ್ತದ ಕೊರತೆ ಎದುರಾಗುತ್ತದೆ. ಅಲ್ಲದೇ ರಾತ್ರಿಯ ಕ್ರಿಯೆಗಳಿಗೆ ದೇಹ ಶಕ್ತಿಯನ್ನು ಬಳಸಿರುವ ಕಾರಣ ಬೆಳಗ್ಗಿನ ಹೊತ್ತಿನಲ್ಲಿ ಹಸಿವು ಹೆಚ್ಚಿರುತ್ತದೆ.
ಈ ಹೊತ್ತಿನಲ್ಲಿ ಅಲ್ಪ ಉಪಾಹರವೇ ಅತ್ಯುತ್ತಮ. ಉಪಾಹಾರ ತ್ಯಜಿಸಿದರೆ ಹಸಿವಿನ ಸಂಕೇತಗಳು ಬಲವಾಗುತ್ತಾ ಹೋಗುತ್ತದೆ ಹಾಗೂ ಅನಿವಾರ್ಯವಾಗಿ ಹೆಚ್ಚಿನ ಕೊಬ್ಬಿನಾಂಶವಿರುವ ಸಿದ್ಧ ಆಹಾರಗಳತ್ತ ಮತ್ತು ಹೆಚ್ಚಿನ ಸಕ್ಕರೆ ಇರುವ ಆಹಾರಗಳತ್ತ ಒಲವು ಮೂಡಿಸುತ್ತದೆ. ಪರಿಣಾಮವಾಗಿ ಹಿಂದಿನ ದಿನಗಳಲ್ಲಿ ಮಾಡಿದ ಪ್ರಯತ್ನಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕಡಿಮೆ ಖರ್ಚಿನಲ್ಲಿ ಕೊಬ್ಬು ಕರಗಿಸಲು ಅಪ್ಪಟ ಭಾರತೀಯ ಅಡುಗೆಗಳು!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















