Latest Updates
-
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ
ನಿಮ್ಮನ್ನು ತೆಳ್ಳಗಾಗಲು ಬಿಡದ ಕೆಲವೊಂದು ಆಹಾರಗಳು!
ನೀವು ತೆಳ್ಳಗಾಗಲೆಂದು ಮಾಡುತ್ತಿರುವ ಆಹಾರ ಪಥ್ಯವು ವಿಟಮಿನ್ ಮತ್ತು ಮಿನರಲ್ ಗಳಿಂದ ನಿಮ್ಮನ್ನು ವಂಚಿಸಬಹುದು. ಕಡಿಮೆ ಕೊಬ್ಬು, ರುಚಿಯಿಲ್ಲದ ಆಹಾರಗಳು ಆರೋಗ್ಯಕರವೆಂದು ನೀವು ಭಾವಿಸಿರಬಹುದು. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀಡುತ್ತದೆ. ಫೈಬರ್ ಅಧಿಕ ಮತ್ತು ನೈಸರ್ಗಿಕ ಎನ್ನುವ ಲೇಬಲ್‌ಗಳಿಂದ ನಾವು ವಂಚನೆಗೊಳಗಾಗುವುದು ಸಹಜ. ಆರೋಗ್ಯಕರ ಆಹಾರವೆಂದು ಪರಿಗಣಿಸಲ್ಪಟ್ಟ
ಇಂತಹ ಆಹಾರಗಳಲ್ಲಿ ಅಧಿಕ ಮಟ್ಟದ ಕೊಬ್ಬು, ಸಕ್ಕರೆ ಮತ್ತು ಉಪ್ಪು ಇರುತ್ತದೆ. ಆಹಾರಕ್ಕೆ ಏನೆಲ್ಲಾ ಹಾಕಲಾಗಿದೆ ಮತ್ತು ಪೌಷ್ಠಿಕಾಂಶಗಳ ಪಟ್ಟಿಯನ್ನು ಓದಿದಾಗ ನಿಮಗೆ ಸರಿಯಾದ ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
ನೀವು ಆರೋಗ್ಯಕ್ಕೆ ಒಳ್ಳೆಯದೆಂದು ಪರಿಗಣಿಸಿರುವ ಕೆಲವೊಂದು ಆಹಾರಗಳು ನಿಜವಾಗಿಯೂ ತುಂಬಾ ಕೆಟ್ಟದು. ಅವುಗಳ ಪಟ್ಟಿ ಇಲ್ಲಿದೆ.

ಜೇನು:
ಜೇನು ತುಂಬಾ ಆರೋಗ್ಯಕರ ಮತ್ತು ಸಕ್ಕರೆಗಿಂತ ಹೆಚ್ಚು ನೈಸರ್ಗಿಕವೆಂದು ನೀವು ಯೋಚಿಸಿದ್ದೀರಾ? ಹಾಗಾದರೆ ಇದು ತಪ್ಪು. ಎರಡರಲ್ಲೂ ಸಮಾನವಾಗಿರುವ ಅಧಿಕ ಮಟ್ಟದ ಗ್ಲೂಕೋಸ್ ಇದೆ. ಒಂದು ಚಮಚ ಜೇನಿನಲ್ಲಿ ಅದೇ ಗಾತ್ರದ ಒಂದು ಚಮಚ ಸಕ್ಕರೆಗಿಂತ ಅಧಿಕ ಕ್ಯಾಲರಿ ಇರುತ್ತದೆ. ಹೆಚ್ಚಿನ ಜೇನು ಸ್ವೀಕರಿಸುವುದರಿಂದ ನೀವು ಇತರ ಸಿಹಿತಿಂಡಿಯಂತೆ ಹೆಚ್ಚು ತೂಕ ಪಡೆಯಲಿದ್ದೀರಿ.

ಕಡಿಮೆ ಕೊಬ್ಬಿನ ಸಲಾಡ್ ಡ್ರೆಸ್ಸಿಂಗ್:
ಅಮೆರಿಕಾದ ಐವಾ ರಾಜ್ಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಪ್ರಕಾರ ಕಡಿಮೆ ಕೊಬ್ಬಿನ ಡ್ರೆಸ್ಸಿಂಗ್ ಸಲಾಡ್ ನಲ್ಲಿರುವ ಒಳ್ಳೆಯ ಅಂಶಗಳನ್ನು ಕಿತ್ತುಹಾಕುತ್ತದೆ. ಆಲಿವ್ ಎಣ್ಣೆ ಅಥವಾ ಸ್ವಲ್ಪ ಬೆಣ್ಣೆ ವಿಟಮಿನ್ ಹೆಚ್ಚಳಕ್ಕೆ
ಕಾರಣವಾಗುತ್ತದೆ. ಯಾಕೆಂದರೆ ಕೊಬ್ಬಿನಿಂದ ತರಕಾರಿಯಲ್ಲಿರುವ ಪೌಷ್ಠಿಕಾಂಶಗಳು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ನೆರವಾಗುತ್ತದೆ.

ಬ್ರೇಕ್ ಫಾಸ್ಟ್ ಸಿರಲ್ಸ್:
ಬ್ರೇಕ್ ಫಾಸ್ಟ್ ಗೆ ಸಿರಲ್ ತಿನ್ನುವವರು ಇದನ್ನು ತಿನ್ನದೇ ಇರುವವರಿಗಿಂತ ಹೆಚ್ಚು ತೆಳ್ಳಗಿರುತ್ತಾರೆ. ಯಾಕೆಂದರೆ ಅವರು ಆರೋಗ್ಯಕರ ಬ್ರಾಂಡ್ ನ್ನು ಕೂಡ ಆಯ್ಕೆ ಮಾಡುತ್ತಾರೆ. ಯಾವಾಗಲೂ ಲೇಬಲ್ ನ್ನು ಓದಿ. ಸಿರಲ್‌ನ್ನು ಬಿಟ್ಟುಬಿಡಬೇಕೆಂದು ಹೇಳುವುದಿಲ್ಲ.

ಕೆನೆಯುಕ್ತ ಹಾಲು:
ಇತ್ತೀಚಿನ ವರ್ಷಗಳಲ್ಲಿ ಹಾಲನ್ನು ಕುಡಿಯುವುದನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತಿದೆ. ಆದರೆ ಕೆನೆಯುಕ್ತ ಹಾಲಿಗಿಂತ ಇದು ಒಳ್ಳೆಯದು. ಸಂಪೂರ್ಣ ಹಾಲಿನಲ್ಲಿ 100 ಮಿ.ಲೀ. ಶೇ.4ರಷ್ಟು ಕೊಬ್ಬು ಮಾತ್ರ ಇರುತ್ತದೆ. ಕೆನೆಯುಕ್ತ ಹಾಲಿನಲ್ಲಿ 0.1 ಶೇ. ಕೊಬ್ಬು ಇರುತ್ತದೆ. ಇದರಿಂದ ಸಂಪೂರ್ಣ ಹಾಲಿಗಿಂತ ಕೆನೆಯುಕ್ತ ಹಾಲು ಕುಡಿಯುವುದರಿಂದ ಹೆಚ್ಚು ಪರಿಣಾಮವಾಗದು. ಆದರೆ ಕೆನೆಯುಕ್ತ ಹಾಲಿನಲ್ಲಿ ಪೌಷ್ಠಿಕಾಂಶ ಕಡಿಮೆ ಇರುತ್ತದೆ. ಯಾಕೆಂದರೆ ಇದರಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಇರುತ್ತದೆ. ಸಂಪೂರ್ಣ ಕೊಬ್ಬು ಇರುವ ಹಾಲು ಚಯಾಪಚಯಾ ಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಕ್ಯಾಲರಿ ದಹಿಸಲು ನೆರವಾಗುತ್ತದೆ. ಇದರಿಂದ ಹೃದಯದ ಕಾಯಿಲೆಗಳು ಕಡಿಮೆಯಾಗುತ್ತದೆ.

ಹಸಿ ತರಕಾರಿ
ತರಕಾರಿ ಬೇಯಿಸುವುದರಿಂದ ವಿಟಮಿನ್ ಮತ್ತು ಮಿನರಲ್ ನ್ನು ಕೊಲ್ಲಲಾಗುತ್ತದೆ ಎಂದು ನಂಬಲಾಗಿದೆ. ಆದರೆ ಸಂಶೋಧನೆಗಳು ಇದಕ್ಕೆ ತದ್ವಿರುದ್ಧವಾಗಿದೆ. ಬೇಯಿಸುವಾಗ ಕೆಲವೊಂದು ವಿಟಮಿನ್ ಸಿಯನ್ನು ನಾಶ
ಮಾಡಬಹುದು. ಆದರೆ ಇದರಿಂದ ಕಾಯಿಲೆಗಳ ವಿರುದ್ಧ ಹೋರಾಡುವ ಪೌಷ್ಠಿಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗುತ್ತದೆ. ಕ್ಯಾರೆಟ್, ಸ್ಪೆನಿಚ್, ಮಶ್ರೂಮ್, ಕ್ಯಾಬೆಜ್ ಮತ್ತು ಕರಿಮೆಣಸನ್ನು ಹಸಿಗಿಂತ ಬೇಯಿಸಿ ತಿಂದರೆ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ಸ್ ಸಿಗುತ್ತದೆ. ಯಾಕೆಂದರೆ ಬೇಯಿಸುವಾಗ ತರಕಾರಿಯ ದಪ್ಪವಾದ ಸೆಲ್ ಗೋಡೆಗಳು ಬಿಡುಗಡೆಯಾಗುತ್ತದೆ. ಇದರಿಂದಾಗಿ ದೇಹವು ಸುಲಭವಾಗಿ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಬೇಯಿಸುವುದರಿಂದ ಸ್ಟೀಮ್ ಮಾಡುವುದು ಒಳ್ಳೆಯದು. ಕರಿಯುವುದರಿಂದ ವಿಟಮಿನ್ ಮತ್ತು ಮಿನರಲ್ ಹೆಚ್ಚು ನಾಶವಾಗುತ್ತದೆ.

ಡಯಟ್ ಪಾನೀಯಗಳು
ಕ್ಯಾಲರಿ ಕಡಿಮೆ ಮಾಡಲು ಪಾನೀಯ ಪ್ರಿಯರಿಗೆ ಇದು ತುಂಬಾ ನೇರ ಮಾರ್ಗವೆಂದು ಭಾವಿಸಲಾಗುತ್ತದೆ. ಆದರೆ ಡಯಟ್ ಪಾನೀಯಗಳು ತೂಕ ಕಳಕೊಳ್ಳಲು ಬಯಸುವವರಿಗೆ ತುಂಬಾ ಮಾರಕ. ಈ ಪಾನೀಯಗಳಲ್ಲಿ ಇರುವ ಕೃತಕ ಸಿಹಿಯಿಂದ ಅಧಿಕ ಸಕ್ಕರೆ ತಿಂದಂತೆ ಆಗುತ್ತದೆ. ಆದರೆ ಇದನ್ನು ಸೇವಿಸುವವರು ಇದನ್ನು ಸ್ವೀಕರಿಸಲು ತಯಾರಿರುವುದಿಲ್ಲ. ನಿರೀಕ್ಷೆಯಿಂದ ಕಡಿಮೆ ಕ್ಯಾಲರಿ ಸಿಗದೆ ಇರುವಾಗ ನಿಮ್ಮ ದೇಹವು ಕ್ಯಾಲರಿಯ ಹುಡುಕಾಟಕ್ಕೆ ಹೊರಡುತ್ತದೆ. ಇದರಿಂದ ನಿಮಗೆ ಹೆಚ್ಚು ಹಸಿವಾಗಿ ತುಂಬಾ ತಿನ್ನುವಂತೆ ಮಾಡುತ್ತದೆ. ಇದರಿಂದ ಡಯಟ್ ಪಾನೀಯಗಳನ್ನು ಕುಡಿಯುವವರು ತೂಕ ಇಳಿಸಿಕೊಳ್ಳುವ ಬದಲು ತೂಕ ಹೆಚ್ಚಿಸಿಕೊಳ್ಳುತ್ತಾರೆ.



Click it and Unblock the Notifications