Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಚಯಾಪಚಯಾ ಕ್ರಿಯೆ ಹೆಚ್ಚಿಸುವ ಮತ್ತು ಕೊಬ್ಬು ದಹಿಸುವ 7 ವಿಧಾನಗಳು
ನೀವು ತೂಕ ಕಳಕೊಳ್ಳಲು ಪ್ರಯತ್ನಿಸುತ್ತಿರಬಹುದು ಅಥವಾ ನಿಮ್ಮ ತೆಳ್ಳಗಿನ ದೇಹವನ್ನು ಹಾಗೆ ನಿರ್ವಹಿಸಲು ಬಯಸಿರಬಹುದು. ಇದಕ್ಕೆ ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುವುದು ಅತ್ಯುತ್ತಮ ಆಯ್ಕೆ. ನಿಮ್ಮ ಚಯಾಪಚಯಾ ಕ್ರಿಯೆ ಹೆಚ್ಚಿಸಲು ಕೆಲವೊಂದು ವಿಧಾನಗಳಿವೆ. ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುವುದು. ಆದರೆ ಆಹಾರ ಸೇವನೆ ಇದರ ಎತ್ತರದಲ್ಲಿರುವ ಒಂದು ಅಂಶವಾಗಿದೆ.
ಡಯಟಿಂಗ್ ಪ್ರಭಾವ ಬೀರದಿರಲು ಏಳು ಕಾರಣಗಳು
ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುವುದರಿಂದ ದೇಹದಲ್ಲಿನ ಕ್ಯಾಲರಿ ದಹಿಸಬಹುದು. ನಿಮ್ಮ ಚಯಾಪಚಯಾ ಕ್ರಿಯೆ ಉತ್ತಮವಾಗಿದ್ದರೆ ನೀವು ಜಿಮ್ ನಲ್ಲಿ ವ್ಯಾಯಾಮ ಮಾಡದಿದ್ದರೂ ನಿಮ್ಮ ಕ್ಯಾಲರಿ ದಹಿಸುತ್ತದೆ. ಚಯಾಪಚಯಾ ಕ್ರಿಯೆ ಕಡಿಮೆಯಿದ್ದರೆ ತೂಕ ಹೆಚ್ಚಾಗುತ್ತದೆ. ಯಾಕೆಂದರೆ ನಿಮ್ಮ ದೇಹ ದಹಿಸುವುದಕ್ಕಿಂತ ಹೆಚ್ಚು ನೀವು ಸೇವಿಸುತ್ತೀರಿ.

ಚಯಾಪಚಯಾ ವೃದ್ಧಿಸುವ ಏಳು ವಿಧಾನಗಳು ಇಲ್ಲಿವೆ ಮತ್ತು ಇದರಿಂದ ನೀವು ಕೊಬ್ಬನ್ನು ದಹಿಸಬಹುದು.
ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ದೈನಂದಿನ ಆಹಾರ ಕ್ರಮಕ್ಕೆ ಉಪಹಾರ ಸೇರಿಸುವುದು.
ಹೆಚ್ಚಿನವರು ಉಪಹಾರ ಸೇವನೆ ಇಷ್ಟಪಡುವುದಿಲ್ಲ. ಇದು ನಿಮ್ಮ ಚಯಾಪಚಯಾ ಕ್ರಿಯೆ ಆರಂಭಿಸಲು ದೇಹಕ್ಕೆ ನೆರವಾಗುತ್ತದೆ. 250 ಕ್ಯಾಲರಿಯ ಉಪಹಾರವು ಬೆಳಗ್ಗೆ ನಿಮ್ಮ ಚಯಾಪಚಯಾ ಕ್ರಿಯೆಯನ್ನು ವೃದ್ದಿಸುತ್ತದೆ.
ಚಯಾಪಚಯಾ ಕ್ರಿಯೆ ಹೆಚ್ಚಿಸಲು ಮತ್ತೊಂದು ವಿಧಾನವೆಂದರೆ ನಿಮ್ಮ ಆಹಾರಕ್ಕೆ ಮಸಾಲೆ ಸೇರಿಸುವುದು.
ಅಮೆರಿಕಾದ ಕೃಷಿ ಸಂಶೋಧನ ಸೇವೆಯ ಪ್ರಕಾರ ದಾಲ್ಚಿನ್ನಿ ಚಕ್ಕೆ ನಿಮ್ಮ ಚಯಾಪಚಯಾ ಕ್ರಿಯೆಯನ್ನು ಸುಮಾರು 20 ಪಟ್ಟು ಹೆಚ್ಚಿಸುತ್ತದೆ. 1/4 ರಿಂದ ಒಂದು ಚಮಚ ದಾಲ್ಚಿನಿ ದಿನಕ್ಕೆ ಸೇವಿಸಬೇಕು.
ನಿಮ್ಮ ಆಹಾರ ಕ್ರಮಕ್ಕೆ ಕಿವಿ ಹಣ್ಣನ್ನು ಸೇರಿಸಿಕೊಳ್ಳಿ.
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಇದೆ. ದಿನಕ್ಕೆ 500 ಮಿ.ಗ್ರಾಂನಷ್ಟು ಕಿವಿ ಹಣ್ಣನ್ನು ತಿಂದರೆ ವ್ಯಾಯಾಮ ಮಾಡುವುದಕ್ಕಿಂತ ಹೆಚ್ಚಿನ ಅಂದರೆ ಸುಮಾರು 39 ಶೇ. ಕೊಬ್ಬು ದಹಿಸುತ್ತದೆ. ವಿಟಮಿನ್ ಸಿ ಹೆಚ್ಚು ತಿನ್ನಬೇಡಿ. ಯಾಕೆಂದರೆ 2000 ಮಿ.ಗ್ರಾಂ. ಗಿಂತ ಹೆಚ್ಚಾದರೆ ಅದರಿಂದ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಅತಿಸಾರ ಉಂಟಾಗಬಹುದು.
ಕಾಫಿ ಮತ್ತು ಅಥವಾ ಚಹಾ ಕುಡಿಯಿರಿ:
ನಿಮ್ಮ ಪಾನೀಯಕ್ಕೆ ಐಸ್ ಹಾಕಿದರೆ ಆಗ ದೇಹ ಕಠಿಣವಾಗಿ ಕೆಲಸ ಮಾಡುತ್ತದೆ. ಯಾಕೆಂದರೆ ಇದು ನಿಮ್ಮ ಹೊಟ್ಟೆಯಲ್ಲಿ ಉಷ್ಣ ಹೆಚ್ಚಿಸುತ್ತದೆ. ಇದರಿಂದ ಚಯಾಪಚಯಾ ಕ್ರಿಯೆ ಹೆಚ್ಚುತ್ತದೆ. ಕೆಫಿನ್ ಯುಕ್ತ ಕಾಫಿ ಮತ್ತು ಅಥವಾ ಚಹಾ ಕುಡಿಯುವುದರಿಂದ ನಿಮ್ಮ ಹೃದಯದ ಬಡಿತ ಹೆಚ್ಚಾಗಿ ಅದರಿಂದ ಚಯಾಪಚಯಾ ಕ್ರಿಯೆ ಹೆಚ್ಚುತ್ತದೆ.
ಬೇಸಿಗೆಯಲ್ಲಿ ನಿಮ್ಮ ತೂಕ ಇಳಿಸಲು ಈ ಹಣ್ಣುಗಳು ಸಾಕು!
ನೀವು ಏನು ತಿನ್ನುತ್ತಿದ್ದೀರಿ ಎನ್ನುವಷ್ಟೇ ಮುಖ್ಯ .
ನೀವು ಬೆಳಗ್ಗೆ ಉಪಹಾರ ತಿನ್ನುವಾಗ ಕಿಟಕಿ ಬದಿಯಲ್ಲಿ ತಿನ್ನಲು ಪ್ರಯತ್ನಿಸಿ, ಇದರಿಂದ ಸೂರ್ಯನ ಬೆಳಕು ನಿಮ್ಮ ಮೇಲೆ ಬೀಳುತ್ತದೆ. ಗಾಢ ಬೆಳಕು ನಿಮ್ಮ ಚಯಾಪಚಯಾ ಕ್ರಿಯೆ ಹೆಚ್ಚಿಸುತ್ತದೆ ಮತ್ತು ಮೂಳೆ ಹಾಗೂ ಸ್ನಾಯುಗಳು ಬಲಗೊಳ್ಳುತ್ತದೆ.
ದೇಹದಲ್ಲಿನ ಕ್ಯಾಲರಿ ದಹಿಸಲು ನೀವು ದೈನಂದಿನ ಆಹಾರ ಕ್ರಮದಲ್ಲಿ ಹೆಚ್ಚು ಕ್ರೊಮಿಯಮ್ ಸೇವನೆ ಮಾಡಿ. ಕ್ರೊಮಿಯಮ್ ಟೊಮೆಟೊದಲ್ಲಿದೆ ಮತ್ತು ಇದು ಕೊಬ್ಬು ದಹಿಸಲು ಒಳ್ಳೆಯ ವಿಧಾನ. ಮೆಡ್ಲೈನ್ ಪ್ಲಸ್ ನ ಪ್ರಕಾರ ಮಾಂಸ, ಮೊಟ್ಟೆ, ಹಸಿರು ಕಾಳುಮೆಣಸು, ಸೇಬು, ಬಾಳೆಹಣ್ಣು ಮತ್ತು ಸ್ಪೆನಿಚ್ ನಲ್ಲಿ ಕ್ರೊಮಿಯಮ್ ಅಂಶ ಹೆಚ್ಚಿದೆ. ನೀವು ದಿನದಲ್ಲಿ 120 ಮಿ. ಗ್ರಾಂ ಕ್ರೊಮಿಯಮ್ ಸೇವಿಸಿದರೆ ಆಗ ದೇಹವು ನಿಮ್ಮ ಚಯಾಪಚಯಾ ಕ್ರಿಯೆ ಹೆಚ್ಚಿಸುತ್ತದೆ.
ಮುಂಜಾವಿನ ನಡಿಗೆಯಿಂದ ನಿಮಗುಂಟಾಗುವ ಪ್ರಯೋಜನಗಳು
ನಿಮ್ಮ ಚಯಾಪಚಯಾ ಕ್ರಿಯೆ ವೃದ್ಧಿಸಬೇಕೆಂದು ನೀವು ನಿಜವಾಗಿಯೂ ಬಯಸಿದರೆ ನಿಮ್ಮ ಆಹಾರವನ್ನು ಸಣ್ಣ ಪ್ರಮಾಣದಲ್ಲಿ ವಿಂಗಡಿಸಿ ಮತ್ತು ದಿನವಿಡಿ ತಿನ್ನಿ. ಪ್ರತೀ ಸಲ ನೀವು ತಿಂದಾಗ ಚಯಾಪಚಯಾ ಕ್ರಿಯೆ ಹೆಚ್ಚುತ್ತದೆ. ಇದು ತುಂಬಾ ಅಚ್ಚರಿ ಉಂಟುಮಾಡಬಹುದು. ಆದರೆ ಆಗಾಗ ತಿನ್ನುವುದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ ಮತ್ತು ಆರೋಗ್ಯಕರ ತೂಕ ಕಾಯ್ದುಕೊಳ್ಳಲು ನೆರವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
