ತೂಕ ಹೆಚ್ಚುತ್ತಿದೆ ಎಂದು ಅನಿಸುತ್ತಿದೆಯೇ? ಇದಕ್ಕೆ ಜೀನ್‌ಗಳೇ ಕಾರಣ!

By vani nayak

ನೀವು ದಪ್ಪಗಾಗದಿದ್ದರೂ, ನಿಮಗೆ ನಿಮ್ಮ ತೂಕ ಹೆಚ್ಚಾಗಿದೆ ಎಂದು ಅನಿಸುತ್ತಿದೆಯೇ? ಹಾಗಾದರೆ ನಿಮ್ಮ ಪೋಷಕರಿಂದ ಆನುವಂಶಿಕವಾಗಿ ಬಂದ ವಂಶವಾಹಿಗಳ ಪ್ರಭಾವ ಎಂದು ಹೇಳಬಹುದು ಎಂದು ಇತ್ತೀಚಿನ ಅಧ್ಯಯನ ತಿಳಿಸಿಕೊಡುತ್ತದೆ. ವಂಶವಾಹಿಗಳ (ಜೀನ್‌) ಯುವಕರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಸ್ವಯಂ ತಿಳಿದುಕೊಳ್ಳುವ ತೂಕದ ಸ್ಥಿತಿಯ ಅರಿವನ್ನು ಮೂಡಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

"ಜನರಲ್ಲಿ ವಂಶವಾಹಿಗಳ ಪ್ರಭಾವ ಹೇಗೆ ತಮ್ಮ ತೂಕದ ಬಗ್ಗೆ ಅನಿಸಿಕೆಯನ್ನು ಹೊಂದಿರುತ್ತಾರೆ ಎಂದು ತಿಳಿಸಿಕೊಡುವ ಮೊಟ್ಟ ಮೊದಲನೆಯ ಅಧ್ಯಯನವಾಗಿದೆ". ಎಂದು ಯುಎಸ್ ನಲ್ಲಿಯ ಯುನಿರ್ವಸಿಟಿ ಆಫ್ ಕೊಲಾರೆಡೋ ಬೌಲ್ಡರ್ ನ ಹೆಸರಾಂತ ಲೇಖಕ ರಾಬೀ ವೇಡೋ ಅಭಿಪ್ರಾಯ ಪಟ್ಟಿದ್ದಾರೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

"ಇದರ ಪರಿಣಾಮ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು" ಎಂದು ವೇಡೋ ಹೇಳಿದ್ದಾರೆ. ಸಂಶೋಧನೆಯಲ್ಲಿ ಒಬ್ಬರ ತೂಕದ ಸ್ಥಿತಿಯನ್ನು ಅವರ ಆನುವಂಶೀಕತೆಯ ಮೇರೆಗೆ ಅಳಿಯಲಾಯಿತು. ಆನುವಂಶೀಕತೆಗೆ ಎದುರಾಗಿ ಪರಿಸರವನ್ನು ತೆಗೆದುಕೊಂಡಾಗ, ಇದು ಅವರ ಸ್ವಭಾವದಲ್ಲಿ ಯಾವ ಪ್ರಮಾಣದಲ್ಲಿ ಬದಲಾವಣೆ ತರುತ್ತಿತ್ತು ಎಂದು ಸೂಚಿಸುತ್ತಿತ್ತು. ಆನುವಂಶೀಕತೆಯನ್ನು ಸೊನ್ನೆಯಿಂದ ಒಂದರವದೆಗೆ ಅಂದಾಜು ಮಾಡಲಾಗಿತ್ತು.

Genes Influence How You Feel About Your Weight- Finds A Research

ಸೊನ್ನೆ, ಆನುವಂಶೀಕತೆ ಮುಖ್ಯ ಅಂಶ ಅಲ್ಲವೇ ಅಲ್ಲ ಎಂದು ಒಂದಾದರೆ ಮತ್ತೊಂದು ಅದೇ ಮುಖ್ಯ ಅಂಶ ಎಂದು ಸೂಚಿಸುತ್ತಿತ್ತು. ಸೋಶಿಯಲ್ ಸಾಯಿನ್ಸ್ ನತ್ತು ಮೆಡಿಸಿನ್ ಎಂಬ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ ಸ್ವಯಂ ತಿಳಿದುಕೊಳ್ಳುವ ತೂಕದ ಸ್ಥಿತಿ 0.47 ನಷ್ಟು ಅನುವಂಶೀಕತೆಯದ್ದಾಗಿತ್ತು "ಅಧ್ಯಯನದಲ್ಲಿ ದೊರೆತ ಅನುವಂಶೀಕತೆಯ ಅಂದಾಜು, ತೂಕದ ಬಗೆಗಿನ ಅನಿಸಿಕೆಗೆ ಜೆನೆಟಿಕ್ಸ್ ಕಾರಣ ಯೆಂದು ತಿಳಿಸಿತು" ಹೀಗೆಂದು ವೇಡೋ ಹೇಳಿದರು.

ಅಧ್ಯಯನಕ್ಕೆ, ತಂಡವು "ದ ನ್ಯಾಷನಲ್ ಲಾಂಗಿಟ್ಯುಡಿನಲ್ ಸ್ಟಡಿ ಆಫ್ ಅಡೋಲೆಸೆನ್ಟ್ ಟು ಅಡಲ್ಟ್ ಹೆಲ್ತ್", ಇದರಿಂದ ದಾಖಲೆಗಳನ್ನು ಉಪಯೋಗಿಸಿತು. ಇದರಲ್ಲಿ 20,000 ಕ್ಕೂ ಹೆಚ್ಚು ಹದಿಹರೆಯದವರಿಂದ 1994 ರಲ್ಲೇ ಮಾಹಿತಿಯನ್ನು ಕಲೆಹಾಕಲಾಗಿತ್ತು. ಇದರಲ್ಲಿ ನೂರಾರು ಅವಳಿಜವಳಿಗಳು ಭಾಗವಹಿಸಿದ್ದರು. ತೂಕ ಇಳಿಕೆ ಮಾಡುವ ರೆಸಿಪಿಯಿದು

2008 ರಲ್ಲಿ, ರಾಷ್ಟ್ರೀಯ ಅಧ್ಯಯನದಲ್ಲಿ ಭಾಗವಹಿಸಿದ ಎಲ್ಲರನ್ನೂ ಮತ್ತೆ 4 ಬಾರಿ ಸಂದರ್ಶಿಸಲಾಯಿತು. ಸಂಶೋಧನಕಾರರು ಆರೋಗ್ಯದ ಮೌಲ್ಯಮಾಪನವು ವಯಸ್ಕರ ಮರಣದ ಬಲವಾದ ಸೂಚಕವಾಗಿರುವುದರಿಂದ ಹೊಸ ಅಧ್ಯಯನವು ಬಹು ಮುಖ್ಯವಾಗಿದೆ ಎಂದು ಹೇಳಿದರು.

ತಮ್ಮ ಆರೋಗ್ಯದ ಬಗ್ಗೆ ಇರುವ ಸ್ವಂತ ತಿಳುವಳಿಕೆ ಒಂದು ಉತ್ತಮವಾದ ಮಾಪನ ಎಂದು ಹೇಳಬಹುದು. ಏಕೆಂದರೆ ಬೇರೆಯದಕ್ಕೆ ಹೋಲಿಸಿದರೆ, ಮರಣದ ಬಗ್ಗೆ ಹೆಚ್ಚು ಪ್ರವಾಧಿಸಲು ಸಾಧ್ಯವಾಗುತ್ತದೆ ಎಂದು ಮತ್ತೊಬ್ಬ ಲೇಖಕ ಜಾಸನ್ ಬೋರ್ಡ್ ಮ್ಯಾನ್, ಯುನಿವರ್ಸಿಟಿ ಆಫ್ ಕೊಲಾರೆಡೋ ಬೌಲ್ಡರ್ ಯಿಂದ ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಮಾಪನ ಮಾಡಲು ಇಚ್ಛಿಸದವರು, ಕಾಲಾಂತರದಲ್ಲಿ ಆರೊಗ್ಯದ ಸುಧಾರಣೆ ಮತ್ತು ಪೋಷಣೆಗಾಗಿ ಹೆಚ್ಚು ಪ್ರಯತ್ನಿಸುವುದಿಲ್ಲ ಎಂದು ಬೋರ್ಡ್ ಮ್ಯಾನ್ ತಿಳಿಸಿದ್ದಾರೆ. ಸಂಶೋಧನಕಾರರ ಪ್ರಕಾರ ಮಾನವನ ಸ್ವಭಾವಕ್ಕೂ (ಅಥವಾ ನಡೆದುಕೊಳ್ಳುವ ರೀತಿಗೂ) ಅನುವಂಶೀಕತೆಗೂ ಸಂಬಂಧವಿದ್ದರೂ, ಸಾಮಾಜಿಕ ಪರಿಸರ ಹಾಗು ವೈಯಕ್ತಿತ ಆಯ್ಕೆಗಳು ಕೂಡ ಮುಖ್ಯ ಕಾರಣಗಳಾಗಿ ಪರಿಣಮಿಸುತ್ತದೆ.

ಮೂಲ- ಐಎಎನ್ಎಸ್

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Genes Influence How You Feel About Your Weight- Finds A Research

Do you feel overweight even if you are actually not? If yes, you may have your genes inherited from parents to blame, suggests new research. Genes contribute to self-perceived weight status among young adults, especially among women, the findings showed.
Story first published: Wednesday, September 7, 2016, 23:53 [IST]
X
Desktop Bottom Promotion