Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಾವ್! ಎಂತಹ ಕಟ್ಟುಮಸ್ತಿನ ದೇಹ, ಏನಿದರ ರಹಸ್ಯ?

ಆ ರೀತಿಯ ಮೈಕಟ್ಟು ನಮ್ಮದಾಗಬೇಕೆಂದು ತುಂಬಾ ಹುಡುಗರು ಜಿಮ್ ಗೆ ಸೇರುತ್ತಾರೆ, ಕೆಲವರು ತುಂಬಾ ಆಸಕ್ತಿಯಿಂದ ಸೇರಿ ಸ್ವಲ್ಪ ಸಮಯದಲ್ಲಿ ಜಿಮ್ ಗೆ ಹೋಗುವುದನ್ನು ಬಿಟ್ಟು ಬಿಡುತ್ತಾರೆ. ಈ ರೀತಿ ಮಾಡಬಾರದು. ಕಟ್ಟುಮಸ್ತಿನ ದೇಹ ಪಡೆಯಲು ನಿರ್ಧಿಷ್ಟವಾದ ವ್ಯಾಯಾಮ ಮಾಡಬೇಕು. ವ್ಯಾಯಾಮದ ಜೊತೆ ಈ ಕೆಳಗಿನ ಅಂಶಗಳು ಗಮನದಲ್ಲಿದ್ದರೆ ಆಕರ್ಷಕ ಮೈಕಟ್ಟು ನಿಮ್ಮದಾಗುವುದು.
1. ಕಟ್ಟು ಮಸ್ತಾದ ಮೈಕಟ್ಟಿಗೆ ಮೊದಲು ಕೈ ರಟ್ಟೆಗಳು ಗಟ್ಟಿಯಾಗಬೇಕು. ಅದಕ್ಕಾಗಿ ವ್ಯಾಯಾಮ ಮಾಡಬೇಕು. ಪ್ರೊಟೀನ್ ಇರುವ ಮತ್ತು ಕೊಬ್ಬಿನ ಆಹಾರಗಳನ್ನು ಸರಿಯಾದ ಕ್ರಮದಲ್ಲಿ ತಿನ್ನಬೇಕು. ಕೈ ರಟ್ಟೆ , ಕಾಲು ಮತ್ತುಮೈ ಸ್ವಲ್ಪ ದಪ್ಪವಾಗುತ್ತದೆ. ನಂತರ ಪ್ರೊಟೀನ್ ಆಹಾರವನ್ನು ಮಿತವಾಗಿ ತೆಗೆದುಕೊಳ್ಳಬೇಕು.
2. ಕಟ್ಟು ಮಸ್ತಾದ ದೇಹಕ್ಕಾಗಿ ಪ್ರಯತ್ನಿಸುತ್ತಿರುವಾಗ ಯಾವುದೇ ಕಾರಣಕ್ಕೂ ಹಸಿವಿನಿಂದ ಇರಬಾರದು. ಹಣ್ಣುಗಳು, ತರಕಾರಿಗಳು ಮತ್ತು ನಟ್ಸ್ ತಿನ್ನಬೇಕು. ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
3. ಭಾರ ಎತ್ತುವ ವ್ಯಾಯಾಮನ್ನು(ಡಂಬಲ್ಸ್) ಮಿತಿಯಲ್ಲಿ ಮಾಡಬೇಕು. ಅತೀಯಾಗಿ ಭಾರ ಎತ್ತುವುದಾಗಲಿ, ಅತೀ ಹೆಚ್ಚು ಹೊತ್ತು ವ್ಯಾಯಾಮ ಮಾಡುವುದಾಗಲಿ ಮಾಡಬಾರದು. ವ್ಯಾಯಾಮವನ್ನು ನಿಯಮಿತವಾಗಿ ಮಾಡಿ. ಪರಿಣಿತರ ಸಲಹೆಯನ್ನು ಪಡೆಯಿರಿ. ಕೈ, ಕಾಲು, ಹೊಟ್ಟೆ ಇವುಗಳಿಗೆ ಪ್ರತ್ಯೇಕವಾದ ವ್ಯಾಯಾಮ ಮಾಡಿ. ಹೆಚ್ಚು ಶಕ್ತಿ ಉಪಯೋಗಿಸಿ ವ್ಯಾಯಾಮ ಮಾಡಿದಷ್ಟು ಸ್ನಾಯುಗಳು ಬಲವಾಗುತ್ತಾ ಹೋಗುತ್ತದೆ.
4. ತುಂಬಾ ಕಷ್ಟಪಟ್ಟು ಮಸಲ್ ಬಿಲ್ಡ್ (ಸ್ನಾಯುಗಳನ್ನು ಬಲಪಡಿಸಿದ) ಮಾಡಿದ ಮೇಲೆ ನಂತರ ವ್ಯಾಯಾಮ ಮಾಡುವುದನ್ನು ಬಿಡಬಾರದು. ಕಠಿಣ ವ್ಯಾಯಾಮ ಮತ್ತು ಸರಿಯಾದ ಆಹಾರಕ್ರಮ ಕಟ್ಟುಮಸ್ತಿನ ದೇಹದ ರಹಸ್ಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
