Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಡಯಟ್ ಹೆಸರಿನಲ್ಲಿ ಈ 7 ತಪ್ಪು ಮಾಡದಿರಿ
ಈಗೀನ ಕಾಲದ ಹುಡುಗರು ಹೆಚ್ಚಾಗಿ ತೆಳ್ಳಗಿನ ಹುಡುಗಿಯರನ್ನು ಇಷ್ಟಪಡುತ್ತಾರೆ. ಹುಡುಗಿಯರೂ ಅಷ್ಟೆ ಬಳಕುವ ಮೈಮಾಟದಿಂದ ಮಿಂಚಬೇಕೆಂದು ಬಯಸುತ್ತಾರೆ. ತೆಳ್ಳಗಿನ ಆಕರ್ಷಕ ಮೈಮಾಟ ಬಯಸುವುದು ತಪ್ಪಲ್ಲ. ಬೊಜ್ಜು ಬರದಿರಲು ಡಯಟ್ ಮಾಡಬೇಕು ನಿಜ, ಆದರೆ ಅದಕ್ಕಾಗಿ ಕೆಲವರು ಡಯಟ್ ಪಾಲಿಸುವ ವಿಧಾನ ಇದೆಯೆಲ್ಲಾ ತುಂಬಾ ಅನಾರೋಗ್ಯಕರವಾಗಿರುತ್ತದೆ. ಡಯಟ್ ಬಗ್ಗೆ ಸರಿಯಾದ ವಿವರವಿಲ್ಲದೆ ಅಥವಾ ಬೇಗನೆ ತೆಳ್ಳಗಾಗಬೇಕೆಂಬ ಆತುರದಿಂದ ಅಂತಹ ತಪ್ಪಾದ ವಿಧಾನಕ್ಕೆ ಕಟ್ಟು ಬಿದ್ದಿರುತ್ತಾರೆ. ಡಯಟ್ ನ ಹೆಸರಿನಲ್ಲಿ ಈ ತಪ್ಪಾದ ಡಯಟ್ ಪಾಲಿಸಿದರೋ ಕಾಯಿಲೆಯನ್ನು ನೀವೇ ಬಯಸಿ ತಂದುಕೊಂಡಂತಾಗುವುದು, ಆದ್ದರಿಂದ ಡಯಟ್ ಮಾಡುವ ಮೊದಲು ಡಯಟ್ ಬಗ್ಗೆ ತಿಳಿದಿರಲಿ.

1. ಕ್ರಾಶ್ ಡಯಟ್:
ದೇಹದ ತೂಕ ಕಡಿಮೆಯಾಗಲು ಹೆಚ್ಚಿನವರು ಕಂಡುಕೊಂಡಿರುವ ದಾರಿಯೆಂದರೆ ಕ್ರಾಶ್ ಡಯಟ್. ಕ್ರಾಶ್ ಡಯಟ್ ಅಂದರೆ ಸ್ವಲ್ಪವೇ ಸ್ವಲ್ಪ ಆಹಾರವನ್ನು ತಿಂದು ಇರುವುದು. ಈ ರೀತಿಯ ಡಯಟ್ ಮಾಡುವವರು ಒಂದು ವಿಷಯ ನೆನೆಪಿಟ್ಟುಕೊಳ್ಳಬೇಕು. ದೇಹಕ್ಕೆ ಪ್ರತಿದಿನ ಇಂತಿಷ್ಟು ಪೋಷಕಾಂಶದ ಅವಶ್ಯಕತೆ ಇರುತ್ತದೆ.ಪೋಷಕಾಂಶಗಳು, ಪ್ರೊಟೀನ್ ಹಾಗೂ ವಿಟಮಿನ್ ಗಳ ಕೊರತೆಯಿಂದ ಕಾಯಿಲೆಗಳು ಉಂಟಾಗುವುದು.

2. ಊಟ ಬಿಡುವುದು:
ದಿನದಲ್ಲಿ ಒಂದು ಹೊತ್ತು ತಿನ್ನುವುದು ಅಥವಾ ಬೆಳಗಿನ ಊಟ ಬಿಡವುದು ಈ ರೀತಿಯ ಡಯಟ್ ಅನ್ನು ಹೆಚ್ಚಿನವರು ಪಾಲಿಸುತ್ತಾರೆ. ಈ ರೀತಿಯ ಡಯಟ್ ಪಾಲಿಸಿದರೆ ಯಾವುದೇ ಪ್ರಯೋಜನವಿಲ್ಲ. ಸಣ್ಣಗಾಗಬೇಕು, ಆರೋಗ್ಯಕರವಾಗಿರಬೇಕೆಂದು ಬಯಸುವುದಾದರೆ ದಿನನಕ್ಕೆ 6 ಬಾರಿ ತಿನ್ನಿ! 3 ಹೊತ್ತು ತಿನ್ನುವ ಊಟವನ್ನು 6 ಭಾಗಗಳಾಗಿ ವಿಂಗಡಿಸಿ 3 ಗಂಟೆಗೊಮ್ಮೆ ತಿನ್ನಿ. ಈ ರೀತಿಯ ಆಹಾರಕ್ರಮ ಪಾಲಿಸಿದರೆ ಖಂಡಿತ ಸಣ್ಣಗಾಗುವಿರಿ.

3. ಕಡಿಮೆ ಕ್ಯಾಲೋರಿಯ ಆಹಾರ:
ತೆಳ್ಳಗಿನ ಮೈಮಾಟಕ್ಕಾಗಿ ಕಡಿಮೆ ಕ್ಯಾಲೋರಿಯಾ ಆಹಾರ ತಿನ್ನಬೆಕು ನಿಜ. ಆದರೆ ಇದನ್ನೇ ಪ್ರತಿದಿನ ತಿಂದರೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುವುದು. ಆದ್ದರಿಂದ ನಾರಿನಂಶ, ಪ್ರೊಟೀನ್ ನಂಶ ಹಾಗೂ ಸ್ವಲ್ಪ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಸೇವಿಸಬೇಕು.

4. ನೀರು:
ಡಯಟ್ ಮಾಡುವಾಗ ಕೆಲವರು ನೀರು ಕುಡಿಯುವ ಪ್ರಮಾಣವನ್ನು ಕೂಡ ಕಡಿಮೆ ಮಾಡುಕೊಳ್ಳುತ್ತಾರೆ. 8-10 ಲೋಟ ನೀರು ಕುಡಿಯಬೇಕು. ಇನ್ನೂ ಕೆವರು ಬರೀ ವಾಟರ್ ಡಯಟ್ ಮಾಡುತ್ತಾರೆ ಇದು ಕೂಡ ಅಪಾಯಕಾರಿಯಾದ ಡಯಟ್ ಕ್ರಮವಾಗಿದೆ.

5. ಹಾಲು ಹಾಗೂ ಹಾಲಿನ ಉತ್ಪನ್ನಗಳು:
ಹೆಚ್ಚಿನವರು ಡಯಟ್ ಮಾಡುವಾಗ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮುಟ್ಟುವುದೇ ಇಲ್ಲ. ಆದರೆ ಹಾಲು ದೇಹಕ್ಕೆ ಅವಶ್ಯಕ. ದಿನಕ್ಕೆ ಒಂದು ಲೋಟ ಹಾಲು ಹಾಗೂ ಸ್ವಲ್ಪ ಹಾಲಿನ ಉತ್ಪನ್ನಗಳನ್ನು ಆಹಾರಕ್ರಮದಲ್ಲಿ ಸೇರಿಸಿದರೆ ಕ್ಯಾಲ್ಸಿಯಂ ಕೊರತೆ ಉಂಟಾಗುವುದಿಲ್ಲ.

6. ಪಾನೀಯಾಗಳು:
ಡಯಟ್ ನಲ್ಲಿರುವವರು ಜ್ಯೂಸ್ ಕುಡಿಯುವಾಗ ಅಧಿಕ ಕ್ಯಾಲೋರಿ ಇರುವ ಜ್ಯೂಸ್ ಕುಡಿಯಬಾರದು. ಆದರೆ ಹೆಚ್ಚಿನವರು ಇದರ ಬಗ್ಗೆ ಗಮನವೇ ಕೊಡುವುದಿಲ್ಲ.

7. ತಿಂಡಿ:
ಕೆಲವರು ಡಯಟ್ ಮಾಡುತ್ತಾರೆ ಆದರೆ ಸ್ನಾಕ್ಸ್ ತಿನ್ನುವುದು ಕಡಿಮೆ ಮಾಡುವುದಿಲ್ಲ. ಸ್ನಾಕ್ಸ್ ನಲ್ಲಿ ಕರೆದ ಪದಾರ್ಥಗಳನ್ನು ತಿನ್ನುವ ಬದಲು ನಟ್ಸ್ ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ದೇಹದ ತೂಕ ಹೆಚ್ಚಾಗುವುದಿಲ್ಲ.



Click it and Unblock the Notifications











