Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಸ್ಫೋಟಕ ಹೊಡೆತಗಳ ಹೀರೋ ವಿರಾಟ್ ಕೊಹ್ಲಿಯ ಆರೋಗ್ಯದ ಗುಟ್ಟೇನು?
ವಿಶ್ವಕಪ್ ಕ್ರಿಕೆಟ್ ಇನ್ನೇನು ಕೆಲವೇ ದಿನಗಳ ದೂರದಲ್ಲಿದೆ. ಭಾರತ ತಂಡದಲ್ಲಿರುವ ಮಧ್ಯಮ ಶ್ರೇಣಿಯಲ್ಲಿ ಆಡಲಿರುವ ವಿರಾಟ್ ಕೊಹ್ಲಿಯವರಿಂದ ಈ ಪಂದ್ಯಗಳಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಭಾರತೀಯರು ಇರಿಸಿಕೊಂಡಿದ್ದಾರೆ. ಆದರೆ ಅವರು ಎದುರಿಸಬೇಕಾದ ಬೌಲರುಗಳಿಗೆ ತಕ್ಕ ಉತ್ತರ ನೀಡಲು ಅವರ ಮೈಕಟ್ಟು ಸಾಕಷ್ಟು ಸುದೃಢವಾಗಿರುವುದು ಈ ನಿರೀಕ್ಷೆಗೆ ಭರವನೆ ಮೂಡಿದೆ. ಅವರ ಈ ಸುದೃಢ ಮೈಕಟ್ಟಿನ ರಹಸ್ಯಗಳನ್ನು ಅರಿಯಲು ಬಯಸುವಿರಾ? ಮುಂದೆ ಓದಿ. ನೈಜ ಸೌಂದರ್ಯದ ಒಡತಿ ವಿದ್ಯಾ ಬಾಲನ್‌ರ ಸೌಂದರ್ಯದ ಗುಟ್ಟೇನು?
ಸಾಮಾನ್ಯವಾಗಿ ಕ್ರೀಡಾಪಟುಗಳು ತಮ್ಮ ಆರೋಗ್ಯದ ಕಾಳಜಿಯನ್ನು ತಮ್ಮ ತಂಡದ ದೈಹಿಕ ಶಿಕ್ಷಕರ ಮೇಲೆ ಬಿಟ್ಟುಬಿಡುತ್ತಾರೆ. ಅವರು ಹೇಳಿದ ವ್ಯಾಯಾಮಗಳನ್ನೇ ಮಾಡುತ್ತಾ, ಅವರು ಸೂಚಿಸಿದ ಆಹಾರವನ್ನೇ ಸೇವಿಸುತ್ತಾ ಉತ್ತಮ ಆರೋಗ್ಯ ಪಡೆದಿರುತ್ತಾರೆ. ಆದರೆ ವಿರಾಟ್ ಕೊಹ್ಲಿಯವರು ಈ ಕ್ರಮಕ್ಕೆ ಶರಣಾಗದೇ ತಾವು ನಿತ್ಯ ಪಾಲಿಸುವ ವಾರಕ್ಕೈದು ದಿನದ ವ್ಯಾಯಾಮ, ಎರಡು ದಿನ ವಿಶ್ರಾಂತಿ ಕ್ರಮವನ್ನೇ ಅನುಸರಿಸುತ್ತೇನೆ, ಇದೇ ನನ್ನ ಮೈಕಟ್ಟಿನ ಗುಟ್ಟು ಎಂದು ಇತ್ತೀಚೆಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇವರ ಆರೋಗ್ಯದ ಇತರ ರಹಸ್ಯಗಳನ್ನೂ ಅರಿಯೋಣ

ಧೂಮಪಾನ, ಮದ್ಯಪಾನದಿಂದ ದೂರವಿರುವ ಗುಣ
ಸಾಧಾರಣವಾಗಿ ಕ್ರೀಡಾಪಟುಗಳು ತಮ್ಮ ವಿಜಯೋತ್ಸವವನ್ನು ಮದ್ಯ(ಶಾಂಪೇನ್) ಸಿಡಿಸಿ, ಕುಡಿಯುವ ಮೂಲಕ ಆಚರಿಸುತ್ತಾರೆ. ಆದರೆ ಇದಕ್ಕೆ ವಿರುದ್ಧವಾಗಿ ವಿರಾಟ್ ಎಂದೂ ಮದ್ಯಪಾನ, ಧೂಮಪಾನಕ್ಕೆ ತಮ್ಮನ್ನು ಒಡ್ಡಿಕೊಳ್ಳದೇ ಮಡಿವಂತ ಎಂಬ ಅನ್ವರ್ಥನಾಮವನ್ನು ತಮ್ಮ ಸಹ ಕ್ರೀಡಾಪಟುಗಳಿಂದ ಪಡೆದುಕೊಂಡಿದ್ದಾರೆ. ಆದರೆ ಈ ವ್ಯಸನಗಳಿಂದ ದೂರವಿರುವುದು ಅವರ ಆರೋಗ್ಯ ಮತ್ತು ಮೈಕಟ್ಟಿನ ಪ್ರಥಮ ಮತ್ತು ಪ್ರಮುಖ ರಹಸ್ಯವಾಗಿದೆ.

ತಮ್ಮ ಆಹಾರದ ಬಗ್ಗೆ ವಹಿಸುವ ಕಾಳಜಿ
ದೆಹಲಿಯ ಜನರು ಸಾಮಾನ್ಯವಾಗಿ ಭೋಜನಾಪ್ರಿಯರು. ಅವರ ಊಟದ ಪ್ರಮಾಣ ಹಾಗು ಪೌಷ್ಟಿಕತೆ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು. ಸಕಾರಣವಾಗಿ ಈ ಜನರು ಉತ್ತಮ ದೇಹದಾರ್ಢ್ಯತೆ ಹೊಂದಿರುತ್ತಾರೆ. ವಿರಾಟ್ ಸಹಾ ಇದೇ ರಾಜ್ಯಕ್ಕೆ ಸೇರಿದ್ದರೂ ಈ ಪೂರ್ವಾಗ್ರಹಕ್ಕೆ ಒಳಗಾಗದೇ ತಮ್ಮ ಆಹಾರದ ಪ್ರಮಾಣ ಮತ್ತು ಪೌಷ್ಟಿಕತೆಯನ್ನು ಅಳೆದು ತಮ್ಮ ದೇಹಕ್ಕೆ ಅಗತ್ಯವಿದ್ದುದಷ್ಟನ್ನು ಮಾತ್ರ ಸೇವಿಸುತ್ತಾರೆ. ಅವರಿಗೆ ಬಟರ್ ಚಿಕನ್ ಮತ್ತು ನಾನ್ ರೊಟ್ಟಿಗಳು ಅತಿ ಇಷ್ಟವಾದರೂ ತಮ್ಮ ತೂಕ ಹೆಚ್ಚದಷ್ಟೇ ಪ್ರಮಾಣವನ್ನು ಮಾತ್ರ ಸೇವಿಸುವುದು ಇನ್ನೊಂದು ರಹಸ್ಯವಾಗಿದೆ.

ಅನಾರೋಗ್ಯಕರ ಆಹಾರ (junk food)ಕ್ಕೆ ನೇರವಾಗಿ ಬೇಡ ಎಂದು ಹೇಳುವುದು
ಕ್ರೀಡೆಯ ನಿಮಿತ್ತ ವಿಶ್ವಪರ್ಯಟನೆಯ ಕಾಲದಲ್ಲಿ ವಿವಿಧ ದೇಶಗಳ ಅಥವಾ ನಮ್ಮ ದೇಶದ ವಿವಿಧ ನಗರಗಳಿಗೆ ಭೇಟಿ ನೀಡುವಾಗ ಅನಿವಾರ್ಯವಾಗಿ ತಿನ್ನಬೇಕಾದ ಅನಾರೋಗ್ಯಕರ ಆಹಾರವನ್ನು ಅವರು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಎಷ್ಟೇ ಆಕರ್ಷಕವಾಗಿದ್ದರೂ, ಜೊತೆಯವರು ಒತ್ತಡ ನೀಡಿದರೂ ಇಂತಹ ಆಹಾರಗಳಿಗೆ ಅವರು ತಮ್ಮ ಒಲವು ತೋರುವುದಿಲ್ಲ. ಕೆಲವೊಮ್ಮೆ ಬೇರೇನೂ ತಿನ್ನಲು ಸಿಗದೇ ಅನಿವಾರ್ಯವಾಗಿ ಇಂತಹ ಆಹಾರವನ್ನು ತಿನ್ನದೇ ನಿರ್ವಾಹವಿಲ್ಲದಾಗ ಮಾತ್ರ ಸೇವಿಸಿದರೂ ಮರುದಿನ ತಮ್ಮ ವ್ಯಾಯಾಮದಲ್ಲಿ ಹೆಚ್ಚಿನ ಶ್ರಮವಹಿಸಿ ಈ ಕಳಪೆ ಆಹಾರದ ಪ್ರಭಾವವನ್ನು ಕಡಿಮೆಗೊಳಿಸುತ್ತೇನೆ ಎಂದು ಅವರು ಇತ್ತೀಚೆಗೆ ಫೋರ್ಬ್ಸ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ರಾತ್ರಿಯೂಟ ಕಡಿಮೆ ಪ್ರಮಾಣದಲ್ಲಿ ಮಾಡುವುದು
ತಾನು ಕಡಿಮೆ ಪ್ರಮಾಣದಲ್ಲಿ ರಾತ್ರಿಯೂಟವನ್ನು ಮಾಡುತ್ತೇನೆ, ಪಂದ್ಯಗಳಿದ್ದಾಗ ಪ್ರೋಟೀನ್ ಪ್ರಮಾಣ ಹೆಚ್ಚಿರುವ ದ್ರವಾಹಾರ ಮತ್ತು ಕಾರ್ಬೋಹೈಡ್ರೇಟುಗಳು ಹೆಚ್ಚಿರುವ ಆಹಾರವನ್ನು ಸೇವಿಸುತ್ತೇನೆ. ಅನಾರೋಗ್ಯಕರ ಆಹಾರಕ್ಕೆ ಬೇಡ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಆದರೆ ಕೊಚ್ಚಿನ್ ನಂತಹ ಊರುಗಳಲ್ಲಿ ಸಿಗುವ ಆಹಾರ ಅತ್ಯಂತ ರುಚಿಕರವಾಗಿರುವುದರಿಂದ ಆಗ ಮಾತ್ರ ನನ್ನ ನಿಲುವನ್ನು ಕೊಂಚ ಸಡಲಿಸಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತೇನೆ ಎಂದು ಇತ್ತೀಚೆಗೆ ಫೋರ್ಬ್ಸ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ತಾವು ಕುಡಿಯುವ ನೀರಿನ ಬಗ್ಗೆ ವಹಿಸುವ ಕಾಳಜಿ
ಎಷ್ಟೇ ಕಷ್ಟವಾದರೂ ತಮ್ಮ ಆಯ್ಕೆಯ ನೀರನ್ನೇ ಕುಡಿಯುವುದು ಅವರ ವೈಶಿಷ್ಟ್ಯವಾಗಿದೆ. ಅವರು ಯಾವುದೇ ಊರಿಗೆ ಹೋದರೂ ತಮ್ಮ ನೆಚ್ಚಿನ 'ಈವಿಯಾನ್ ಮಿನೆರಲ್ ವಾಟರ್' ಬಾಟಲಿ ನೀರನ್ನೇ ಅವರು ಆಯ್ದುಕೊಳ್ಳುತ್ತಾರೆ. ಅದೆಷ್ಟೇ ದುಬಾರಿಯಾದರೂ ಬೇರೆ ನೀರನ್ನು ಅವರು ಕುಡಿಯುವುದಿಲ್ಲ. ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಹೋದಾಗ ಅಲ್ಲಿ ಅಲಭ್ಯವಿದ್ದ ಈ ನೀರನ್ನು ಫ್ರಾನ್ಸ್ ನಿಂದ ತರಿಸಬೇಕಾಗಿ ಬಂದಿತ್ತು. ಒಂದೂವರೆ ಲೀಟರ್ ನೀರಿನ ಬೆಲೆ ರೂ.389 ರಷ್ಟು ದುಬಾರಿಯಾದರೂ ಅವರು ಬೇರೆ ನೀರನ್ನು ಕುಡಿಯದಿರುವುದು ಅವರು ತಮ್ಮ ಆರೋಗ್ಯದ ಬಗ್ಗೆ ವಹಿಸುವ ಕಾಳಜಿಗೆ ಸಾಕ್ಷಿಯಾಗಿದೆ.



Click it and Unblock the Notifications