Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತೂಕ ಕಡಿಮೆ ಮಾಡುತ್ತೆ ಅನ್ನುವ ಮಿಥ್ಯಗಳು

ತೂಕ ಕಡಿಮೆಯಾಗುತ್ತೆ ಎಂದು ಜನರು ಅನೇಕ ರೀತಿಯ ತಪ್ಪಾದ ಸಲಹೆಗಳನ್ನು ಅನುಸರಿಸಿ ಫಲವನ್ನು ಕಾಣಲು ವಿಫಲರಾಗುತ್ತಾರೆ. ಆರೋಗ್ಯಕರವಲ್ಲದ ಮತ್ತು ಪರಿಣಾಮಕಾರಿಯಲ್ಲದ ಆ ರೀತಿಯ ಮಿಥ್ಯಗಳ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ ನೋಡಿ:
ಅತೀ ಕಡಿಮೆ ಆಹಾರ ಸೇವಿಸಿದರೆ ಶಾಶ್ವತವಾಗಿ ತೂಕ ಕಡಿಮೆಯಾಗುವುದು: ಕೆಲವರು ತೂಕ ಕಡಿಮೆಯಾಗಬೇಕೆಂದು ಏನೂ ತಿನ್ನುವುದಿಲ್ಲ. ತುಂಬಾ ಹೊಟ್ಟೆ ಹಸಿವು ಆದಾಗ ಸ್ವಲ್ಪ ಆಹಾರ ಸೇವಿಸುತ್ತಾರೆ. ಈ ರೀತಿ ಮಾಡಿದರೆ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯದೆ ತೆಳ್ಳಗಾಗುವುದು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ! ಈ ರೀತಿ ಮಾಡಿದರೆ ನಿಶ್ಯಕ್ತಿ ಉಂಟಾಗುತ್ತದೆ.
ಬಾಯಿಗೆ ರುಚಿಯಲ್ಲದ ಆಹಾರ ದಿನಾ ಸೇವಿಸಿದರೆ ಖಿನ್ನತೆ ಉಂಟಾಗುವುದು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ರೀತಿಯ ಡಯಟ್ (ಆಹಾರಕ್ರಮವನ್ನು) ಜೀವನ ಪೂರ್ತಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದರಿಂದ ಶಾಶ್ವತ ಪರಿಹಾರ ದೊರಕಲು ಸಾಧ್ಯವಿಲ್ಲ.
ಅಧಿಕ ಪ್ರೊಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರಕ್ರಮದಿಂದ ತೂಕ ಕಡಿಮೆ ಮಾಡಬಹುದು: ಅಧಿಕ ಪ್ರೊಟೀನ್ ಇರುವ ಆಹಾರಗಳಾದ ಮೊಟ್ಟೆ, ಮಾಂಸ, ಬೀನ್ಸ್ ಹೀಗೆ ಬರೀ ಪ್ರೊಟೀನ್ ಇರುವ ವಸ್ತುಗಳನ್ನು ಮಾತ್ರ ತಿಂದರೆ ಸಾಕಾಗುವುದಿಲ್ಲ. ದೇಹಕ್ಕೆ ಅವಶ್ಯಕವಿರುವ ಕಾರ್ಬೋಹೈಡ್ರೇಟ್ ಪೂರೈಕೆಯಾಗದಿದ್ದರೆ ರಕ್ತದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ. ಇದರಿಂದ ಯೂರಿಕ್ ಅಸಿಡ್ (ಮೂತ್ರವಿಸರ್ಜನೆಗೆ ತೊಂದರೆ), ಮೊಣಕಾಲು, ಕೈಗಳು ಊದಿಕೊಳ್ಳುವುದು, ಕಿಡ್ನಿಯಲ್ಲಿ ಕಲ್ಲು ಮುಂತಾದ ಸಮಸ್ಯೆ ಕಂಡು ಬರುತ್ತದೆ. ಕಿಡ್ನಿ ಸಮಸ್ಯೆ ಮತ್ತು ಮಧುಮೇಹ ಸಮಸ್ಯೆಯಿರುವವರಿಗೆ ಇದರಿಂದ ಅಧಿಕ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
ಅನ್ನ ಮತ್ತು ಆಲೂಗೆಡ್ಡೆ ತಿನ್ನಬಾರದು: ತುಕ ಕಡಿಮೆಯಗಲು ಅನ್ನ ಮತ್ತು ಆಲೂಗೆಡ್ಡೆ ಮುಟ್ಟಬಾರದು ಅನ್ನುವುದನ್ನು ಕೇಳಬಹುದು. ಆದರೆ ಇವುಗಳ ಮಿತಿಯಲ್ಲಿ ತಿನ್ನುವುದು ಅವಶ್ಯಕ ಏಕೆಂದರೆ ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಇದರ ಜೊತೆಗೆ ಇತರ ಸೊಪ್ಪು ತರಕಾರಿಗಳು, ನಾರಿನಂಶವಿರುವ ಪದಾರ್ಥಗಳನ್ನು ಹಾಕಿದ ಆಹಾರಕ್ರಮ ಪಾಲಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
